Home Blog Page 20

ಅಪ್ಪು ನಮ್ಮನ್ನಗಲಿ ಇಂದಿಗೆ 4 ವರ್ಷ..!

ಬೆಲೆ ಕಟ್ಟಲಾಗದ ಬೆಟ್ಟದ ಹೂ ಅಪ್ಪು.. ದೈಹಿಕವಾಗಿ ಎಲ್ಲರನ್ನು ಅಗಲಿ ಇಂದಿಗೆ ನಾಲ್ಕು ವರ್ಷ.. ಅಭಿಮಾನಿಗಳ ಮನಸ್ಸಲ್ಲಿ ಈಗಲೂ ಚಿರಾಯು.. ಅಪ್ಪು ಅವರ ಸಮಾಜಮುಖಿ ಕೆಲಸಗಳು, ಅವರ ನಗುಮುಖ ಈ ಎಲ್ಲದರ ಮುಖಾಂತರ ಅವರನ್ನ ಜೀವಂತವಾಗಿ ನೋಡ್ತಿದ್ದಾರೆ. ಇಂದು ಅವರ ಪುಣ್ಯ ಸ್ಮರಣೆ. ರಾಜ್ ಕುಮಾರ್ ಸ್ಮಾರಕದ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ಪ್ರತಿ ವರ್ಷ ಕೂಡ ಈ ಅಭಿಮಾನದಲ್ಲಿ ಕಡಿಮೆ ಆಗ್ತಿಲ್ಲ, ಹೆಚ್ಚೆ ಆಗ್ತಿದೆ. ಇದು ಅಪ್ಪು ಸಂಪಾದಿಸಿದ ಪ್ರೀತಿ, ಅಭಿಮಾನ.

ಅಕ್ಟೋಬರ್ 29 ಅಂದ್ರೆ ಎಲ್ಲರ ಕೈ ಕಾಲು ನಡುಗುತ್ತೆ.. ಮನಸ್ಸು ದುಃಖಿಸುತ್ತೆ.. ಅಂದು ಅಪ್ಪು ಎಂಬ ಬೆಳಕನ್ನ ವಿಧಿ ಎಂಬ ಯಮ ಹೊತ್ತುಕೊಂಡು ಹೋಗಿತ್ತು. ಕೊರಗಿದ್ದು ಲಕ್ಷಾಂತರ ಮನಸ್ಸುಗಳು. ಅಪ್ಪನನ್ನ ಕಳೆದುಕೊಂಡು ಆ ಮುದ್ದು ಮಕ್ಕಳು ಕಣ್ಣೀರಿಟ್ಟಿದ್ದೆಷ್ಟೋ.. ಪ್ರೀತಿಸಿದ ಹೃದಯ ನಿಂತಿದ್ದಕ್ಕೆ ಅಶ್ವಿನಿ ಅವರು ಮೌನವಾಗಿ ಕುಳಿತು ಬಿಟ್ಟರು.

ಅಪ್ಪು ನೋಡಲು ಎಲ್ಲೆಲ್ಲಿಂದಲೋ ಬಂದ ಅಭಿಮಾನಿಗಳು 30 ಲಕ್ಷಕ್ಕೂ ಹೆಚ್ಚು.. ಉಫ್ ಇಂದಿಗೂ ಆ ದಿನ ನೆನಪಾದರೆ ಅರಿವಿಗೆ ಬಾರದಂತೆ ಕಣ್ಣಂಚಲ್ಲಿ ನೀರು ಬರುತ್ತೆ. ಆದರೂ ಎಲ್ಲರೂ ಮನಸ್ಸಲ್ಲಿ ಹೇಳಿಕೊಳ್ಳುವುದು ಅಪ್ಪು ಫಾರ್ ಎವರ್.

ಚಿಕ್ಕ ವಯಸ್ಸಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದವರು, ಅಪ್ಪನ ತೇಜಸ್ಸನ್ನ ತನ್ನ ಅಭಿನಯದಲ್ಲಿ ತಂದವರು. ಅವರ ಸಿನಿಮಾಗಳೆಲ್ಲಾ ಹಿಟ್ ಲೀಸ್ಟ್ ಗೆ ಸೇರಿದವು. ಸಹಾಯ ಬೇಡಿದ ಸಾವಿರಾರು ಕೈಗಳಿಗೆ ಯಾರಿಗೂ ತಿಳಿಯದಂತೆ ಸಹಾಯ ಮಾಡಿದರು. ಆ ಸಹಾಯವೇ ಅಪ್ಪುನ ಇಂದು ದೇವರಾಗಿಸಿದೆ. ಆ ದೇವರು ಕಣ್ಮರೆಯಾಗಿ ಇಂದಿಗೆ ನಾಲ್ಕು ವರ್ಷ. ಅಪ್ಪು ಸ್ಮರಣೆಯಲ್ಲಿ ಅಭಿಮಾನಿಗಳ ಸಾಗರ.

ಇಂಡಿಯನ್ ಪಂಚಾಂಗ ಮತ್ತು ರಾಶಿಭವಿಷ್ಯ (29-10-2025)

ನಿತ್ಯ ನೀತಿ : ಯಾರಾದ್ರು ಸತ್ತು ಹೋದ್ರೆ ಬೇಜಾರು ಆಗುತ್ತೆ. ಆದ್ರೆ ತಂದೆ ಸತ್ತು ಹೋದ್ರೆ ಭಯ ಆಗುತ್ತೆ… ತಂದೆ ಇಲ್ಲ ಅಂತಲ್ಲ… ಒಳ್ಳೇದು ಕೆಟ್ಟದ್ದು ಹೇಳುವುದಕ್ಕೆ ಯಾರೂ ಇಲ್ಲ ಅಂತ.

ಪಂಚಾಂಗ : ಬುಧವಾರ, 29-10-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಸಪ್ತಮಿ / ನಕ್ಷತ್ರ: ಉ.ಷಾ. / ಯೋಗ: ಧೃತಿ / ಕರಣ: ವಿಷ್ಟಿ

ಸೂರ್ಯೋದಯ – ಬೆ.06.13
ಸೂರ್ಯಾಸ್ತ – 5.54
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಪಿತ್ರಾರ್ಜಿತ ಆಸ್ತಿ ತಗಾದೆಯಾದರೂ ಅನು ಕೂಲವಾಗಲಿದೆ. ಮಿತ್ರರಿಂದ ಸಹಾಯ ಸಿಗಲಿದೆ.
ವೃಷಭ: ಆಸ್ತಿ, ಅಪಾರ್ಟ್‌ಮೆಂಟ್‌ ಖರೀದಿಯಲ್ಲಿ ಅ ಕ ಹಣ ಹೂಡಿಕೆ ಮಾಡುವಿರಿ.
ಮಿಥುನ: ಆತ್ಮೀಯರ ಸಹಾಯ ಸಿಗಲಿದೆ. ವಸ್ತ್ರ ವಿನ್ಯಾಸಕರಿಗೆ ಅ ಕ ಲಾಭ ದೊರೆಯಲಿದೆ.

