Home Blog Page 423

ಜನಗಣತಿ ಜೊತೆ ಜಾತಿಗಣತಿಗೆ ಪ್ರಿಯಾಂಕಾ ಗಾಂಧಿ ಸ್ವಾಗತ

ವಯನಾಡ್, ಮೇ 5: ಮುಂದಿನ ಜನಗಣತಿಯಲ್ಲಿ ಜಾತಿ ಗಣತಿಯನ್ನು ಪಾರದರ್ಶಕವಾಗಿ ಸೇರಿಸಲಾಗುವುದು ಎಂಬ ಕೇಂದ್ರದ ಇತ್ತೀಚಿನ ಘೋಷಣೆಯನ್ನು ವಯನಾಡ್ ನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸ್ವಾಗತಿಸಿದ್ದಾರೆ.

ತಮ್ಮ ಕ್ಷೇತ್ರಕ್ಕೆ ಎರಡು ದಿನಗಳ ಭೇಟಿಯಲ್ಲಿರುವ ಕಾಂಗ್ರೆಸ್ ನಾಯಕಿ ಕೇಂದ್ರ ಸರ್ಕಾರದ ಈ ನಿರ್ಧಾರವು ಬಲವಾದ ಸಾರ್ವಜನಿಕ ಬೇಡಿಕೆ ಮತ್ತು ಈ ಉದ್ದೇಶವನ್ನು ಬೆಂಬಲಿಸಿದವರ ನಿರಂತರ ಪ್ರಯತ್ನಗಳನ್ನು ಅನುಸರಿಸಿದೆ ಎಂದು ಹೇಳಿದರು.

ನನ್ನ ಸಹೋದರ (ರಾಹುಲ್ ಗಾಂಧಿ) ಕಳೆದ ವರ್ಷ ಈ ವಿಷಯವನ್ನು ಕೈಗೆತ್ತಿಕೊಂಡರು ಮತ್ತು ಬಿಜೆಪಿ ಇದನ್ನು ಬಲವಾಗಿ ವಿರೋಧಿಸುತ್ತಿದ್ದರೂ ಅದರ ಪರವಾಗಿ ಮಾತನಾಡುತ್ತಲೇ ಇದ್ದರು ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಈ ವಿಷಯದ ಬಗ್ಗೆ ದೃಢವಾಗಿ ನಿಂತಿದ್ದಕ್ಕಾಗಿ ಸಂಸತ್ತಿನಲ್ಲಿ ಅವರನ್ನು ಅಪಹಾಸ್ಯ ಮಾಡಲಾಯಿತು ಎಂದು ಅವರು ಹೇಳಿದರು. ದೇಶಾದ್ಯಂತದ ಜನರ ಒತ್ತಡವು ವ್ಯತ್ಯಾಸವನ್ನುಂಟು ಮಾಡಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ನಿಖರವಾದ ದತ್ತಾಂಶವನ್ನು ಸಂಗ್ರಹಿಸುವ ಮೂಲಕ ಸರ್ಕಾರವು ಜಾತಿ ಸಮೀಕ್ಷೆಯನ್ನು ಸರಿಯಾಗಿ ನಡೆಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ

ಬೆಂಗಳೂರು,ಮೇ5 – ಕರಾವಳಿ ಪ್ರದೇಶದಲ್ಲಿ ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ಪೊಲೀಸರ ನಡೆ, ಸರ್ಕಾರದ ಧೋರಣೆ ಇದೇ ರೀತಿ ಮುಂದುವರೆದರೆ ಬಿಜೆಪಿ ಸರ್ಕಾರದ ಜನಪರವಾದ ಹೋರಾಟ ಮತ್ತಷ್ಟು ತೀವ್ರಸ್ವರೂಪ ಪಡೆಯಲಿದೆ ಎಂದು ಸರ್ಕಾರಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ನೇರ ಎಚ್ಚರಿಕೆ ಕೊಟ್ಟಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನ ಹಾಗೂ ಬ್ರಹ್ಮಕಲಶೋತ್ಸವದ ಕುರಿತು ಭಾವುಕವಾಗಿ ಮಾತನಾಡಿರುವುದನ್ನೇ ಆಧರಿಸಿ ನೀಡಲಾಗಿರುವ ದೂರಿಗೆ ಎಫ್‌ಐಆರ್ ದಾಖಲಿಸಲಾಗಿದೆ.

ಈ ಮೂಲಕ ಸರ್ಕಾರ ಯಾರ ಪರ ಇದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ವಿಜಯೇಂದ್ರ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಡಿನ ಕರಾವಳಿ ಪ್ರದೇಶದಲ್ಲಿ ಹಿಂದೂಗಳಿಗೆ ಆತಂಕ, ದುಗುಡ ತಪ್ಪುತ್ತಿಲ್ಲ.

ಮಂಗಳೂರಿನ ನಮ್ಮ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕಗ್ಗೋಲೆಯ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನು ದಿಗ್ಧಮೆಗೊಳಿಸಿದೆ, ರಾಜ್ಯದ ಜನರು ಮತೀಯ ಶಕ್ತಿಗಳ ಅಟ್ಟಹಾಸದಿಂದ ಆತಂಕದಲ್ಲಿದ್ದಾರೆ. ಇದರ ನಡುವೆಯೇ ಮತ್ತೊಬ್ಬ ಹಿಂದೂ ಕಾರ್ಯಕರ್ತ ಭರತ್ ಕುಮೇಲು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ನೈತಿಕ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತೆಗೆದುಕೊಳ್ಳಲು ಯಾವುದೇ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ, ಗೃಹ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗುವಂತೆ ಕಾಣದ ಪ್ರಭಾವಿ ಕೈ ಗಳು ಕೆಲಸ ಮಾಡುತ್ತಿರುವುದು ಸುಹಾಸ್ ಕೊಲೆ ಹಾಗೂ ನಂತರದ ಬೆದರಿಕೆಗಳ ಪ್ರಕರಣಗಳಿಂದ ಸ್ಪಷ್ಟವಾಗುತ್ತಿದೆ ಎಂದು ವಿಜಯೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹೊಂಡದಲ್ಲಿ ಮುಳುಗಿ ಮೂವರು ಬಾಲಕರ ದುರ್ಮರಣ

