Home Blog Page 1855

ಪರಸ್ತ್ರೀ ವ್ಯಾಮೋಹಕ್ಕೆ ಹೆತ್ತಮಗನನ್ನು ಕೊಂದ ಪಾಪಿ ತಂದೆ

ಜಮ್‍ಷೆಡ್‍ಪುರ, ಅ 30 (ಪಿಟಿಐ) ಪರಸ್ತ್ರೀ ವ್ಯಾಮೋಹಕ್ಕೆ ಒಳಗಾದ ವ್ಯಕ್ತಿಯೊಬ್ಬ ತನ್ನ ಕರುಳ ಕುಡಿಯನ್ನೇ ನಿರ್ದಯಿಯಾಗಿ ಕೊಲೆ ಮಾಡಿರುವ ಘಟನೆ ಜಮ್‍ಷೆಡ್‍ಪುರದ ಖಾಕ್ರಿಪಾಡಾ ಪ್ರದೇಶದಲ್ಲಿ ನಡೆದಿದೆ.
ಹೆತ್ತ ಮಗನನ್ನೆ ಕೊಲೆ ಮಾಡಿದ ಪಾಪಿ ತಂದೆಯನ್ನು ಗೋಪಾಲಪು ಕಟಿನ್‍ಪದಾ ಪ್ರದೇಶದ ನಿವಾಸಿ ಅಜಯ್ ನಮ್ತಾ ಎಂದು ಗುರುತಿಸಲಾಗಿದೆ.

ಈತ ತನ್ನ ಅಪ್ರಾಪ್ತ ಮಗನನ್ನು ಕೊಳದಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಆರೋಪಿ ತನ್ನ ಮಗನನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಬುಲೆಟ್ ಬೈಕ್-ಸ್ಕೂಟರ್ ಡಿಕ್ಕಿ : ಬಿಎಸ್‍ಎಫ್ ಯೋಧ ಸೇರಿ ಇಬ್ಬರು ಸಾವು

ಆರೋಪಿಯು ಮಹಿಳೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಪತ್ನಿ ಮತ್ತು ಮಗನೊಂದಿಗೆ ಇರಲು ಇಷ್ಟವಿರಲಿಲ್ಲ ಹೀಗಾಗಿ ತನ್ನ ಮಗನನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-10-2023)

ನಿತ್ಯ ನೀತಿ : ನಮಗೆ ಬೇಕಾದಲ್ಲಿ ಬೆರೆತು ನಡೆಯೋಣ. ಸಾಕಾದಲ್ಲಿ ಸರಿದು ನಡೆಯೋಣ. ಎರಡೂ ಬೇಡವಾದಲ್ಲಿ ನಮ್ಮ ಮಾಡಿಗೆ ನಾವು ಯಾರ ಮನಸ್ಸನ್ನೂ ನೋಯಿಸದೆ ಸುಮ್ಮನೆ ಇರೋಣ.

ಪಂಚಾಂಗ ಸೋಮವಾರ 30-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಕೃತ್ತಿಕಾ / ಯೋಗ: ವ್ಯತೀಪಾತ / ಕರಣ: ತೈತಿಲ

ಸೂರ್ಯೋದಯ : ಬೆ.06.13
ಸೂರ್ಯಾಸ್ತ : 05.54
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಹೊಸ ವ್ಯವಹಾರ ಪ್ರಾರಂಭಿಸುವ ಆಲೋಚನೆಗಳು ಮನಸ್ಸಿಗೆ ಬರಬಹುದು.
ವೃಷಭ: ಉದ್ಯೋಗದಲ್ಲಿರುವವರ ನೆರವಿನಿಂದ ಹೊಸದನ್ನು ಕಲಿಯುವ ಅವಕಾಶವಿರುತ್ತದೆ.
ಮಿಥುನ: ಗುರು-ಹಿರಿಯರ ಬಗ್ಗೆ ಗೌರವ ಮತ್ತು ಆತಿಥ್ಯ ಭಾವನೆ ನಿಮ್ಮ ಮನಸ್ಸಿನಲ್ಲಿ ಹೆಚ್ಚಾಗುತ್ತದೆ.

ಕಟಕ: ಫೋಷಕರು ಹಾಗೂ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಸಿಂಹ: ಕೆಲಸದ ಸ್ಥಳದಲ್ಲಿ ಸ್ನೇಹಿತರೊಂದಿಗೆ ಸಂತಸದಿಂದಿರುವಿರಿ.
ಕನ್ಯಾ: ಅತಿಥಿಗಳ ಆಗಮನದಿಂದ ಮನೆಯ ವಾತಾವರಣ ಆಹ್ಲಾದಕರ ವಾಗಿರುತ್ತದೆ. ಅದೃಷ್ಟ ನಿಮ್ಮಕಡೆ ಇರುತ್ತದೆ.

ತುಲಾ: ಕುಟುಂಬ ಜೀವನವು ಎಲ್ಲಾ ಕುಟುಂಬ ಸದಸ್ಯರೊಂದಿಗೆ ಆನಂದದಾಯಕ ಮತ್ತು ಆರಾಮದಾಯಕವಾಗಿರುತ್ತದೆ.
ವೃಶ್ಚಿಕ: ಅದೃಷ್ಟವು ನಿಮ್ಮೊಂದಿಗಿರುತ್ತದೆ. ಆದ್ದರಿಂದ ಮನಸ್ಸಿನಲ್ಲಿ ಸಂತಸ ಮೂಡುತ್ತದೆ.
ಧನುಸ್ಸು: ಸ್ವಂತ ಉದ್ಯಮ ಆರಂಭಿಸುವುದು ಕಷ್ಟಸಾಧ್ಯ. ನೌಕರರಿಗೆ ನೆಮ್ಮದಿಯ ದಿನ.

ಮಕರ: ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಸಂಬಂಧ ಬಹಳ ಉತ್ತಮವಾಗಿರಲಿದೆ.
ಕುಂಭ: ಮಾತಿನಲ್ಲಿ ಮಾಧುರ್ಯವಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ಪೂರ್ಣಗೊಳ್ಳಲಿವೆ.
ಮೀನ: ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಸಂಬಂಧ ಬಹಳ ಉತ್ತಮವಾಗಿರಲಿದೆ.

