Home ಇದೀಗ ಬಂದ ಸುದ್ದಿ ಕೊರೊನಾ ಕರ್ಮಕಾಂಡದಲ್ಲಿ ಭಾಗಿಯಾದ ಬಿಬಿಎಂಪಿ ಅಧಿಕಾರಿಗಳಿಗೆ ನೋಟೀಸ್‌‍..?

ಕೊರೊನಾ ಕರ್ಮಕಾಂಡದಲ್ಲಿ ಭಾಗಿಯಾದ ಬಿಬಿಎಂಪಿ ಅಧಿಕಾರಿಗಳಿಗೆ ನೋಟೀಸ್‌‍..?

0
ಕೊರೊನಾ ಕರ್ಮಕಾಂಡದಲ್ಲಿ ಭಾಗಿಯಾದ ಬಿಬಿಎಂಪಿ ಅಧಿಕಾರಿಗಳಿಗೆ ನೋಟೀಸ್‌‍..?

ಬೆಂಗಳೂರು,ಡಿ.16- ಕೋವಿಡ್‌ ಅವಧಿಯ ಅವ್ಯವಹಾರದ ಕುರಿತು ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದ ವರದಿ ಆಧಾರದ ಮೇಲೆ ಬಿಬಿಎಂಪಿಯ 28 ಅಧಿಕಾರಿಗಳಿಗೆ ನೋಟಿಸ್‌‍ ನೀಡಲು ತೀರ್ಮಾನಿಸಲಾಗಿದೆ.

ಕೋವಿಡ್‌ ನಿರ್ವಹಣೆ ವೇಳೆ ರಾಜ್ಯದಲ್ಲಿ ಮಾಸ್ಕ್‌, ಪಿಪಿಇ ಕಿಟ್‌ ಹಾಗೂ ಇತರೆ ಸಲಹಕರಣೆ ಖರೀದಿಯಲ್ಲಿ ಸುಮಾರು 167 ಕೋಟಿ ರೂ.ಗಳ ಅಕ್ರಮವಾಗಿದೆ ಎಂಬುದರ ಕುರಿತು ವಿಧಾನಸೌಧ ಪೊಲೀಸ್‌‍ ಠಾಣೆಯಲ್ಲಿ ಮೊದಲ ಎಫ್‌ಐಆರ್‌ ದಾಖಲಾಗಿರುವ ಬೆನ್ನಲೇ ಬಿಬಿಎಂಪಿಯ 28 ಅಧಿಕಾರಿಗಳಿಗೆ ನೋಟಿಸ್‌‍ ನೀಡಲು ತೀರ್ಮಾನಿಸಲಾಗಿದ್ದು ಒಂದೇರಡು ದಿನಗಳಲ್ಲಿ ನೋಟಿಸ್‌‍ ಜಾರಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿ ಹೆಸರು, ಕೋವಿಡ್‌ ಅವಧಿಯಲ್ಲಿ ಬಿಬಿಎಂಪಿ ಯಾವ ವಲಯ ಹಾಗೂ ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಪ್ರಸ್ತುತ ಯಾವ ಹ್ದುೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ನೋಟೀಸ್‌‍ನಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಆಯೋಗ ವರದಿಯಲ್ಲಿ ಆಕ್ಷೇಪಣೆ ವ್ಯಕ್ತವಾದ ಕೋವಿಡ್‌ 19 ಅವಧಿಯಲ್ಲಿ ತಮ ಅಧಿಕಾರ ಬಳಕೆ ಮಾಡಿಕೊಂಡು ವೆಚ್ಚದ ಕುರಿತು ಸಮಜಾಯಿಷಿ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಜಂಟಿ ಆಯುಕ್ತರ ಕಚೇರಿ ಹಾಗೂ ಕೇಂದ್ರ ಕಚೇರಿಯಲ್ಲಿ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಆಯೋಗ ವರದಿ ಪ್ರತಿ ಲಭ್ಯವಿದೆ.