ಯಾದಗಿರಿ,ಮೇ.5 : ನೀರು ಕುಡಿಯಲು ಹೋಗಿದ್ದ ಮೂವರು ಬಾಲಕರು ಹೊಂಡದಲ್ಲಿ ಮುಳುಗಿ ದುರ್ಮರಣ ಹೊಂದಿರುವ ಘಟನೆ ತಾಲೂಕಿನ ಅಚೊಲಾ ತಾಂಡಾದಲ್ಲಿ ನಡೆದಿದೆ. ಕುರಿ ಕಾಯಲು ಹೋಗಿದ್ದ ಬಾಲಕರು ಬೇಸಿಗೆ ಹಿನ್ನಲೆ ನೀರಿನ ದಾಹ ತಣಿಸಿಕೊಳ್ಳಲು ಕೃಷಿ ಹೊಂಡದ ಬಳಿ ಹೋಗಿದ್ದರು ಈ ವೇಳೆ ಕಾಲು ಜಾರಿ ಬಿದ್ದು ನೀರು ಪಾಲು ಆಗಿರಬಹುದು ಎನ್ನಲಾಗಿದೆ.

ಅಚೊಲಾ ತಾಂಡಾದ ನಿವಾಸಿಗಳಾದ ಅಮರ್(12), ಜಯ(14), ಕೃಷ್ಣ 10) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಯಾದಗಿರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಮಕ್ಕಳ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ರಫೆಲ್ ಯುದ್ಧ ವಿಮಾನವನ್ನು ಆಟಿಕೆಗೆ ಹೋಲಿಸಿದ ಕಾಂಗ್ರೆಸ್ ನಾಯಕನಿಗೆ ಹಿಗ್ಗಾಮುಗ್ಗಾ ತರಾಟೆ

ನವದೆಹಲಿ, ಮೇ 5: ಭಾರತದ ಪ್ರಬಲ ಆಸ್ತವಾಗಿರುವ ರಫೇಲ್ ಯುದ್ಧ ವಿಮಾನವನ್ನು ಆಟಿಕೆ ಎಂದು ಕರೆಯುವ ಮೂಲಕ ಕಾಂಗ್ರೆಸ್ ನಾಯಕ ಅಜಯ್ ರಾಯ್ ಉದ್ಧಟತನ ಪ್ರದರ್ಶಿಸಿದ್ದಾರೆ.

ಅಜಯ್ ರಾಯ್ ರಫೇಲ್ ಯುದ್ಧ ವಿಮಾನವನ್ನು ಆಟಿಕೆ ಎಂದು ಲೇವಡಿ ಮಾಡಿ. ಅದರ ಮೇಲೆ ನಿಂಬೆ ಮತ್ತು ಮೆಣಸಿನಕಾಯಿ ನೇತುಹಾಕುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು.
ಕಾಂಗ್ರೆಸ್ ಪಕ್ಷವು ಪಾಕಿಸ್ತಾನಿ ಭಯೋತ್ಪಾದನೆಯ ಅಧಿಕೃತ ವಕ್ತಾರ, ರಾಹುಲ್ ಗಾಂಧಿ ಮುಂದೆ ಬಂದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ.

ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದಾಗಲೆಲ್ಲಾ, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ಬಂದು ಪಾಕಿಸ್ತಾನವನ್ನು ಬೆಂಬಲಿಸಿ ಮಾತನಾಡುತ್ತಾರೆ ಎಂದು ಬಿಜೆಪಿ ಲೇವಡಿ ಮಾಡಿದೆ. 24 ಗಂಟೆಗಳ ಹಿಂದೆ ಚರಣ್‌ ಜಿತ್ ಸಿಂಗ್ ಚನ್ನಿ ಸರ್ಜಿಕಲ್ ಸೈಕ್‌ಗೆ ಪುರಾವೆ ಕೇಳುತ್ತಿದ್ದರು.

ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು. ನಂತರ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಯುಪಿ ಕಾಂಗ್ರೆಸ್ ಅಧ್ಯಕ್ಷರು ನಮ್ಮ ಸಶಸ್ತ್ರ ಪಡೆಗಳನ್ನು ಅಣಕಿಸಿ ಆಟಿಕೆ ವಿಮಾನವನ್ನು ತೋರಿಸುತ್ತಾರೆ ಎಂದು ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಹೇಳಿದ್ದಾರೆ.

ಪಹಲ್ಲಾಮ್ ಭಯೋತ್ಪಾದಕ ದಾಳಿಯ ಆರೋಪಿಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಕೇವಲ ದೊಡ್ಡ ಮಾತುಗಳನ್ನಾಡಿದೆ ಎಂದು ಅಜಯ್ ರಾಯ್ ಭಾನುವಾರ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಸರ್ಕಾರ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ, ಆದರೆ ಅವು ಹ್ಯಾಂಗರ್‌ನಲ್ಲಿ ಬಿದ್ದಿವೆ ಮತ್ತು ಅವುಗಳ ಮೇಲೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳು ನೇತಾಡುತ್ತಿವೆ ಎಂದ ರಾಯ್ ರಫೇಲ್ ಎಂದು ಬರೆದು ನಿಂಬೆ-ಮೆಣಸಿನಕಾಯಿ ತೂಗು ಹಾಕಿರುವ ಆಟಿಕೆ ವಿಮಾನವನ್ನು ತೋರಿಸಿದರು.

ಶಹಜಾದ್ ಪೂನಾವಾಲಾ ಮಾತನಾಡಿ, ರಫೇಲ್ ಆಟಿಕೆ ವಿಮಾನದ ಮೂಲಕ ಕಾಂಗ್ರೆಸ್ ಪಕ್ಷವು ಭಾರತದ ಸಶಸ್ತ್ರ ಪಡೆಗಳ ನೈತಿಕ ನೈರ್ಯದ ಜೊತೆ ಆಟವಾಡುತ್ತಿದೆ ಎಂದು ಹೇಳಿದರು. ರಾಹುಲ್ ಗಾಂಧಿಯವರ ಆಜ್ಞೆಯ ಮೇರೆಗೆ ಇದನ್ನು ಮಾಡಲಾಗುತ್ತಿದೆ.