ಕಿಲ್ಲರ್ ಬಿಎಂಟಿಸಿಗೆ ಮತ್ತಿಬ್ಬರು ಬಲಿ

ಬೆಂಗಳೂರು. ಅ.29- ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಅದರಲ್ಲೂ ಕಿಲ್ಲರ್ ಬಿಎಂಟಿಸಿ ಬಸ್‍ಗೆ ಬಲಿಯಾಗುತ್ತಿರುವವರ ಸಂಖ್ಯೆ ಅಧಿಕ ವಾಗುತ್ತಿದೆ. ವಿಜಯನಗರ ಸಂಚಾರಿ ಫೋಲಿಸ್ ಠಾಣೆ ಹಾಗೂ ಹುಳಿಮಾವು ಠಾಣಾ ವ್ಯಾಪ್ತಿಗಳಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಬಿಎಂಟಿಸಿ ಬಸ್‍ಗೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ.

ಗೋವಿಂದರಾಜನಗರ ಮುಖ್ಯರಸ್ತೆಯ ಬೈಟು ಕಾಫಿ ಮಳಿಗೆ ಮುಂಭಾಗ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸುಂಕದಕಟ್ಟೆಯ ನಿವಾಸಿ ಕುಮಾರ್(45) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ವಿಜಯನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹಿಂದುಳಿದ ವರ್ಗ ಆಯೋಗದ ವರದಿ ಸ್ವೀಕರಿಸುತ್ತೇವೆ : ಸಿದ್ದರಾಮಯ್ಯ

ಯುವತಿ ಬಲಿ:
ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯ ಅರಕೆರೆ ಸಮೀಪದ ಸಾಯಿ ಗಾರ್ಮೆಂಟ್ಸ್ ಬಳಿ ರಸ್ತೆ ದಾಟುತ್ತಿದ್ದ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದ ವೀಣಾ(20) ಅಪಘಾತ ದಲ್ಲಿ ಮೃತಪಟ್ಟ ಗಾರ್ಮೆಂಟ್ಸ್ ಉದ್ಯೋಗಿ. ಇವರು ಹುಳಿಮಾವಿನಲ್ಲಿ ಪಾಸವಾಗಿದ್ದರು. ಅರಕೆರೆ ಬಳಿಯ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವೀಣಾ ನಿನ್ನೆ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದ್ದು ಗಂಭೀರವಾದ ಪೆಟ್ಟು ಬಿದ್ದು ಸಾವನ್ನಪ್ಪಿ ದ್ದಾರೆ.

ಈ ಸಂಬಂಧ ಹುಳಿಮಾವು ಸಂಚಾರಿ ಠಾಣೆ ಫೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.

ಬುಲೆಟ್ ಬೈಕ್-ಸ್ಕೂಟರ್ ಡಿಕ್ಕಿ : ಬಿಎಸ್‍ಎಫ್ ಯೋಧ ಸೇರಿ ಇಬ್ಬರು ಸಾವು

ಬೆಂಗಳೂರು,ಅ.29-ಬೈಕ್ ಹಾಗೂ ಮೊಪೆಡ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಿಎಸ್‍ಎಫ್ ಯೋಧ ಸೇರಿದಂತೆ ಇಬ್ಬರು ಮೃತಪಟ್ಟಿದ್ದು ಒಬ್ಬ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ಬಳ್ಳಾರಿ ರಸ್ತೆಯ ಗಡಿ ಭದ್ರತಾ ಪಡೆಯ ಗೇಟ್-2ರ ಬಳಿ ಸಂಭವಿಸಿದೆ.

ಬಾಗಲೂರಿನ ನಿವಾಸಿ ಹಾಗೂ ಬಿಎಸ್‍ಎಫ್ ಕೇಂದ್ರದಲ್ಲಿ ಹೆಡ್ ಕುಕ್ ಆಗಿ ಸೇವೆ ಸಲ್ಲಿಸುತ್ತಿದ್ದ ಸುಧಾಕರ್ ಹಾಗೂ ಯೂಟೂಬರ್ ಗಿರೀಶ್ ಅಲಿಯಾಸ್ ಗಣಿ ಮೃತ ದುರ್ದೈವಿಗಳಾಗಿದ್ದಾರೆ. ಕಳೆದ ರಾತ್ರಿ 10.30ರ ಸಂದರ್ಭದಲ್ಲಿ ತಮ್ಮ ಬುಲೆಟ್ ಬೈಕ್‍ನಲ್ಲಿ ಗಿರಿ ಮತ್ತು ಆತನ ಸ್ನೇಹಿತ ಬಾಗಲೂರು ಕಡೆಗೆ ಹೋಗುತ್ತಿದ್ದರು.

ಹಿಂದುಳಿದ ವರ್ಗ ಆಯೋಗದ ವರದಿ ಸ್ವೀಕರಿಸುತ್ತೇವೆ : ಸಿದ್ದರಾಮಯ್ಯ

ಈ ವೇಳೆ ಗೇಟ್-2ರಿಂದ ಮುಖ್ಯರಸ್ತೆಗೆ ತಮ್ಮ ಆ್ಯಕ್ಟಿವಾ ಹೋಂಡಾದಲ್ಲಿಸುಧಾಕರ್ ಹೊರ ಬಂದಾಗ ಪರಸ್ಪರ ಡಿಕ್ಕಿ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡ ಮೂವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಸುಧಾಕರ್ ಹಾಗೂ ಗಿರಿ ಮೃತಪಟ್ಟಿದ್ದಾರೆ.

ಮತ್ತೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದ ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬೈಡನ್ ನಿವಾಸದ ಮೇಲೆ ಹಾರಾಡಿದ ವಿಮಾನ

ವಾಷಿಂಗ್‍ಟನ್,ಅ.29- ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ತಂಗಿದ್ದ ಡೆಲವೇರ್ ನಿವಾಸದ ಬಳಿ ನಾಗರೀಕ ವಿಮಾನ ಹಾರಾಟ ನಡೆಸಿ ಆತಂಕಹುಟ್ಟಿಸಿದ ಘಟನೆ ನಡೆದಿದೆ. ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಿ ಭದ್ರತ ಲೋಪ ಉಂಟಾಗಿದೆ. ಎಚ್ಚೆತ್ತ ಅಮೆರಿಕದ ಯುದ್ಧ ವಿಮಾನಗಳು ತಕ್ಷಣವೇ ಮುನ್ನೆಚ್ಚರಿಕೆ ವಹಿಸಿ ವಿಮಾನವನ್ನು ಹತ್ತಿರದ ವಿಮಾನ ನಿಲ್ಧಾಣದಲ್ಲಿ ಕೆಳಗಿಳಿಸಿದೆ,