ಕಟಕ: ಹಳೆ ವಾಹನ ಖರೀದಿಸುವುದರಿಂದ ರಿಪೇರಿ ವೆಚ್ಚ ಹೆಚ್ಚಾಗಬಹುದು. ವ್ಯಾಪಾರದಲ್ಲಿ ನಷ್ಟ.
ಸಿಂಹ: ಸರ್ಕಾರದಿಂದ ಆಗಬೇಕಾದ ಕೆಲಸಗಳು ಪ್ರಭಾವಿಗಳ ಮಧ್ಯಸ್ಥಿಕೆ ಯಿಂದ ನಡೆಯಲಿವೆ.
ಕನ್ಯಾ: ಸದ್ಯಕ್ಕೆ ಕೆಲಸದ ಬದಲಾವಣೆ ಬೇಡ. ಆಹಾರ ಪದ್ಧತಿಯಲ್ಲಿ ಸರಿಯಾದ ನಿಯಮ ಪಾಲಿಸಿ.

ತುಲಾ: ಮನೆ ಬಗ್ಗೆ ಉದಾ ಸೀನ ತೋರದೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ.
ವೃಶ್ಚಿಕ: ಸಣ್ಣ ಪುಟ್ಟ ಅಡಚಣೆಗಳು ಕೆಲಸ-ಕಾರ್ಯ ಗಳಿಗೆ ಅಡ್ಡಿಯನ್ನುಂಟುಮಾಡಲಿವೆ.
ಧನುಸ್ಸು: ಮಕ್ಕಳ ಉನ್ನತ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಮಾಡದಿರಿರುವುದು ಒಳಿತು.

ಮಕರ: ಉನ್ನತ ಸ್ಥಾನಮಾನ ದೊರೆಯಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಕುಂಭ: ಹಣದ ಒಳಹರಿವು ಉತ್ತಮವಾಗಿರುತ್ತದೆ.
ಮೀನ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ.

ಪ್ರತಿಭಾನ್ವಿತ 500 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನಿಸಿದ ಅಶೋಕ ವಿಶ್ವವಿದ್ಯಾಲಯ

0

ಬೆಂಗಳೂರು: ಮೆರಿಟ್‌ ಪಡೆದ 500 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಸಹಿತ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಳ್ಳುವ ಅವಕಾಶವನ್ನು ಅಶೋಕ ವಿಶ್ವವಿದ್ಯಾಲಯದ ನೀಡಿದೆ.ಹೌದು, ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಅಶೋಕ ವಿಶ್ವವಿದ್ಯಾಲಯವು ತನ್ನ ಮುಂದಿನ ಶೈಕ್ಷಣಿಕ ವರ್ಷದ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಅಕ್ಟೋಬರ್‌ ತಿಂಗಳಿನಿಂದ ಆರಂಬಿಸಿದ್ದು, ಮೆರಿಟ್‌ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಹಿತ ಪ್ರವೇಶ ಪಡೆದುಕೊಳ್ಳಬಹುದು. ಕೇವಲ ಅಂಕದಲ್ಲಷ್ಟೇ ಅಲ್ಲದೆ, ಇತರೆ ವಿಭಾಗದಲ್ಲಿ ಮೆರಿಟ್‌ ಪಡೆದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನದ ಸೌಲಭ್ಯ ಸಿಗಲಿದೆ.

ಅಂಕಗಳಲ್ಲಿ ಮೆರಿಟ್‌ ಪಡೆದ 200 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆದುಕೊಳ್ಳುವ ಅರ್ಹತೆ ಪಡೆದುಕೊಳ್ಳಲಿದ್ದಾರೆ. ವಿಶೇಷ ಮೆರಿಟ್ ಅಂದರೆ, ಜೆಇಇ, ಐಐಎಸ್ಇಆರ್ (ಐಎಟಿ), ಸಿಎಂಐ ಮತ್ತು ಭಾರತೀಯ ರಾಷ್ಟ್ರೀಯ ಒಲಿಂಪಿಯಾಡ್ಸ್ (ಐಎನ್ಒ) ನಲ್ಲಿ ಅಸಾಧಾರಣ ಸಾಧನೆ ಮಾಡಿದ 50 ಮಕ್ಕಳಿಗೆ ಶೇ.100ರಷ್ಟು ಬೋಧನಾ ಶುಲ್ಕ ಮನ್ನಾ ಮಾಡಲಾಗುತ್ತಿದೆ. ಜೊತೆಗೆ, ರಾಷ್ಟ್ರೀಯ ಆಪ್ಟಿಟ್ಯೂಡ್ ಪರೀಕ್ಷೆಗಳಲ್ಲಿ 2000ರ ರಾಂಕ್ ಪಡೆದ 50 ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನದಿಂದ ಪ್ರಯೋಜನ ಪಡೆಯುತ್ತಾರೆ.

ಇನ್ನು, ಸಿಬಿಎಸ್ಇ ಮತ್ತು ಐಸಿಎಸ್ಇ / ಐಎಸ್ಸಿ ತರಗತಿ ಹತ್ತನೇ ಮತ್ತು ಹನ್ನೆರಡನೇ ತರಗತಿ ಬೋರ್ಡ್ ಸ್ಕೋರ್ ಶೇ.98ಕ್ಕೂ ಹೆಚ್ಚು ಅಂಕ ಪಡೆದ ಹಾಗೂ ಅಶೋಕ ಪ್ರವೇಶ ಪ್ರಕ್ರಿಯೆಯಲ್ಲಿ ಪ್ರಬಲ ಸಾಧನೆ ಮಾಡಿದ 150 ವಿದ್ಯಾರ್ಥಿಗಳಿಗೆ ಶೇ.100 ರವರೆಗೆ ಬೋಧನಾ ಶುಲ್ಕ ಮನ್ನಾ ನೀಡಲಾಗುವುದು, ವಿಶ್ವವಿದ್ಯಾಲಯದಿಂದ ಹಣಕಾಸಿನ ನೆರವು ಅಗತ್ಯ ಬಯಸುವ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶೇ.100 ರವರೆಗೆ ಅಗತ್ಯ ಆಧಾರಿತ ಬೋಧನಾ ಶುಲ್ಕ / ಪೂರ್ಣ ಮನ್ನಾ ಲಭ್ಯವಿರುತ್ತದೆ.

ಒಟ್ಟಾರೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನೆರವು ನೀಡಲು ಈ ವಿದ್ಯಾರ್ಥಿ ವೇತನದ ಅವಕಾಶವನ್ನು ಒದಗಿಸಲಾಗಿದೆ.