ಅಜಯ್ ರಾಯ್ ಅವರನ್ನು ರಾಹುಲ್ ಗಾಂಧಿಯ ಅತ್ಯಂತ ಆಪ್ತ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಸರ್ವಪಕ್ಷ ಸಭೆಯಲ್ಲಿ ರಾಹುಲ್ ಗಾಂಧಿ ಅವರು ದೇಶ ಮತ್ತು ಸೈನ್ಯದೊಂದಿಗೆ ನಿಲ್ಲುವುದಾಗಿ ಹೇಳುತ್ತಾರೆ. ಸರ್ವಪಕ್ಷ ಸಭೆಯಿಂದ ಹೊರಬಂದ ತಕ್ಷಣ, ವರಸೆ ಬದಲಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ದೇಶದ ಜನ ಬಯಸಿದ್ದೆಲ್ಲವೂ ಪ್ರಧಾನಿ ಮೋದಿ ನಾಯಕತ್ವದಲ್ಲಿ ಆಗುತ್ತದೆ : ರಾಜನಾಥ್ ಸಿಂಗ್

ನವದೆಹಲಿ – ದೇಶದ ಜನ ಬಯಸಿದ್ದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಆಗುತ್ತದೆ. ಅವರ ನೇತೃತ್ವದಲ್ಲಿ ಪಹಲ್ಗಾಮ್ ದಾಳಿಗೆ ಉತ್ತರವಾಗಿ ಜನ ಬಯಸಿದಂತೆ ಖಂಡಿತವಾಗಿಯೂ ನಡೆಯುತ್ತದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಯುದ್ಧ ಸುಳಿವು ನೀಡಿದ್ದಾರೆ.

ಏಪ್ರಿಲ್ 22ರಂದು ಪಹಲ್ಯಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಗಮನದಲ್ಲಿಟ್ಟುಕೊಂಡು, ಭಾರತವು ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿರುವ ಸಮಯದಲ್ಲಿ ಅವರ ಹೇಳಿಕೆ ಬಂದಿದೆ. ನವದೆಹಲಿಯಲ್ಲಿ ನಡೆದ ಸಂಸ್ಕೃತಿ ಜಾಗರಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿ ನಡೆಸಿದ ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡುವ ಭಾರತದ ದೃಢಸಂಕಲ್ಪದ ಬಗ್ಗೆ ಒತ್ತಿ ಹೇಳಿದರು.

ಭಾರತದ ಮೇಲೆ ಕೆಟ್ಟ ಕಣ್ಣು ಹಾಕುವವರಿಗೆ ಸೂಕ್ತ ಉತ್ತರ ನೀಡುವುದು ಮತ್ತು ಸಶಸ್ತ್ರ ಪಡೆಗಳೊಂದಿಗೆ ಕೆಲಸ ಮಾಡುವುದು ತಮ್ಮ ಜವಾಬ್ದಾರಿ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ನೀತಿ ಹಾಗೂ ಪರಿಶ್ರಮ, ಕ್ಷಮತೆ ಮತ್ತು ದೃಢ ಸಂಕಲ್ಪದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಅವರು ತಮ್ಮ ಜೀವನದಲ್ಲಿ ಅಪಾಯಗಳನ್ನು ಸ್ವೀಕರಿಸಲು ಕಲಿತ ರೀತಿ ನಿಮಗೆಲ್ಲ ಗೊತ್ತು. ಹಾಗಾಗಿ, ಪ್ರಧಾನಿ ಮೋದಿ ನೇತೃತ್ವದಲ್ಲಿ ನೀವು ಏನನ್ನು ಬಯಸಿದ್ದೀರೋ, ಅದು ಖಂಡಿತವಾಗಿಯೂ ನೆರವೇರುತ್ತದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ ತಿಳಿಸಿದರು.

ರಕ್ಷಣಾ ಸಚಿವನಾಗಿ ನನ್ನ ಸೈನಿಕರೊಂದಿಗೆ ನಿಕಟವಾಗಿ ಕೆಲಸ ಮಾಡುವುದು ಮತ್ತು ದೇಶದ ಗಡಿಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ನಮ್ಮ ದೇಶದ ಮೇಲೆ ದುಷ್ಟ ಉದ್ದೇಶ ಹೊಂದಿರುವವರಿಗೆ ತಕ್ಕ ಉತ್ತರ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಸಶಸ್ತ್ರ ಪಡೆಗಳೊಂದಿಗೆ ಕೈಜೋಡಿಸುವುದು ನನ್ನ ಜವಾಬ್ದಾರಿ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ದ ಭಾರತದ ಪ್ರತೀಕಾರದ ಕ್ರಮದ ವಿಧಾನ, ಗುರಿ ಮತ್ತು ಸಮಯವನ್ನು ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ರಕ್ಷಣಾ ಅಧಿಕಾರಿಗಳಿಗೆ ತಿಳಿಸಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಮೂರು ಸೇವೆಗಳ ಮುಖ್ಯಸ್ಥರು ಸೇರಿದಂತೆ ಉನ್ನತ ರಕ್ಷಣಾ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದರು. ಸಭೆಯಲ್ಲಿ ಮೋದಿ ಭಯೋತ್ಪಾದನೆಗೆ ಸೂಕ್ತ ಉತ್ತರ ನೀಡುವುದು ನಮ್ಮ ರಾಷ್ಟ್ರೀಯ ಸಂಕಲ್ಪ ಎಂದು ಹೇಳಿದರು. ಸಶಸ್ತ್ರ ಪಡೆಗಳ ಸಾಮರ್ಥ್ಯದ ಬಗ್ಗೆ ಪ್ರಧಾನಿಯವರು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದರು.

ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಲಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಗೆ ಕಾರಣರಾದ ಭಯೋತ್ಪಾದಕರು ಮತ್ತು ಅದರ ಹಿಂದಿರುವ ರೂವಾರಿಗಳು ಅವರ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಭಯೋತ್ಪಾದನೆಯ ಉಳಿದ ಭದ್ರಕೋಟೆಗಳನ್ನು ನಿರ್ಮೂಲನೆ ಮಾಡುವ ಸಮಯ ಬಂದಿದೆ ಮತ್ತು 140 ಕೋಟಿ ಭಾರತೀಯರ ಇಚ್ಛಾಶಕ್ತಿ ಈಗ ಭಯೋತ್ಪಾದನೆಯ ಅಪರಾಧಿಗಳ ಬೆನ್ನೆಲುಬು ಮುರಿಯಲು ಸಿದ್ದವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಭರವಸೆ ನೀಡಿದ್ದರು.