ಅಗತ್ಯವಿದ್ದರೆ ಪಡೆದು ನಿರ್ಧಿಷ್ಟ ದಿನಾಂಕದ ಒಳಗಾಗಿ ಉತ್ತರ ನೀಡುವಂತೆ ಸೂಚಿಸಲಾಗಿದೆ.
ಅಖಿಲ ಭಾರತ ಸೇವೆಗಳಿಗೆ ಸೇರಿದ ಅಧಿಕಾರಿಗಳಿಗೆ (ಐಎಎಸ್‌‍, ಐಪಿಎಸ್‌‍, ಐಆರ್‌ಎಸ್‌‍) ಸಂಬಂಧಿಸಿದಂತೆ ಒಂದು ಪಟ್ಟಿ ರಾಜ್ಯ ಸರ್ಕಾರಿ ಸೇವೆಯ ಅಧಿಕಾರಿಗಳ ಮೊತ್ತೊಂದು ಪಟ್ಟಿ ಸಿದ್ಧಪಡಿಸಲಾಗಿದೆ. ಅಖಿಲ ಭಾರತ ಸೇವೆಗಳಿಗೆ ಸೇರಿದ ಅಧಿಕಾರಿಗಳಿಗೆ (ಐಎಎಸ್‌‍, ಐಪಿಎಸ್‌‍, ಐಆರ್‌ಎಸ್‌‍) ಸಂಬಂಧಿಸಿದಂತೆ ಮಾತ್ರ ಅವರ ಹೆಸರುಗಳನ್ನು ಗುರುತಿಸಿ ವಿವರಣೆ ಕೋರುವ ನೋಟಿಸನ್ನು ದಾಖಲೆ ಸಹಿತ ಸಿದ್ದಪಡಿಸಿ ಸರ್ಕಾರಕ್ಕೆ ಕಳುಹಿಸುವುದಕ್ಕೆ ತಯಾರಿ ಮಾಡಲಾಗಿದೆ.

ಒಂದೇರಡು ದಿನಗಳಲ್ಲಿ ಈ ಪಟ್ಟಿಯೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಕೆಯಾಗಲಿದೆ. ಅವರು ನೋಟಿಸ್‌‍ ಜಾರಿ ಮಾಡಲಿದ್ದಾರೆ. ಉಳಿದಂತೆ ರಾಜ್ಯ ಸರ್ಕಾರಿ ಸೇವೆಯ ಅಧಿಕಾರಿಗಳಿಗೆ ಬಿಬಿಎಂಪಿಯ ಮುಖ್ಯ ಆಯುಕ್ತರಿಂದಲೇ ನೋಟಿಸ್‌‍ ಜಾರಿಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿಯು ನೋಟಿಸ್‌‍ ಜಾರಿ ಮಾಡುವುದಕ್ಕೆ ಸಿದ್ದಪಡಿಸಿಕೊಂಡಿರುವ ಅಧಿಕಾರಿಗಳ ಪಟ್ಟಿಯಲ್ಲಿ ಬಹುತೇಕ ಅಧಿಕಾರಿಗಳು ನಿವತ್ತಿ ಹೊಂದಿದ್ದಾರೆ. ಇನ್ನು ಎರವಲು ಸೇವೆಯಡಿ ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳು ಬೇರೆ ಇಲಾಖೆಗಳಿಗೆ ವರ್ಗಾವಣೆಗೊಂಡಿದ್ದಾರೆ.
ಆರೋಗ್ಯ ವಿಭಾಗದ ಅಧಿಕಾರಿಗಳು ಮಾತ್ರ ಅಧಿಕಾರಿವಾರು ಪಟ್ಟಿ ಮಾಡುತ್ತಿದ್ದಾರೆ.

