ನೇಹಾ ಕೊಲೆ ಖಂಡಿಸಿ ಹುಬ್ಬಳ್ಳಿಯಲ್ಲಿ ನಿಲ್ಲದ ಆಕ್ರೋಶ, ರಾಕ್ಷಸ ಫಯಾಜ್‍ ಗಲ್ಲುಶಿಕ್ಷೆಗೆ ಒತ್ತಾಯ

ಹುಬ್ಬಳ್ಳಿ,ಏ.20- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ನಿರಂಜನ ಅವರ ಪುತ್ರಿ ನೇಹಾ ಹಿರೇಮಠ ಕೊಲೆ ಖಂಡಿಸಿ ಎಬಿವಿಪಿ, ವಿವಿಧ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿವೆ. ಕೊಲೆ ಆರೋಪಿ ಫಯಾಜ್‍ನನ್ನು ಗಲ್ಲಿಗೇರಿಸಬೇಕೆಂಬ ಆಕ್ರೋಶ ಎಲ್ಲೆಡೆ ಭುಗಿಲೆದ್ದಿದೆ. ರಾಜಧಾನಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು ಸೇರಿದಂತೆ ಎಲ್ಲೆಡೆ ಪ್ರತಿಭಟನೆಗಳು ತೀವ್ರಗೊಂಡಿವೆ. ಕೊಲೆ ಖಂಡಿಸಿ ನಿನ್ನೆ ಕೂಡ ಹಲವೆಡೆ ಪ್ರತಿಭಟನೆ ನಡೆಸಲಾಯಿತು. ಇಂದು ಪ್ರತಿಭಟನೆ ತೀವ್ರಗೊಂಡಿದ್ದು, ಹುಬ್ಬಳ್ಳಿಯಲ್ಲಿ ಬಂದ್ ಮಾಡಿದರೆ ಬೆಂಗಳೂರಿನಲ್ಲಿ … Continue reading ನೇಹಾ ಕೊಲೆ ಖಂಡಿಸಿ ಹುಬ್ಬಳ್ಳಿಯಲ್ಲಿ ನಿಲ್ಲದ ಆಕ್ರೋಶ, ರಾಕ್ಷಸ ಫಯಾಜ್‍ ಗಲ್ಲುಶಿಕ್ಷೆಗೆ ಒತ್ತಾಯ