ಕಳೆದ ಹತ್ತು ದಿನಗಳಿಂದ ಐಎಲ್‌ಎ ಅಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ. ಭದ್ರತಾ ಪಡೆಗಳು ಪ್ರತ್ಯುತ್ತರವಾಗಿ ಪಾಕ್ ಸೇನೆ ಮೇಲೆ ಗುಂಡಿನ ದಾಳಿ ನಡೆಸಿವೆ. ಈಗಾಗಲೇ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರ ಹಾಕಲಾಗುತ್ತಿದೆ. ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿದು ಪಾಕಿಸ್ತಾನಕ್ಕೆ ಭಾರತ ದೊಡ್ಡ ಶಾಕ್ ನೀಡಿದೆ.

ಭಾರತೀಯ ಬಂದರುಗಳಲ್ಲಿ ಪಾಕಿಸ್ತಾನದ ಹಡಗುಗಳಿಗೆ ನಿರ್ಬಂಧ ಹೇರಲಾಗಿದೆ. ಅಷ್ಟೇ ಅಲ್ಲದೆ ಆಟ್ಟಾರಿ ವಾಘಾ ಗಡಿಯನ್ನು ಮುಚ್ಚಿದ್ದು, ಪಾಕಿಸ್ತಾನದಿಂದ ಆಮದಾಗುವ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ಭಾರತೀಯ ಅಂಚೆ ಸೇವೆಯನ್ನು ಪಾಕಿಸ್ತಾನದಲ್ಲಿ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.

ಪೆಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿಯನ್ನು ಟ್ರೋಲ್ ಮಾಡುತ್ತಿರುವುದಕ್ಕೆ ಖಂಡನೆ

ನವದೆಹಲಿ,ಮೇ5 – ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಕಳೆದ ಏಪ್ರಿಲ್ 22 ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 26 ಪ್ರವಾಸಿಗರಲ್ಲಿ ನೌಕಾ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂತಿ ನರ್ವಾಲ್ ಅವರನ್ನು ಕೆಲವರು ಸಾಮಾಜಿಕ ಜಾಲ ತಾಣದಲ್ಲಿ ನಿರಂತರ ಟ್ರೋಲ್ ಮಾಡುತ್ತಿಬರುವುದನ್ನು ರಾಷ್ಟ್ರೀಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ.

ಕಳೆದ ವಾರ ತನ್ನ ಪತಿಯ ಅಂತಿಮ ವಿಧಿಗಳನ್ನು ಅನುಸರಿಸಿ, ಪಹಾಮ್‌ನಲ್ಲಿ ನಡೆದ ಬರ್ಬರ ಭಯೋತ್ಪಾದಕ ದಾಳಿಯ ಪರಿಣಾಮದಿಂದ ರಾಷ್ಟ್ರವು ಇನ್ನೂ ತತ್ತರಿಸುತ್ತಿರುವುದರಿಂದ, ಮುಸ್ಲಿಮರು ಅಥವಾ ಕಾಶ್ಮೀರಿಗಳನ್ನು ಗುರಿಯಾಗಿಸಿಕೊಳ್ಳಬೇಡಿ ಎಂದು ಹಿಮಾಂತಿ ರಾಷ್ಟ್ರಕ್ಕೆ ಭಾವನಾತ್ಮಕ ಮನವಿ ಮಾಡಿದ್ದರು. ಅವರ ಹೇಳಿಕೆಗಳ ವ್ಯಾಪಕವಾಗಿ ಟ್ರೋಲ್ ಗುರಿಯಾಗಿರುವ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಮರದೃಷ್ಟಕರ ಎಂದು ಖಂಡನೆಯನ್ನು ವ್ಯಕ್ತಪಡಿಸಿದೆ.

ಈ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ತನ್ನ ಅಧಿಕೃತ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಲೆಪ್ಟಿನೆಂಟ್ ವಿನಯ್ ನರ್ವಾಲ್ ಅವರ ಮರಣದ ನಂತರ, ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗುತ್ತಿರುವ ರೀತಿ ಅತ್ಯಂತ ಖಂಡನೀಯ ಮತ್ತು ದುರದೃಷ್ಟಕರವಾಗಿದೆ. ಮಹಿಳೆಯ ಸೈದ್ಧಾಂತಿಕ ಅಭಿವ್ಯಕ್ತಿ ಅಥವಾ ವೈಯಕ್ತಿಕ ಜೀವನದ ಆಧಾರದ ಮೇಲೆ ಮಹಿಳೆಯನ್ನು ಟ್ರೋಲ್ ಮಾಡುವುದು ಸರಿಯಲ್ಲ ಎಂದು ಆಯೋಗವು ಅಸಮಾಧಾನ ಹೊರಹಾಕಿದೆ.

ಹಿಮಾಂತಿ ನರ್ವಾಲ್ ಅವರ ಟೀಕೆಗಳನ್ನು ಅನೇಕ ಜನರು ಸ್ವೀಕರಿಸದಿದ್ದರೂ, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದು ಸಾಂವಿಧಾನಿಕ ಮಿತಿಗಳು ಮತ್ತು ನಾಗರಿಕ ಸಂವಾದದಲ್ಲಿ ಉಳಿಯಬೇಕು ಎಂದು ಹೇಳಿದೆ. ಪ್ರತಿ ಮಹಿಳೆಯ ಘನತೆ ಮತ್ತು ಗೌರವವು ಮೌಲ್ಯಯುತವಾಗಿದೆ ಎಂದು ಅದು ಪ್ರತಿಪಾದಿಸಿದೆ.

ಜಮ್ಮುಕಾಶ್ಮೀರದ ಪಹಲ್ಯಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಅನೇಕ ನಾಗರಿಕರು ಕೊಲ್ಲಲ್ಪಟ್ಟರು. ಇದೇ ವೇಳೆ ವೇಳೆ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರನ್ನು ಧರ್ಮವನ್ನು ಕೇಳಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಈ ದಾಳಿ ಇಡೀ ದೇಶಕ್ಕೆ ನೋವುಂಟುಮಾಡಿದೆ ಮತ್ತು ಇಡೀ ದೇಶವೇ ಆಕ್ರೋಶಗೊಂಡಿದೆ.

