Friday, May 3, 2024
Homeರಾಜ್ಯಮಹಾರಾಷ್ಟ್ರ ನಾಯಕರಿಗೆ ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ

ಮಹಾರಾಷ್ಟ್ರ ನಾಯಕರಿಗೆ ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ

ಬೆಂಗಳೂರು,ಅ.31- ಮಹಾರಾಷ್ಟ್ರದಲ್ಲಿ ಉದ್ಭವಿಸಿರುವ ಗಲಭೆಗಳು ಹಾಗೂ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಂಭವನೀಯ ಗಲಭೆಯ ಕುರಿತು ಎಚ್ಚರಿಕೆವಹಿಸುವಂತೆ ಗಡಿ ಭಾಗದ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದ ನಾಯಕರು ಬಂದು ತಂಟೆ ಮಾಡಿದರೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಗಡಿಯಾದ ಬೆಳಗಾವಿ, ಬೀದರ್‍ನಲ್ಲಿನ ಪೊಲೀಸರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಎಲ್ಲಿ ಹೆಚ್ಚು ಗಲಾಟೆಯಾಗಬಹುದು ಎಂಬ ಮಾಹಿತಿ ಇರುವ ಭಾಗಗಳಿಗೆ ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಿದ್ದೇವೆ. ಬೆಳಗಾವಿಯಲ್ಲಿ ಎಂಇಎಸ್ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ವೇಳೆ ಕರಾಳ ದಿನಾಚರಣೆ ಮಾಡುತ್ತಾರೆ. ಅದಕ್ಕೆ ಮಹಾರಾಷ್ಟ್ರದಿಂದ ಸಚಿವರು, ನಾಯಕರು ಬಂದು ಪ್ರಚೋದಿತ ಹೇಳಿಕೆ ನೀಡುವ ಪ್ರಯತ್ನಗಳು ನಡೆದಿವೆ. ಅದನ್ನು ಪ್ರತಿವರ್ಷವೂ ನಿಯಂತ್ರಣ ಮಾಡುತ್ತೇವೆ ಎಂದರು.

ಮಹಾರಾಷ್ಟ್ರದ ಸಚಿವರಾಗಲಿ, ನಾಯಕರಗಲಿ ನಮ್ಮ ಗಡಿ ಪ್ರದೇಶ ಒಳಗೆ ಬಂದು ಕರ್ನಾಟಕ, ಕನ್ನಡ, ನಮ್ಮ ನೆಲ, ಜಲದ ಬಗ್ಗೆ ಗಲಾಟೆ ಮಾಡಿದರೆ ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಮಹಾರಾಷ್ಟ್ರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಪತನವಾಗಲಿದೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಪ್ರತಿಯೊಬ್ಬ ಬಿಜೆಪಿ ಮುಖಂಡರು ಕಾಂಗ್ರೆಸ್ ಬಗ್ಗೆಯೇ ಮಾತನಾಡುತ್ತಾರೆ ವಿನಃ, ಅವರ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ನಮ್ಮ ಪಕ್ಷದ ಬಗ್ಗೆ ಆಸಕ್ತಿ ಹೆಚ್ಚಿದೆ. ಬಹುಶಃ ಕಾಂಗ್ರೆಸ್ ಕಡೆಗೆ ಬರಲು ಆಸಕ್ತಿ ತೋರಿಸುತ್ತಿದ್ದಾರೆನೋ ಗೋತ್ತಿಲ್ಲ. ಇಲ್ಲವಾದರೆ ನಮ್ಮ ಪಕ್ಷದ ಬಗ್ಗೆ ಅವರಿಗೆ ಅಷ್ಟೊಂದು ಆಸಕ್ತಿ ಏಕೆ. ಕಾಂಗ್ರೆಸ್‍ಗೆ ಬರುವವರಿದ್ದರೆ ಮೊದಲು ಹೇಳಲಿ. ನಂತರ ಅವರನ್ನು ಸೇರಿಸಿಕೊಳ್ಳಬೇಕೆ ಬೇಡವೇ ಎಂದು ಪರಿಶೀಲನೆ ನಡೆಸುತ್ತೇವೆ ಎಂದರು.