ಬಿಬಿಎಂಪಿ ಭ್ರಷ್ಟ ಅಧಿಕಾರಿಗಳಿಗೆ ಜಿಬಿಎಯಲ್ಲಿ ಹುದ್ದೆ ಬೇಡ; ಎನ್‌ಆರ್‌ಆರ್‌

ಬೆಂಗಳೂರು, ಅ.28- ಈ ಹಿಂದೆ ಬಿಬಿಎಂಪಿಯಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದ ಕಡು ಭ್ರಷ್ಟ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಜಿಬಿಎಯ ಪ್ರಮುಖ ಹುದ್ದೆಗಳಿಗೆ ನೇಮಿಸದಂತೆ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಬಿಬಿಎಂಪಿ, ಬಿಡಿಎ, ಬೆಸ್ಕಾಂ ಮತ್ತು ಜಲಮಂಡಳಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತಿತ್ತು. ಇಂತಹ ಸ್ಥಿತಿಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದರೆ ಮುಖಭಂಗವಾಗುವ ಭಯದಿಂದ ನಾಡಪ್ರಭು ಕೆಂಪೇಗೌಡ ನಿರ್ಮಿತ ಬೆಂಗಳೂರನ್ನು ಜಿಬಿಎ ಯನ್ನಾಗಿ ವಿಭಜಿಸಲು ಹೊರಟಿದ್ದೀರಾ ಇಂತಹ ಸಂದರ್ಭದಲ್ಲಿ ಮತ್ತದೆ ಭ್ರಷ್ಟ ಅಧಿಕಾರಿಗಳಿಗೆ ಮಣೆ ಹಾಕುವುದನ್ನು ನಿಲ್ಲಿಸಿ ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಬಹಿರಂಗ ಪತ್ರ ಬರೆದು ಪ್ರಶ್ನಿಸಿದ್ದಾರೆ.

ಬಿಬಿಎಂಪಿಯ ಕಂದಾಯ ಇಲಾಖೆಗಳಲ್ಲಿ ಹೊಸ ಖಾತಾ ಮಾಡುವುದು, ಖಾತಾ ವಿಭಜನೆ, ಖಾತಾ ಒಂದುಗೂಡಿಸುವಿಕೆ ಕಾರ್ಯಗಳಿಂದ ಮೊದಲ್ಗೊಂಡು ಸುಧಾರಣಾ, ಅಭಿವೃದ್ಧಿ ಶುಲ್ಕ ಪಾವತಿಸಿಕೊಳ್ಳದೆಯೇ ಕಾನೂನು ಬಾಹಿರವಾಗಿ ಬಿ ವಹಿ ಸ್ವತ್ತುಗಳಿಗೆ ಅಕ್ರಮ ಎ ಖಾತಾ ನೀಡಿರುವುದರ ಜೊತೆಗೆ ನಗರ ಯೋಜನೆ ಇಲಾಖೆಗಳಲ್ಲಿ:ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣ ಪತ್ರ ನೀಡಿ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಯಥಾಸ್ಥಿತಿಯಲ್ಲಿಯೇ ಚುನಾವಣೆ ನಡೆದರೆ ಕಾಂಗ್ರೆಸ್‌‍ ಪಕ್ಷಕ್ಕೆ ಬಹುಮತವೆಂಬುದು ಮರೀಚಿಕೆ ಎಂಬ ಸತ್ಯವನ್ನು ಅರಿತು, ಶತಾಯ ಗತಾಯ ಅಧಿಕಾರವನ್ನು ಹಿಡಿಯಲೇಬೇಕೆಂಬ ಏಕೈಕ ದುರುದ್ದೇಶದಿಂದ ಅವರ ಪಕ್ಷದ ಸ್ವಹಿತಾಸಕ್ತಿಗಾಗಿ ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ಮಹಾನಗರವನ್ನು ಒಡೆದು ಚೂರು ಚೂರುಗಳನ್ನಾಗಿ ಮಾಡಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವನ್ನು ರಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಜಿಬಿಎ ವ್ಯಾಪ್ತಿಯಲ್ಲಿ ರಚನೆಯಾಗಿರುವ ಐದು ಪಾಲಿಕೆಗಳಲ್ಲೂ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕು ಎಂಬ ಉದ್ದೇಶ ಸರ್ಕಾರಕ್ಕೆ ಇದ್ದರೆ, ಆಡಳಿತದ ಕೆಳ ಹಂತದಿಂದ ಅಂತಿಮ ಹಂತದವರೆಗೆ ಸಂಪೂರ್ಣವಾಗಿ ಶೇ. 100% ರಷ್ಟು ಕಾಗದ ರಹಿತ ಆಡಳಿತ ನೀಡುವುದು. ವಿದ್ಯುನ್ಮಾನ ಪ್ರತಿಗಳ ಕಡತಗಳಿಗೆ ಒತ್ತುಕೊಟ್ಟು, ಸಾರ್ವಜನಿಕರಾಗಲೀ ಅಥವಾ ಗುತ್ತಿಗೆದಾರರಾಗಲೀ ಕಛೇರಿಯಿಂದ ಕಛೇರಿಗೆ ಅಲೆಯುವುದನ್ನು ತಪ್ಪಿಸಿ, ಆಯಾ ಕಡತಗಳ ಅನುಮೋದನೆಗೆ ಪ್ರತಿಯೊಬ್ಬ ಅಧಿಕಾರಿಗೆ ಗರಿಷ್ಠ 24 ಗಂಟೆಗಳ ಕಾರ್ಯಾವಧಿಯನ್ನು ನಿಗದಿ ಪಡಿಸುವುದು ಹಾಗೂ ಮೂರು ದಿನಗಳ ಒಳಗಾಗಿ ಆಯಾ ಕಡತಗಳಿಗೆ ಅನುಮೋದನೆ ನೀಡಿ ಮೇಲಾಧಿಕಾರಿಗೆ ಕಡತವನ್ನು ರವಾನಿಸದ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರತಿಯೊಂದು ಇಲಾಖೆಯ ಕೆಳ ಹಂತದ ಕಛೇರಿಯಿಂದ ಮೊದಲ್ಗೊಂಡು ಎಲ್ಲಾ ಆಯುಕ್ತರ ಕಛೇರಿಗಳಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವುದು, ಕರ್ತವ್ಯದದಲ್ಲಿದ್ದಾಗ ಖಾಸಗಿ ಸ್ಥಳಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವುದನ್ನುನಿಷೇಧಿಸುವುದು, ಪ್ರತಿಯೊಬ್ಬ ಅಧಿಕಾರಿ ಬಳಸುವ ಸರ್ಕಾರಿ ವಾಹನ ಮತ್ತು ಸ್ವಂತ ವಾಹನಗಳಿಗೆ ಆರ್‌ಎಫ್‌ಐಡಿ ಅಳವಡಿಕೆಯನ್ನು ಕಡ್ಡಾಯಗೊಳಿಸಿ, ಪ್ರತಿಯೊಂದು ಇಲಾಖೆಯ ಪ್ರತಿಯೊಬ್ಬ ನೌಕರರು ನಿರ್ವಹಿಸಿರುವ ಕಾರ್ಯವು ಕ್ರಮಬದ್ಧವಾಗಿದೆಯೇ ? ಅಥವಾ ಕಾನೂನು ಬಾಹಿರವಾಗಿದೆಯೇ ? ಎಂಬ ಬಗ್ಗೆ ಕಛೇರಿವಾರು ಮಾಹಿತಿಯನ್ನು ಪ್ರತೀ ತಿಂಗಳಿಗೊಮ್ಮೆ ವಿಶೇಷ ತಂಡದಿಂದ ಪಡೆದುಕೊಳ್ಳುವುದು.

ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ ದ್ವಿತೀಯ ದರ್ಜೆ ನೌಕರರಿಂದ ಮೊದಲ್ಗೊಂಡು ಆಯುಕ್ತರವರೆಗೆ ಪ್ರತಿಯೊಬ್ಬರೂ ಪ್ರತೀ ವರ್ಷ ನಿಗದಿತ ಸಮಯದೊಳಗೆ ತಮ್ಮ ತಮ್ಮ ಆಸ್ತಿಯನ್ನು ಲೋಕಾಯುಕ್ತ ಕಛೇರಿಯಲ್ಲಿ ಸಲ್ಲಿಸಬೇಕೆಂಬ ಕಡ್ಡಾಯ ನಿಯಮವನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬಿಬಿಎಂಪಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡೆಸಿದ್ದವರು ಹಾಗೂ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಂತಹ ಅಧಿಕಾರಿಗಳನ್ನು ಜಿಬಿಎಯ ಯಾವುದೆ ಪ್ರಮುಖ ಹುದ್ದೆಗೆ ನೇಮಿಸುವುದು ಸೂಕ್ತವಲ ಅವರು ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರಿಗರೇ ಹುಷಾರ್, ಕಂಡಕಂಡಲ್ಲಿ ಕಸ ಎಸೆದರೆ ನಿಮ್ಮ ಮನೆ ಬಾಗಿಲಿಗೆ ವಾಪಸ್ ಬರುತ್ತೆ

ಬೆಂಗಳೂರು, ಅ.28- ಮಾಡಿದ್ದುಣ್ಣೋ ಮಹಾರಾಯ ಅನ್ನೋ ಗಾದೆ ಮಾತಿನ ಹಾಗೆ… ನೀವು ರಸ್ತೆ ಬದಿ ಎಲ್ಲೆಂದರಲ್ಲಿ ಬಿಸಾಡಿದ್ದ ಕಸ ನಿಮ ಮನೆ ಬಾಗಿಲಿಗೆ ಮತ್ತೆ ವಾಪಸ್‌‍ ಬರುವ ದಿನ ದೂರವಿಲ್ಲ.

ಎಷ್ಟು ಬುದ್ದಿಮಾತು ಹೇಳಿದರೂ ಜನ ಪಾಠ ಕಲಿಯದ ಹಿನ್ನೆಲೆಯಲ್ಲಿ ಜಿಬಿಎ ಅಧಿಕಾರಿಗಳು ಜನ ಎಸೆದ ಕಸವನ್ನು ಮತ್ತೆ ಅವರ ಮನೆ ಬಾಗಿಲಿಗೆ ಹುಡುಕಿಕೊಂಡು ಹೋಗುವ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಘನತ್ಯಾಜ್ಯ ಘಟಕದ ಸಿಬ್ಬಂದಿಗಳು ರಸ್ತೆಯಲ್ಲಿ ಕಸ ಎಸೆಯುವವರು ವಿಡಿಯೋ ಮಾಡಿಕೊಂಡಿದ್ದು, ಯಾರ್ಯಾರು ರಸ್ತೆಗಳಲ್ಲಿ ಕಸ ಎಸೆದಿದ್ದಾರೋ ಅಂತಹವರ ಮನೆ ಬಾಗಿಲಿಗೆ ಮತ್ತೆ ವಾಪಸ್‌‍ ಕಳುಹಿಸಲು ಸದ್ದಿಲ್ಲದೆ ಕಾರ್ಯಚರಣೆ ಆರಂಭಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಪ್ರತಿ ವಾರ್ಡನಲ್ಲಿ ರಸ್ತೆ ಮೂಲೆಯಲ್ಲಿ ಕಸ ಎಸೆದ ಜನರ ವಿಡಿಯೋ ಮಾಡಲಾಗಿದೆ. ಈಗಾಗಲೇ 198 ವಾರ್ಡ್‌ಗಳಲ್ಲಿ 198 ಕಸ ಎಸೆಯೋ ಜನರನ್ನು ಗುರುತಿಸಿರುವ ಜಿಬಿಎ ಅಧಿಕಾರಿಗಳು ಅವರವರ ಮನೆಗಳಿಗೆ ಕಸ ವಾಪಸ್‌‍ ಕಳುಹಿಸಲಿದ್ದಾರೆ.

ತಾವು ಎಸೆದ ಕಸ ಮತ್ತೆ ತಮ ಮನೆ ಬಾಗಿಲಿಗೆ ವಾಪಸ್‌‍ ಆಗುವ ಭೀತಿಯಿಂದಾದರೂ ಜನ ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕುವರೇ ಎಂಬ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಘನತ್ಯಾಜ್ಯ ವಿಲೇವಾರಿ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಲಾದರೂ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಬಿಟ್ಟು ನಿಮ ಮನೆ ಬಾಗಿಲಿಗೆ ಬರುವ ಕಸದ ವಾಹನಗಳಿಗೆ ಕಸಹಾಕುವ ಮೂಲಕ ನಗರದ ರಸ್ತೆಗಳನ್ನು ಹಾಳುಗೆಡವಲು ಬಿಡಬೇಡಿ ಎಂದು
ಘನತ್ಯಾಜ್ಯ ವಿಲೇವಾರಿ ಘಟಕದ ಮುಖ್ಯಸ್ಥ ಕರೀಗೌಡ ಅವರು ಮನವಿ ಮಾಡಿಕೊಂಡಿದ್ದಾರೆ.

ಸ್ಪೀಕರ್‌ ಖಾದರ್‌ ವಿರುದ್ಧ ಭ್ರಷ್ಟಾಚಾರ ಆರೋಪ, ರಾಜ್ಯಪಾಲರಿಗೆ ದೂರು

ಬೆಂಗಳೂರು,ಅ.28– ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇತ್ತೀಚೆಗೆ ಖರೀದಿ ಮಾಡಿರುವ ಸಾಮಗ್ರಿಗಳ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ.

ಯು.ಟಿ.ಖಾದರ್‌ ಇತ್ತೀಚೆಗೆ ಲೂಟಿ ಖಾದರ್‌ ಆಗಿದ್ದಾರೆ. ಅವರ ಘನತೆಗೆ, ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಪ್ರತಿಯೊಂದು ನಡವಳಿಕೆಯೂ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದ್ದು, ಇದರ ಬಗ್ಗೆ ತನಿಖೆಯ ಅಗತ್ಯವಿದೆ. ವಿಧಾನಸಭೆಯ ಇತಿಹಾಸದಲ್ಲೇ ಸ್ಪೀಕರ್‌ ಮೇಲೆ ಇಂಥ ಆರೋಪಗಳು ಮೊದಲ ಬಾರಿಗೆ ಬಂದಿವೆ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ಗೌರವ ಇದೆ. ಆದರೆ ಖಾದರ್‌ ಅವರು ತಮ ಪೀಠದ ಗೌರವವನ್ನು ಕಾಪಾಡುತ್ತಿಲ್ಲ, ಅವರು ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಇದು ಹಲವು ಶಾಸಕರ ಅಭಿಮತವೂ ಹೌದು! ಇದಲ್ಲದೆ ಅವರ ಆಡಳಿತ ಸುಧಾರಣೆ ಹೆಸರಿನಲ್ಲಿ ಮಾಡುತ್ತಿರುವ ಕಾರ್ಯವೈಖರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.

