Home ಇದೀಗ ಬಂದ ಸುದ್ದಿ ಮೈಸೂರು : ಪತಿಯಿಂದಲೇ ಕೊಲೆಯಾದ ಕಾಂಗ್ರೆಸ್ ನಾಯಕಿ

ಮೈಸೂರು : ಪತಿಯಿಂದಲೇ ಕೊಲೆಯಾದ ಕಾಂಗ್ರೆಸ್ ನಾಯಕಿ

0
ಮೈಸೂರು : ಪತಿಯಿಂದಲೇ ಕೊಲೆಯಾದ ಕಾಂಗ್ರೆಸ್ ನಾಯಕಿ

ಮೈಸೂರು, ಮೇ 21- ಕೌಟುಂಬಿಕ ಕಲಹದಿಂದ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಬನ್ನೂರು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟಿ.ನರಸೀಪುರ ತಾಲ್ಲೂಕಿನ ಬನ್ನೂರಿನ ತುರಗನೂರಿನ ನಿವಾಸಿ, ಕಾಂಗ್ರೆಸ್‌‍ ಮುಖಂಡರಾದ ವಿದ್ಯಾ ಕೊಲೆಯಾಗಿರುವ ಮಹಿಳೆ.

ಮೈಸೂರಿನ ಶ್ರೀರಾಂಪುರ ನಿವಾಸಿ ವಿದ್ಯಾ ಅವರು ನಂದೀಶ್‌ ಅವರನ್ನು ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಕಾಂಗ್ರೆಸ್‌‍ ಪಕ್ಷದ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಯಾಗಿ, ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿರುವುದಲ್ಲದೆ, ಹಲವಾರು ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ದಂಪತಿ ನಡುವೆ ಸಾಮರಸ್ಯ ಇರಲಿಲ್ಲವೆಂದು ತಿಳಿದುಬಂದಿದೆ.

ನಿನ್ನೆ ತಡರಾತ್ರಿವಿದ್ಯಾ ಬನ್ನೂರಿನ ತುರಗನೂರಿನಲ್ಲಿದ್ದ ಪತಿ ಮನೆಗೆ ತೆರಳಿದ್ದಾರೆ. ಆ ವೇಳೆ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಈ ವೇಳೆ ಪತ್ನಿ ತಲೆಗೆ ಥಳಿಸಿ ಹತ್ಯೆಗೈದು ಪತಿ ನಂದೀಶ್‌ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಎಸ್ಪಿ ಸೀಮಾ ಲಾಟ್ಕರ್‌, ಅಡಿಷನಲ್‌ ಎಸ್ಪಿ ನಂದಿನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹತ್ಯಗೈದ ಪತಿ ನಂದೀಶ್‌ ಸೆರೆಗೆ ಬನ್ನೂರು ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.