ಪರೀಕ್ಷೆ ಅಕ್ರಮ : 22 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಲ್ಮಿಂಗ್ಟನ್‍ನ ಉತ್ತರಕ್ಕೆ ನಾಗರಿಕ ವಿಮಾನವೊಂದು ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಿತು ಅಧ್ಯಕ್ಷರು ವಿಲ್ಮಿಂಗ್ಟನ್‍ನಲ್ಲಿರುವ ಅವರ ಮನೆಯಲ್ಲೇ ಇದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ರಹಸ್ಯ ಸೇವೆ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‍ನ ಏಜೆಂಟ್‍ಗಳು ಈ ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ವಿಮಾನ ಪೈಲೆಟ್‍ನನ್ನು ಬಂಸಲಾಗಿದೆ ವಿಮಾನಯಾನ ಕಂಪನಿ ಮೇಲೂ ಪ್ರಕರಣ ದಾಖಲಿಸಲಾಗಿದೆ.

ನಗುಮುಖದ`ಅರಸ’ನ 2ನೇ ಪುಣ್ಯಸ್ಮರಣೆಗೆ ಹರಿದು ಬಂದ ಅಭಿಮಾನಿ ಸಾಗರ

ಬೆಂಗಳೂರು, ಅ.29- ಕನ್ನಡಿಗರ ಅಚ್ಚುಮೆಚ್ಚಿನ ಸುಪುತ್ರ, ಕರ್ನಾಟಕ ರತ್ನ ಪುನಿತ್ ರಾಜಕುಮಾರ್ ನಮ್ಮನ್ನೆಲ್ಲ ಆಗಲಿ ಇಂದಿಗೆ ಎರಡು ವರ್ಷ ಕಳೆದೇ ಹೋಯಿತು. ಆದರೆ ಅವರ ನೆನಪುಗಳು ಪ್ರತಿಯೊಬ್ಬರ ಮನಗಳಲ್ಲಿ ಅಚ್ಚಳಿಯದೆ ಹಾಗೆ ಉಳಿದುಕೊಂಡಿವೆ. ಎರಡು ವರ್ಷಗಳ ಹಿಂದೆ ಇದೇ ತಿಂಗಳು ಇದೇ ದಿನ ಅಚಾನಕ್ಕಾಗಿ ಯಾರಿಗೂ ಹೇಳದೆ ಬಾರದ ಲೋಕಕ್ಕೆ ಪಯಣ ಬೆಳೆಸಿದ ರಾಜಕುಮಾರನಿಗೆ ಮಿಡಿದ ಹೃದಯಗಳು ಅಗಣಿತ.

ತಮ್ಮ ಮನೆಯಲ್ಲಿ ಒಬ್ಬ ಸದಸ್ಯರನ್ನು ಕಳೆದುಕೊಂಡಿದ್ದಕ್ಕಿಂತ ಹೆಚ್ಚು ಶೋಕವನ್ನು ವ್ಯಕ್ತಪಡಿಸಿದರು. ಯಾರೇ ಒಬ್ಬ ಗಣ್ಯ ವ್ಯಕ್ತಿ ಇಹಲೋಕ ತ್ಯಜಿಸಿದಾಗ ಒಂದು ಅಥವಾ ಎರಡು ಮೂರು ತಿಂಗಳೊಳಗೆ ಜನ ಮರೆತು ಹೋಗುತ್ತಾರೆ ಆದರೆ ಅಪ್ಪು ವಿಷಯದಲ್ಲಿ ಹಾಗಾಗಲಿಲ್ಲ. ಎರಡು ವರ್ಷ ಕಳೆದರೂ ಮರೆಯಲು ಇಷ್ಟಪಡದ ಅಭಿಮಾನಿಗಳು, ಪ್ರತಿದಿನ ಪ್ರತಿಕ್ಷಣ ನೆನೆಯುತ್ತಾ ದೊಡ್ಮನೆ ಹುಡುಗನಿಗೆ ಈ ರೀತಿಯ ಸಾವು ನ್ಯಾಯವಲ್ಲ ಎಂದು ಇಂದಿಗೂ ದೇವರನ್ನು ಜನ ಶಪಿಸುತ್ತಾರೆ. ಕೆಲ ಅಭಿಮಾನಿಗಳಂತೂ ಜೊತೆಯಲ್ಲಿಯೇ ಪಯಣ ಬೆಳೆಸಿದ್ದು ಉಂಟು.

ಅಪ್ಪು ಈಗ ಕೇವಲ ಮಾನವನಲ್ಲ ದೇವಮಾನವ. ಲಕ್ಷಾಂತರ ದೇವರ ಮನೆಗಳಲ್ಲಿ ಪರಮಾತ್ಮನಾಗಿದ್ದಾನೆ. ತನಗಾಗಿ ಗುಡಿ ಗೋಪುರ ಕಟ್ಟಿಸಿಕೊಂಡಿದ್ದಾನೆ. ಪ್ರತಿಯೊಂದು ಊರು, ಬೀದಿ, ಜಾತ್ರೆಗಳಲ್ಲಿ ಕಟೌಟ್‍ಗಳ ಮೂಲಕ ರಾರಾಜಿಸುತ್ತಿದ್ದಾರೆ. ಕೆಲವು ಜಾತ್ರೆ ತೇರುಗಳಲ್ಲಿ ದೇವರೊಂದಿಗೆ ಅಪ್ಪು ಪೋಟೋ ಇಟ್ಟು ಪೂಜಿಸಿದ್ದು ಉಂಟು. ಅಷ್ಟರಮಟ್ಟಿಗೆ ಪುನೀತ್ ರಾಜಕುಮಾರ ಅಜರಾಮರವಾಗಿ ಕನ್ನಡಿಗರು ಎದೆಯಲ್ಲಿ ಹಾರದ ಜ್ಯೋತಿಯಾಗಿ ಮಿನುಗುತ್ತಿದ್ದಾರೆ.