ಈ ದಾಳಿ ಇಡೀ ದೇಶಕ್ಕೆ ನೋವುಂಟುಮಾಡಿದೆ ಮತ್ತು ಇಡೀ ದೇಶವೇ ಆಕ್ರೋಶಗೊಂಡಿದೆ. ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ನಿಧನದ ಬಳಿಕ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸುತ್ತಿರುವ ರೀತಿ ಅತ್ಯಂತ ಖಂಡನೀಯ ಮತ್ತು ದುರದೃಷ್ಟಕರ. ಮಹಿಳೆಯ ಅಭಿಪ್ರಾಯಗಳಿಗಾಗಿ ಅಥವಾ ಅವರ ವೈಯಕ್ತಿಕ ಜೀವನದ ಬಗ್ಗೆ ಟ್ರೋಲ್ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಆಕ್ಷೇಪಿಸಿದೆ.

ಯಾವುದೇ ಭಿನ್ನಾಭಿಪ್ರಾಯವನ್ನು ಯಾವಾಗಲೂ ಸಭ್ಯವಾಗಿ ಮತ್ತು ಸಾಂವಿಧಾನಿಕ ಮಿತಿಯೊಳಗೆ ವ್ಯಕ್ತಪಡಿಸಬೇಕು. ರಾಷ್ಟ್ರೀಯ ಮಹಿಳಾ ಆಯೋಗವು ಪ್ರತಿಯೋರ್ವ ಮಹಿಳೆಯ ಗೌರವ ಮತ್ತು ಘನತೆಯನ್ನು ಘನತೆಯನ್ನು ರಕ್ಷಿಸಲು ಬದ್ಧವಾಗಿದೆ ಎಂದು ಮಹಿಳಾ ಆಯೋಗ ತಿಳಿಸಿದೆ. ಕೆಎಡಬ್ಲ್ಯೂ ಅಧ್ಯಕ್ಷೆ ವಿಜಯಾ ರಹತ್ಕರ್ ಅವರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಕೆಲವರಿಗೆ ನರ್ವಾಲ್ ಅವರ ಹೇಳಿಕೆ ಇಷ್ಟವಾಗದಿರಬಹುದು. ಆದರೆ ಅವರ ಅಭಿಪ್ರಾಯಗಳ ಕಾರಣಕ್ಕೆ ಅವರನ್ನು ಟ್ರೋಲ್ ಮಾಡುವುದು ಮತ್ತು ಗುರಿಯಾಗಿಸುವುದು ಸರಿಯಲ್ಲ? ಎಂದು ಹೇಳಿದರು.

ಭಯೋತ್ಪಾದಕ ದಾಳಿಗೆ ಕೆಲವು ದಿನಗಳ ಮೊದಲು ವಿವಾಹವಾಗಿದ್ದ ದಂಪತಿ ಕಾಶ್ಮೀರಕ್ಕೆ ತೆರಳಿದ್ದರು. ಎಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ವಿನಯ್ ನರ್ವಾಲ್ ಮೃತಪಟ್ಟಿದ್ದರು.

ಭಯೋತ್ಪಾದಕರ ದಾಳಿಯಲ್ಲಿ ವತಿಯನ್ನು ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನರ್ವಾಲ್, ಇಡೀ ದೇಶವು ವಿನಯಾಗಿ ಪ್ರಾರ್ಥಿಸಬೇಕೆಂದು ನಾನು ಬಯಸುತ್ತೇನೆ. ಮುಸ್ಲಿಮರು ಮತ್ತು ಕಾಶ್ಮೀರಿಗಳ ಮೇಲೆ ದ್ವೇಷ ಬೆಳೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಮಗೆ ಇದು ಬೇಡ. ನಾವು ಶಾಂತಿಯನ್ನು ಮಾತ್ರ ಬಯಸುತ್ತೇವೆ. ಬೇರೇನೂ ಅಲ್ಲ, ದಾಳಿಯ ಹಿಂದಿರುವವರನ್ನು ನ್ಯಾಯದ ಕಟಕಟೆಗೆ ತರಬೇಕೆಂದು ಹೇಳಿದ್ದರು.

ಆದರೆ ಶಾಂತಿ ಕಾಪಾಡುವಂತೆ ಮಾಡಿದ್ದ ನರ್ವಾಲ್ ಮನವಿಗೆ ಹಲವರು ನಿಂದಿಸಿದರು. ಕೆಲವರು ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡರು. ಇನ್ನು ಕೆಲವರು ನೀವು ಪತಿಯ ಪಿಂಚಣಿಯನ್ನು ಪಡೆಯಬಾರದು ಎಂದು ಹೇಳಿದರು. ಟ್ರೋಲ್ ಮಧ್ಯೆ ಹಲವರು ಅವರನ್ನು ಬೆಂಬಲಿಸಿದ್ದರು.

ದಂಪತಿಗಳು ಪಹಲ್ಯಾಮ್‌ ರಮಣೀಯ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದ ವೇಳೆ ಭಯೋತ್ಪಾದಕರು ಅವರನ್ನು ತನ್ನ ಧರ್ಮವನ್ನು ಖಚಿತಪಡಿಸಿಕೊಂಡ ನಂತರ, ನೌಕಾಪಡೆಯ ಅಧಿಕಾರಿಯನ್ನು ಅವನ ಹೆಂಡತಿಯ ಎದುರೇ ಗುಂಡಿಕ್ಕಿ ಕೊಂದಿದ್ದರು. ಏಪ್ರಿಲ್ 25 ರಂದು ಹರಿದ್ವಾರದಲ್ಲಿ ಪೂರ್ಣ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿತ್ತು. ಪಹಲ್ಯಾಮ್ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ಇನ್ನಷ್ಟು ಹದಗೆಡಿಸಿದೆ.

ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧದೃಢ ಮತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಲು ದೇಶವು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆಯೇ, ಪಾಕಿಸ್ತಾನದಿಂದ ಬರುವ ಅಥವಾ ಪಾಕಿಸ್ತಾನದ ಮೂಲಕ ಸಾಗುವ ಸರಕುಗಳ ಆಮದು ಮತ್ತು ಅದರ ಬಂದರುಗಳಿಗೆ ಪಾಕಿಸ್ತಾನಿ ಹಡಗುಗಳ ಪ್ರದೇಶದ ಮೇಲೆ ಭಾರತ ನಿಷೇಧ ಹೇರಿದೆ.