ಶಾಸಕರಾದಿಯಾಗಿ ಯಾರು ಅನವಶ್ಯಕವಾಗಿ ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಹೈಕಮಾಂಡ್ ನಾಯಕರು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಅದರ ಹೊರತಾಗಿಯೂ ಕೆಲವರು ಮಾತನಾಡುತ್ತಾರೆ. ಇಂತಹದ್ದನ್ನು ನೋಡಿಕೊಳ್ಳಲು ಎಐಸಿಸಿ ಶಿಸ್ತು ಸಮಿತಿಯಿದೆ, ತಾವು ಅದರಲ್ಲಿ ಸದಸ್ಯರಾಗಿದ್ದು, ರಾಜ್ಯದಲ್ಲೂ ಕೆಪಿಸಿಸಿ ಶಿಸ್ತು ಸಮಿತಿಯಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ಕೆಪಿಸಿಸಿಗೆ ಸೂಚನೆ ನೀಡಿರಬಹುದು. ಅದರ ಹಿನ್ನೆಲೆಯಲ್ಲಿ ಕೆ.ಬಿ.ಕೋಳಿವಾಡ ನೇತೃತ್ವದ ಸಮಿತಿ ಎಚ್ಚರಿಕೆ ನೀಡಿರಬಹುದು ಎಂದರು. ಎಐಸಿಸಿಯ ಶಿಸ್ತು ಸಮಿತಿ ಸಭೆಯಲ್ಲೂ ಈ ರೀತಿಯ ಬೆಳವಣಿಗೆಗಳ ಬಗ್ಗೆ ಅನೇಕ ಬಾರಿ ಚರ್ಚೆಯಾಗಳಾಗಿವೆ ಎಂದರು.

ರಾಜಸ್ತಾನ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಎಪಿ ಅಭ್ಯರ್ಥಿ ಹೈದರಾಬಾದ್‍ನಲ್ಲಿ ಅರೆಸ್ಟ್

ನಮ್ಮ ಸಮುದಾಯದ ನಾಯಕರಿಗೆ ಸರ್ಕಾರ ಬದಲಾಯಿಸುವ ಶಕ್ತಿ ಇದೆ ಎಂದು ಮಾಜಿ ಶಾಸಕ ರಾಜವೆಂಟಕಪ್ಪ ನಾಯಕ ನೀಡಿರುವ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷರು ಗಮನಿಸುತ್ತಾರೆ. ಅಂತಹವನ್ನೇಲ್ಲಾ ನಿಯಂತ್ರಣ ಮಾಡುವ ಶಕ್ತಿ, ಸಾಮಥ್ರ್ಯ ಡಿ.ಕೆ.ಶಿವಕುಮಾರ್ ಅವರಿಗೆ ಇದೆ ಎಂದರು.