ಬೆಂಗಳೂರು ನಗರ ಅಷ್ಟೇ ಅಲ್ಲದೆ ಪ್ರತಿಯೊಂದು ಊರು ಗಲ್ಲಿಗಳಲ್ಲಿ ಇಂದು ಅಪ್ಪು ಸ್ಮರಣೆ ನಡೆಯುತ್ತಿದೆ. ಅಭಿಮಾನಿಗಳು ಅನ್ನಸಂತರ್ಪಣೆ ಜೊತೆಗೆ ಬ್ಲಡ್ ಡೊನೇಷನ್ ಕ್ಯಾಂಪ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಬಡ ಶಾಲಾ ಮಕ್ಕಳಿಗೆ ಆರ್ಥಿಕ ನೆರವು, ಪುಸ್ತಕಗಳ ವಿತರಣೆ ಯಂತಹ ನೂರಾರು ಸಮಾಜಸೇವಾ ಕಾರ್ಯಗಳು ಪುನೀತ್ ಅವರ ಹೆಸರಿನಲ್ಲಿ ನಡೆಯುತ್ತಿವೆ.

ಪುನೀತ್ ರಾಜಕುಮಾರ್ ಬದುಕಿದ್ದಾಗ ಸಮಾಜಕ್ಕಾಗಿ ಅವರ ಜೀವ ಸದಾ ಮಿಡಿಯುತ್ತಿತ್ತು. ಅದು ಅಂದು ಯಾರಿಗೂ ಗೊತ್ತಾಗಿರಲಿಲ್ಲ. ಸ್ವಂತ ಮನೆಯವರಿಗೂ ಹೇಳಿಕೊಂಡಿರಲಿಲ್ಲ ಅಂದರೆ ಒಂದು ಕೈಯಲ್ಲಿ ಕೊಟ್ಟಿದ್ದು ಮತ್ತೊಂದು ಕೈಗೆ ಗೊತ್ತಾಗಬಾರದು ಎಂದು ನಂಬಿದವರು. ಕೊನೆಯವರೆಗೂ ಹಾಗೆಯೇ ಬದುಕಿದ್ದರು. ಅವರು ಮಾಡಿದ ದಾನ ಧರ್ಮಕ್ಕೆ ಇಡೀ ಭಾರತ ಶಿರಭಾಗಿ ನಮಿಸಿತ್ತು.

ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದಗುಡಿಯಲ್ಲೂ, ಸಾಮಾಜಿಕ ಚಿಂತನೆ ಮೆರೆದಿದ್ದಾರೆ. ಗಿಡ ಬೆಳೆಸಿ ಕಾಡನ್ನು ಉಳಿಸಿ ಮುಂದಿನ ಪೀಳಿಗೆ ಸುಖವಾಗಿ ಬದುಕಲು ವನ್ಯ ಸಂಪತ್ತು ಮುಖ್ಯ. ನಾವೆಲ್ಲರೂ ಕೈಜೋಡಿಸಬೇಕು. ಪ್ರಕೃತಿಯೊಂದಿಗೆ ಕಾಲ ಕಳೆದಾಗ ನಮ್ಮನ್ನು ನಾವು ಒರೆತುಕೊಳ್ಳಬಹುದು ಎಂಬ ಮಹತ್ತರ ಸಂದೇಶವನ್ನು ನಮ್ಮನ್ನ ಅಗಲಿ ಹೋಗುವಾಗ ಸಾರಿದ್ದಾರೆ. ಈಗ ಅಭಿಮಾನಿಗಳು ಅಪ್ಪು ಹೇಳಿದಂತೆ ಗಿಡಗಳನ್ನು ಹಂಚುವ ಕಾರ್ಯದಲ್ಲಿ ತೊಡಗುತ್ತಾ ನೀಡುವ ಪ್ರಕ್ರಿಯೆಯನ್ನು ಶುರುಮಾಡಿಕೊಂಡಿದ್ದಾರೆ.

ಯುವರತ್ನನ ಅಗಲಿಕೆ, ಇರುವ ತನಕ ಸಂತೋಷದಿಂದ, ಸಾಮರಸ್ಯದಿಂದ ಬದುಕಿ, ಅಭಲರಿಗೆ ನೆರವಾಗುತ್ತಾ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂಬ ದೊಡ್ಡ ಪಾಠ ಕಲಿಸಿದೆ. ಈಗ ಎಲ್ಲಾ ಕಡೆ ಅಪ್ಪು ಅಂತಹ ದೊಡ್ಡ ಮನುಷ್ಯನೇ ಎಲ್ಲವನ್ನು ಬಿಟ್ಟು ಹೋದ ನಾವು ಅವರ ದೂಳು ಸಮಾನ, ಯಾವಾಗ ಬೇಕಾದರೂ ಉಸಿರು ನಿಲ್ಲಬಹುದು, ಜೀವನನ ನಶ್ವರ ಎಂದು ಹೇಳುತ್ತಾ ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ.

ಪರೀಕ್ಷೆ ಅಕ್ರಮ : 22 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು.. 2ನೇ ವರ್ಷದ ಪುಣ್ಯಸ್ಮರಣೆಗೆ ಅಪ್ಪು ಸಮಾ ನಿರ್ಮಾಣ ಮಾಡಲಾಗಿದೆ. ರಾಜ್ ಕುಟುಂಬಸ್ಥರು ಸಮಾ ನಿರ್ಮಿಸಿದ್ದು ಸ್ಮಾರಕ ನಿರ್ಮಾಣ ಕೆಲಸ ನಡೆದಿದೆ.

ಪುನೀತ್ ರಾಜ್ ಕುಮಾರ್ ಸ್ಮಾರಕವನ್ನು ಬಿಳಿ ಮಾರ್ಬಲ್ಸïನಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಮಾರಕದ ಮೇಲೆ ಪುನೀತ್ ರಾಜ್ ಕುರ್ಮಾ ಫೋಟೋ ಕೂಡ ಇದೆ. ಸ್ಮಾರಕದ ಸುತ್ತಲ್ಲೂ ಸಾದೇನಹಳ್ಳಿ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಅಣ್ಣಾವ್ರ ಸ್ಮಾರಕದ ರೀತಿಯಲ್ಲೇ ಪುನೀತ್ ಸ್ಮಾರಕ ನಿರ್ಮಾಣ ಮಾಡಲಾಗಿದೆ.

