Thursday, February 29, 2024
Homeಕ್ರೀಡಾ ಸುದ್ದಿದೀರ್ಘ ಕಾಲದ ಗೆಳತಿಯ ವರಿಸಿದ ನವದೀಪ್ ಶೈನಿ

ದೀರ್ಘ ಕಾಲದ ಗೆಳತಿಯ ವರಿಸಿದ ನವದೀಪ್ ಶೈನಿ

ಬೆಂಗಳೂರು, ನ. 25- ಟೀಮ್ ಇಂಡಿಯಾದ ವೇಗಿ ನವದೀಪ್ ಶೈನಿ ಅವರು ತಮ್ಮ ದೀರ್ಘಕಾಲದ ಗೆಳತಿಯನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಫ್ಯಾಶನ್, ಟ್ರಾವೆಲ್ ಹಾಗೂ ಲೈಫ್‌ಸ್ಟೈಲ್ ವಿಭಾಗದಲ್ಲಿ ಖ್ಯಾತಿ ಹೊಂದಿರುವ ಸ್ವಾತಿ ಅಸ್ಥಾವನ್ನು ವಿವಾಹವಾಗಿರುವ ವಿಷಯವನ್ನು ಟೀಮ್ ಇಂಡಿಯಾ ವೇಗಿ ತಮ್ಮ ಅಧಿಕೃತ ಇನ್ಸಾಟಾಗ್ರಾಮ್ನಲ್ಲಿ ಸ್ಪಷ್ಟಪಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

`ನಿನ್ನ ಜೊತೆಗೆ ಪ್ರತಿ ದಿನವೂ ಪ್ರೀತಿಯ ದಿನ. ಇಂದು ನಾವು ಎಂದೆಂದಿಗೂ ಜೊತೆಯಾಗಿರಲು ನಿರ್ಧರಿಸಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಬಯಸುತ್ತಿದ್ದೇನೆ. ನಮ್ಮ ಬದುಕಿನಲ್ಲಿ ಹೊಸ ಅಧ್ಯಾಯ ಶುರುವಾಗಿದೆ’ ಎಂದು ಶೈನಿ ಬರೆದುಕೊಂಡಿದ್ದಾರೆ.

ನವಜಾತ ಶಿಶುಗಳಿಗೆ ದಾಳಿಗೊಳಗಾದ ಸಮುದಾಯದ ಹೆಸರಿಡುತ್ತಿರುವ ಇಸ್ರೇಲಿಗರು

ಟೀಂ ಇಂಡಿಯಾ ಪರ 2 ಟೆಸ್ಟ್ , 8 ಏಕದಿನ ಹಾಗೂ 11 ಟ್ವೆಂಟಿ-20 ಪಂದ್ಯಳನ್ನು ಆಡಿರುವ ನವದೀಪ್ ಶೈನಿ ಕ್ರಮವಾಗಿ 4, 6 ಹಾಗೂ 13 ವಿಕೆಟಗಳನ್ನು ಪಡೆದಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಪರ ಶೈನಿ ಆಡಿದ್ದರು.

RELATED ARTICLES

Latest News