
ಹಮದಾಬಾದ್, ಜು. 14: ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಬಂದಿರುವ ಪ್ರಾಥಮಿಕ ವರದಿ ಕುರಿತು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ತನಿಖೆಯನ್ನು ಟಾಟಾ ಒಡೆತನದ ವಿಮಾನಯಾನ ಸಂಸ್ಥೆ ಹಾಗೂ ಭಾರತ ಸರ್ಕಾರವನ್ನು ರಕ್ಷಿಸುವ ರೀತಿ ತಯಾರಿಸಲಾಗಿದೆ. ಮೃತ ಪೈಲಟ್ ಮೇಲೆ ತಪ್ಪು ಹೊರಿಸಬೇಡಿ ಅವರು ಬಂದು ಆರೋಪವನ್ನು ಸತ್ಯ ಅಲ್ಲ ಎಂದು ಸಾಬೀತು ಮಾಡಲು ಸಾಧ್ಯವಿಲ್ಲ, ಈ ವರದಿ ತಪ್ಪು ನಾವು ಅದನ್ನು ಒಪ್ಪುವುದಿಲ್ಲ ಎಂದು ಅಮೀನ್ ಸಿದ್ದಿಕಿ ಹೇಳಿದ್ದಾರೆ.
ಇವರು ತಮ್ಮ ಸಂಬಂಧಿ ಅಕೀಲ್ ಕುಟುಂಬವನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರು.ಏರ್ ಇಂಡಿಯಾ ಪರಿಹಾರ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೇನೆ, ನಮ್ಮ ಕುಟುಂಬ ಸದಸ್ಯರನ್ನು ಕೊಂದಿದ್ದಕ್ಕಾಗಿ ವಿಮಾನಯಾನ ಸಂಸ್ಥೆಯನ್ನು ನ್ಯಾಯಾಲಯದ ಅಂಗಳಕ್ಕೆ ಕರೆದೊಯ್ಯುವುದಾಗಿ ದಿ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 270 ಮಂದಿ ಪ್ರಾಣ ಕಳೆದುಕೊಂಡಿದ್ದರು. ಓರ್ವ ಮಾತ್ರ ಬದುಕುಳಿದಿದ್ದರು. ಜುಲೈ 13ರಂದು ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಅಪಘಾತದ ಪ್ರಾಥಮಿಕ ತನಿಖಾ ವರದಿಯನ್ನು ಎಎಐಬಿ ಬಿಡುಗಡೆ ಮಾಡಿತ್ತು. ವರದಿ ಹೊರಬಂದ ಬಳಿಕ ಅದರಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ಆದರೆ ಉತ್ತರಗಳಿಗಿಂತ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆರಂಭಿಕ ವರದಿಯು ಎಂಜಿನ್ ಅಥವಾ ಬೋಯಿಂಗ್ ವ್ಯವಸ್ಥೆಗಳಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿ ಕ್ಲೀನ್ ಚಿಟ್ ನೀಡಿದೆ.
ಅಪಘಾತದಲ್ಲಿ ಸಾವನ್ನಪ್ಪಿದ್ದ ಫೈಜಾನ್ ರಫೀಕ್ ಅವರ ಸಂಬಂಧಿ ಸಮೀರ್ ಮಾತನಾಡಿ, ವಿಮಾನಯಾನ ಸಂಸ್ಥೆಯು ಕಾಕ್‌ಪಿಟ್ ರೆಕಾರ್ಡಿಂಗ್ ಅನ್ನು ನಮಗೆ ಒದಗಿಸುವವರೆಗೂ ವರದಿ ನಂಬುವುದಿಲ್ಲ ಎಂದು ಹೇಳಿದ್ದಾರೆ. ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಅದರ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಸ್ವಿಚ್‌ಗಳು ಕಟ್ ಆಫ್ ಸ್ಥಿತಿಯಲ್ಲಿ ಇದ್ದವು.
ಇದರಿಂದ ಪೈಲಟ್‌ಗಳು ಗೊಂದಲಕ್ಕೀಡಾಗಿದ್ದರು ಎಂಬ ವಿಷಯ ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ತನಿಖೆಯಿಂದ ಗೊತ್ತಾಗಿತ್ತು. ಈ ಲೋಪದಿಂದಾಗಿ ವಿಮಾನವು ಟೇಕ್‌ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಕೆಳಗಿಳಿಯಲು ಆರಂಭಿಸಿ, ದುರಂತ ಸಂಭವಿಸಿತು ಎಂದು ಎಎಐಬಿ ಪ್ರಾಥಮಿಕ ತನಿಖಾ ವರದಿ ತಿಳಿಸಿದೆ.
