Friday, February 14, 2025
Homeಜಿಲ್ಲಾ ಸುದ್ದಿಗಳು | District Newsಜಮೀನಿಗೆ ಬಿದ್ದ ಬೆಂಕಿ ನಂದಿಸಲು ಹೋದ ರೈತ ಸಜೀವ ದಹನ

ಜಮೀನಿಗೆ ಬಿದ್ದ ಬೆಂಕಿ ನಂದಿಸಲು ಹೋದ ರೈತ ಸಜೀವ ದಹನ

ಹಾಸನ,ಮಾ.20- ಜಮೀನಿಗೆ ಬಿದ್ದ ಬೆಂಕಿಯನ್ನು ನಂದಿಸಲು ಹೋದ ರೈತ ಸಜೀವವಾಗಿ ಸುಟ್ಟು ಕರಕಲಾಗಿರುವ ಘಟನೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೇವು ಗ್ರಾಮದಲ್ಲಿ ನಡೆದಿದೆ. ಕೃಷ್ಣೇಗೌಡ (62) ಮೃತಪಟ್ಟ ರೈತ.

ನಿನ್ನೆ ಸಂಜೆ ಜಮೀನಿಗೆ ತೆರಳಿದ್ದ ಸಂದರ್ಭದಲ್ಲಿ ಬದುವಿನಲ್ಲಿದ್ದ ಒಣಹುಲ್ಲಿಗೆ ಆಕಸ್ಮಾತಾಗಿ ಬೆಂಕಿ ತಗುಲಿದ್ದು, ಈ ಬೆಂಕಿ ತೋಟಕ್ಕೆಲ್ಲಾ ವ್ಯಾಪಿಸಿದರೆ ಭಾರೀ ಅನಾಹುತ ಸಂಭವಿಸುತ್ತದೆ ಎಂದು ಬೆಂಕಿ ನಂದಿಸಲು ಕೃಷ್ಣೇಗೌಡ ಮುಂದಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಹೋದ ಆತನನ್ನು ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೂಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News