ವಿಧಾನಸೌಧದ ಸಭಾಂಗಣದ ಬಾಗಿಲಿಗೆ ರೋಸ್‌‍ವುಡ್‌ ಹಾಕಿದ್ದು, ಹೊಸ ಟಿವಿ ಖರೀದಿ, ಶಾಸಕರ ಮಸಾಜ್‌ ಛೇರ್‌, ಗಂಡಬೇರುಂಢ ಗಡಿಯಾರ, ಊಟ ಉಪಹಾರ.. ಹೀಗೆ ಹಲವು ವಿಚಾರಗಳು ಭ್ರಷ್ಟಾಚಾರದ ಆರೋಪಕ್ಕೆ ಪುಷ್ಟಿ ನೀಡಿವೆ ಎಂದರು. ಸ್ವಜನ ಪಕ್ಷಪಾತದ ಆರೋಪ ಅವರ ಮೇಲಿದೆ. ಅವರು ಏನೇ ಮಾಡಿದರೂ ಅದರೊಳಗೆ ಇನ್ನೇನೋ ಇದೆ ಎಂಬ ಅನುಮಾನ ಬರುವಂತೆ ಮಾಡಿದೆ. ಶಾಸಕರ ಭವನದ ಶಾಸಕ ಕೊಠಡಿಗೆ ಹಾಕಿದ ಸಾರ್ಟ್‌ ಡೋರ್‌ ಲಾಕ್‌, ಸೇಫ್ಟೀಲಾಕರ್‌ ಅಳವಡಿಕೆಗೆ ಮಾಡಿರುವ ವೆಚ್ಚವೂ ಅನುಮಾನಾಸ್ಪದವೇ ಎಂದು ಹೇಳಿದರು.

7-8 ಸಾವಿರ ರೂ.ಗಳಿಗೆ ಸಿಗುವ ಸಾಮಾಗ್ರಿಗಳನ್ನು 30-40 ಸಾವಿರ ಬಿಲ್‌ ಮಾಡಿಸಿದ್ದಾರೆ. ಇವೆಲ್ಲವೂ ಸ್ಪೀಕರ್‌ ಮೇಲಿನ ಭ್ರಷ್ಟಾಚಾರಕ್ಕೆ ಸಾಕ್ಷಿಗಳಾಗಿವೆ ಎಂದು ಆರೋಪಿಸಿದರು.ಸ್ಪೀಕರ್‌ ವಿದೇಶಿ ಅಧ್ಯಯನ ಪ್ರವಾಸದ ವಿಚಾರ ಬಹಿರಂಗವಾಗಬೇಕು. ವಿಧಾನಸೌಧಕ್ಕೆ, ಅವರ ಕಚೇರಿಗೆ ಮಾಡಿದ ಪೀಠೋಪಕರಣ, ಸಿಬ್ಬಂದಿ ನೇಮಕ ವಿಚಾರದಲ್ಲೂ ಅಕ್ರಮದ ವಾಸನೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಇದು ಖಾದರ್‌ ಮೇಲಿನ ವೈಯುಕ್ತಿಕ ದ್ವೇಷದಿಂದ ಮಾಡುತ್ತಿರುವ ಆರೋಪವಲ್ಲ. ಇದು ಪೀಠದ ಗೌರವದ ಕಾರಣಕ್ಕೆ ಈ ವಿಚಾರವನ್ನು ಜನರ ಮುಂದಿಡುತ್ತಿದ್ದೇನೆ. ಈ ಕಳಂಕದ ಹಿನ್ನೆಲೆಯಲ್ಲಿ ಈ ಕುರಿತು ನ್ಯಾಯಾಧೀಶರಿಂದ ತನಿಖೆಯಾಗಬೇಕಿದೆ ಎಂದು ಒತ್ತಾಯಿಸಿದರು.ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರೋತ್ಸಾಹ ಮಾಡಿದ್ದಾರೆ ಎಂಬ ಆರೋಪವಿದೆ.

ಇದಕ್ಕೆ ಅವರು ಸ್ಪಷ್ಟನೆ ನೀಡಬೇಕು. ಹಾಗೆಯೇ ಈ ಎಲ್ಲ ಕೆಲಸಗಳಿಗೂ 4ಜಿ ವಿನಾಯ್ತಿ ತೆಗೆದುಕೊಂಡಿದ್ದಾರೆ. ಅಂತಹ ತುರ್ತಿನ ಕಾರ್ಯ ಇಲ್ಲೇನಿದೆ. ರಾಜ್ಯ ಸಂಕಷ್ಟದಲ್ಲಿ ಇರುವಾಗ ಈ ಬದಲಾವಣೆ ಸೌಲಭ್ಯ ಒದಗಿಸುವ ಅವಶ್ಯಕತೆ ಇದೆಯೇ? ಎಂದು ಪ್ರಶ್ನೆ ಮಾಡಿದರು.ಸ್ಪೀಕರ್‌ ಸ್ಥಾನವನ್ನ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ವ್ಯಾಪ್ತಿಗೆ ತರಬೇಕು ಎಂಬ ಆಗ್ರಹ ಇದೆ. ಇದಕ್ಕೆ ನನ್ನ ಸಹಮತವೂ ಇದೆ. ಆ ಮೂಲಕ ಈ ವ್ಯವಸ್ಥೆಯು ಪಾರದರ್ಶಕತೆ ಕಾಣುವಂತಾಗಲಿ ಎಂದು ಹೇಳಿದರು.

ಸಭಾದ್ಯಕ್ಷರ ಭ್ರಷ್ಟಾಚಾರದ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ಪತ್ರ ಮೂಲಕ ತರುತ್ತೇನೆ. ಯು ಟಿ ಖಾದರ್‌ ಈಗ ಲೂಟಿ ಖಾದರ್‌ ಎಂಬ ಹಂತಕ್ಕೆ ತಲುಪಿದ್ದಾರೆ ಎಂದು ಜನರೇ ಆರೋಪ ಮಾಡುತ್ತಿದ್ದಾರೆ. ಇವೆಲ್ಲದಕ್ಕೂ ಖಾದರ್‌ ಉತ್ತರ ಕೊಡಬೇಕು ಎಂದು ಒತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪರಿಷತ್‌ ಸದಸ್ಯೆ ಭಾರತೀ ಶೆಟ್ಟಿ, ಮಾಜಿ ಸದಸ್ಯ ಅರುಣ್‌ ಶಹಾಪೂರ ಉಪಸ್ಥಿತರಿದ್ದರು.