ಪುನೀತ್ ಅಗಲಿಕೆಯ ನೋವು ಇನ್ನು ಕುಟುಂಬಸ್ಥರನ್ನು ಕಾಡುತ್ತಿದೆ. ಬೆಳಗ್ಗೆ 9 ಗಂಟೆಗೆ ಪುನೀತ್ ರಾಜïಕುಮಾರ್ ಕುಟುಂಸ್ಥರು ಸಮಾ ಪೂಜೆ ಸಲ್ಲಿಸಿದರು. ಅಶ್ವಿನಿ ಪುನೀತ್ ರಾಜïಕುಮಾರ್ ಹಾಗೂ ಮಕ್ಕಳು ಪೂಜೆ ಸಲ್ಲಿಸಿದರು ರಾಘಣ್ಣ, ಶಿವಣ್ಣ ಸೇರಿದಂತೆ ಕುಟಂಬಸ್ಥರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಳೆದ 1 ತಿಂಗಳಿನಿಂದ ಅಪ್ಪು ಸಮಾ ನಿರ್ಮಾಣ ಕೆಲಸ ನಡೆಯುತ್ತಿತ್ತು. ರಾಜ್ ಕುಮಾರ್ ಸ್ಮಾರಕದ ರೀತಿಯಲ್ಲೇ ಅಪ್ಪು ಸ್ಮಾರಕ ನಿರ್ಮಾಣ ಮಾಡಲಾಗಿದೆ.

ಅಪ್ಪು 2ನೇ ವರ್ಷದ ಪುಣ್ಯ ಸ್ಮರಣೆಯನ್ನು ಸಾರ್ಥಕವಾಗಿ ಆಚರಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೂ ಸ್ಮಾರಕದ ಬಳಿ ನಿರಂತರ ಅನ್ನದಾನ ಇರಲಿದೆ. ಅಪ್ಪು ನೆನಪಲ್ಲಿ ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ ಶಿಬಿರ ಕೂಡ ಆಯೋಜಿಸಲಾಗಿದೆ.

ಖರ್ಗೆ ತವರಲ್ಲೇ ಪರೀಕ್ಷಾ ಅಕ್ರಮ ನಡೆದದ್ದೇ ಹೇಗೆ..? : ಜೋಶಿ

ಹುಬ್ಬಳ್ಳಿ,ಅ.29- ನಮ್ಮ ಸರ್ಕಾರದಲ್ಲಿ ಪಿಎಸ್‍ಐ ಹಗರಣ ಹೊರಬಂತು. ನಾವು ಐಜಿ ಅವರನ್ನೆ ಜೈಲಿಗೆ ಕಳುಹಿಸಿದೆವು. ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಗಟ್ಟಲು ಸಾಕಷ್ಟು ತಂತ್ರಜ್ಞಾನ ಬಂದಿದೆ. ಆದರೆ, ಯಾಕೆ ಹೀಗೆ ಆಯಿತು. ಅದು ಮಲ್ಲಿಕಾರ್ಜುನ ಖರ್ಗೆ ಅವರ ಜಿಲ್ಲೆಯಲ್ಲಿಯೇ ಯಾಕೆ ಈ ಸ್ಕ್ಯಾಮ್ ಆಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪರೀಕ್ಷಾ ಅಕ್ರಮಗಳು ಕಲಬುರಗಿಯಲ್ಲೇ ಯಾಕೆ ಆಗುತ್ತಿದೆ ಎಂಬುವುದನ್ನು ತಿಳಸಬೇಕು ಎಂದರು. ಕಾಂಗ್ರೆಸ್ ಪಾರ್ಟಿ ಗೊಂದಲದಿಂದ ರಾಜ್ಯದ ಜನ ಅಂತಂತ್ರ ವಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ . ಇನ್ನೂ ಎರಡು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ. ಉಪ ಮುಖ್ಯಮಂತ್ರಿ ಶಿವಕುಮಾರ್ ಬಿಟ್ಟು ಸಭೆ ಮಾಡುವ ಸ್ಥಿತಿಗೆ ಸಿದ್ದರಾಮಯ್ಯ ತಲುಪಿದ್ದಾರೆ. ಇದು ರಾಜಕೀಯ ಹೈಡ್ರಾಮಾ ಕಾಂಗ್ರೆಸಿನಲ್ಲಿ ನಿತ್ಯ ಭಿನ್ನಮತ ಹೆಚ್ಚಾಗುತ್ತಿದೆ ಅಧಿಕಾರಕ್ಕಾಗಿ ಒಳ ಜಗಳ ನಡೆಯುತ್ತಿದ್ದು ಇದನ್ನು ಡೈವರ್ಟ್ ಮಾಡಲು ಹುಲಿ ಉಗುರು ಪೆಂಡೆಂಟ್ ವಿಚಾರ ತಂದಿದ್ದಾರೆ ಎಂದು ಟಾಂಗ್ ನೀಡಿದರು.

ಪರೀಕ್ಷೆ ಅಕ್ರಮ : 22 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾವಾಗಿದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಜಗಳ ತಾರಕ್ಕೇರಿದೆ ಇದನ್ನು ಡೈವರ್ಟ್ ಮಾಡಲು ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ಸರ್ಕಾರವನ್ನು ತೆಗೆಯಲು ಬಿಜೆಪಿ ಯಾವುದೇ ಚಿಂತನೆ ಮಾಡಿಲ್ಲ. ಜನ ಕಾಂಗ್ರೆಸ್‍ಗೆ ಅಧಿಕಾರ ಕೊಟ್ಟಿದ್ದಾರೆ ಐದು ವರ್ಷ ನಡೆಸಲಿ. ಆದರೆ, ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬಾಲಿಶ ಹೇಳಿಕೆ ನೀಡೋದು ಬಿಡಬೇಕು. ಐದಾರು ಸ್ಥಾನಗಳು ಕಡಿಮೆ ಇದ್ದರೆ ಸರ್ಕಾರ ರಚನೆ ಬಗ್ಗೆ ಯೋಚನೆ ಮಾಡಬಹುದು. ಆದ್ರೆ 70 ಶಾಸಕರನ್ನು ಕರೆದುಕೊಂಡು ಯಾರು ಸರ್ಕಾರ ರಚನೆ ಮಾಡಲು ಯೋಚನೆ ಮಾಡುತ್ತಿದ್ದಾರೆ.