ಪೆಹಲ್ಗಾಮ್ ಉಗ್ರರ ದಾಳಿ ಪ್ರತೀಕಾರ : ಪ್ರಧಾನಿ ತೀರ್ಮಾನಕ್ಕೆ ದೇಶದ ಜನತೆ ಬದ್ಧರಾಗಿರಬೇಕು ಎಂದ ಗೌಡರು

ಹಾಸನ, ಮೇ 5- ನಮ್ಮ ದೇಶದ 150 ಕೋಟಿ ಜನರು ಏಕಮುಖವಾಗಿ ಪ್ರಧಾನಮಂತ್ರಿಗಳ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ.

ಹಾಸನ ತಾಲ್ಲೂಕಿನ ದ್ಯಾಪಲಾಪುರ ಗ್ರಾಮಕ್ಕೆ ನಿನ್ನೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಗ್ಗಟ್ಟಿದ್ದಾಗ ಮಾತ್ರ ಪಹಲ್ಲಾಮ್‌ನಂತಹ ದುರ್ಘಟನೆ ನಡೆಯುವುದಿಲ್ಲ ಎಂದಿದ್ದಾರೆ.

ಕಾಶ್ಮೀರದ ವಿಚಾರದಲ್ಲಿ ಪ್ರಧಾನಮಂತ್ರಿಗಳು ಬಹಳ ಬಿಗಿಯಾದಂತಹ ಕ್ರಮ ತೆಗೆದುಕೊಂಡಿದ್ದಾರೆ. ಈ ವಿಷಯದಲ್ಲಿ ರಾಷ್ಟ್ರದ ಎಲ್ಲಾ ರಾಜಕೀಯ ಪಕ್ಷಗಳು ಐಕ್ಯತೆಯನ್ನು ತೋರಿಸಿವೆ. 28 ಪ್ರವಾಸಿಗರನ್ನು ನಿಷ್ಕರುಣೆಯಿಂದ ಹತ್ಯೆ ಮಾಡಿದಂತಹ ಉಗ್ರಗಾಮಿಗಳನ್ನು ಸಂಪೂರ್ಣವಾಗಿ ನಾಶ ಮಾಡುವವರೆಗೂ ಪ್ರಧಾನಮಂತ್ರಿಗಳು ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಷಯದಲ್ಲಿ ನನ್ನ ಅನುಭವದಿಂದ ಅಭಿಪ್ರಾಯವನ್ನು ತಿಳಿಸಿದ್ದೇನೆ. ಇದು ಸೂಕ್ಷ್ಮವಾದ ವಿಚಾರ. ಈ ವಿಷಯದಲ್ಲಿ ಏನು ಕ್ರಮ ತೆಗೆದುಕೊಳ್ಳುತ್ತಾರೋ ಅದಕ್ಕೆ ನನ್ನದು, ನನ್ನ ಪಕ್ಷದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸೇರಿದಂತೆ ನಮ್ಮ ಪೂರ್ಣ ಬೆಂಬಲ ಇದೆ ಎಂದು ಈಗಾಗಲೇ ಹೇಳಿದ್ದೇನೆ.

ಮುಂದೆ ಕೂಡ ಏನು ಕ್ರಮ ತೆಗೆದುಕೊಳ್ಳುತ್ತಾರೋ ಆ ಕ್ರಮಕ್ಕೆ ಇಡೀ ದೇಶ ಪಕ್ಷಭೇದವಿಲ್ಲದೇ ಎಲ್ಲರೂ ಒಗ್ಗಟ್ಟಾಗಿ ಬೆಂಬಲ ನೀಡಬೇಕು. ಮುಂದೆ ಇಂತಹ ದುಷ್ಕೃತ್ಯ ನಡೆಯಬಾರದು. ಅವರಿಗೆ ಪಾಠ ಕಲಿಸಬೇಕು ಎಂದು ಪ್ರಧಾನಮಂತ್ರಿಗಳು ಪ್ರತಿಜ್ಞೆ ಮಾಡಿದ್ದಾರೆ. ಅವರ ಹಿಂದೆ ನಿಲ್ಲುತ್ತೇವೆ. ಮೊದಲು ಕಾಂಗ್ರೆಸ್ ನಾಯಕರು ಸಹಮತವನ್ನು ವ್ಯಕ್ತಪಡಿಸಿದ್ದರು. ಮಧ್ಯೆ ಸ್ವಲ್ಪ ಒಡಕು ಶಬ್ದ ಬಂದ ಮೇಲೆ ಪುನಃ ಅವರು ಈ ವಿಷಯದಲ್ಲಿ ಐಕ್ಯತೆ ಬಗ್ಗೆ ಪುನಃ ಪ್ರತಿಪಾದನೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಾಸನ ತಾಲ್ಲೂಕಿನ ದ್ಯಾಪಲಾಪುರ ಗ್ರಾಮಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಗೌಡರು. ಶ್ರೀ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನಾ ಮಹೋತ್ಸವ ಹಾಗೂ ಮಹಾಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಎಚ್.ಪಿ.ಸ್ವರೂಪ್‌ ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾರತ ದಾಳಿ ಮಾಡಿದರೆ ಪ್ರತಿದಾಳಿ ಮಾಡುವಂತೆ ಪಾಕ್ ಸೇನೆಗೆ ರಾಜಕೀಯ ಪಕ್ಷಗಳ ಬೆಂಬಲ

ಇಸ್ಲಾಮಾಬಾದ್, ಮೇ 5- ಪಹಲ್ಲಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತದೊಂದಿಗಿನ ಉದ್ವಿಗ್ನತೆಯ ಬಗ್ಗೆ ಪಾಕಿಸ್ತಾನದ ನಾಗರಿಕ ಮತ್ತು ಮಿಲಿಟರಿ ನಾಯಕತ್ವವು ದೇಶದ ರಾಜಕೀಯ ಪಕ್ಷಗಳಿಗೆ ವಿವರಿಸಿದೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಕ್-ಇ-ಇನ್ಸಾ ಫ್ ಪಕ್ಷವನ್ನು ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳು ನಿನ್ನೆ ನಡೆದ ಇನ್-ಕ್ಯಾಮೆರಾ ಬೀಫಿಂಗ್ನಲ್ಲಿ ಭಾಗವಹಿಸಿದ್ದವು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಭಾರತವು ಯಾವುದೇ ದುಷ್ಕೃತ್ಯಕ್ಕೆ ಮುಂದಾದರೆ ದೃಢವಾದ ಪ್ರತಿಕ್ರಿಯೆ ನೀಡುವುದಾಗಿ ರಾಜಕೀಯ ನಾಯಕರು ಪ್ರತಿಜ್ಞೆ ಮಾಡಿದ್ದಾರೆ ಎಂದು ಬ್ರಿಫಿಂಗ್‌ಗೆ ಸಂಬಂಧಿಸಿದ ಮೂಲವನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಎಸ್‌ಪಿಆರ್) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಮತ್ತು ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಈ ಮಾಹಿತಿ ನೀಡಿದ್ದಾರೆ.

