Wednesday, September 11, 2024
Homeರಾಜ್ಯಪರಪ್ಪನ ಕಾರಾಗೃಹದ ಅಧಿಕಾರಿ, ಸಿಬ್ಬಂದಿಯ ವಿಚಾರಣೆ

ಪರಪ್ಪನ ಕಾರಾಗೃಹದ ಅಧಿಕಾರಿ, ಸಿಬ್ಬಂದಿಯ ವಿಚಾರಣೆ

Interrogation of officer, staff of Parappana Agrahara Jail

ಬೆಂಗಳೂರು,ಆ.29- ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಕಳೆದ ಶನಿವಾರ ಸಿಸಿಬಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಏನೂ ಪತ್ತೆಯಾಗದ ಬಗ್ಗೆ ಹಾಗೂ ಜೈಲಿನ ಸೂಪರಿಡೆಂಟ್ ಬರಬೇಕೆಂದು ಅರ್ಧಗಂಟೆ ಮುಖ್ಯದ್ವಾರದಲ್ಲೇ ತಡೆದಿದ್ದ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ನೇತೃತ್ವದ ತಂಡ ತನಿಖೆ ತೀವ್ರಗೊಳಿಸಿದೆ.

ಅಂದು ಸಿಸಿಬಿ ಪೊಲೀಸರು ತಪಾಸಣೆಗೆಂದು ಹೋದಾಗ 4 ರಟ್ ಬಾಕ್‌್ಸಗಳಲ್ಲಿ ಕಸ ಇದೆ ಎಂದು ಹೊರಗೆ ತೆಗೆದುಕೊಂಡು ಹೋಗಿದ್ದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.ಕಳೆದ ಶನಿವಾರ ಯಾವ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿದ್ದರು? ಎಂಬ ಬಗ್ಗೆ ಪಟ್ಟಿಯನ್ನು ತೆಗೆದುಕೊಂಡು ಒಬ್ಬೊಬ್ಬ ಸಿಬ್ಬಂದಿಯನ್ನೇ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದೆ.

ಅಂದು ಸಿಸಿಬಿ ಪೊಲೀಸರು ಬಂದ ಸಂದರ್ಭದಲ್ಲಿ ಯಾಕೆ ತಡೆದೀರಿ? ಕಸದ ಬಾಕ್‌್ಸನ್ನು ಎಲ್ಲಿ ತೆಗೆದುಕೊಂಡು ಹೋಗಿ ಎಸಿದ್ದೀರಿ? ಅದರಲ್ಲಿ ಯಾವ ರೀತಿಯ ಕಸ ಇತ್ತು? ಪ್ರತಿದಿನ ಹೀಗೆ ಮಾಡುತ್ತಿದ್ದೀರಾ? ಎಂಬಿತ್ಯಾದಿ ಮಾಹಿತಿಗಳನ್ನು ತಂಡ ಕಲೆ ಹಾಕುತ್ತಿದೆ.

ನಂತರ ಅಂದು ಕರ್ತವ್ಯದಲ್ಲಿದ್ದ ಜೈಲು ಅಧಿಕಾರಿಗಳನ್ನು ಸಹ ಒಬ್ಬೊಬ್ಬರಾಗಿ ವಿಚಾರಣೆ ನಡೆಸಲಿದೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ದರ್ಶನ್ಗೆ ರಾಜಾತಿಥ್ಯ ನೀಡಲಾಗಿದೆ ಎಂಬ ಘಟನೆಗೆ ಸಂಬಂಧಿಸಿದಂತೆ ಎಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಲೋಪ ವೆಸಗಿದ್ದಾರೆ ಎಂಬ ಬಗ್ಗೆ ಈ ತಂಡ ತನಿಖೆ ಕೈಗೊಂಡಿದೆ.

RELATED ARTICLES

Latest News