ಮುಂಬೈ, ಡಿ.31- ಹೊಸ ವರ್ಷಾಚರಣೆಗಾಗಿ ಜನರು ಪ್ರವಾಸಕ್ಕೆ ಹೋಗುತ್ತಿರುವ ಹಿನ್ನಲೆಯಲಿ ಮುಂಬೈ-ಗೋವಾ ಹೆದ್ದಾರಿಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಹೊಸ ವರ್ಷವನ್ನು ಆಚರಿಸಲು ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಗೋವಾ ಮತ್ತು ಅಲಿಬಾಗ್‌ಗೆ ಹೆಚ್ಚಿನ ಸಂಖ್ಯೆಯ ಜನರು ತೆರಳುತ್ತಿದ್ದು, ಮುಂಬೈ ಸಮೀಪದ ಲೋನೆರೆ, ಮಂಗಾಂವ್ ಮತ್ತು ಇಂದಾಪುರ್ ಪೊಯಿನಾಡ್‌ನ ರಸ್ತೆಗಳು ಟ್ರಾಫಿಕ್ ಜಾಮ್ ಉಂಟಾಗಿದೆ.
ಹಲವೆಡೆ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಹಲವು ರಸ್ತೆಗಳು ಗುಂಡಿ ಬಿದ್ದಿದ್ದು ವಾಹನಗಳು ನಿಧಾನವಾಗಿ ಚಲಿಸುತ್ತಿದೆ,ಇದರಿಂದ ಕಿ.ಮೀಗಳು ನಿಂತಿವೆ ಇದನ್ನು ಸರಿದೂಗಿಸಲು ಹೆದ್ದಾರಿ ಮತ್ತು ಸ್ಥಳೀಯ ಪೊಲೀಸರು ಸಂಚಾರ ದಟ್ಟಣೆಯನ್ನು ತೆರವುಗೊಳಿಸಲು ಹೆಚ್ಚಿನ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ .