Home Blog Page 422

ಕೆಂಪುಕೋಟೆ ಹಸ್ತಾಂತರಕ್ಕೆ ಮೊಘಲ್‌ ವಂಶಸ್ಥರು ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ,ಮೇ 5- ರಾಷ್ಟ್ರ ರಾಜಧಾನಿ ನವದೆಹಲಿಯ ಅತ್ಯಂತ ಅಪ್ರತಿಮ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿರುವ 17ನೇ ಶತಮಾನದ ಮೊಘಲ್‌ ದೊರೆಯ ಕೆಂಪು ಕೋಟೆಯನ್ನು ಕೊನೆಯ ಮೊಘಲ್‌ ಚಕ್ರವರ್ತಿ ಬಹದ್ದೂರ್‌ ಷಾ ಜಾಫರ್‌ 11ರ ಮೊಮ್ಮಗನ ವಿಧವೆಗೆ ಹಸ್ತಾಂತರಿಸಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಸುಲ್ತಾನಾ ಬೇಗಂ ಅವರ ಮನವಿಯ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ, ಕೆಂಪು ಕೋಟೆ ಮಾತ್ರ ಏಕೆ? ಫತೇಪುರ್‌ ಸಿಕ್ರಿ (16 ನೇ ಶತಮಾನದ ಉತ್ತರಾರ್ಧದಲ್ಲಿ ಅಕ್ಬರ್‌ ಆಳ್ವಿಕೆಯಲ್ಲಿ ಮೊಘಲ್‌ ಸಾವ್ರಾಜ್ಯದ ರಾಜಧಾನಿ), ತಾಜ್‌ ಮಹಲ್‌ (17 ನೇ ಶತಮಾನದಲ್ಲಿ ಷಹಜಹಾನ್‌ ಅವರಿಂದ ಪ್ರಸಿದ್ಧವಾಗಿ ನಿಯೋಜಿಸಲ್ಪಟ್ಟ) ಏಕೆ?ನೀವು ಇದನ್ನು ನಿಮ ವಶಕ್ಕೆ ಬೇಕು ಎಂದು ಬಯಸುತ್ತೀರಿ… ಎಂದು ಅರ್ಜಿದಾರರನ್ನು ತರಟೆಗೆ ತೆಗೆದುಕೊಂಡರು.

ಕೆಲ ಕಾಲ ಗೊಂದಲಕ್ಕೊಳಗಾದ ಮುಖ್ಯ ನ್ಯಾಯಾಧೀಶರು ತಪ್ಪಾಗಿ ಗ್ರಹಿಸಿದ ಮನವಿಯನ್ನು ತಿರಸ್ಕರಿಸಿದರು. ಕೋಲ್ಕತ್ತಾದ ಬಳಿಯ ಹೌರಾದಲ್ಲಿ ವಾಸಿಸುತ್ತಿರುವ ಸುಲ್ತಾನಾ ಬೇಗಂ ಅವರು ಕೆಂಪು ಕೋಟೆಯನ್ನು ತನ್ನ ಮೂಲ ಮಾಲೀಕರಾದ ಅಂದರೆ ಮೊಘಲ್‌ ಚಕ್ರವರ್ತಿಗಳ ವಂಶಸ್ಥರು ಎಂಬ ಕಾರಣಕ್ಕೆ ಕೆಂಪು ಕೋಟೆಯನ್ನು ತಮ ಸುಪರ್ದಿಗೆ ನೀಡುವಂತೆ ಮನವಿ ಮಾಡಿದ್ದರು.

1857 ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ್‌ ಆಡಳಿತವು ಮೊಘಲರಿಂದ ಕೆಂಪು ಕೋಟೆಯನ್ನು ವಶಪಡಿಸಿಕೊಂಡಿತ್ತು. ನಂತರ ವಸಾಹತುಶಾಹಿ ಆಡಳಿತಗಾರರ ವಿರುದ್ಧದ ಮೊದಲ ದಂಗೆಗಳನ್ನು ಬೆಂಬಲಿಸಿದ ಬಹದ್ದೂರ್‌ ಷಾ ಜಾಫರ್‌ 11 ಅವರನ್ನು ಗಡೀಪಾರು ಮಾಡಲಾಗಿ ಅವರ ಭೂಮಿ ಮತ್ತು ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪರ್ಯಾಯವಾಗಿ, ತನ್ನ ಹಕ್ಕುಗಳನ್ನು ಬಿಟ್ಟುಕೊಡಲು ಸರ್ಕಾರದಿಂದ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿದ್ದರು.

ಅಂದಹಾಗೆ ಅವರು ಈ ರೀತಿ ಮನವಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2021 ರಲ್ಲಿ ಅವರು ದೆಹಲಿ ಹೈಕೋರ್ಟ್‌ ನಲ್ಲೂ ಮನವಿ ಮಾಡಿಕೊಂಡಿದ್ದರು. ನಂತರ ಸುಲ್ತಾನಾ ಬೇಗಂ ಅವರು 1960 ರಲ್ಲಿ ತಮ (ಈಗ ನಿಧನರಾದ) ಪತಿ ಬೇಡರ್‌ ಬ್ತ್‌‍ ಅವರ ವಂಶಸ್ಥರು ಮತ್ತು ಬಹದ್ದೂರ್‌ ಷಾ ಜಾಫರ್‌ 11 ರ ಉತ್ತರಾಧಿಕಾರಿ ಎಂದು ದೃಢಪಡಿಸಿದ್ದರು.

ಸರ್ಕಾರವು ತರುವಾಯ ಅವರಿಗೆ ಪಿಂಚಣಿ ನೀಡಲು ಪ್ರಾರಂಭಿಸಿತು, ಅದು 1980 ರಲ್ಲಿ ಪತಿಯ ಮರಣದ ನಂತರ ಅವರಿಗೆ ವರ್ಗಾಯಿಸಲಾಯಿತು. ಈ ಪಿಂಚಣಿ ತನ್ನ ಅಗತ್ಯಗಳಿಗೆ ಸಾಕಾಗುವುದಿಲ್ಲ ಎಂದು ವಾದಿಸಿದ್ದರು.

ಸರ್ಕಾರವು ಕೆಂಪು ಕೋಟೆಯನ್ನು ಕಾನೂನುಬಾಹಿರವಾಗಿ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಅದರ ಆಸ್ತಿ ಮತ್ತು ಐತಿಹಾಸಿಕ ಮೌಲ್ಯಕ್ಕೆ ಅನುಗುಣವಾಗಿ ಸಾಕಷ್ಟು ಪರಿಹಾರವನ್ನು ನೀಡಲು ಇಷ್ಟವಿಲ್ಲ ಎಂದು ಅವರು ಆರೋಪಿಸಿದ್ದರು. ಸಂವಿಧಾನದ 300ನೇ ಪರಿಚ್ಛೇದದ ಅಡಿಯಲ್ಲಿ ತನ್ನ ಮೂಲಭೂತ ಹಕ್ಕುಗಳು ಮತ್ತು ಹಕ್ಕುಗಳ ನೇರ ಉಲ್ಲಂಘನೆಯಾಗಿದೆ ಎಂಬುದು ಅರ್ಜಿದಾರರ ಆರೋಪವಾಗಿತ್ತು. ಆದರೆ, ಈ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ರದ್ದುಗೊಳಿಸಿದೆ.

ಮೂರು ವರ್ಷಗಳ ನಂತರ ಅವರು ಆ ತೀರ್ಪಿನ ವಿರುದ್ಧ ಮೇಲನವಿ ಸಲ್ಲಿಸಿದರು. ಮತ್ತು ಅದನ್ನು ಮತ್ತೆ ತಿರಸ್ಕರಿಸಲಾಗಿತ್ತು. ಸುಲ್ತಾನಾ ಬೇಗಂ ಅವರ ಮನವಿಯನ್ನು ತಳ್ಳಿಹಾಕಿ, ಮೂಲ ತೀರ್ಪಿನ ನಂತರ ಮೇಲನವಿಯನ್ನು ತುಂಬಾ ತಡವಾಗಿ ಸಲ್ಲಿಸಲಾಗಿದೆ ಎಂಬ ಆಧಾರದ ಮೇಲೆ ಅದನ್ನು ತಿರಸ್ಕರಿಸಲಾಯಿತು. ಅನಕ್ಷರತೆ ಮತ್ತು ಅನಾರೋಗ್ಯವು ವಿಳಂಬಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಬೆಂಗಳೂರು : ಎರಡು ಪ್ರತ್ಯೇಕ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಇಬ್ಬರ ಸಾವು

ಬಿಕಾಂ ಪದವೀಧರ ಸಾವು
ಬೆಂಗಳೂರು,ಮೇ 5- ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಿಕಾಂ ಪದವೀಧರ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.ಮನೋರಾಯನ ಪಾಳ್ಯದ ನಿವಾಸಿ ಸಯಾನ್‌ ಪ್ರಭಾತ್‌ (21) ಮೃತಪಟ್ಟ ಬಿಕಾಂ ಪದವೀಧರ.

ಸ್ನೇಹಿತನ ಮನೆಗೆ ಹೋಗಿ ಇಂದು ಮುಂಜಾನೆ 1.30ರ ಸುಮಾರಿನಲ್ಲಿ ಸಯಾನ್‌ ಪ್ರಭಾತ್‌ ತನ್ನ ದ್ವಿಚಕ್ರವಾಹದಲ್ಲಿ ಮನೆಗೆ ವಾಪಸ್‌‍ ಆಗುತ್ತಿದ್ದಾಗ ರಿಂಗ್‌ ರಸ್ತೆಯ ಲುಂಬಿನಿ ಲೇಕ್‌ ಬಳಿ ಅತೀ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಗಂಭೀರ ಗಾಯಗೊಂಡ ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.ಸುದ್ದಿ ತಿಳಿದು ಹೆಬ್ಬಾಳ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅತೀ ವೇಗ -ಉರುಳಿದ ಬೈಕ್‌, ಖಾಸಗಿ ಕಂಪನಿ ನೌಕರ ಸಾವು
ಬೈಕ್‌ನಲ್ಲಿ ಅತೀ ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ ಖಾಸಗಿ ಕಂಪನಿ ನೌಕರ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ನಡೆದಿದೆ.

ಕಾಳೇನ ಅಗ್ರಹಾರದಲ್ಲಿ ವಾಸವಾಗಿದ್ದ ಶ್ರೀಶೈಲ (36) ಮೃತಪಟ್ಟ ನೌಕರ. ಇವರು ಮೂಲತಃ ಬೆಳಗಾವಿ ಜಿಲ್ಲೆಯವರು.ಶ್ರೀಶೈಲ ಅವರು ಮಧ್ಯರಾತ್ರಿ 12.30 ರ ಸುಮಾರಿನಲ್ಲಿ ಬೇಗೂರು-ಕೊಪ್ಪ ರಸ್ತೆಯ ಮೈಲಸಂದ್ರ ಸಮೀಪ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದಾರೆ.

ಗಂಭೀರ ಗಾಯಗೊಂಡ ಶ್ರೀಶೈಲ ಅವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಿಸದೇ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳ ಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಕೊಂದಿದ್ದ ಪತಿ ಬಂಧನ

ಬೆಂಗಳೂರು,ಮೇ 5– ವರದಕ್ಷಿಣೆ ವಿಚಾರವಾಗಿ ದಂಪತಿ ನಡುವೆ ಜಗಳವಾಗಿ ಪತ್ನಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಾಗಣಪತಿ ನಗರದ 2ನೇ ಮುಖ್ಯ ರಸ್ತೆ, 1ನೇ ಹಂತದ ನಿವಾಸಿ ಲೋಕೇಶ್‌ಕುಮಾರ್‌ ಗೆಹ್ಲೋಟ್‌ ಅಲಿಯಾಸ್‌ ಲಲಿತ್‌ (43) ಬಂಧಿತ ಆರೋಪಿ.ಲೋಕೇಶ್‌ ಕುಮಾರ್‌ ಹಾಗೂ ನಮಿತಾ ದಂಪತಿಗೆ ಒಂದು ಮಗುವಿದ್ದು, ಮಹಾಗಣಪತಿ ನಗರದಲ್ಲಿ ವಾಸವಿದ್ದಾರೆ.ಲೋಕೇಶ್‌ ಕುಮಾರ್‌ ನಗರದ ಕಬ್ಬನ್‌ ಪೇಟೆಯಲ್ಲಿ ಕಲರ್‌ರ‍ಸ ಡಿಜಿಟಲ್‌ ಪೋಟೋ ಸ್ಟೂಡಿಯೋ ಇಟ್ಟುಕೊಂಡಿದ್ದು, ಅದನ್ನು ಅಭಿವೃದ್ದಿ ಪಡಿಸಬೇಕು ಅಲ್ಲದೇ ನಗರದಲ್ಲಿ ಸೈಟ್‌ ಖರೀದಿ ಮಾಡಬೇಕು ಎಂದು ಪತ್ನಿಯಿಂದ 60 ಸಾವಿರ ಹಣವನ್ನು ಡ್ರಾ ಮಾಡಿಸಿಕೊಂಡಿದ್ದನು.

ಅಲ್ಲದೇ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಆಗಾಗೇ ಪತ್ನಿಗೆ ಪೀಡಿಸುತ್ತಿದ್ದನು. ಇದೇ ವಿಚಾರವಾಗಿ ಮನೆಯಲ್ಲಿ ಕಳೆದ 15 ದಿನಗಳಿಂದ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಯಾಗುತಿತ್ತು.ಏಪ್ರಿಲ್‌ 24 ರಂದು ಸಂಜೆ 5 ಗಂಟೆ ಸುಮಾರಿಗೆ ಲೋಕೇಶ್‌ ಕುಮಾರ್‌ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾನೆ. ಸಂಜೆ 6 ಗಂಟೆ ಸುಮಾರಿನಲ್ಲಿ ನಮಿತಾ ಅವರ ಸಹೋದರ ಸತ್ಯಂ ಎಂಬುವವರು ಲೋಕೇಶ್‌ ಕುಮಾರ್‌ಗೆ ಕರೆ ಮಾಡಿದ್ದಾರೆ.

ಆ ವೇಳೆ ನಮಿತಾ, ಯಾರು ಪೋನ್‌ ಮಾಡಿರುವುದು ಲೌಡ್‌ ಸ್ಪೀಕರ್‌ ಇಟ್ಟು ಮಾತನಾಡುವಂತೆ ಪತಿಗೆ ಹೇಳಿದಾಗ ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ಉಂಟಾಗಿ ವಿಕೋಪಕ್ಕೆ ತಿರುಗಿದಾಗ ಮಾತಿಗೆ ಮಾತು ಬೆಳೆದಿದೆ.

ಆ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಆರೋಪಿ ಲೋಕೇಶ್‌ಕುಮಾರ್‌ ಪತ್ನಿಯನ್ನು ಕೆಳಗೆ ಕೆಡವಿ ಆಕೆಯ ಮೇಲೆ ಕುಳಿತುಕೊಂಡು ಕೈಗಳಿಂದ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಮನೆಯ ಮಾಲೀಕರಾದ ಭುಪೆಂಧರ್‌ ಎಂಬುವವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಸುದ್ದಿತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಲೋಕೇಶ್‌ಕುಮಾರ್‌ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್‌ ಆಯುಕ್ತ ಗಿರೀಶ್‌ ಅವರ ನಿರ್ದೇಶನದ ಮೇರೆಗೆ, ಸಹಾಯಕ ಪೊಲೀಸ್‌ ಆಯುಕ್ತ ಚಂದನ್‌ ಕುಮಾರ್‌ ಅವರ ಸಲಹೆ ಮೇರೆಗೆ ಇನ್ಸ್ ಪೆಕ್ಟರ್‌ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿ ತಂಡ ಆರೋಪಿಯನ್ನು ಬಂ ಸುವಲ್ಲಿ ಯಶಸ್ವಿಯಾಗಿದೆ.ಇವರ ಉತ್ತಮ ಕಾರ್ಯವನ್ನು ನಗರ ಪೊಲೀಸ್‌ ಆಯುಕ್ತ ದಯಾನಂದ ಅವರು ಶ್ಲಾಘಿಸಿದ್ದಾರೆ.

ಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ಸಹಕರಿಸುವಂತೆ ಸಿಎಂ ಸಿದ್ದರಾಮಯ್ಯ ಮನವಿ

ಬೆಂಗಳೂರು ಮೇ 5– ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಸಲುವಾಗಿ ಸಮರ್ಪಕ ದತ್ತಾಂಶ ಸಂಗ್ರಹಿಸಲು ಇಂದಿನಿಂದ ಮನೆ ಮನೆ ಸಮೀಕ್ಷೆ ನಡೆಯುತ್ತಿದ್ದು, ಸಮುದಾಯಗಳು ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಕುರಿತಂತೆ ವಿಧಾನಸೌಧದ ಸಮೇಳನ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌‍ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಒಳಮೀಸಲಾತಿ ಜಾರಿಗೆ ನಮ ಸರ್ಕಾರ ಬದ್ಧವಾಗಿದೆ. ಈ ದಿಕ್ಕಿನಲ್ಲಿ ಇಂದಿನಿಂದ ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದರು.

ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಪರಿಶಿಷ್ಟ ಜಾತಿಪಟ್ಟಿಯಲ್ಲಿ 101 ಜಾತಿಗಳನ್ನು ಗುರುತಿಸಲಾಗಿದೆ. ಈ ಜಾತಿಗಳ ನಡುವೆ ಮೀಸಲಾತಿಯನ್ನು ವೈಜ್ಞಾನಿಕವಾಗಿ ವರ್ಗೀಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್‌ ಕಳೆದ ವರ್ಷ ಆಗಸ್ಟ್‌ 1ರಂದು ನೀಡಿರುವ ತೀರ್ಪಿನಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌‍ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ನಮ ಸರ್ಕಾರ ರಚನೆ ಮಾಡಿದೆ. ಆಯೋಗ ಈಗಾಗಲೇ ಮಧ್ಯಂತರ ವರದಿ ನೀಡಿ, ಸಮರ್ಪಕ ದತ್ತಾಂಶ ಸಂಗ್ರಹಿಸುವ ಅಗತ್ಯವಿದೆ ಎಂದು ಹೇಳಿದೆ. ಹಲವು ಸಮುದಾಯಗಳ ಸಂಘಟನೆಗಳು ಇದೇ ಅಭಿಪ್ರಾಯವನ್ನು ಹೇಳಿವೆ.

ಈ ಮೊದಲು 2011ರ ಜನಗಣತಿ ಆಧಾರದಲ್ಲಿ ಸದಾಶಿವ ಆಯೋಗ ಪರಿಶಿಷ್ಟ ಜಾತಿ ಸಮುದಾಯಗಳ ಜನಸಂಖ್ಯೆಯನ್ನು ಗುರುತಿಸಿತ್ತು. ಅದರಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಸಮುದಾಯದಲ್ಲಿ ಯಾರು, ಎಷ್ಟು ಮಂದಿ ಇದ್ದಾರೆ ಎನ್ನುವುದು ಸ್ಪಷ್ಪವಾಗಿಲ್ಲ.

ಎಡಗೈ, ಬಲಗೈ ಸಮುದಾಯದವರು ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂಬ ವರ್ಗವನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತಿದ್ದಾರೆೆ. ಗೊಂದಲಗಳನ್ನು ನಿವಾರಿಸಲು ಮೂಲ ಜಾತಿಯನ್ನು ಕರಾರುವಾಕ್ಕಾಗಿ ತಿಳಿಯಲು ಇಂದಿನಿಂದ ಮೇ 17ರವರೆಗೆ ಮನೆ ಮನೆಗೆ ಸಮೀಕ್ಷೆ ನಡೆಸಲಾಗುತ್ತಿದೆ. ಮೊದಲ ಹಂತದ ಸಮೀಕ್ಷೆಗೆ ಸುಮಾರು 65 ಸಾವಿರ ಶಿಕ್ಷಕರನ್ನು ನಿಯೋಜಿಸಲಾಗಿದೆ. 10-12 ಮಂದಿ ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕ ಇರುತ್ತಾರೆ ಎಂದರು.

ಎರಡನೇ ಹಂತದಲ್ಲಿ ಮೇ 19ರಿಂದ 21ರ ನಡುವೆ ವಿಶೇಷ ಶಿಬಿರಗಳಲ್ಲಿ ಮಾಹಿತಿ ಕಲೆ ಹಾಕಲಾಗುವುದು. 3ನೇ ಹಂತದಲ್ಲಿ ಮೇ 19ರಿಂದ 22 ರವರೆಗೆ ಆನ್‌ಲೈನ್‌ ಮೂಲಕ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ ಮಾಹಿತಿ ನೀಡಲು ಸಾಧ್ಯವಾಗದವರು ಎರಡು ಹಾಗೂ ಮೂರನೇ ಹಂತದಲ್ಲಿ ಮಾಹಿತಿ ನೀಡಬಹುದಾಗಿ ಎಂದರು.

ಮೊಬೈಲ್‌ ಆ್ಯಪ್‌ ಮೂಲಕವೂ ಸಮೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 6.30 ರಿಂದ ಸಂಜೆ 6.30ರವರೆಗೆ ಮೊಬೈಲ್‌ ಆ್ಯಪ್‌ ಎನೇಬಲ್‌ ಮಾಡಲಾಗಿರುತ್ತದೆ. ದಿನದ 24 ಗಂಟೆಗೂ ಸಕ್ರಿಯವಾಗಿರುವ ಹೆಲ್ಪ್ ಲೈನ್‌ ನಂಬರ್‌ 94813 59000 ಅನ್ನು ಇದಕ್ಕಾಗಿ ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಿಖರ ದತ್ತಾಂಶ ಸಂಗ್ರಹಿಸಿ, ಒಳ ಮೀಸಲಾತಿ ಕುರಿತು ವರದಿ ನೀಡಲು ಆಯೋಗಕ್ಕೆ 60 ದಿನಗಳ ಕಾಲಾವಕಾಶ ನೀಡಲಾಗಿದೆ. ವರದಿ ಸಲ್ಲಿಕೆಯಾದ ತಕ್ಷಣವೇ ಸರ್ಕಾರ ಒಳಮೀಸಲಾತಿ ಕುರಿತು ನಿರ್ಣಯ ಕೈಗೊಳ್ಳಲಿದೆ. ಕಾಂಗ್ರೆಸ್‌‍ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ನುಡಿದಂತೆ ನಡೆಯುತ್ತಿದೆ. ಒಳ ಮೀಸಲಾತಿಗೆ ಸಂಪುಟದ ಎಲ್ಲಾ ಸಚಿವರು ಒಪ್ಪಿದ್ದಾರೆ. ಯಾರ ನಡುವೆಯೂ ಭಿನ್ನ ಅಭಿಪ್ರಾಯಗಳಿಲ್ಲ ಎಂದರು.

