Thursday, September 19, 2024
Homeಕ್ರೀಡಾ ಸುದ್ದಿ | Sportsರಾಷ್ಟ್ರೀಯ ಆರ್ಮ್ಸೌ ಚಾಂಪಿಯನ್‌ಶಿಪ್‌ನಲ್ಲಿ 7 ಪದಕ ಗೆದ್ದ ಕನ್ನಡಿಗರು

ರಾಷ್ಟ್ರೀಯ ಆರ್ಮ್ಸೌ ಚಾಂಪಿಯನ್‌ಶಿಪ್‌ನಲ್ಲಿ 7 ಪದಕ ಗೆದ್ದ ಕನ್ನಡಿಗರು

ಬೆಂಗಳೂರು,ಜು.1– ಮಹಾರಾಷ್ಟ್ರದ ಪಾಲ್ಘರ್ನಲ್ಲಿ ನಡೆದ 48ನೇ ರಾಷ್ಟ್ರೀಯ ಆರ್ಮ್ಸೌ ಚಾಂಪಿಯನ್ಶಿಪ್ನಲ್ಲಿ ರಾಜ್ಯದ ಏಳು ಮಂದಿ ಕ್ರೀಡಾಪಟುಗಳು ಚಿನ್ನ,ಬೆಳ್ಳಿ ಹಾಗೂ ಕಂಚಿನ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಆರ್ಮ್ ಸ್ಪೋರ್ಟ್ಸ್ ಆಟವನ್ನು ಉತ್ತೇಜಿಸುವ ರಾಜ್ಯ ಮಟ್ಟದ ಕ್ರೀಡಾ ಸಂಸ್ಥೆಯಾಗಿರುವ ಕರ್ನಾಟಕ ಆರ್ಮ್ ಸ್ಪೋರ್ಟ್ಸ್ ಅಸೋಸಿಯೇಷನ್ನ ಏಳು ಕ್ರೀಡಾ ಪಟುಗಳು ಈ ಸಾಧನೆ ಮಾಡಿದ್ದಾರೆ.

ರಾಜ್ಯದ ಹೆಮ್ಮೆಯ ಕ್ರೀಡಾಪಟು ಗಳಾದ ಅರವಿಂದ್ ಎಲ್ ಹಾಗೂ ಅರವಿಂದ್ ಆರ್ ಅವರುಗಳು ಚಿನ್ನ, ಚೈತ್ರಾ ಎಲ್, ತಶ್ಲೀಂ ಅವರುಗಳು ಬೆಳ್ಳಿ, ಚೈತ್ರಾ.ಆರ್, ರಾಹುಲ್, ಪ್ರತೀಕ್ ಅವರುಗಳು ಕಂಚಿನ ಪದಕ ಪಡೆದುಕೊಂಡಿದ್ದಾರೆ.

ನಮ್ಮ ಅಗತ್ಯಗಳನ್ನು ಬೆಂಬಲಿಸುವಲ್ಲಿ ನಮ್ಮ ಪ್ರಾಯೋಜಕರು ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಸಂಸ್ಥೆಯ ಪ್ರಾಯೋಜಕರು, ಬೆಂಬಲಿಗರು ಮತ್ತು ಸದಸ್ಯರಿಗೆ ನಾವು ಹೃತ್ಪೂರ್ವಕವಾಗಿ ಧನ್ಯವಾದಗಳು ಎಂದು ಕರ್ನಾಟಕ ಆರ್ಮ್ ಸ್ಪೋರ್ಟ್್ಸ ಅಸೋಸಿಯೇಷನ್ ಕಾರ್ಯದರ್ಶಿ ತಿಳಿಸಿದ್ದಾರೆ.

RELATED ARTICLES

Latest News