Friday, July 19, 2024
Homeರಾಜಕೀಯ'ಕತ್ತಲೆ ಗ್ಯಾರಂಟಿ' ಕರುಣಿಸಿದ ಸರ್ಕಾರ : ಬಿಜೆಪಿ ಟೀಕೆ

‘ಕತ್ತಲೆ ಗ್ಯಾರಂಟಿ’ ಕರುಣಿಸಿದ ಸರ್ಕಾರ : ಬಿಜೆಪಿ ಟೀಕೆ

ಬೆಂಗಳೂರು,ಅ.12- ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಕರುನಾಡಿಗೆ ಕತ್ತಲೆಯ ಗ್ಯಾರಂಟಿ ಕೊಟ್ಟಿದೆ. ಸಿದ್ದರಾಮಯ್ಯ ಅವರೇ, ನಿಮ್ಮ ಮನೆಯಲ್ಲಿ ಜನರೇಟರ್ ಇದೆಯೋ ಅಥವಾ ಸೀಮೆಎಣ್ಣೆ ಬುಡ್ಡಿ ಹಚ್ಚುತ್ತಿದ್ದೀರೋ ಎಂದು ಬಿಜೆಪಿ ಪ್ರಶ್ನಿಸಿದ್ದಾರೆ.

ಈ ಕುರಿತು ಬಿಜೆಪಿ, ಎಲ್ಲಿ ನೋಡಿದರೂ ಪವರ್ ಕಟ್. ನ್ಯಾಯಾಲಯದಲ್ಲೂ ಪವರ್ ಕಟ್, ವಿಧಾನಸೌಧದಲ್ಲೂ ಪವರ್ ಕಟ್ ಹಾಗೂ ಶಾಸಕರ ಸಭೆಯಲ್ಲೂ ಪವರ್ ಕಟ್ ಎಂದು ವ್ಯಂಗ್ಯವಾಡಿದೆ.ಅಲ್ಲದೇ ರೈತರ ಪಂಪ್‍ಸೆಟ್‍ಗಳಿಗೂ ಪವರ್ ಕಟ್, ಸ್ಕೂಲ್, ಕಾಲೇಜುಗಳಲ್ಲೂ ಪವರ್ ಕಟ್.

ಕಂಪನಿ, ಕೈಗಾರಿಕೆಗಳಲ್ಲೂ ಪವರ್ ಕಟ್ ಹಾಗೂ ಗ್ರಾಮೀಣ ಪ್ರದೇಶ ದಲ್ಲೂ ಪವರ್ ಕಟ್ ಎಂದು ಬಿಜೆಪಿ ಹೇಳಿದ್ದು, ಸಿದ್ದರಾಮಯ್ಯ ಅವರೇ, ನಿಮ್ಮ ಮನೆಯಲ್ಲಿ ಜನರೇಟರ್ ಇದೆಯೋ ಅಥವಾ ಸೀಮೆಎಣ್ಣೆ ಬುಡ್ಡಿ ಹಚ್ಚುತ್ತಿದ್ದೀರೋ..? ಎಂದು ಪ್ರಶ್ನಿಸಿದೆ.

ಸಿನಿಮೀಯ ರೀತಿಯಲ್ಲಿ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುತ್ತಿದೆ ಬಿಜೆಪಿ : ಡಿಕೆಶಿ

ರಾಜ್ಯದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಣೆ ಮಾಡದೆ ಉಳಿಸಿಕೊಂಡಿದ್ದ ಗ್ಯಾರಂಟಿಗಳನ್ನು ಇಂದು ಅಕಾರಕ್ಕೆ ಬಂದು ಜಾರಿಗೆ ತಂದಿದೆ..!ಕನ್ನಡಿಗರ ಕಿವಿ ಮೇಲೆ ಗ್ಯಾರಂಟಿಯ ಹೂವಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮಜಾ ಮಾಡುತ್ತಾ ತಮಾಷೆ ನೋಡುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಘೋಷಣೆ ಮಾಡದೆ ಉಳಿಸಿಕೊಂಡಿದ್ದ ಗ್ಯಾರಂಟಿಗಳು ಬರಗಾಲದ ಗ್ಯಾರಂಟಿ ರೈತರ ಆತ್ಮಹತ್ಯೆ ಗ್ಯಾರಂಟಿ ಕೋಮುಗಲಭೆ ಗ್ಯಾರಂಟಿ ವರ್ಗಾವಣೆ ದಂಧೆಯ ಗ್ಯಾರಂಟಿ ಮನೆ ಮನೆಗೂ ಕತ್ತಲು ಗ್ಯಾರಂಟಿ ತಮಿಳುನಾಡಿಗೆ ಕಾವೇರಿ ಗ್ಯಾರಂಟಿ ಆ ದಿನಗಳ ಬೆಂಗಳೂರು ಗ್ಯಾರಂಟಿ ದಲಿತರಿಗೆ ಅನ್ಯಾಯ ಗ್ಯಾರಂಟಿ ಲಿಂಗಾಯತರಿಗೆ ಅನ್ಯಾಯ ಗ್ಯಾರಂಟಿ ಹಿಂದುಳಿದವರಿಗೆ ಅನ್ಯಾಯ ಗ್ಯಾರಂಟಿ ಕುಡಿಯುವ ನೀರಿಗೆ ಹಾಹಾಕಾರ ಗ್ಯಾರಂಟಿ ಸ್ಟಾರ್ಟ್ ಅಪ್, ಕೈಗಾರಿಕೆಗಳ ವಲಸೆ ಗ್ಯಾರಂಟಿ ಎಂದು ಕಿಡಿಕಾರಿದೆ.

RELATED ARTICLES

Latest News