ಹಿಂದುಳಿದ ವರ್ಗಗಳ ಕಾಂತರಾಜು ಆಯೋಗದ ವರದಿಗೂ ಈ ಸಮೀಕ್ಷೆಗೂ ಸಂಬಂಧ ಇಲ್ಲ. ಒಳ ಮೀಸಲಾತಿಗಾಗಿ ಮಾತ್ರ ಇಂದಿನಿಂದ ಗಣತಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಹೆಚ್‌.ಸಿ.ಮಹದೇವಪ್ಪ ಮಾತನಾಡಿ, ಇದೊಂದು ಐತಿಹಾಸಿಕ ಸಮೀಕ್ಷೆಯಾಗಿದೆ. ಸುಮಾರು 100 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ.

ಪರಿಶಿಷ್ಟ ಜಾತಿಗಳ ಎಲ್ಲ ಉಪಜಾತಿಗಳು ಒಟ್ಟಾಗಿ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್‌.ಮುನಿಯಪ್ಪ ಮಾತನಾಡಿ, ಒಳ ಮೀಸಲಾತಿ ಜಾರಿಗೊಳಿಸಲು ಬದ್ಧತೆ ಪ್ರದರ್ಶಿಸಿರುವ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸಿದರು. ಹಲವು ದಶಕಗಳ ಬೇಡಿಕೆ ಈಗ ಈಡೇರುವ ಕಾಲ ಸನ್ನಿಹಿತವಾಗಿದೆ. ಈಗಾಗಲೇ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಈ ರೀತಿಯ ಸಮೀಕ್ಷೆಗಳು ನಡೆದು ವಿಧಾನಸಭೆಯಲ್ಲಿ ಮಂಡನೆಯಾಗಿವೆ. ನಮಲ್ಲೂ ನಾಗಮೋಹನ್‌ ದಾಸ್‌‍ ವರದಿಯನ್ನು ವಿಧಾನಸೌಧದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಕೃಷಿ ಮಾರುಕಟ್ಟೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಶಾಸಕರಾದ ರೂಪಶಶಿಕಲಾ, ವಿಧಾನ ಪರಿಷತ್‌ ಸದಸ್ಯರಾದ ಸುಧಾಮದಾಸ್‌‍, ನಸೀರ್‌ ಅಹಮದ್‌ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಸೋನುನಿಗಮ್‌ ಪ್ರಕರಣದಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಲ್ಲ : ಪರಮೇಶ್ವರ್‌

ಬೆಂಗಳೂರು,ಮೇ 5– ಕನ್ನಡಿಗರ ವಿರುದ್ಧ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವ ಹಾಡುಗಾರ ಸೋನುನಿಗಮ್‌ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಈ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೋನುನಿಗಂ ವಿರುದ್ಧ ದೂರು ದಾಖಲಾಗಿದೆ. ಇದರಲ್ಲಿ ಸರ್ಕಾರದ ಪರವಾಗಿ ಹೇಳಿಕೆ ನೀಡುವಂತದ್ದೇನೂ ಇಲ್ಲ. ಸ್ಥಳೀಯ ಪೊಲೀಸರು ನಿಯಮಾನುಸಾರ ಕ್ರಮ ಕೈಗೊಳ್ಳುತ್ತಾರೆ ಎಂದರು.

ಪಾಕಿಸ್ತಾನದ ಪ್ರಜೆಗಳನ್ನು ವಾಪಸ್‌‍ ಕಳುಹಿಸಲಾಗಿದೆ. ಇನ್ನೂ ಆರೇಳು ಜನ ಇರಬಹುದು ಎನ್ನಲಾಗುತ್ತಿದ್ದು, ಕೇಂದ್ರ ಸರ್ಕಾರ ವಾಪಸ್‌‍ ಕಳುಹಿಸುವ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ. ಅದರನುಸಾರ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಹನಿಟ್ರ್ಯಾಪ್‌ ಪ್ರಕರಣವನ್ನು ಮುಚ್ಚಿಹಾಕುವಂತಹುದ್ದು ಏನೂ ಇಲ್ಲ, ಮಾಧ್ಯಮಗಳಲ್ಲಿ ಕೆಲ ವರದಿಗಳನ್ನು ನಾನು ಗಮನಿಸಿದ್ದೇನೆ. ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಸಿಐಡಿಗೆ ಏನು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅದರ ಮೇಲೆ ತನಿಖೆ ಮುಂದುವರೆಯುತ್ತದೆ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಸುಹಾಸ್‌‍ಶೆಟ್ಟಿ ಹತ್ಯೆಗೆ ವಿದೇಶದ ಲಿಂಕ್‌ ಇರುವ ಆರೋಪದ ಬಗ್ಗೆ ತನಿಖೆಯಿಂದಲೇ ಗೊತ್ತಾಗಬೇಕಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ಸಿಗುತ್ತದೆ. ಯಾರು ಸುಪಾರಿ ಕೊಟ್ಟಿದ್ದಾರೆ?, ಎಷ್ಟು ಕೊಟ್ಟಿದ್ದಾರೆ? ಎನ್ನುವುದನ್ನು ವಿಚಾರಣೆ ಮಾಡಲಾಗುವುದು. ಇಂತಹ ವಿಚಾರದಲ್ಲಿ ಊಹೆ ಮಾಡಿ ಮಾತನಾಡಲು ಸಾಧ್ಯವಿಲ್ಲ.

ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದಕ್ಕೆ ಸಕಾರಣಗಳಿರುತ್ತವೆ. ಇದರಲ್ಲಿ ದ್ವೇಷ ರಾಜಕಾರಣ ಎನ್ನುವುದು ಸರಿಯಲ್ಲ. ಅವರು ಏನು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಶಾಸಕರ ವಿರುದ್ಧ ಪ್ರಕರಣ ದಾಖಲಿಸಬೇಕಾದರೆ ಪೊಲೀಸರು ಸಾಕಷ್ಟು ಪರಿಶೀಲನೆ ನಡೆಸಿರುತ್ತಾರೆ. ಅವರು ನೀಡಿರುವ ಹೇಳಿಕೆಯಲ್ಲಿ ಕಾನೂನು ವಿರುದ್ಧವಾದ ಅಂಶವಿರಬಹುದು ಎಂದು ಸಮರ್ಥಿಸಿಕೊಂಡರು.

