ಮರ ಕಡಿಯದಂತೆ, ಬೆಳೆ ಸುಡದಂತೆ ಫತ್ವಾ ಹೊರಡಿಸಿದ ಇಸ್ಲಾಮಿಕ್‌ ಸಂಘಟನೆ

ಲಕ್ನೋ,ಜೂ.3- ಮರ ಕಟಾವು ಮಾಡುವವರು ಹಾಗೂ ಬೆಳೆ ಸುಡುವವರ ವಿರುದ್ಧ ಉತ್ತರಪ್ರದೇಶದ ಇಸ್ಲಾಮಿಕ್‌ ಸಂಘಟನೆಯೊಂದು ಫತ್ವಾ ಹೊರಡಿಸುವ ಮೂಲಕ ಗಮನ ಸೆಳೆದಿದೆ.ದಿನೇ ದಿನೇ ಉಷ್ಣಾಂಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮರಗಳನ್ನು ಕಡಿಯಬೇಡಿ ಮತ್ತು ಬೆಳೆಗಳನ್ನು ಸುಡದಂತೆ ಮನವಿ ಮಾಡಿಕೊಂಡಿರುವ ಇಲ್ಲಿನ ಇಸ್ಲಾಮಿಕ್‌ ಸೆಂಟರ್‌ ಆಫ್‌ ಇಂಡಿಯಾ (ಐಸಿಐ) ಈ ಫತ್ವಾ ಹೊರಡಿಸಿದೆ. ತಾಪಮಾನ ಏರಿಕೆ ತಡೆಗಟ್ಟುವ ಉದ್ದೇಶದಿಂದ ಈ ಫತ್ವಾ ಹೊರಡಿಸಲಾಗಿದೆ.ಕುರಾನ್‌ನ ಪ್ರಕಾರ, ಹಸಿರನ್ನು ರಕ್ಷಿಸುವುದು, ನೀರನ್ನು ಉಳಿಸುವುದು ಮತ್ತು ವ್ಯರ್ಥ ಮಾಡುವುದನ್ನು ತಪ್ಪಿಸುವುದು ಮುಸ್ಲಿಮರ ಧಾರ್ಮಿಕ ಕರ್ತವ್ಯವಾಗಿದೆ. … Continue reading ಮರ ಕಡಿಯದಂತೆ, ಬೆಳೆ ಸುಡದಂತೆ ಫತ್ವಾ ಹೊರಡಿಸಿದ ಇಸ್ಲಾಮಿಕ್‌ ಸಂಘಟನೆ