ಬ್ರಿಟನ್‌ನ ವಾಯು ಅಪಘಾತ ತನಿಖಾ ಶಾಖೆ ಮತ್ತು ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ನೆರವಿನಿಂದ ಎಎಐಬಿ ಈ ತನಿಖೆಯನ್ನು ನಡೆಸಿದೆ. ದುರಂತದ ಕುರಿತು 15 ಪುಟಗಳ ವರದಿಯನ್ನು ಅದು ಬಿಡುಗಡೆಗೊಳಿಸಿದ್ದು, ಕೆಲವು ಆಘಾತಕಾರಿ ಮಾಹಿತಿಗಳು ತಿಳಿದುಬಂದಿವೆ.
ವಿಮಾನ ಟೇಕ್‌ಆಫ್ ಆದ ಮೂರೇ ಸೆಕೆಂಡ್‌ಗಳಲ್ಲಿ ಎರಡೂ ಎಂಜಿನ್‌ಗಳ ಇಂಧನ ಪೂರೈಕೆ ಸ್ವಿಚ್‌ಗಳು, ಇದ್ದಕ್ಕಿದ್ದಂತೆ ರನ್ ಮೋಡ್‌ನಿಂದ ಕಟ್‌ಆಫ್ ಮೋಡ್‌ಗೆ ಬದಲಾದವು.ಇದು ಕೇವಲ ಒಂದು ಸೆಕೆಂಡ್‌ನಲ್ಲಿ ಸಂಭವಿಸಿದೆ. ಎಂಜಿನ್‌ಗಳಿಗೆ ಇಂಧನ ಪೂರೈಕೆ ನಿಂತಿದ್ದರಿಂದ ಅವು ಕಾರ್ಯವನ್ನು ಸ್ಥಗಿತಗೊಳಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಎಂಜಿನ್‌ಗಳನ್ನು ಪುನಃ ಆನ್ ಮಾಡಲು ಪೈಲಟ್‌ಗಳು ಪ್ರಯತ್ನಿಸಿದ್ದಾರೆ. ಆಗ ಎಂಜಿನ್ 1ರಲ್ಲಿ ಭಾಗಶಃ ಚೇತರಿಕೆ ಕಂಡುಬಂದಿದೆ. ಆದರೆ ಎಂಜಿನ್ 2ರಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಇದರಿಂದ ಈ ಪ್ರಯತ್ನ ವಿಫಲವಾಗಿದೆ. ಆದರೆ ಈ ವರದಿಯನ್ನು ಮೃತರ ಸಂಬಂಧಿಕರು ನಿರಾಕರಿಸಿದ್ದಾರೆ.
- ಸಚಿವರು, ಶಾಸಕರ ಜತೆ ಸುರ್ಜೆವಾಲ ಮತ್ತೆ ಸಭೆ
- ಗ್ಯಾರಂಟಿ ಸರ್ಕಾರದಿಂದ ಶಕ್ತಿಯೋಜನೆ ಯಶಸ್ಸಿನ ಸಂಭ್ರಮಾಚರಣೆ, ಖುದ್ದು ಉಚಿತ ಟಿಕೆಟ್ ವಿತರಿಸಿದ ಸಿಎಂ
- ಸಿಗಂದೂರು ಸೇತುವೆ ಉದ್ಘಾಟನೆಗೆ ನನಗೆ ಆಹ್ವಾನ ನೀಡಿಲ್ಲ : ಸಿಎಂ ಸಿದ್ದರಾಮಯ್ಯ ಅಸಮಾಧಾನ
- ಸಿಗಂಧೂರಿಗೆ ಸಂಪರ್ಕ ಕಲ್ಪಿಸುವ ದೇಶದ 2ನೇ ಅತಿದೊಡ್ಡ ತೂಗು ಸೇತುವೆ ಲೋಕಾರ್ಪಣೆ
- ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯತ್ತ ಶುಭಾಂಶು ಶುಕ್ಲಾ ಪ್ರಯಾಣ ಆರಂಭ