Saturday, July 27, 2024
Homeರಾಷ್ಟ್ರೀಯಮರ ಕಡಿಯದಂತೆ, ಬೆಳೆ ಸುಡದಂತೆ ಫತ್ವಾ ಹೊರಡಿಸಿದ ಇಸ್ಲಾಮಿಕ್‌ ಸಂಘಟನೆ

ಮರ ಕಡಿಯದಂತೆ, ಬೆಳೆ ಸುಡದಂತೆ ಫತ್ವಾ ಹೊರಡಿಸಿದ ಇಸ್ಲಾಮಿಕ್‌ ಸಂಘಟನೆ

ಲಕ್ನೋ,ಜೂ.3- ಮರ ಕಟಾವು ಮಾಡುವವರು ಹಾಗೂ ಬೆಳೆ ಸುಡುವವರ ವಿರುದ್ಧ ಉತ್ತರಪ್ರದೇಶದ ಇಸ್ಲಾಮಿಕ್‌ ಸಂಘಟನೆಯೊಂದು ಫತ್ವಾ ಹೊರಡಿಸುವ ಮೂಲಕ ಗಮನ ಸೆಳೆದಿದೆ.ದಿನೇ ದಿನೇ ಉಷ್ಣಾಂಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮರಗಳನ್ನು ಕಡಿಯಬೇಡಿ ಮತ್ತು ಬೆಳೆಗಳನ್ನು ಸುಡದಂತೆ ಮನವಿ ಮಾಡಿಕೊಂಡಿರುವ ಇಲ್ಲಿನ ಇಸ್ಲಾಮಿಕ್‌ ಸೆಂಟರ್‌ ಆಫ್‌ ಇಂಡಿಯಾ (ಐಸಿಐ) ಈ ಫತ್ವಾ ಹೊರಡಿಸಿದೆ.

ತಾಪಮಾನ ಏರಿಕೆ ತಡೆಗಟ್ಟುವ ಉದ್ದೇಶದಿಂದ ಈ ಫತ್ವಾ ಹೊರಡಿಸಲಾಗಿದೆ.ಕುರಾನ್‌ನ ಪ್ರಕಾರ, ಹಸಿರನ್ನು ರಕ್ಷಿಸುವುದು, ನೀರನ್ನು ಉಳಿಸುವುದು ಮತ್ತು ವ್ಯರ್ಥ ಮಾಡುವುದನ್ನು ತಪ್ಪಿಸುವುದು ಮುಸ್ಲಿಮರ ಧಾರ್ಮಿಕ ಕರ್ತವ್ಯವಾಗಿದೆ. ಪ್ರತಿಯೊಬ್ಬ ಮುಸ್ಲಿಮರು ಹಸಿರು ಮರಗಳು ಮತ್ತು ಬೆಳೆಗಳಿಗೆ ಬೆಂಕಿ ಹಚ್ಚದಂತೆ ನೋಡಿಕೊಳ್ಳಬೇಕು ಎಂದು ಐಸಿಐನ ಅಧ್ಯಕ್ಷ ಮೌಲಾನಾ ಖಾಲಿದ್‌ ರಶೀದ್‌ ಫರಂಗಿ ಮಹಾಲಿ ಹೇಳಿದ್ದಾರೆ.

ವೀಡಿಯೊ ಸಂದೇಶದಲ್ಲಿ, ಮೌಲಾನಾ ಖಾಲಿದ್‌ ರಶೀದ್‌ ಜನರು ಹೆಚ್ಚು ಸಸಿಗಳನ್ನು ನೆಡಬೇಕು ಮತ್ತು ಮರಗಳನ್ನು ಕಡಿಯುವುದನ್ನು ತಪ್ಪಿಸಬೇಕು ಎಂದು ಕೇಳಿಕೊಂಡಿದ್ದಾರೆ.ಸರ್ವಶಕ್ತನ ಪ್ರಕಾರ, ಮನುಷ್ಯರು ಮತ್ತು ಪ್ರಾಣಿಗಳು ಸೇರಿದಂತೆ ಎಲ್ಲಾ ಜೀವಿಗಳಿಗೆ ಅನುಕೂಲವಾಗುವ ಸಸಿಗಳನ್ನು ನೆಡುವವರಿಗೆ ಪ್ರತಿಫಲವಿದೆ.

ಕೊಳಗಳು, ಕಾಲುವೆಗಳು, ನದಿಗಳು ಮತ್ತು ಸಮುದ್ರಗಳನ್ನು ಕಲುಷಿತಗೊಳಿಸದಂತೆ ಉಳಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿ ಎಂದು ಅವರು ಹೇಳಿದರು, ಇಸ್ಲಾಂನಲ್ಲಿ , ಮರಗಳು ಮತ್ತು ಬೆಳೆಗಳನ್ನು ಸುಡುವುದನ್ನು ನಿಷೇಧಿಸಲಾಗಿದೆ, ಇದು ಯುದ್ಧದ ಸಮಯದಲ್ಲಿ, ಮರಗಳು, ತೋಟಗಳು ಮತ್ತು ಹೊಲಗಳನ್ನು ಸುಡಬಾರದು ಎಂದು ಅವರು ಹೇಳಿದ್ದಾರೆ.

RELATED ARTICLES

Latest News