ಸುಹಾಸ್‌‍ ಶೆಟ್ಟಿ ವಿರುದ್ಧ ರೌಡಿಶೀಟರ್‌ಗೆ ಸಂಬಂಧಪಟ್ಟಂತಹ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿವೆ. ಹಾಗಿದ್ದ ಮೇಲೆ ಆತನನ್ನು ರೌಡಿಶೀಟರ್‌ ಎಂದೇ ಕರೆಯಲಾಗುವುದು. ಬಿಜೆಪಿಯವರು ಇದಕ್ಕೆ ಆಕ್ಷೇಪಿಸುವುದು ಯಾವ ಕಾರಣಕ್ಕೆ ಎಂದು ಪರಮೇಶ್ವರ್‌ ಪ್ರಶ್ನಿಸಿದರು. ಸುಹಾಸ್‌‍ ಶೆಟ್ಟಿ ಕೊಲೆ ನಂತರ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಪೋಸ್ಟ್‌ಗಳು ಬರುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಎಡಿಜಿಪಿಯವರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಪರಮೇಶ್ವರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಶ್ಮೀರದ ಜೈಲುಗಳ ಮೇಲೆ ದಾಳಿಗೆ ಉಗ್ರರ ಸಂಚು

ಶ್ರೀನಗರ,ಮೇ5- ಜಮು ಮತ್ತು ಕಾಶೀರದ ಜೈಲುಗಳ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಬಂದಿದೆ. ಪಹಲ್ಗಾಮ್‌ನಲ್ಲಿ ಕೆಲವು ದಿನಗಳ ಹಿಂದೆ ನಡೆದ ಪ್ರವಾಸಿಗರ ಮಾರಣಹೋಮದ ಬೆನ್ನಲ್ಲೇ ಉಗ್ರರು ಕಣಿವೆ ರಾಜ್ಯದಲ್ಲಿ ಮತ್ತೆ ಡೆಡ್ಲಿ ಅಟ್ಯಾಕ್‌ಗೆ ಸಂಚು ರೂಪಿಸಿರುವುದು ಬಯಲಾಗಿದೆ.

ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಮೂಲಗಳು ನೀಡಿದ್ದು, ಹೈ ಪೊಫೈಲ್‌ ಭಯೋತ್ಪಾದಕರು ಮತ್ತು ಶಂಕಿತ ಉಗ್ರರನ್ನು ಇರಿಸಿರುವ ಹಲವಾರು ಜೈಲುಗಳು ಭಯೋತ್ಪಾದಕ
ದಾಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿವೆ. ಇದರಿಂದಾಗಿ ಭದ್ರತೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಗುಪ್ತಚರ ಮಾಹಿತಿಯ ಪ್ರಕಾರ ಶ್ರೀನಗರ ಕೇಂದ್ರ ಜೈಲು ಮತ್ತು ಜಮುವಿನ ಕೋಟ್‌ ಬಲ್ವಾಲ್‌ ಜೈಲುಗಳನ್ನು ಗುರಿಯಾಗಿಸಿ ದಾಳಿ ನಡೆಸಬಹುದು ಎಂದು ಅಂದಾಜಿಸಲಾಗಿದೆ.

ಈ ಜೈಲುಗಳಲ್ಲಿ ಪ್ರಸ್ತುತ ಭಯೋತ್ಪಾದಕರು ಹಾಗೂ ಭೂಗತ ಲೋಕದ ಕೊಲೆ ಪಾತಕಿಗಳಿದ್ದಾರೆ. ಅವರು ದಾಳಿಗಳಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಸಹ, ಲಾಜಿಸ್ಟಿಕಲ್‌ ಸಹಾಯ, ಆಶ್ರಯ ಮತ್ತು ಅವರ ಓಡಾಟ ಸುಗಮಗೊಳಿಸುವ ಮೂಲಕ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಾರೆ.

ಶ್ರೀನಗರ ಕೇಂದ್ರ ಜೈಲು ಮತ್ತು ಜಮುವಿನ ಕೋಟ್‌ ಬಲ್ವಾಲ್‌ ಜೈಲುಸೇರಿದಂತೆ ಅನೇಕ ಜೈಲುಗಳನ್ನುಗುರಿಯಾಗಿಸಿ ದಾಳಿ ನಡೆಸುವ ಬಗ್ಗೆ ಉಗ್ರರು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಪಹಲ್ಗಾಮ್‌ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ, ಭಾರತೀಯ ಸೇನೆಯ ವಾಹನ ದಾಳಿ ಪ್ರಕರಣದಲ್ಲಿ ನಿಸಾರ್‌ ಮತ್ತು ಮುಷ್ತಾಕ್‌ ಅವರನ್ನು ವಿಚಾರಣೆ ನಡೆಸಿದ ನಂತರ ಇದು ತಿಳಿದು ಬಂದಿದೆ. ಅವರಿಬ್ಬರನ್ನೂ ಕೋಟ್‌ ಬಲ್ವಾಲ್‌ ಜೈಲಿನಲ್ಲಿ ಇರಿಸಲಾಗಿದೆ.

ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಡಿಜಿ ಸಿಐಎಸ್‌‍ಎಫ್‌, ಆರ್‌ಎಸ್‌‍ ಭಟ್ಟಿ ಅವರು ಭಾನುವಾರ ಶ್ರೀನಗರದಲ್ಲಿ ಭದ್ರತಾ ಗ್ರಿಡ್‌ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಜೈಲುಗಳಿಗೆ ಭದ್ರತೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಗಮನಾರ್ಹವಾಗಿ, ಸಿಐಎಸ್‌‍ಎಫ್‌ ಅಕ್ಟೋಬರ್‌ 2023 ರಲ್ಲಿ ಜಮು ಮತ್ತು ಕಾಶೀರ ಜೈಲುಗಳ ಭದ್ರತೆಯನ್ನು ವಹಿಸಿಕೊಂಡಿತ್ತು.

ಬೆದರಿಕೆಯ ಹಿನ್ನೆಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಈ ಸಭೆಯನ್ನು ನಡೆಸಲಾಗಿದೆ. ಜಮು ಮತ್ತು ಕಾಶೀರದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಅನೇಕ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಉಗ್ರರ ಮನೆಗಳನ್ನು ಸಹ ಧ್ವಂಸಗೊಳಿಸಲಾಗಿದೆ.

26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್‌ ಭಯೋತ್ಪಾದನಾ ತನಿಖೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇತ್ತೀಚೆಗೆ ಸೇನಾ ವಾಹನ ದಾಳಿ ಪ್ರಕರಣಕ್ಕೂ ಸಂಬಂಧಿಸಿದ ನಿಸಾರ್‌ ಮತ್ತು ಮುಷ್ತಾಕ್‌ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಗುಪ್ತಚರ ಮಾಹಿತಿಯ ನಂತರ, ಜೈಲುಗಳ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಗಳನ್ನು ಬಲಪಡಿಸಲಾಗಿದೆ. ಅಕ್ಟೋಬರ್‌ 2023 ರಲ್ಲಿ ಸಿಆರ್‌ ಪಿಎಫ್‌ ಜಮು ಮತ್ತು ಕಾಶೀರ ಜೈಲುಗಳ ಭದ್ರತೆಯನ್ನು ಸಿಐಎಸ್‌‍ಎಫ್‌ ವಹಿಸಿಕೊಂಡಿದೆ. ಏಪ್ರಿಲ್‌ 22ರಂದು ಜಮು ಕಾಶೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿರುವ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರನ್ನು ಹತ್ಯೆ ಮಾಡಿದ್ದರು. ಇದರ ಹೊಣೆಯನ್ನು ಲಷ್ಕರ್‌ ಎ ತೊ್ಬಾದ ಟಿಆರ್‌ಎಫ್‌ ಹೊತ್ತುಕೊಂಡಿತ್ತು. ಬಳಿಕ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾದ ನಂತರ ಹೇಳಿಕೆಯಿಂದ ಹಿಂದೆ ಸರಿದಿತ್ತು.

ಏಪ್ರಿಲ್‌ 22 ರಂದು ಪಹಲ್ಗಾಮ್‌ನ ಬೈಸರನ್‌ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನೇಪಾಳಿ ಪ್ರಜೆ ಸೇರಿದಂತೆ 26 ಜನರು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಏಪ್ರಿಲ್‌ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜಮು ಮತ್ತು ಕಾಶೀರ ಭೇಟಿಯ ಸಮಯದಲ್ಲಿ ಶ್ರೀನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿಯನ್ನು ಯೋಜಿಸಲಾಗಿತ್ತು.

ಪ್ರತಿಕೂಲ ಹವಾಮಾನದಿಂದಾಗಿ ಅವರ ಭೇಟಿಯನ್ನು ರದ್ದುಗೊಳಿಸಿದ ನಂತರ, ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ದಾಳಿಯನ್ನು ನಡೆಸಲು ಸಂಚು ರೂಪಿಸಿದ್ದರು.
ಶ್ರೀನಗರದಲ್ಲಿ ದಾಳಿ ನಡೆಸುವ ಬಗ್ಗೆ ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿದ್ದರೂ, ಪಹಲ್ಗಾಮ್‌ನಲ್ಲಿ ಸಂಭವನೀಯ ದಾಳಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ಪಹಲ್ಗಾಮ್‌ ದಾಳಿ ಬಳಿಕ ಎರಡೂ ರಾಷ್ಟ್ರಗಳ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾಗಿದ್ದು, ಪಾಕಿಸ್ತಾನ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದು, ಭಾರತೀಯ ಸೇನೆಯು ತ್ವರಿತವಾಗಿ ಪ್ರತೀಕಾರ ತೀರಿಸಿಕೊಂಡಿದೆ.

ಉಗ್ರರ ಅಡಗು ತಾಣದ ಮೇಲೆ ಭದ್ರತಾ ಪಡೆ ದಾಳಿ, ಸ್ಫೋಟಕ ವಶ

ಶ್ರೀನಗರ,ಮೇ5- ಪಹಲ್ಗಾಂವ್‌ ನರಮೇಧದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯದ್ಧದ ಕಾರ್ಮೋಡ ನಡುವೆಯೇ ಜಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಪೂಂಚ್‌ ಜಿಲ್ಲೆಯ ಭಯೋತ್ಪಾದಕರ ಅಡಗುತಾಣದಿಂದ ಐದು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಪಹಲ್ಗಾಮ್‌ನಲ್ಲಿ 26 ಜನರನ್ನು ಹತ್ಯೆಗೈದ ಭಯೋತ್ಪಾದಕರಿಗಾಗಿ ಭಾರೀ ಶೋಧದ ಮಧ್ಯೆ ಭದ್ರತಾ ಪಡೆಗಳು ಐದು ಸುಧಾರಿತ ಸ್ಫೋಟಕ ಸಾಧನಗಳನ್ನು ವಶಪಡಿಸಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ.

ಸೇನೆ ಮತ್ತು ಜಮು ಮತ್ತು ಕಾಶೀರ ಪೊಲೀಸರ ಜಂಟಿ ಶೋಧ ಕಾರ್ಯಾಚರಣೆಯ ವೇಳೆ ಪೂಂಚ್‌ನ ಸುರನ್‌ಕೋಟೆಯ ಅರಣ್ಯ ಪ್ರದೇಶದಲ್ಲಿ ಅಡಗುತಾಣವನ್ನು ಪತ್ತೆಹಚ್ಚಿದ್ದಾರೆ. ವಶಪಡಿಸಿಕೊಂಡ ಐಇಡಿಗಳಲ್ಲಿ ಮೂರು ಟಿಫಿನ್‌ ಬಾಕ್‌್ಸಗಳಲ್ಲಿ ಮತ್ತು ಎರಡು ಸ್ಟೀಲ್‌ ಬಕೆಟ್‌ಗಳಲ್ಲಿ ಅಡಗಿಸಿಟ್ಟಿದ್ದವು.

ಭದ್ರತಾ ಪಡೆಗಳು ಸ್ಥಳದಿಂದ ಸಂವಹನ ಸಾಧನಗಳು ಮತ್ತು ಇತರ ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.ಅಧಿಕಾರಿಗಳು ಕಣಿವೆಯಾದ್ಯಂತ ದೊಡ್ಡ ಪ್ರಮಾಣದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ, ಶಂಕಿತ ಅಡಗುತಾಣಗಳ ಮೇಲೆ ದಾಳಿ ಮಾಡಿದ್ದಾರೆ, ಭಯೋತ್ಪಾದಕರು ಬಳಸಿದ ಆಶ್ರಯಗಳನ್ನು ಕೆಡವಿದ್ದಾರೆ. ನೂರಾರು ಭಯೋತ್ಪಾದಕ ಸಹಚರರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಪಡೆಗಳು ತಿಳಿದಿರುವ ಸಹಾಯಕರು ಮತ್ತು ಭಯೋತ್ಪಾದಕರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಜಮು ಮತ್ತು ಕಾಶೀರದಾದ್ಯಂತ ಹಲವಾರು ಕಾರ್ಯಾಚರಣೆಗಳಲ್ಲಿ ಪೂಂಚ್‌ನ ಕಾರ್ಯಾಚರಣೆ ಸಹ ಒಂದು. ಭಯೋತ್ಪಾದನೆಯನ್ನು ಶಕ್ತಗೊಳಿಸುವ ಪರಿಸರ ವ್ಯವಸ್ಥೆಯನ್ನು ಕೆಡವಲು ಮತ್ತು ಪಹಲ್ಗಾಮ್‌ ದಾಳಿಯ ಹಿನ್ನೆಲೆಯಲ್ಲಿ ಸ್ಪಷ್ಟವಾದ ಪ್ರತಿಬಂಧಕ ಸಂದೇಶವನ್ನು ಕಳುಹಿಸಲು ಇದು ಸರಿಯಾದ ಸಮಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್‌ 22 ರಂದು, ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ ಬಳಿಯ ಜನಪ್ರಿಯ ಪ್ರವಾಸಿ ತಾಣವಾದ ಬೈಸರನ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು.

26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಅವರಲ್ಲಿ ಹೆಚ್ಚಿನವರು ಇತರ ರಾಜ್ಯಗಳ ಪ್ರವಾಸಿಗರು. ಈ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ, ಹಿಂಸಾಚಾರಕ್ಕೆ ಗಡಿಯಾಚೆಗಿನ ಪ್ರದೇಶ ಕುದಿಯುತ್ತಿದೆ.

ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತೀಕಾರ ತೀರಿಸುವುದಾಗಿ ಹೇಳಿದ್ದಾರೆ. ಹಂತಕರನ್ನು ಭೂಮಿಯ ಕೊನೆಯವರೆಗೂ ಹಿಂಬಾಲಿಸಲಾಗುತ್ತದೆ ಎಂದು ಅವರು ದಾಳಿಯ ನಂತರ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪಹಲ್ಗಾಮ್‌‍-ಶೈಲಿಯ ಹತ್ಯಾಕಾಂಡದ ಯಾವುದೇ ಪುನರಾವರ್ತನೆಯನ್ನು ತಡೆಗಟ್ಟುವತ್ತ ಗಮನಹರಿಸುವುದರೊಂದಿಗೆ ಭದ್ರತಾ ಪಡೆಗಳು ಗುಪ್ತಚರ ಸಂಗ್ರಹಣೆ ಮತ್ತು ನೆಲದ ಕಾರ್ಯಾಚರಣೆಗಳನ್ನು ಹೆಚ್ಚಿಸಿವೆ.

ಸುಹಾಸ್‌‍ಶೆಟ್ಟಿ ಹತ್ಯೆಗೆ ವಿದೇಶಿ ಹಣದ ನೆರವು..?