ಪ್ರಾದೇಶಿಕ ಶಾಂತಿಯನ್ನು ಹಾಳುಮಾಡುವ ಭಾರತದ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಸಶಸ್ತ್ರ ಪಡೆಗಳೊಂದಿಗೆ ನಿಂತಿದ್ದೇವೆ ಎಂದು ರಾಜಕೀಯ ಪಕ್ಷಗಳು ಅಭಿಪ್ರಾಯಪಟ್ಟಿವೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕರಾದ ರಾಜಾ ಪರ್ವೇಜ್ ಅಶ್ರಫ್, ಖಮರ್ ಜಮಾನ್ ಕೈರಾ ಮತ್ತು ಶಾಜಿಯಾ ಮರಿ : ಪಿಎಂಎಲ್-ಎನ್ನ ಬ್ಯಾರಿಸ್ಟರ್ ಅಕೀಲ್ ಮತ್ತು ತಾರಿಕ್ ಫಜಲ್ ಚೌಧರಿ, ತಲ್ಲಾಲ್ ಚೌಧರಿ, ಪ್ರಧಾನಿ ಸಹಾಯಕ ಪರ್ವೇಜ್ ಖಟ್ಟಕ್, ಎಂಕ್ಯೂಎಂ-ಪಿಯ ಫಾರೂಕ್ ಸತ್ತಾರ್ ಮತ್ತು ಕಾಶ್ಮೀರಿ ನಾಯಕ ಶಾ ಗುಲಾಮ್ ಖಾದಿರ್ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು. |

ವಿಶ್ವಸಂಸ್ಥೆಯಲ್ಲಿ ಭಾರತ-ಪಾಕ್ ಉದ್ವಿಗ್ನತೆ ಕುರಿತು ಚರ್ಚೆ

ನವದೆಹಲಿ,ಮೇ 5- ಪಹಲ್ಲಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಮಧ್ಯೆ ಇಸ್ಲಾಮಾಬಾದ್ ತುರ್ತು ಸಭೆಯನ್ನು ಕೋರಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂದು ಮುಚ್ಚಿದ ಸಮಾಲೋಚನೆ ನಡೆಸಲಿದೆ.

ಪಾಕಿಸ್ತಾನವು ಪ್ರಸ್ತುತ 15 ರಾಷ್ಟ್ರಗಳ ಪ್ರಬಲ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿದೆ. ಇದು ಮೇ ತಿಂಗಳಲ್ಲಿ ಗ್ರೀಸ್ ಅಧ್ಯಕ್ಷತೆ ವಹಿಸುತ್ತಿದೆ.ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಬಗ್ಗೆ ಇಸ್ಲಾಮಾಬಾದ್ ಮುಚ್ಚಿದ ಸಮಾಲೋಚನೆಗಳನ್ನು ಕೋರಿದೆ ಮತ್ತು ಗ್ರೀಕ್ ಪ್ರೆಸಿಡೆನ್ಸಿ ಸಭೆಯನ್ನು ಇಂದು ಮಧ್ಯಾಹ್ನ ನಿಗದಿಪಡಿಸಿದೆ.

ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ ಹೊರತುಪಡಿಸಿ ಅಲ್ಲೀರಿಯಾ. ಡೆನ್ಮಾರ್ಕ್, ಗ್ರೀಸ್, ಗಯಾನಾ. ಪಾಕಿಸ್ತಾನ, ಪನಾಮ, ದಕ್ಷಿಣ ಕೊರಿಯಾ, ಸಿಯೆರಾ ಲಿಯೋನ್, ಫ್ಲೋವೇನಿಯಾ ಮತ್ತು ಸೊಮಾಲಿಯಾ ಈ ಮಂಡಳಿಯ 10 ಖಾಯಂ ಸದಸ್ಯ ರಾಷ್ಟ್ರಗಳಾಗಿವೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸಭೆಗೆ ವಿನಂತಿ ಬಂದರೆ ಆದ್ಯತೆ ನೀಡಲಾಗುವುದು ಎಂದು ಮೇ ತಿಂಗಳ ಭದ್ರತಾ ಮಂಡಳಿಯ ಅಧ್ಯಕ್ಷ ರಾಯಭಾರಿ ಇವಾಂಜಿಲೊಸ್ ಸೆಕೆರಿಸ್‌ ಹೇಳಿದ್ದರು.

ನಾನು ಮೊದಲೇ ಹೇಳಿದಂತೆ, ತತ್ವದ ಸ್ಥಾನವಾಗಿ, ಯಾವುದೇ ಭಯೋತ್ಪಾದಕ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಪಹಲ್ಲಾಮ್‌ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿ ಬಗ್ಗೆ ನಾವು ಮಾಡಿದ್ದು ಇದನ್ನೇ ಎಂದು ಸೆಕೆರಿಸ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರದ ವಾರಗಳಲ್ಲಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಚೀನಾ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ ಎಲ್ಲಾ ಕೌನ್ಸಿ ಲ್ ಸದಸ್ಯರೊಂದಿಗೆ ಮಾತನಾಡಿದರು. ಜೈಶಂಕರ್ ತಮ್ಮ ಕರೆಗಳಲ್ಲಿ, ಅದರ ದುಷ್ಕರ್ಮಿಗಳು, ಬೆಂಬಲಿಗರು ಮತ್ತು ಯೋಜಕರನ್ನು ನ್ಯಾಯದ ಮುಂದೆ ತರಬೇಕು ಎಂದು ಒತ್ತಿಹೇಳಿದರು.