ಬೆಂಗಳೂರು : ತಾಯಿಯ ನಿಂದಿಸಿದ್ದಕ್ಕೆ ಶಾಲಾ ಬಸ್‌‍ ಚಾಲಕನ ಕೊಲೆ

ಬೆಂಗಳೂರು,ಅ.28- ತಾಯಿಗೆ ಕೆಟ್ಟಪದಗಳಿಂದ ನಿಂದಿಸಿದನೆಂಬ ಕಾರಣಕ್ಕೆ ಬೈಕ್‌ನ ಸ್ಟೀಲ್‌ ರಾಡ್‌ನಿಂದ ಶಾಲಾ ಬಸ್‌‍ ಚಾಲಕನ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಅವಿನಾಶ್‌ (36) ಮೃತಪಟ್ಟ ವ್ಯಕ್ತಿ. ಇವರು ವೃತ್ತಿಯಲ್ಲಿ ಶಾಲಾ ಬಸ್‌‍ ಚಾಲಕ. ಉಲ್ಲಾಳ ಉಪನಗರದಲ್ಲಿ ಕಾರ್ತಿಕ್‌ ಮನೆ ಇದೆ. ಇವರ ಮನೆ ಪಕ್ಕದಲ್ಲಿ ಅವಿನಾಶ್‌ ರೂಂ ಮಾಡಿಕೊಂಡು ವಾಸವಾಗಿದ್ದರು. ಕಾರ್ತಿಕ್‌ ಮನೆಯಲ್ಲೇ ಅವಿನಾಶ್‌ ಊಟ, ತಿಂಡಿ ಮಾಡುತ್ತಿದ್ದನು.

ನಿನ್ನೆ ರಾತ್ರಿ 10.30 ರ ಸುಮಾ ರಿನಲ್ಲಿ ಅವಿನಾಶ್‌ ಮದ್ಯಪಾನ ಸೇವಿಸಿ ಕಾರ್ತಿಕ್‌ ಮನೆಗೆ ಹೋಗಿ ಅವರ ತಾಯಿ ಸುಮಂಗಲಾ ಅವರಿಗೆ ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಆ ವೇಳೆ ಕಾರ್ತಿಕ್‌ ಮನೆಯಲ್ಲಿ ಇರಲಿಲ್ಲ.

ಈ ವಿಷಯವನ್ನು ಸುಮಂಗಲಾ ಅವರು ಕರೆ ಮಾಡಿ ಮಗ ಕಾರ್ತಿಕ್‌ಗೆ ತಿಳಿಸಿದ್ದಾರೆ. ತಕ್ಷಣ ಕಾರ್ತಿಕ್‌ ಮನೆಗೆ ಬಂದಿದ್ದಾನೆ. ಆ ವೇಳೆ ತಾಯಿ ಮಗ ಇಬ್ಬರು ಸೇರಿಕೊಂಡು ಅವಿನಾಶ್‌ ಜೊತೆ ಜಗಳವಾಡಿ ಆತನಿಗೆ ಬೈಕ್‌ ಮುಂಭಾಗದ ಸ್ಟೀಲ್‌ ರಾಡ್‌ನಿಂದ ತಲೆಗೆ ಹೊಡಿದ್ದಿದ್ದರಿಂದ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದು ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿ ಕಾರ್ತಿಕ್‌ನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ನಕಲಿ ಡಿಡಿಗಳ ಹೆಸರಲ್ಲಿ ‘ಗ್ರೇಟರ್‌’ ರಾಬರಿ, ಜಿಬಿಎಯಲ್ಲಿ ನಡೆಯುತ್ತಿದೆ ಭಾರೀ ವಂಚನೆ

ಬೆಂಗಳೂರು, ಅ.25- ಬಿಬಿಎಂಪಿ ಹೋಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ನಕಲಿ ಡಿಡಿಗಳ ಹಾವಳಿ ವಿಪರಿತವಾಗಿದೆ.ಕೆಲವು ಕಿಡಿಗೇಡಿಗಳು ಅನುದಾನದ ಹೆಸರಿನಲ್ಲಿ ನಾಗರಿಕರನ್ನು ವಂಚಿಸಿ ಅವರಿಗೆ ನಕಲಿ ಡಿಡಿ ವಿತರಿಸುತ್ತ ಭಾರಿ ವಂಚನೆ ಮಾಡುತ್ತಿರುವುದು ಹೆಚ್ಚಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿರುವ ಐದು ಪಾಲಿಕೆಗಳಿಂದ ಅನುದಾನ ಕೊಡಿಸ್ತೀವಿ ಅಂತ ಸಾರ್ವಜನಿಕರ ಬಳಿ ಹಣ ವಸೂಲಿ ಮಾಡುತ್ತಿರುವ ಗ್ಯಾಂಗ್‌ ಒಂದು ನಗರದಲ್ಲಿ ಸದ್ದಿಲ್ಲದೆ ಕಾರ್ಯಚರಣೆ ನಡೆಸುತ್ತಿರುವ ಬಗ್ಗೆ ಗೊತ್ತಾಗಿದೆ.ಪಾಲಿಕೆಯಿಂದ 3 ಲಕ್ಷ ರೂ.ಅನುದಾನ ಕೊಡಿಸ್ತಿವಿ ಎಂದು ಸಾರ್ವಜನಿಕರಿಂದ 50 ಸಾವಿರ ಲಂಚ ವಸೂಲಿ ಮಾಡಿ ನಂತರ ಅನುದಾನ ಬಂದಿದೆ ಎಂದು 3 ಲಕ್ಷ ರೂ.ಗಳ ನಕಲಿ ಡಿಡಿ ನೀಡಲಾಗುತ್ತಿದೆ.

ನೀವು ಬರೀ ಐವತ್ತು ಸಾವಿರ ನೀಡಿ ನಾವು ನಿಮಗೆ ಪಾಲಿಕೆಯಿಂದ ಮೂರು ಲಕ್ಷ ರೂ.ಗಳ ಡಿಡಿ ನೀಡ್ತಿವಿ. ಆ ಹಣವನ್ನು ಮರು ಪಾವತಿಸುವಂತಿಲ್ಲ ಎಂದು ವಂಚನೆ ನಡೆಸಲಾಗುತ್ತಿದೆ. ಪಾಲಿಕೆ ನೀಡುವಂತಹ ಡಿಡಿಗಳ ಮಾದರಿಯಲ್ಲಿ ಕಿಡಿಗೇಡಿಗಳು ನಕಲಿ ಡಿಡಿ ತಯಾರಿಸಿ ವಂಚಿಸುತ್ತಿದ್ದಾರೆ. ಅವರು ನೀಡುವ ಡಿಡಿಯಲ್ಲಿ ಪಾಲಿಕೆ ಆಯುಕ್ತರಗಳ ಸಹಿಯೂ ಇರುತ್ತದೆ. ಆದರೆ, ಅದು ನಕಲಿ ಸಹಿ ಎನ್ನುವುದು ಡಿಡಿ ಪಡೆದು ಬ್ಯಾಂಕ್‌ಗೆ ಹೋದ ನಂತರ ಮಾತ್ರ ಗೊತ್ತಾಗುತ್ತಿದೆ.

ಪಾಲಿಕೆ ಅಯುಕ್ತರ ನಕಲಿ ಸಹಿ ಮಾತ್ರವಲ್ಲ, ಅಕೌಂಟ್‌ ಸೆಕ್ಷನ್‌ ಅಧಿಕಾರಿಗಳ ಸಹಿ ಕೂಡ ನಕಲಿಯಾಗಿರುತ್ತದೆ. ಇದೆ ರೀತಿಯಲ್ಲಿ ಹಲವಾರು ಮಂದಿ ಅಮಾಯಕರಿಗೆ ನಕಲಿ ಡಿಡಿ ವಿತರಣೆ ಮಾಡಿ ವಂಚಿಸಲಾಗಿದೆ. ಡಿಡಿ ಪಡೆದು ಬ್ಯಾಂಕ್‌ಗೆ ಹಾಕಿದಾಗ ಅದು ಬೌನ್ಸ್ ಆಗುತ್ತದೆ. ಅಯ್ಯೋ ಇದೆನಾಯ್ತು ಎಂದು ಪಾಲಿಕೆ ಬಂದು ವಿಚಾರಿಸಿದಾಗ ರೀ ಅದು ನಕಲಿ ಡಿಡಿ ರೀ ಅಷ್ಟು ಗೊತ್ತಾಗಲ್ವ ಎಂದು ಅಧಿಕಾರಿಗಳು ವಾಪಸ್‌‍ ಕಳುಹಿಸುತ್ತಿದ್ದಾರೆ.

ನಮ್ಮಲ್ಲಿ ಯಾವುದೇ ರೀತಿಯ ಹಣದ ರೂಪದಲ್ಲಿ ಅನುದಾನ ಕೊಡಲ್ಲ ಅಂತ ಅಧಿಕಾರಿಗಳು ಹೇಳಿ ಹೇಳಿ ಸಾಕಾಗಿದೆ. ಇತ್ತ ಹಣ ಕೊಟ್ಟು ತಗ್ಲಕೊಂಡ ಹತ್ತರೂ ಜನ..ಅಗದ್ರೆ ..ಬೋಗಸ್‌‍ ಡಿಡಿ ನೀಡಿ ಜನರಿಗೆ ವಂಚನೆ ಮಾಡ್ತಿರೋದು ಯಾರು..? ಜಿಬಿಎ ಅಧಿಕಾರಿಗಳಿಗೆ ಈ ವಿಷಯ ಗೋತ್ತಿಲ್ವ..? ಎಂದು ಪ್ರಶ್ನಿಸುತ್ತಿದ್ದಾರೆ.

ಇಷ್ಟೆಲ್ಲಾ ಆದರೂ ಜಿಬಿಎ ಅಧಿಕಾರಿಗಳು ಮಾತ್ರ ನಕಲಿ ಡಿಡಿ ವಿಷಯವನ್ನು ಪೊಲೀಸರ ಗಮನಕ್ಕೆ ತಾರದಿರುವುದು ಮತ್ತಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.ಈ ಕುರಿತಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಅಗತ್ಯ ಕ್ರಮ ಕೈಗೊಂಡು ಅಮಾಯಕ ಜನರನ್ನು ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

ಗೋವಾದಿಂದ ಬೆಂಗಳೂರಿಗೆ ಖಾಸಗಿ ಬಸ್‌‍ನಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂ. ಜಪ್ತಿ

ಬೆಂಗಳೂರು,ಅ.28- ಗೋವಾದಿಂದ ಬೆಂಗಳೂರಿಗೆ ಖಾಸಗಿ ಬಸ್‌‍ನಲ್ಲಿ ತರುತ್ತಿದ್ದ ರೂ.1 ಕೋಟಿ ನಗದನ್ನು ಉತ್ತರಕನ್ನಡ ಜಿಲ್ಲೆಯ ಚಿತ್ತಾಕುಲ ಠಾಣೆ ಪೊಲೀಸರು ಜಪ್ತಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜಸ್ಥಾನ ಮೂಲದ ಕಲ್ಪೇಶ್‌ ಮತ್ತು ಬಮರರಾವ್‌ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದು, ಗೋವಾದಿಂದ ಬೆಂಗಳೂರಿಗೆ ಖಾಸಗಿ ಬಸ್‌‍ನಲ್ಲಿ 1 ಕೋಟಿ ಹಣವಿಟ್ಟುಕೊಂಡು ರಾತ್ರಿ ಪ್ರಯಾಣಿಸುತ್ತಿದ್ದರು. ಖಾಸಗಿ ಬಸ್‌‍ನಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರವಾರ-ಗೋವಾ ಗಡಿಯ ಮಾಜಾಳಿ ಚೆಕ್‌ಪೋಸ್ಟ್‌ ಬಳಿ ಈ ಬಸ್‌‍ ಬರುವುದನ್ನೇ ಕಾಯುತ್ತಿದ್ದರು.

ರಾತ್ರಿ 9 ಗಂಟೆ ಸುಮಾರಿಗೆ ಚೆಕ್‌ಪೋಸ್ಟ್‌ ಬಳಿ ಈ ಬಸ್‌‍ ಬರುತ್ತಿದ್ದಂತೆ ಪೊಲೀಸರು ತಡೆದು ನಿಲ್ಲಿಸಿ ಬಸ್‌‍ ಪರಿಶೀಲಿಸಿದಾಗ ಸೀಟ್‌ವೊಂದರಲ್ಲಿ ಅಕ್ಕಪಕ್ಕ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಇಟ್ಟುಕೊಂಡಿದ್ದ 2 ಲೆದರ್‌ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಅದರಲ್ಲಿ ನಗದು ಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿದಾಗ ಗೋವಾದಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ. ಆದರೆ ಆ ಹಣಕ್ಕೆ ಯಾವುದೇ ದಾಖಲೆಗಳಿರಲಿಲ್ಲ.

ಎರಡು ಲೆದರ್‌ ಬ್ಯಾಗ್‌ಗಳಲ್ಲಿ 500 ರೂ ಮುಖಬೆಲೆಯ 1 ಕೋಟಿ ಹಣದ ಬಗ್ಗೆ ವಿಚಾರಿಸಿದಾಗ ಆ ಇಬ್ಬರು ಪ್ರಯಾಣಿಕರು ಯಾವುದೇ ದಾಖಲೆ ಕೊಟ್ಟಿಲ್ಲ.ಹಣದ ಬ್ಯಾಗ್‌ ಸಮೇತ ಆ ಇಬ್ಬರನ್ನು ವಶಕ್ಕೆ ಪಡೆದು ಚಿತ್ತಾಕುಲ ಪೊಲೀಸ್‌‍ ಠಾಣೆಗೆ ಕರೆದೊಯ್ದು ಎನ್‌ಸಿಆರ್‌ದಾಖಲಿಸಿಕೊಂಡು ಹಣದ ಮೂಲದ ಬಗ್ಗೆ ವಿಚಾರಿಸಿದಾಗ ವ್ಯವಹಾರಕ್ಕಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ಹೇಳಿದ್ದಾರೆ.