ಇದು ಸಾಧ್ಯನಾ ಎಂದ ಅವರು ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಪ್ರಾಮುಖ್ಯತೆ ಕಡಿಮೆ ಮಾಡಲು ಸಿದ್ದರಾಮಯ್ಯ ಡ್ರಾಮಾ ನಡೆಸಿದ್ದಾರೆ. ಇನ್ನೂ ಎರಡುವರೆ ವರ್ಷಕ್ಕೆ ಮತ್ತು ಲೋಕಸಭಾ ಚುನಾವಣೆಗೆ ಬಳಿ ಉಪ ಮುಖ್ಯಮಂತ್ರಿ ಡಿಕೆಶಿಗೆ ಅಕಾರ ಬಿಟ್ಟುಕೊಡಬೇಕು ಅಂತ ಸಿದ್ದರಾಮಯ್ಯ ಈ ನಾಟಕ ನಡೆಸಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಭಿಮಾನ ಕರ್ನಾಟಕ ಅಂತ ಮಾತನಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರವಾಗಿ ಯಾವುದೇ ಸಹಕಾರ ನೀಡುತ್ತಿಲ್ಲ . ಕೇಂದ್ರ ಜಲ ಸಂಪನ್ಮೂಲಗಳ ವಿಚಾರದಲ್ಲಿ ಅವರು ಸಹಕಾರ ಕೊಟ್ಟಿಲ್ಲ ಇದನ್ನು ಅವರು ಎದೆ ಮುಟ್ಟಿಕೊಂಡು ಹೇಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸ್ಪಷ್ಟನೆ ಕೇಳಿದರು.

ಕುಚ್ವಿತ ಬುದ್ಧಿ ಇರಬಾರದು:
ಮಾಜಿ ಸಿಎಂ ಬೊಮ್ಮಾಯಿ ಅನಾರೋಗ್ಯದ ಬಗ್ಗೆ ಶಾಸಕ ಎನ್ ಎಚ್ ಕೋನರೆಡ್ಡಿ ಅಪಹಾಸ್ಯ ವಿಚಾರ ಕುರಿತು ಸಹ ಪ್ರತಿಕ್ರಿಯೆ ನೀಡಿದ ಅವರು, ಅನಾರೋಗ್ಯ ಮತ್ತು ಸಾವಿನ ವಿಚಾರದಲ್ಲಿ ವ್ಯಕ್ತಿ ಯಾರೇ ಇರಲಿ ಈ ರೀತಿಯಾಗಿ ಕೆಳಮಟ್ಟದಲ್ಲಿ ಮಾತನಾಡ ಬಾರದು. ಈ ರೀತಿಯ ಕುಚ್ವಿತ ಬುದ್ದಿ ಮಾಡಬಾರದು. ಇದು ಅವರ ಸಂಸ್ಕೃತಿ ಸಂಸ್ಕಾರವನ್ನು ತೋರಿಸುತ್ತದೆ. ರಾಜಕಾರಣಿಗಳು ಆಗಿದ್ದರು ನಾವು ಮನುಷ್ಯರು ಇದನ್ನು ನೆನಪಿಟ್ಟುಕೊಳ್ಳಬೇಕು. ಜನ ನಮ್ಮನ್ನು ನೋಡುತ್ತಿರುತ್ತಾರೆ ಎಂದರು.

ರೋಹಿತ್, ಕೊಹ್ಲಿ ವಿಶ್ವಶ್ರೇಷ್ಠ ಆಟಗಾರರು : ಬಾಬರ್ ಆಝಮ್

ಬೆಂಗಳೂರು, ಅ.29- ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ವಿಶ್ವ ಶ್ರೇಷ್ಠ ಆಟಗಾರರು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಮ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಸ್ಟಾರ್ ಸ್ಪೋಟ್ರ್ಸ್‍ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಬಲಗೈ ಬ್ಯಾಟರ್ ಗೆ ವಿಶ್ವದ ನಿಮ್ಮ ಅತ್ಯುತ್ತಮ ಕ್ರಿಕೆಟಿಗರ ಹೆಸರನ್ನು ತಿಳಿಸಿ ಎಂದು ಕೇಳಿದಾಗ, ಬಾಬರ್ ಆಝಮ್, ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.

ನಾನು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸ್ ಅವರ ಹೆಸರ ತೆಗೆದುಕೊಳ್ಳಲು ಬಯಸುತ್ತೇನೆ. ಏಕೆಂದರೆ ನಾನು ಅವರ ಆಟವನ್ನು ಅನುಕರಿಸುತ್ತೇನೆ. ಅವರು ವಿಶ್ವದ ಅತ್ಯಂತ ಪರಿಣಾಮಕಾರಿ ಆಟಗಾರರಾಗಿದ್ದಾರೆ. ಅಲ್ಲದೆ ವಿಶ್ವದ ಅತಿ ಶ್ರೇಷ್ಠ ಬ್ಯಾಟರ್ಸ್‍ಗಳಾಗಿದ್ದಾರೆ. ಅವರು ಪಂದ್ಯದ ಸಂಕಷ್ಟದ ಪರಿಸ್ಥಿತಿಯನ್ನು ತುಂಬಾ ಸೂಕ್ಷ್ಮವಾಗಿ ಅದರಿಂದ ಹೇಗೆ ಹೊರಬರಬೇಕೆಂಬುದನ್ನು ತುಂಬಾ ಚೆನ್ನಾಗಿ ಅರಿತುಕೊಂಡಿದ್ದಾರೆ. ಆದ್ದರಿಂದಲೇ ಅವರು ವಿಶ್ವದ ಉತ್ತಮ ಆಟಗಾರರಾಗಿದ್ದಾರೆ' ಎಂದು ಬಾಬರ್ ಆಝಮ್ ಹೇಳಿದ್ದಾರೆ.

ವಿದ್ಯುತ್ ಮೇಲೆ ತೆರಿಗೆ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ : ಕೇಂದ್ರ

ಅವರ ಬ್ಯಾಟಿಂಗ್ ಶೈಲಿಯನ್ನು ನೋಡಲು ತುಂಬಾ ಸಂತೋಷವಾಗುತ್ತದೆ. ಅಲ್ಲದೆ ಅವರು ತಂಡವು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾಗ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ತಂಡವನ್ನು ಪಾರು ಮಾಡುವ ಗುಣವು ನನಗೆ ತುಂಬಾ ಇಷ್ಟವಾಗಿದೆ’ ಎಂದು ಪಾಕ್ ನಾಯಕ ತಿಳಿಸಿದ್ದಾರೆ.

