Home ಇದೀಗ ಬಂದ ಸುದ್ದಿ ಕೊಳ್ಳೇಗಾಲ : ಕುತ್ತಿಗೆ ಕೊಯ್ದು ತಂಗಿಯನ್ನೇ ಕೊಂದ ಅಣ್ಣ

ಕೊಳ್ಳೇಗಾಲ : ಕುತ್ತಿಗೆ ಕೊಯ್ದು ತಂಗಿಯನ್ನೇ ಕೊಂದ ಅಣ್ಣ

0
ಕೊಳ್ಳೇಗಾಲ : ಕುತ್ತಿಗೆ ಕೊಯ್ದು ತಂಗಿಯನ್ನೇ ಕೊಂದ ಅಣ್ಣ

ಕೊಳ್ಳೇಗಾಲ,ಜ.2- ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಅಣ್ಣನೇ ಚಾಕುವಿನಿಂದ ಸಹೋದರಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಪಟ್ಟಣ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಈದ್ಗಾ ಮೊಹಲ್ಲಾ ನಿವಾಸಿ ಐಮನ್‌ ಬಾನು (26) ಕೊಲೆಯಾದ ದುರ್ದೈವಿ.

ಘಟನೆ ವಿವರ :
ಫರ್ಮಾನ್‌ ಪಾಷ ನಿನ್ನೆ ಅಣ್ಣನ ಮಗಳಿಗೆ ಸೌತೆಕಾಯಿ ತಿನ್ನಿಸುತ್ತಿದ್ದಾಗ ತಂಗಿ ಐಮನ್‌ ಬಾನು ಗಮನಿಸಿ ಮಗುವಿಗೆ ಜ್ವರ ಬಂದಿದೆ, ಸೌತೆಕಾಯಿ ಏಕೆ ತಿನ್ನಿಸುತ್ತಿದ್ದೀಯಾ ಎಂದು ಹೇಳುತ್ತಿದ್ದಂತೆ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿ ತಾರಕಕ್ಕೇರಿದೆ.

ಆ ವೇಳೆ ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡು ಬಂದ ಫರ್ಮಾನ್‌ ಪಾಷ ಏಕಾಏಕಿ ಸಹೋದರಿ ಐಮನ್‌ ಕುತ್ತಿಗೆಗೆ ಇರಿದಿದ್ದಾನೆ. ತಕ್ಷಣ ತಡೆಯಲು ಮಧ್ಯ ಬಂದ ತಂದೆ ಸಯ್ಯದ್‌ ಪಾಷ ಹಾಗೂ ಅತ್ತಿಗೆ ತಸ್ಲೀಮಾ ಮೇಲೂ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತಕ್ಕೊಳಗಾದ ಐಮಾನ್‌ ಬಾನು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದು ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ನೆರೆಹೊರೆಯವರಿಂದಲೂ ಮಾಹಿತಿ ಪಡೆದುಕೊಂಡು ಆರೋಪಿ ಫರ್ಮಾನ್‌ ಪಾಷನನ್ನು ಬಂಧಿಸಿದ್ದಾರೆ.

ಚಾಕು ಇರಿತದಿಂದ ಗಾಯಗೊಂಡಿದ್ದ ಸೈಯದ್‌ (60) ಮತ್ತು ತಸ್ಲಿಮಾ ತಾಜ್‌ (25) ನನ್ನು ಚಾಮರಾಜನರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.