ಈ ಹಣ ನೀಡಿದವರಿಗೆ ನೋಟೀಸ್‌‍ ಕೊಟ್ಟು ಸೂಕ್ತ ದಾಖಲೆ ಕೊಡುವಂತೆ ಸೂಚಿಸಿದ್ದಾರೆ. ಒಂದು ವೇಳೆ ದಾಖಲೆ ನೀಡಿದರೆ ಹಣ ಹಿಂದಿರುಗಿಸಲಿದ್ದಾರೆ. ಇಲ್ಲದಿದ್ದರೆ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ. ಈ ಹಣ ತೆರಿಗೆ ವಂಚಿಸಲು ಅಥವಾ ಹವಾಲಾ ಹಣವೋ ಎಂಬುವುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟೆಡ್ಡಿಬಾಯ್‌ ಪ್ರಿಯಾಂಕ್‌ ಖರ್ಗೆ : ಬಿಜೆಪಿ ಲೇವಡಿ

ದಿಸ್‌‍ಪುರ್‌, ಅ. 28– ಸೆಮಿಕಂಡಕ್ಟರ್‌ ಕೈಗಾರಿಕೆಗಳ ಕುರಿತ ಹೇಳಿಕೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿರುಚಿದ್ದಾರೆ ಎಂದ ಕರ್ನಾಟಕ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆಯನ್ನು ಅಸ್ಸಾಂ ಬಿಜೆಪಿ ಘಟಕ ಟೆಡ್ಡಿಬಾಯ್‌ ಎಂದು ಕರೆದಿದೆ.ಪ್ರಿಯಾಂಕ್‌ ಖರ್ಗೆ ಎಕ್‌್ಸ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಅಸ್ಸಾಂ ಬಿಜೆಪಿ, ಸುದೀರ್ಘವಾದ ಪ್ರಬಂಧ ಬರೆದ ಕೂಡಲೇ ಯಾರೂ ಸೆಮಿಕಂಡಕ್ಟರ್‌ ತಜ್ಞ ಆಗುವುದಿಲ್ಲ. ಮೊದಲು, ದಕ್ಷಿಣ ಭಾರತದ ಬಡತನ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ನಿಮ್ಮ ಕಲಬುರಗಿ ಜಿಲ್ಲೆಯ ಬಗ್ಗೆ ಕಾಳಜಿ ವಹಿಸಿ ಎಂದು ಚಾಟಿ ಬೀಸಿದೆ.

ಹಲೋ ಟೆಡ್ಡಿ ಬಾಯ್‌‍, ಎಕ್ಸ್ ನಲ್ಲಿ ಸುದೀರ್ಘ ಪ್ರಬಂಧ ಬರೆಯುವುದರಿಂದ ನೀವು ಸೆಮಿಕಂಡಕ್ಟರ್‌ ತಜ್ಞ ಆಗಲಾರಿರಿ. ಅಸ್ಸಾಂ ಬಗ್ಗೆ ಉಪನ್ಯಾಸ ನೀಡುವ ಬದಲು ಆತ್ಮವಿಮರ್ಶೆ ಮಾಡಿಕೊಳ್ಳಿ. ದಕ್ಷಿಣ ಭಾರತದ ಬಡತನ ಶ್ರೇಯಾಂಕದಲ್ಲಿ ನಿಮ್ಮ ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ನಿಮ್ಮ ಟ್ಯಾಲೆಂಟ್‌ ಟ್ಯಾಂಕ್‌‍ ಬಗ್ಗೆ ತುಂಬಾನೇ ಹೇಳ್ತೀರಾ, ಅಲ್ವಾ? ಎಂದು ಅಸ್ಸಾಂ ಬಿಜೆಪಿ ಎಕ್‌್ಸ ಸಂದೇಶದಲ್ಲಿ ಉಲ್ಲೇಖಿಸಿದೆ.

ಕರ್ನಾಟಕಕ್ಕೆ ಬರಬೇಕಿರುವ ಸೆಮಿಕಂಡಕ್ಟರ್‌ ಕೈಗಾರಿಕೆಗಳ ಹೂಡಿಕೆಗಳನ್ನು ಕೇಂದ್ರ ಸರ್ಕಾರ ಅಸ್ಸಾಂ ಮತ್ತು ಗುಜರಾತ್‌ ರಾಜ್ಯಗಳಿಗೆ ತಿರುಗಿಸುತ್ತಿದೆ ಎಂದು ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದರು. ಅಲ್ಲದೆ, ಸೆಮಿಕಂಡಕ್ಟರ್‌ ಕೈಗಾರಿಕೆಗಳು ವಾಸ್ತವದಲ್ಲಿ ಬಯಸಿರೋದು ಬೆಂಗಳೂರನ್ನು. ಆದರೆ, ಅಸ್ಸಾಂ ಮತ್ತು ಗುಜರಾತ್‌ಗೆ ಏಕೆ ಹೋಗುತ್ತಿವೆ? ಅಲ್ಲಿ ಪ್ರತಿಭೆಗಳು ಇವೆಯೇ ಎಂದು ಖರ್ಗೆ ಪ್ರಶ್ನಿಸಿದ್ದರು.

ಇದು ಅಸ್ಸಾಂನ ಯುವಕರಿಗೆ ಮಾಡಿರುವ ಅವಮಾನ ಎಂದು ಹೇಳಿದ್ದ ಹಿಮಂತ ಬಿಸ್ವ ಶರ್ಮಾ, ಪ್ರಿಯಾಂಕ್‌ ಖರ್ಗೆ ಫಸ್ಟ್‌ ಕ್ಲಾಸ್‌‍ ಈಡಿಯಟ್‌‍ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರಿಯಾಂಕ್‌ ಖರ್ಗೆ ಎಕ್ಸ್ ತಾಣದಲ್ಲಿ ಸೆಮಿಕಂಡಕ್ಟರ್‌ ಬಗ್ಗೆ ಹಾಗೂ ಅಸ್ಸಾಂ ಕುರಿತು ಸುದೀರ್ಘ ಬರಹ ಪ್ರಕಟಿಸಿದ್ದರು.

ಇಕರ್ನಾಟಕದ ಐಟಿ ಸಚಿವರಿಗೆ ಅಸ್ಸಾಂ ಸಿಎಂ ಕೌಂಟರ್‌ಹಿಮಂತ ಬಿಸ್ವ ಶರ್ಮಾ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಉಲ್ಲೇಖಿಸಿರುವ ಪ್ರಿಯಾಂಕ್‌ ಖರ್ಗೆ, ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ಸುಮಾರು ಒಂದು ದಶಕದ ಬಿಜೆಪಿ ಆಡಳಿತದ ನಂತರವೂ ಅಸ್ಸಾಂ ಇಂದು ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆಯಂತಹ ನಿರ್ಣಾಯಕ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಕೊನೆಯ ಐದು ರಾಜ್ಯಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಿದ್ದರು. ಇದಕ್ಕೆ ಅಸ್ಸಾಂ ಬಿಜೆಪಿ ತಿರುಗೇಟು ನೀಡಿದೆ.