ಪ್ರಮುಖವಾಗಿ ಐಎಎಸ್‌‍ ಅಧಿಕಾರಿಗಳು, ಆರೋಗ್ಯ ವಿಭಾಗದ ಅಧಿಕಾರಿಗಳು, ಎಂಜಿನಿಯರಿಂಗ್‌ ಅಧಿಕಾರಿಗಳು, ಹಣಕಾಸು ವಿಭಾಗದ ಅಧಿಕಾರಿಗಳು ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅದರಲ್ಲೂ ಕೇಂದ್ರ ಕಚೇರಿ ಹಾಗೂ ವಲಯವಾರು ಅಧಿಕಾರಿ- ಸಿಬ್ಬಂದಿ ಪಟ್ಟಿ ಸಿದ್ಧಪಡಿಸಲಾಗಿದೆ.

ಕುನ್ಹಾ ಆಯೋಗವು ನೀಡಿರುವ ವರದಿಯ 5ನೇ ಭಾಗದಲ್ಲಿ ಬಿಬಿಎಂಪಿಗೆ ಸಂಬಂಧಿಸಿದ ಹಗರಣಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪೈಕಿ ಬಿಬಿಎಂಪಿಯ ಕೇಂದ್ರ ಕಚೇರಿ, ದಾಸರಹಳ್ಳಿ, ಪೂರ್ವ ವಲಯ, ಮಹದೇವಪುರ ಹಾಗೂ ರಾಜರಾಜೇಶ್ವರಿ ನಗರ ವಲಯಕ್ಕೆ ಸಂಬಂಧಿಸಿದ ಲೋಪ ದೋಷಗಳನ್ನು ಪಟ್ಟಿ ಮಾಡಲಾಗಿದೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾತ್ರ ನೋಟಿಸ್‌‍ ನೀಡಲಾಗುತ್ತಿದೆ. ಇನ್ನೂ ನಾಲ್ಕು ವಲಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಇನ್ನೂ ನೋಟಿಸ್‌‍ ನೀಡಲು ಸಿದ್ಧತೆ ಮಾಡಿಲ್ಲ.ಒಂದು ತಿಂಗಳಿಂದ ನೋಟಿಸ್‌‍ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಜ್ಯದಲ್ಲಿ ಕೊರೋನಾ ಕಾಲದಲ್ಲಿ ನಡೆದ ಕೋಟ್ಯಂತರ ರೂ.ಗಳ ಹಗರಣದ ಬಗ್ಗೆ ತನಿಖೆ ನಡೆಸುವುದಕ್ಕೆ ರಾಜ್ಯ ಸರ್ಕಾರವು ನ್ಯಾಯಮೂರ್ತಿ ಮೈಕೆಲ್‌ ಡಿ. ಕುನ್ಹಾ ನೇತತ್ವದಲ್ಲಿ ಆಯೋಗ ರಚನೆ ಮಾಡಿತ್ತು. ಆಯೋಗವು ಇತ್ತೀಚಿಗೆ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಬಿಬಿಎಂಪಿಗೆ ವ್ಯಾಪ್ತಿಗೆ ಸಂಬಂಧಿಸಿದಂತೆ ಕುನ್ಹಾ ನೀಡಿರುವ ವರದಿಯ ಭಾಗವನ್ನು ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ಕಳುಹಿಸಿಕೊಟ್ಟಿರುವ ಸರ್ಕಾರವು ಅಕ್ರಮದಲ್ಲಿ ಭಾಗಿಯಾದ ಅಧಿಕಾರಿ- ಸಿಬ್ಬಂದಿಗೆ ನೋಟಿಸ್‌‍ ಜಾರಿ ಸಂಬಂಧಪಟ್ಟ ಅಧಿಕಾರಿಯಿಂದ ತ್ವರಿತವಾಗಿ ವಿವರಣೆ ಪಡೆದು ಸಲ್ಲಿಕೆ ಮಾಡುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು ಕೋವಿಡ್‌ ಅವಧಿಯ ಅವ್ಯವಹಾರದ ಕುರಿತ ಆಕ್ಷೇಪ ವ್ಯಕ್ತಪಡಿಸಿದ ವಿಷಯಕ್ಕೆ ಸಂಬಂಧಿಸಿದ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಲು ಹೆಣಗಾಡುತ್ತಿದ್ದರು.