‘ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಜೀವಂತವಾಗಿರುತ್ತದೆ’ : ಲೇಖಕಿ ತಸ್ಲಿಮಾ ನಸ್ರಿನ್

ನವದೆಹಲಿ,ಮೇ5-ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಜೀವಂತವಾಗಿರುತ್ತದೆ ಎಂದು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸೀನ್ ಹೇಳಿದ್ದಾರೆ. ದೆಹಲಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, ಪಹಲ್ಟಾಮ್ ಭಯೋತ್ಪಾದಕ ದಾಳಿ ಮತ್ತು 2016ರ ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಹೋಲಿಸಿ ಈ ಹೇಳಿಕೆ ನೀಡಿದ್ದಾರೆ.

ಕಳೆದ 1,400 ವರ್ಷಗಳಲ್ಲಿ ಇಸ್ಲಾಂ ವಿಕಸನಗೊಂಡಿಲ್ಲ. ಅದು ವಿಕಸನಗೊಳ್ಳುವವರೆಗೆ ಭಯೋತ್ಪಾದಕರನ್ನು ಬೆಳೆಸುತ್ತಲೇ ಇರುತ್ತದೆ. 2016ರ ಢಾಕಾ ದಾಳಿಯಲ್ಲಿ ಕಲ್ಲಾವನ್ನು ಪಠಿಸಿದ್ದಕ್ಕೆ ಜನರನ್ನು ಹತ್ಯೆ ಮಾಡಲಾಯಿತು. ನಮ್ಮ ನಂಬಿಕೆ ವಿವೇಚನೆ ಮತ್ತು ಮಾನವೀಯತೆಯನ್ನು ಮೀರಿದಾಗ ಹೀಗೆ ಆಗುತ್ತದೆ ಎಂದು ತಿಳಿಸಿದರು.

ಯುರೋಪ್‌ನಲ್ಲಿ ಚರ್ಚುಗಳು ವಸ್ತುಸಂಗ್ರಹಾಲಯಗಳಾಗಿ ಬದಲಾಗುತ್ತಿದ್ದರೆ ಮುಸ್ಲಿಮರು ಎಲ್ಲೆಡೆ ಮಸೀದಿಗಳನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸಾವಿರಾರು ಮಸೀದಿಗಳು ನಿರ್ಮಾಣವಾಗಿದ್ದರೂ ಮತ್ತಷ್ಟು ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಮತ್ತಷ್ಟು ಜಿಹಾದಿಗಳು ತಯಾರಾಗುತ್ತಾರೆ. ಯಾವುದೇ ಮದರಸಾಗಳು ಇರಬಾರದು.

ಮಕ್ಕಳು ಒಂದು ಪುಸ್ತಕವನ್ನು ಮಾತ್ರ ಓದಬಾರದು, ಎಲ್ಲಾ ಪುಸ್ತಕಗಳನ್ನು ಓದಬೇಕು ಎಂದು ಅಭಿಪ್ರಾಯಪಟ್ಟರು. ಪ್ರತಿಯೊಂದು ನಾಗರಿಕ ದೇಶವೂ ಏಕರೂಪ ನಾಗರೀಕ ಸಂಹಿತೆಯನ್ನು ಹೊಂದಿರಬೇಕು ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ. ಸಂಸ್ಕೃತಿ, ಧರ್ಮ ಅಥವಾ ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಭದ್ರತೆಯನ್ನು ರಾಜಿ ಮಾಡಿಕೊಂಡರೆ ನಾವು ಆ ಸಂಸ್ಕೃತಿಯನ್ನು ಪ್ರಶ್ನಿಸಬೇಕು. ತನ್ನ ಜನಸಂಖ್ಯೆಯ ಅರ್ಧದಷ್ಟು ಜನರನ್ನು ರಕ್ಷಿಸಲು ಸಾಧ್ಯವಾಗದ ಸಮಾಜವು ವಿಫಲ ಸಮಾಜವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಅಮೆರಿಕದ ಖಾಯಂ ನಿವಾಸಿಯಾಗಿದ್ದು, 10 ವರ್ಷಗಳ ಕಾಲ ಅಲ್ಲಿ ವಾಸಿಸುತ್ತಿದ್ದೆ. ಆದರೆ ನಾನು ಯಾವಾಗಲೂ ಹೊರಗಿನವನಂತೆ ಭಾಸವಾಗುತ್ತಿತ್ತು. ನಾನು ಕೋಲ್ಕತ್ತಾಗೆ ಬಂದಾಗ ಮಾತ್ರ ನನಗೆ ಮನೆಯಲ್ಲಿರುವಂತೆ ಭಾಸವಾಯಿತು. ಪಶ್ಚಿಮ ಬಂಗಾಳದಿಂದ ಹೊರಹಾಕಲ್ಪಟ್ಟ ನಂತರವೂ ದೆಹಲಿಯಲ್ಲಿ ನನಗೆ ಮತ್ತೊಂದು ಮನೆ ಸಿಕ್ಕಿತು. ನನ್ನ ಸ್ವಂತ ದೇಶಕ್ಕೆ ಸಾಧ್ಯವಾಗದ ಒಂದು ರೀತಿಯ ಆತ್ಮೀಯತೆಯ ಭಾವನೆಯನ್ನು ಈ ದೇಶ ನನಗೆ ನೀಡಿದೆ ಎಂದು ಅವರು ಹೇಳಿದರು.

ಬಾಂಗ್ಲಾದೇಶದ ಮಹಿಳೆಯರು ಎಲ್ಲಾ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಈ ವೇಳೆ ವಿಷಾದ ವ್ಯಕ್ತಪಡಿಸಿದರು. ಇಸ್ಲಾಮಿಕ್ ಸ್ಟೇಟ್‌ನ ಐವರು ಉಗ್ರರು ಜುಲೈ 2016 ರಲ್ಲಿ ಪ್ರವಾಸಿಗರನ್ನು ಒತ್ತೆಯಾಳಾಗಿ ಇಟ್ಟುಕೊಂಡು ದಾಳಿ ನಡೆಸಿದ್ದರು. ಬಾಂಗ್ಲಾದೇಶದ 7, ಇಟಲಿಯ 9, ಜಪಾನಿನ 9. ಭಾರತದ ಒಬ್ಬರು ಸೇರಿದಂತೆ 24 ಮಂದಿಯನ್ನು ಉಗ್ರರು ಹತ್ಯೆಗೈದಿದ್ದರು.