`ಪಂದ್ಯದಲ್ಲಿ ಬೌಲರ್‍ಗಳು ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿರುವ ಸಂದರ್ಭದಲ್ಲಿ ಒಬ್ಬ ಬ್ಯಾಟ್ಸ್‍ಮನ್‍ಗೆ ರನ್ ಗಳಿಸಲು ತುಂಬಾ ಕಷ್ಟದ ಸಂಗತಿಯಾಗಿರುತ್ತದೆ. ಆದರೆ ಅವರು (ರೋಹಿತ್, ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್) ಇಂತಹ ಸಂದರ್ಭದಲ್ಲಿ ತಮ್ಮ ನೈಜ ಆಟದಿಂದ ಪಾರು ಮಾಡುವ ರೀತಿಯು ನನಗೆ ತುಂಬಾ ಇಷ್ಟವಾಗಿದೆ. ಆದ್ದರಿಂದಲೇ ಅವರು ನನ್ನ ಪ್ರಕಾರ ವಿಶ್ವದ ಅತ್ಯುತ್ತಮ ಆಟಗಾರರಾಗಿದ್ದಾರೆ’ ಎಂದು ಬಾಬರ್ ಆಝಮ್ ಹೇಳಿದ್ದಾರೆ.

ಭಾರತಕ್ಕೆ ಮೊದಲ ಬ್ಯಾಟಿಂಗ್ ಚಾಲೆಂಜಿಂಗ್ : ರೋಹಿತ್

ಲಕ್ನೋ, ಅ.29- ಸೆಮಿಫೈನಲ್ ರೇಸ್‍ನಿಂದ ಹೊರಬಿದ್ದಿರುವ ಇಂಗ್ಲೆಂಡ್ ಹಾಗೂ ಪಾಯಿಂಟ್ಸ್ ಟೇಬಲ್‍ನಲ್ಲಿ 2ನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಪರಸ್ಪರ ಕಾದಾಟ ನಡೆಸುತ್ತಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ನಾವು ಈ ಪಂದ್ಯವನ್ನು ಗೆಲ್ಲಲು ನಮ್ಮಿಂದ ಆಗುವ ಎಲ್ಲ ನ್ಯಾಯವನ್ನು ಸಲ್ಲಿಸುತ್ತೇವೆ. ಕ್ರೀಡಾಂಗಣದಲ್ಲಿ ಪೂರ್ಣ ಪ್ರಮಾಣದ ಪ್ರೇಕ್ಷಕರ ಎದುರು ಆಡುವುದು ನಿಜಕ್ಕೂ ಸಂತಸಕರ ಸಂಗತಿಯಾಗಿದೆ. ಈ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಆಸ್ಟ್ರೇಲಿಯಾ ವಿರುದ್ಧ ಆಡಿದ ಪ್ಲೇಯಿಂಗ್ 11ನೊಂದಿಗೆ ಅಖಾಡಕ್ಕೆ ಇಳಿಯುತ್ತಿದ್ದೇವೆ' ಎಂದು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಟಾಸ್ ಸಂದರ್ಭದಲ್ಲಿ ಹೇಳಿದ್ದಾರೆ. ನಮಗೆ 2 ಅಂಕ ತುಂಬಾ ಮುಖ್ಯ: ರೋಹಿತ್ ಶರ್ಮಾ ನಾವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೆವೆ.

ಕೇರಳ ಬ್ಲಾಸ್ಟ್ : ರಾಜ್ಯದಲ್ಲೂ ಕಟ್ಟೆಚ್ಚರವಹಿಸಲು ಪೊಲೀಸರಿಗೆ ಪರಮೇಶ್ವರ್ ಸೂಚನೆ

ನಾವು ಇದುವರೆಗೂ ಆಡಿದ ಎಲ್ಲ ಪಂದ್ಯಗಳಲ್ಲೂ ಚೇಸಿಂಗ್ ವೇಳೆಯೇ ಗೆಲುವು ಸಾಧಿಸಿದ್ದೇವೆ. ಇದೊಂದು ಹೊಸ ಪಂದ್ಯವಾಗಿದ್ದು , ನಮ್ಮ ಸಾಮಥ್ರ್ಯವನ್ನು ತೋರಿಸುವುದು ಮುಖ್ಯ ಆಗುತ್ತದೆ. ಆದ್ದರಿಂದ ನಾವು ಎರಡನೇ ಅವಧಿಯಲ್ಲಿ ಬ್ಯಾಟಿಂಗ್ ಮಾಡುತ್ತಿಲ್ಲ ಎಂಬುದು ಮುಖ್ಯ ಆಗುವುದಿಲ್ಲ.

ಪಂದ್ಯ ಗೆದ್ದು 2 ಅಂಕಗಳನ್ನು ಸಂಪಾದನೆ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ನಾವು ಉತ್ತಮ ಪ್ರದರ್ಶನ ತೋರಲು ಸಿದ್ಧವಾಗಿದ್ದೇವೆ. ನಾವು ಈಗ ನಿಂತಿರುವ ಜಾಗದಿಂದಲೇ ಉತ್ತಮ ಪ್ರದರ್ಶನ ತೋರಲು ಬಯಸುತ್ತೇವೆ. ಕಳೆದ ಪಂದ್ಯದಲ್ಲಿ ಇದ್ದ ಪ್ಲೇಯಿಂಗ್ 11ನೊಂದಿಗೆ ನಾವು ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದ್ದೇವೆ’ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಹಿಂದುಳಿದ ವರ್ಗ ಆಯೋಗದ ವರದಿ ಸ್ವೀಕರಿಸುತ್ತೇವೆ : ಸಿದ್ದರಾಮಯ್ಯ

ಬೆಂಗಳೂರು ಅ.29- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ನಡೆಸಲಾಗಿರುವ ಸಮೀಕ್ಷಾ ವರದಿಯನ್ನು ಪಡೆದುಕೊಂಡು, ಸ್ವೀಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಾಳಿದಾಸ ಹೆಲ್ತ್ ಆಂಡ್ ಎಜುಕೇಷನ್ ಟ್ರಸ್ಟ್ ಮತ್ತು ಅಹಿಲ್ಯಾ ಫೌಂಡೇಷನ್ ಹಮ್ಮಿಕೊಂಡಿದ್ದ ಪ್ರೇರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಜಾತಿಗಣತಿ ಮೊದಲು ಮಾಡಿದ್ದು ನಮ್ಮ ಸರ್ಕಾರ.

ನಿಖರವಾಗಿ ಪ್ರತಿ ಜಾತಿಗಳ ಆರ್ಥಿಕ, ಸಾಮಾಜಿಕ, ಆರ್ಥಿಕ ಸ್ಥಿತಿ ತಿಳಿಯುವ ಉದ್ದೇಶದಿಂದ ಜಾತಿ ಜನಗಣತಿ ಮಾಡಿಸಿದ್ದೆ. ನಂತರ ಬಂದ ಸರ್ಕಾರಗಳು ಜಾತಿಗಣತಿ ವರದಿಯನ್ನು ಸ್ವೀಕರಿಸಲಿಲ್ಲ. ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ಜಾತಿ ಗಣತಿ ವರದಿ ಕೊಡುತ್ತಾರೆ. ನಾವು ಸ್ವೀಕರಿಸುತ್ತೇವೆ ಎಂದಿದ್ದಾರೆ.