ಬೆಂಗಳೂರು,ಮೇ 5-ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್‌‍ ಶೆಟ್ಟಿ ಹತ್ಯೆಗೆ ವಿದೇಶದಿಂದ ಹಣ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮಂಗಳೂರಿನ ಬಜಪೆ ಠಾಣೆ ಪೊಲೀಸರು ಈಗಾಗಲೇ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದು, ಬಂಧಿತರಾಗಿರುವ 8 ಮಂದಿ ಆರೋಪಿಗಳ ವಿವಿಧ ಬ್ಯಾಂಕ್‌ಖಾತೆಗಳ ಪರಿಶೀಲನೆಗೆ ಮುಂದಾಗಿದ್ದಾರೆ.

ಸುಹಾಸ್‌‍ ಶೆಟ್ಟಿ ಹತ್ಯೆ ಹಿಂದೆ ಅನೇಕ ಕಾಣದ ಕೈಗಳ ಕೈವಾಡ ಶಂಕೆ ಹಿನೆ್ನಲೆಯಲ್ಲಿ ಹಣ ಸಹಾಯ ಮಾಡಿರುವ ಅನುಮಾನವು ವ್ಯಕ್ತವಾಗಿವೆ.ಕೊಲೆಯಾಗಿರುವ ಾಝಿಲ್‌ ಸಹೋದರ ಆದಿಲ್‌ ಆರೋಪಿಗಳಿಗೆ 5 ಲಕ್ಷ ರೂ. ಹಣ ಸುಪಾರಿ ಕೊಟ್ಟಿರುವುದಲ್ಲದೇ ವಿವಿಧ ಮೂಲಗಳಿಂದ ಆರೋಪಿಗಳಿಗೆ ಹಣ ಬಂದಿರುವ ಶಂಕೆ ವ್ಯಕ್ತವಾಗಿದೆ.

ಸುಹಾಸ್‌‍ಶೆಟ್ಟಿಯನ್ನು ಕೊಲೆ ಮಾಡಿದ ನಂತರ ಆರೋಪಿಗಳು ಪರಾರಿಯಾಗಲು ಯಾವ ರೀತಿ ವ್ಯವಸ್ಥೆ ಮಾಡಬೇಕು,ಪೊಲೀಸರು ಬಂಧಿಸಿದ ನಂತರ ಜಾಮೀನು ಹೇಗೆ ಕೊಡಿಸಬೇಕು ಎಂಬ ಬಗ್ಗೆ ಎಲ್ಲವೂ ಮೊದಲೇ ನಿರ್ಧಾರವಾಗಿತ್ತು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಮೂರು ತಿಂಗಳ ಹಿಂದೆಯೇ ಸ್ಕೆಚ್‌: ಹಿಂದೂ ಕಾರ್ಯಕರ್ತ ಸುಹಾಸ್‌‍ ಶೆಟ್ಟಿ ಕೊಲೆಗೆ ಆರೋಪಿಗಳು ಮೂರು ತಿಂಗಳ ಹಿಂದೆಯೇ ಸ್ಕೆಚ್‌ ಹಾಕಿದ್ದರು ಎಂಬುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಕಳೆದ ಜನವರಿಯಲ್ಲಿ ಸ್ಪಾನ್‌ ತಂಡಕ್ಕೆ ಆದಿಲ್‌ ಮೂರು ಲಕ್ಷ ಹಣ ಕೊಟ್ಟಿದ್ದನು.ಹಾಗಾಗಿ ಆ ಹಣದಿಂದ ಒಂದು ಪಿಕಪ್‌ ವಾಹನ ಮತ್ತು ಶಿಫ್ಟ್ ಕಾರನ್ನು ಬಾಡಿಗೆಗೆ ಹಂತಕರು ಪಡೆದುಕೊಂಡು ಆ ವಾಹನಗಳಿಂದಲೇ ಸುಹಾಸ್‌‍ಶೆಟ್ಟಿ ಕೊಲೆ ಮಾಡಲು ಸಂಚು ರೂಪಿಸಿದ್ದ ಬಗ್ಗೆ ವಿವರಗಳು ಲಭ್ಯವಾಗಿವೆ.

ಚಲನವಲನಗಳ ಮೇಲೆ ನಿಗಾ: ಸುಹಾಸ್‌‍ಶೆಟ್ಟಿಯ ಚಲನವಲನಗಳ ಮೇಲೆ ನಿಗಾ ಇಡಲು ಹಂತಕರು ಚಿಕ್ಕಮಗಳೂರಿನ ಇಬ್ಬರು ಹಿಂದು ಯುವಕರನ್ನು ನೇಮಿಸಿ ಅವರಿಂದ ಸುಹಾಸ್‌‍ಶೆಟ್ಟಿ ಯಾವ ಸಮಯದಲ್ಲಿ ಮನೆಯಿಂದ ಹೊರಗೆ ಬರುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂಬಿತ್ಯಾದಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದರು.

ಸುಹಾಸ್‌‍ ಶೆಟ್ಟಿಯನ್ನು ಕೊಲೆ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವಂತೆ ಈ ಇಬ್ಬರು ಯುವಕರು ನಿಗಾವಹಿಸಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.

ಒಟ್ಟಾರೆ ಸುಹಾಸ್‌‍ ಶೆಟ್ಟಿ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಹಂತಕರು ನಡು ರಸ್ತೆಯಲ್ಲೇ ವಾಹನದಿಂದ ಆತನ ಕಾರನ್ನು ಗುದ್ದಿಸಿ ತಲ್ವಾರ್‌ಗಳಿಂದ ಮನ ಬಂದಂತೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.ಆದಿಲ್‌ ಕೊಟ್ಟ ಹಣದಲ್ಲಿ ಆರೋಪಿಗಳು ಪಾರ್ಟಿ ಮಾಡಿದ್ದಾರೆ ಎಂಬುವುದು ಸಹ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.ಈ ಪ್ರಕರಣದಲ್ಲಿ ಈಗಾಗಲೇ ಮಂಗಳೂರು ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ವಿಶೇಷ ತಂಡಗಳು ಶೋಧ ಮುಂದುವರೆಸಿದೆ.

ತಂದೆ ಹತ್ಯೆಯ ಪ್ರತೀಕಾರಕ್ಕೆ ಮಾವನ ಕೊಲೆ

ಬೆಂಗಳೂರು,ಮೇ 5- ತನ್ನ ತಂದೆಯ ಕೊಲೆಗೆ ಪ್ರತೀಕಾರವಾಗಿ ಮಾವನನ್ನೇ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಟಿನ್‌ ಫ್ಯಾಕ್ಟರಿ ಸಮೀಪದ ನಿವಾಸಿ ಸಿರಾಜುದ್ದೀನ್‌ (32) ಕೊಲೆಯಾದವರು. ಕೊಲೆ ಆರೋಪಿಯು ಸಿರಾಜುದ್ದೀನ್‌ನ ಅಕ್ಕನ ಮಗ.

ಈ ಹಿಂದೆ ಸಿರಾಜುದ್ದೀನ್‌ ಅವರು ಗೋವಿಂದಪುರದಲ್ಲಿ ವಾಸವಾಗಿದ್ದರು. ಮೂರ್ನಾಲ್ಕು ವರ್ಷಗಳಿಂದ ಟಿನ್‌ ್ಯಾಕ್ಟರಿ ಬಳಿ ಬಂದು ವಾಸವಾಗಿದ್ದರು. ಆರೋಪಿಯ ತಂದೆಯನ್ನು ಸಿರಾಜುದ್ದೀನ್‌ ಕೊಲೆ ಮಾಡಿದ್ದನು.ಅಂದಿನಿಂದ ಪ್ರತೀಕಾರಕ್ಕಾಗಿ ಆರೋಪಿ ಹೊಂಚು ಹಾಕುತ್ತಿದ್ದನು.

