Thursday, December 5, 2024
Homeರಾಜ್ಯಕಾರು ಸ್ಫೋಟಿಸುವುದಾಗಿ ಕಲಬುರಗಿ ಕಾರಾಗೃಹದ ಅಧೀಕ್ಷಕಿಗೆ ಬೆದರಿಕೆ

ಕಾರು ಸ್ಫೋಟಿಸುವುದಾಗಿ ಕಲಬುರಗಿ ಕಾರಾಗೃಹದ ಅಧೀಕ್ಷಕಿಗೆ ಬೆದರಿಕೆ

Kalaburagi Jail Superintendent threatened blast car

ಬೆಂಗಳೂರು,ನ.28- ಕಲಬುರಗಿ ಕಾರಾಗೃಹದ ಅಧೀಕ್ಷಕಿ ಅವರ ಕಾರು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ನೀಡಿರುವ ದುಷ್ಕರ್ಮಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಅಧೀಕ್ಷಕಿ ಅನಿತಾ ಅವರು ಈ ಕಾರಾಗೃಹಕ್ಕೆ ವರ್ಗಾವಣೆಯಾಗಿ ಬಂದಿದ್ದಾರೆ.

ಅಧಿಕಾರ ಸ್ವೀಕರಿಸಿದ ದಿನದಿಂದಲೇ ಕಾರಾಗೃಹದ ಖೈದಿಗಳ ಹೈ-ಫೈ ವಾತಾವರಣವನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆಲ್ಲಾ ಬ್ರೇಕ್ ಹಾಕಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಕಾರಾಗೃಹದಲ್ಲಿ ಬೀಡಿ, ಗುಟ್ಕಾ, ಸಿಗರೇಟನ್ನು ಅನಿತಾ ಅವರು ನಿಷೇಧಿಸಿದ್ದರು. ಅಧಿಕಾರಿಯ ಈ ಕ್ರಮಕ್ಕೆ ಖೈದಿಗಳು ಕೋಪಗೊಂಡು ಪ್ರತಿಭಟನೆ ಮಾಡಿದ್ದರು.

ಈ ನಡುವೆ ಕಲಬುರಗಿ ನಗರ ಪೊಲೀಸ್ ಇನ್ಸ್ಪೆಕ್ಟರ್ ರೊಬ್ಬರ ಮೊಬೈಲ್ಗೆ ಅನಾಮಧೇಯ ವ್ಯಕ್ತಿಯೊಬ್ಬ ಅಧೀಕ್ಷಕಿಯವರ ಕಾರು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ.
ಈ ಸಂದೇಶದಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಅಧೀಕ್ಷಕಿ ಅನಿತಾ ಅವರ ಕಾರನ್ನು ಸಿಸಿಟಿವಿ ಕಣ್ಗಾವಲಿನ ಸ್ಥಳದಲ್ಲಿ ನಿಲುಗಡೆ ಮಾಡುವಂತೆ ಚಾಲಕನಿಗೆ ಸೂಚಿಸಿದ್ದಾರೆ.

ಈ ನಡುವೆಯೇ ಅಧೀಕ್ಷಕಿ ಅವರ ಕಾರು ಸ್ಫೋಟಿಸುವ ಬೆದರಿಕೆ ಸಂದೇಶ ಬಂದಿರುವುದು ಗಮನಿಸಿದರೆ ಅವರ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

RELATED ARTICLES

Latest News