ಮೂವರು ಉಪಮುಖ್ಯಮಂತ್ರಿ ಮಾಡುವ ವಿಚಾರ ಹೈಕಮಾಂಡ್ ಬಿಟ್ಟದ್ದು. ವರಿಷ್ಠರು ಸಂದರ್ಭಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆ ವೇಳೆ ಅರ್ಹರು ಹಾಗೂ ಸಮುದಾಯಗಳಿಗೆ ಅವಕಾಶ ಸಿಗಬಹುದು ಎಂದರು.
ದೀಪಾವಳಿಯ ನಂತರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಮೂವತ್ತು ಮಂದಿ ಶಾಸಕರು ದುಬೈ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಬಿಜೆಪಿಯವರು ಮಾತ್ರ ಪ್ರವಾಸಕ್ಕೆ ಹೋಗುತ್ತಾರೆ ಎಂದರೆ ನಮಗೆ ಸಂಬಂಧವಿಲ್ಲ. ನಮ್ಮ ಪಕ್ಷದ ಶಾಸಕರು ಹೋಗುತ್ತಿದ್ದಾರೆ ಎಂದರೆ ಯಾವ ಕಾರಣಕ್ಕೆ ಹೋಗುತ್ತಿದ್ದಾರೆ. ಸುಮ್ಮನೆ ಆಹ್ಲಾದಕರ ಪ್ರವಾಸವೇ ಅಥವಾ ನಿಜವಾಗಿ ಏನಾದರೂ ವಿಷಯಗಳಿವೆಯೇ ಎಂಬುದನ್ನು ನೋಡಬೇಕಾಗುತ್ತದೆ. ದುಬೈನಲ್ಲಿ ಹಲವು ಕನ್ನಡ ಪರ ಸಂಘಟನೆಗಳಿವೆ, ಅಲ್ಲಿಂದ ಏನಾದರೂ ಆಹ್ವಾನ ಇದೆಯೇ ಎಂದು ಕೂಡ ಗಮಿಸಬೇಕಾಗುತ್ತದೆ. ಮೊದಲು ಅವರೆಲ್ಲಾ ಪ್ರವಾಸ ಹೊರಡಲಿ ನಂತರ ಪ್ರತಿಕ್ರಿಯಿಸುವುದು ಸೂಕ್ತ ಎಂದರು.

ರಾಜೀನಾಮೆ ನೀಡಲು ಸಿದ್ಧ:
ಹೊಸಬರಿಗೆ ಅವಕಾಶ ನೀಡಲು ಸಚಿವ ಸ್ಥಾನ ಬಿಟ್ಟುಕೊಡಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದರೆ ತಾವು ಯಾವುದೇ ಕ್ಷಣದಲ್ಲಾದರೂ ರಾಜೀನಾಮೆ ನೀಡಲು ಸಿದ್ಧ ಎಂದು ಪರಮೇಶ್ವರ್ ಹೇಳಿದ್ದಾರೆ.
ಎಲ್ಲರೂ ಸಚಿವರಾಗುವುದು ಒಳ್ಳೆಯದು. ಎಲ್ಲರಿಗೂ ಅವಕಾಶ ಸಿಗಬೇಕು ಎಂಬುದಕ್ಕೆ ನಮ್ಮ ಬೆಂಬಲವಿದೆ. ಆದರೆ ಸಚಿವರನ್ನು ಇಲ್ಲಿನ ನಾವ್ಯಾರು ಮಾಡುವುದಿಲ್ಲ. ಎಲ್ಲವೂ ದೆಹಲಿಯವರೆ ನಿರ್ಧಾರ ಮಾಡುತ್ತಾರೆ.

ಅಂತಹ ಸಂದರ್ಭ ಬಂದು ಸೂಚನೆ ನೀಡಿದರೆ ನಾನು ಸಿದ್ಧನಿದ್ದೇನೆ. ಈ ಹಿಂದೆ ಗೃಹ ಸಚಿವನಾಗಿದ್ದನು ಅಕಾರ ಬಿಟ್ಟು ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೋಗಿದ್ದೆ. ಈಗಲೂ ಅಂತಹ ಸಂದರ್ಭ ಬಂದರೆ ನಾನು ಸಿದ್ಧ ಎಂದರು. ತಾವು ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿಲ್ಲ, ಸಚಿವ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಂಬಾನಿಗೆ ಮತ್ತೆ ಜೀವ ಬೆದರಿಕೆ : 20 ಆಯ್ತು, 200 ಆಯ್ತು ಇದೀಗ 400 ಕೋಟಿಗೆ ಬೇಡಿಕೆ

ಬಿಜೆಪಿ ಆಪರೇಷನ್ ಕಮಲ ನಡೆಸಿಲ್ಲ, ನಾವೇ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದೇವು ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅವರು ಹೇಳಿದ್ದಕ್ಕೆಲ್ಲಾ ಉತ್ತರಿಸುತ್ತಾ ಕುಳಿತರೆ ಅದಕ್ಕೆ ಕೊನೆಯೇ ಇರಲ್ಲ ಎಂದರು.

RELATED ARTICLES

Latest News