ವಿಧಾನ ಪರಿಷತ್‍ನ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಕಾಂಗ್ರೆಸ್

ಹುಟ್ಟಿನಿಂದ ಯಾರೂ ಮೇಧಾವಿಗಳಲ್ಲ. ಅವಕಾಶ ಸಿಕ್ಕರೆ ಎಲ್ಲರೂ ಮೇಧಾವಿಗಳಾಗ್ತಾರೆ. ಪ್ರತಿಭೆ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಅವಕಾಶ ಸಿಕ್ಕರೆ, ಶಿಕ್ಷಣದ ಅನುಕೂಲಗಳು ಸಿಕ್ಕರೆ ಎಲ್ಲರ ಪ್ರತಿಭೆಗಳೂ ಹೊರಗೆ ಬರುತ್ತದೆ. ಆದ್ದರಿಂದ ಸ್ವಾಭಿಮಾನಿಗಳಾಗಿ, ಉತ್ತಮ ಪ್ರಜೆಗಳಾಗಿ ಬಾಳಲು ಶಿಕ್ಷಣ ಅತ್ಯಂತ ಅಗತ್ಯ. ಎಲ್ಲರೂ ಶಿಕ್ಷಣ ಪಡೆಯಿರಿ. ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ಪಡೆಯಲು ಸಹಕರಿಸಿ ಎಂದು ಕರೆ ನೀಡಿದರು. ನಮಗೆ ಸಹಕರಿಸಿದ ಸಮಾಜದ ಪರವಾಗಿ ನಾವುಗಳು ಶ್ರಮಿಸಬೇಕು. ಶ್ರಮ ಮತ್ತು ಗುರಿ ಇಲ್ಲದೇ ಹೋದರೆ ಯಾರೂ ಏನನ್ನೂ ಸಾಸಲು ಸಾಧ್ಯವಿಲ್ಲ ಎಂದರು.

ಬ್ರಿಟೀಷರು ಬರುವ ಮೊದಲು ಶೂದ್ರ ಸಮುದಾಯಗಳಿಗೆ ಶಿಕ್ಷಣ, ವಿದ್ಯೆ ನಿಷೇಸಲಾಗಿತ್ತು. ಮುಂದುವರೆದ ಜಾತಿಗಳ ಹೆಣ್ಣುಮಕ್ಕಳಿಗೂ ಮೊದಲು ವಿದ್ಯೆ ಕೊಡುವಂತಿರಲಿಲ್ಲ. ಅಂಬೇಡ್ಕರ್ ಅವರು ಶೂದ್ರ ಸಮುದಾಯ ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕು ನೀಡಿದರು. ಈ ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಮುದಾಯದಿಂದ ಮೆಡಿಕಲ್ ಕಾಲೇಜು ಮಾಡಬೇಕು ಎನ್ನುವುದು ಅವೈಜ್ಞಾನಿಕ. ಮೆಡಿಕಲ್ ಕಾಲೇಜು ನಡೆಸುವುದು ದುಬಾರಿ ಆದ್ದರಿಂದ ಬಡವರು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಸೀಟು ನೀಡಿ ನೆರವಾಗಲು ಸಾಧ್ಯವಿಲ್ಲ. ಆದ್ದರಿಂದ ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು, ಹಾಸ್ಟೆಲ್ ಗಳನ್ನು ಮತ್ತು ಐಟಿಐ ಗಳನ್ನು ಸಮಾಜದಿಂದ ಆರಂಭಿಸಿದರೆ ಬಡವರು ಮತ್ತು ಗ್ರಾಮೀಣ ಮಕ್ಕಳಿಗೆ ನೆರವಾಗುತ್ತದೆ ಎಂದರು.

ನಾನು ಬಿಎಸ್ಸಿ ಓದುವಾಗ ಹೋಟೆಲ್‍ನಿಂದ ಸಾರು ತಂದು ರೂಮಲ್ಲಿ ಅನ್ನ ಮಾಡಿಕೊಂಡು ಊಟ ಮಾಡಬೇಕಿತ್ತು. ಇಂಥಾ ಸ್ಥಿತಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಇರುವುದರಿಂದ ನಾನು ವಿದ್ಯಾಸಿರಿ ಕಾರ್ಯಕ್ರಮ ಜಾರಿಗೆ ತಂದೆ ಎಂದು ನುಡಿದರು.

ಹಿಂದೆ ಗ್ರಾಮೀಣ ಭಾಗಗಳಲ್ಲಿ ವೈದ್ಯ ಹುದ್ದೆಗಳು ಹೆಚ್ಚಿದ್ದು ವೈದ್ಯರ ಸಂಖ್ಯೆ ಕಡಿಮೆ ಇತ್ತು. ಈಗ ಪರಿಸ್ಥಿತಿ ಬದಲಾಗಿ ಖಾಲಿ ಹುದ್ದೆಗಳಿಗಿಂತ ವೈದ್ಯರ ಸಂಖ್ಯೆ ದುಪ್ಪಟ್ಟಾಗಿದೆ. ಆದ್ದರಿಂದ ಖಾಲಿವಿರುವ ಗ್ರಾಮೀಣ ವೈದ್ಯ ಹುದ್ದೆಗಳನ್ನಷ್ಟೆ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿ ನಿಯಮಾವಳಿಗೆ ತಿದ್ದುಪಡಿ ತರುವಂತಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.

ಹುಲಿ ಉಗುರು ಪೆಂಡೆಂಟ್ ವಿಚಾರದಲ್ಲಿ ಸಿಎಂ ಮಧ್ಯಪ್ರವೇಶಕ್ಕೆ ಶರವಣ ಆಗ್ರಹ

ಹಿಂದುಳಿದ ವರ್ಗಗಳ ವೈದ್ಯ ವಿದ್ಯಾರ್ಥಿಗಳನ್ನು ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಸನ್ಮಾನಿಸಿ, ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮ ನಡೆಯಿತು. ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಕಾಪೆರ್ರ್ಟರ್ ಬಿ.ಎನ್.ನಿತೀಶ್ ಪುರುಷೋತ್ತಮ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.