ಸಿಕ್ಕಾಪಟ್ಟೆ ಬಿಸಿಲು : ಪ್ರಚಾರಕ್ಕೆ ಜನರಿಲ್ಲದೆ ರಾಜಕೀಯ ಪಕ್ಷಗಳ ಹರಸಾಹಸ

ಬೆಂಗಳೂರು, ಮೇ.1- ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ಕಾವೇರುತ್ತಿರುವುದರ ಜೊತೆಗೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಜನ ನಿರೀಕ್ಷೆಯಂತೆ ಪ್ರಚಾರಕ್ಕೆ ಬರುತ್ತಿಲ್ಲ. ಬೀದರ್‌, ಕಲಬುರಗಿ, ರಾಯಚೂರು, ವಿಜಯಪುರ ಬಳ್ಳಾರಿ, ಬಾಗಲಕೋಟೆ, ಕೊಪ್ಪಳ, ಹಾವೇರಿ, ಬೆಳಗಾವಿ, ದಾವಣಗೆರೆ, ಚಿಕ್ಕೋಡಿ, ಧಾರವಾಡ, ಉತ್ತರಕನ್ನಡ, ಶಿವಮೊಗ್ಗ ಕ್ಷೇತ್ರಗಳಲ್ಲಿ ನಾಯಕರು ಅಬ್ಬರದ ಪ್ರಚಾರಕ್ಕೆ ದಾಂಗುಡಿ ಇಡುತ್ತಿದ್ದರು. ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಜನ ಪ್ರಚಾರದ ಸಭೆ, ಮೆರವಣಿಗೆ, ರೋಡ್‌ ಶೋಗಳಲ್ಲಿ ನಿರೀಕ್ಷೆಯಂತೆ ಹೆಚ್ಚಾಗಿ ಪಾಲ್ಗೊಳ್ಳುತ್ತಿಲ್ಲ. ರಾಜಕೀಯ ಪಕ್ಷಗಳ … Continue reading ಸಿಕ್ಕಾಪಟ್ಟೆ ಬಿಸಿಲು : ಪ್ರಚಾರಕ್ಕೆ ಜನರಿಲ್ಲದೆ ರಾಜಕೀಯ ಪಕ್ಷಗಳ ಹರಸಾಹಸ