ನಿನ್ನೆ ರಾತ್ರಿ 7.30 ರ ಸುಮಾರಿನಲ್ಲಿ ಸಿರಾಜುದ್ದೀನ್‌ ಟಿನ್‌ ಫ್ಯಾಕ್ಟರಿ ಬಳಿ ನಡೆದು ಹೋಗುತ್ತಿದ್ದಾಗ ಆರೋಪಿಯು ಏಕಾಏಕಿ ಅಡ್ಡಗಟ್ಟಿ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಗಂಭೀರ ಗಾಯಗೊಂಡು ನರಳಾಡುತ್ತಿದ್ದ ಸಿರಾಜುದ್ದೀನ್‌ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಲಿಸದೆ ತಡರಾತ್ರಿ ಮೃತಪಟ್ಟಿದ್ದಾರೆ.ರಾಮಮೂರ್ತಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆ ಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.

ನಾಳೆ ರಾಜೀವ್ ಗಾಂಧಿ ವಿವಿ ಘಟಿಕೋತ್ಸವ : 93 ವಿದ್ಯಾರ್ಥಿಗಳಿಗೆ 109 ಚಿನ್ನದ ಪದಕ ಪ್ರದಾನ

ಬೆಂಗಳೂರು, ಮೇ 5-ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ 27 ನೇ ವಾರ್ಷಿಕ ಘಟಿಕೋತ್ಸವ ನಾಳೆ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆಯಲಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರು ಗಣ್ಯರಿಗೆ ಡಾಕ್ಟರ್ ಆಫ್ ಸೈನ್ಸ್ ಪ್ರದಾನ ಮಾಡಲಾಗುತ್ತದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಭಗವಾನ್ ಬಿ.ಸಿ. ಅವರು, ಘಟಿಕೋತ್ಸವದಲ್ಲಿ ಡಾ.ಹೊಂಬೇಗೌಡ ಶರತ್‌ಚಂದ್ರ, ಡಾ.ಗಿರೀಶ್‌ ರಾವ್ ಹಾಗೂ ಡಾ.ಜಿ.ಟಿ.ಸುಭಾಸ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪ್ರದಾನ ಮಾಡಲಾಗುತ್ತದೆ ಎಂದರು.

ನಾಳೆ ಬೆಳಿಗ್ಗೆ 11.30 ಗಂಟೆಗೆ ಪ್ರಾರಂಭವಾಗುವ ಘಟಿಕೋತ್ಸವದ ಅಧ್ಯಕ್ಷತೆಯನ್ನ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್ ವಹಿಸಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಆರ್. ಪಾಟೀಲ್, ಅಜೀಂ ಪ್ರೇಮ್‌ಜಿ ಫೌಂಡೇಶನ್ ಅಧ್ಯಕ್ಷ ಉದ್ಯಮಿ ಅಜೀಂ ಪ್ರೇಮ್‌ಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಚಿನ್ನದ ಪದಕ: ಬೆಂಗಳೂರಿನ ಪಿಇಎಸ್ ಫಾರ್ಮಸಿ ಕಾಲೇಜಿನ ಡಾ.ಗಿರೀಶ್ ಬಿ.ಎಸ್.ಅವರಿಗೆ 6 ಚಿನ್ನದ ಪದಕಗಳು, ಉಜಿರೆಯ ಡಿ.ಎಂ.ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಡಾ. ಗನ್ಯಾಶ್ರೀ ಅವರಿಗೆ 4 ಚಿನ್ನದ ಪದಕಗಳು, ಶಿವಮೊಗ್ಗದ ಶರಾವತಿ ದಂತ ಕಾಲೇಜಿನ ಡಾ. ಪ್ರಕೃತಿ ಸಿ ಪಟೇಲ್ ಅವರಿಗೆ 3 ಚಿನ್ನದ ಪದಕಗಳು ಹಾಗೂ 4 ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಅಲೀನ ಜೋಸ್ ಅವರಿಗೆ 3 ಚಿನ್ನದ ಪದಕಗಳು, ಡಾ.ನಮಿತಾ ಅವರಿಗೆ 2 ಚಿನ್ನದ ಪದಕಗಳು ಮತ್ತು 2 ನಗದು ಬಹುಮಾನಗಳು, ಹರ್ಷಿತಾ ಎಂ., ಅಶ್ಮಿತಾ ಶ್ರೇಷ್ಠ, ರಾಚೆಲ್ ಮೋರೆನ್ ಅವರಿಗೆ ತಲಾ 2 ಚಿನ್ನದ ಪದಕಗಳನ್ನು ನೀಡಲಾಗುವುದು. ಒಟ್ಟು 93 ವಿದ್ಯಾರ್ಥಿಗಳು 109 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಚಿನ್ನದ ಪದಕವು 2 2ಕ್ಯಾರೆಟ್ ಬಂಗಾರವುಳ್ಳ 5 ಗ್ರಾಂ ತೂಕ ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

ಒಟ್ಟು 63,982 ಅಭ್ಯರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಈ ಪೈಕಿ 82 ಪಿಎಚ್ ಡಿ.265 ಸೂಪರ್ ಸ್ಪೆಶಾಲಿಟಿ, 8,588 ಸ್ನಾತಕೋತ್ತರ ಪದವಿ, 6 ಸ್ನಾತಕೋತ್ತರ ಡಿಪ್ಲೊಮಾ ಪದವಿ, 515 ಫೆಲೋಷಿಪ್ ಕೋರ್ಸ್, 9 ಸರ್ಟಿಫಿಕೇಟ್ ಕೋರ್ಸ್, 54,517 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ವಿಶ್ವವಿದ್ಯಾನಿಲಯದ ಒಟ್ಟಾರೆ ಫಲಿತಾಂಶ ಶೇ.87.49 ರಷ್ಟಾಗಿದೆ ಎಂದರು.ಶೇ.30ರಷ್ಟು ಕಾಮಗಾರಿ ಪೂರ್ಣ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವನ್ನು 2007ರ ಗೆಜೆಟ್‌ನ ಪ್ರಕಾರ ರಾಮನಗರದಲ್ಲಿ ಸ್ಥಾಪಿಸಲಾಗುತ್ತಿದೆ.

ಸಾಕಷ್ಟು ಅಡೆತಡೆಗಳ ಬಳಿಕ ಮತ್ತೆ ಈಗ ಕಾಮಗಾರಿ ಆರಂಭವಾಗಿದ್ದು, ಶೇ.30ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ರಾಮನಗರದ ಅರ್ಚಕರಹಳ್ಳಿಯಲ್ಲಿ 215 ಎಕರೆ ಪ್ರದೇಶದಲ್ಲಿ ವಿವಿಯ ಕಾಮಗಾರಿ ನಡೆಯುತ್ತಿದೆ. 2026ರ ಮಾರ್ಚ್ 26ರ ವೇಳೆಗೆ ಮೆಡಿಕಲ್ ಕಾಲೇಜು ಹಾಗೂ ಆಡಳಿತ ಮಂಡಳಿ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂಬ ಮಾಹಿತಿ ನೀಡಲಾಗಿದೆ.

600 ಕೋಟಿ ರೂ. ಅನುದಾನದಲ್ಲಿ ಈಗಾಗಲೇ 300 ಕೋಟಿ ರೂ.ನೀಡಲಾಗಿದೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.ಕಾಮಗಾರಿ ಪೂರ್ಣಗೊಂಡ ಬಳಿಕ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯವನ್ನು ರಾಮನಗರಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದರು.