Home Blog Page 425

ಉತ್ತರ ಪ್ರದೇಶ : ಕಟ್ಟಡಕ್ಕೆ ಬೆಂಕಿ ಬಿದ್ದು ದಂಪತಿ ಮತ್ತು ಮೂರು ಮಕ್ಕಳು ಸಾವು

ಕಾನ್ಸುರ, ಮೇ 5 – ಉತ್ತರ ಪ್ರದೇಶದ ಕಾನ್ಪುರದ ಚಾಮನ್‌ಗಂಜ್ ಪ್ರದೇಶದ ಪ್ರೇಮ್‌ನಗರದ ಐದು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ದಂಪತಿ ಮೂವರು ಮಕ್ಕಳು ಸಾವನ್ನಪ್ಪಿರುವ ಭೀಕರ ಘಟನೆ ಕಳೆದ ರಾತ್ರಿ ನಡೆದಿದೆ.

ಇಡೀ ಕಟ್ಟಡವನ್ನು ಬೃಹತ್ ಬೆಂಕಿ ಆವರಿಸಿದೆ. ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದ ಕುಟುಂಬದ ಎಲ್ಲರೂ ಬೆಂಕಿಗೆ ಸಿಲುಕಿದ್ದಾರೆ ಆದರಲ್ಲಿ ಮೊಹಮ್ಮದ್ ಡ್ಯಾನಿಶ್ (45)ಮತ್ತು ಪತ್ನಿ ನಜೀನ್ ಸಬಾ (42) ಸ್ಥಳದಲೇ ಸಾವನ್ನಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಹೆಣ್ಣುಮಕ್ಕಳಾದ ಸಾರಾ (15), ಸಿಮ್ರಾ (12) ಮತ್ತು ಇನಾಯಾ (7) ಸಹ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲ ಮತ್ತು ಎರಡನೇ ಮಹಡಿಯಲ್ಲಿ ಶೂ ತಯಾರಿಕಾ ಕಾರ್ಖಾನೆ ಇದೆ, ನಾಲ್ಕನೇ ಮಹಡಿಗೆ ತಲುಪಲು ಅಗ್ನಿಶಾಮಕ ದಳದವರು ಹರಸಾಹಸ ಪಡಬೇಕಾಯಿತು ಎಂದು ಅವರು ಹೇಳಿದರು.
ರಾತ್ರಿ ಕಟ್ಟಡದಿಂದ ಬೆಂಕಿ ಮತ್ತು ದಟ್ಟ ಹೊಗೆ ಹೊರಹೊಮ್ಮುವುದನ್ನು ನೆರೆಹೊರೆಯವರು ಗಮನಿಸಿ ಅಗ್ನಿಶಾಮಕ ಠಾಣೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.ಮುಂಜಾನೆವರೆಗೂ ಪ್ರಯಾಸಪಟ್ಟು ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದೆ.ಕಟ್ಟಡ ಸಂಪೂರ್ಣ ಹಾನಿಯಾಗಿದೆ.

ಬೆಂಕಿಗೆ ಕಾರಣವನ್ನು ನಿರ್ಧರಿಸಲು ತನಿಖೆ ಆರಂಭಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತಮಂಜಯ್ ಸಿಂಗ್ ಹೇಳಿದ್ದಾರೆ.ಶಾರ್ಟ್ ಸರ್ಕ್‌ಯೂಟ್ ಅಥವಾ ಆಂತರಿಕ ವೈರಿಂಗ್‌ನಲ್ಲಿನ ದೋಷ ಇರಬಹುದೆಂದು ಶಂಕಿಸಲಾಗಿದೆ. ಶೂ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದ ಮಹಡಿಯಲ್ಲಿ ಮೊದಲು ಬೆಂಕಿ ಹೊತ್ತಿರಬಹುದು ಎಂದು ಎಸಿಪಿ ಹೇಳಿದರು. ಅಕ್ಕ ಪಕ್ಕದ ಕಟ್ಟಡಗಳ ಜನರನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

ವಿಶ್ವದ ಅತಿ ದೊಡ್ಡ ಎಲೆಕ್ಟಿಕ್ ಹಡಗು ಲೋಕಾರ್ಪಣೆ

ಸಿಡ್ನಿ,ಮೇ 5- ಆಸ್ಟ್ರೇಲಿಯಾದಲ್ಲಿ ಅತಿ ದೊಡ್ಡ ಎಲೆಕ್ಟಿಕ್ ಹಡಗು ಹಲ್ 096 ಲೋಕಾರ್ಪಣೆಯಾಗಿದೆ. ಈ ಹಡಗು ಸುಮಾರು 2,100 ಪ್ರಯಾಣಿಕರು ಮತ್ತು 225 ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಆಸ್ಟ್ರೇಲಿಯಾದ ದೋಣಿ ತಯಾರಕರೊಬ್ಬರು ವಿಶ್ವದ ಅತಿದೊಡ್ಡ ಬ್ಯಾಟರಿ ಚಾಲಿತ ಹಡಗು ಹಲ್ 096 ಅನ್ನು ಪ್ರಾರಂಭಿಸಿದ್ದಾರೆ.

ಟ್ಯಾನಿಯನ್ ತಯಾರಕ ಇನ್ಯಾಟ್ ನಿರ್ಮಿಸಿದ ಇದು 130 ಮೀಟರ್ ಅಳತೆ ಹೊಂದಿದೆ.
ಕಳೆದ ಶುಕ್ರವಾರ ಹೋಬರ್ಟ್ ನಲ್ಲಿ ಬಿಡುಗಡೆಯಾದ ಹಲ್ 096 ಚೀನಾ ಜೊರಿಲ್ಲಾ ಆಗಿ ಕಾರ್ಯನಿರ್ವಹಿಸಲಿದ್ದು, ಸುಮಾರು 2,100 ಪ್ರಯಾಣಿಕರು ಮತ್ತು 225 ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದಕ್ಕೆ ಉರುಗೈಯ ಚಲನಚಿತ್ರ ಮತ್ತು ರಂಗಭೂಮಿ ತಾರೆಯ ಹೆಸರನ್ನು ಇಡಲಾಗಿದೆ.

ಬ್ಯಾಟರಿ ಚಾಲಿತ ವಾಹನ ದೋಣಿ ಉರುಗ್ಗೆ ನಗರ, ಮಾಂಟೆವಿಡಿಯೊ. ಇತರ ಎರಡು ಉರುಗ್ಗೆ ಪಟ್ಟಣಗಳು ಮತ್ತು ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್ ನಡುವೆ ಪ್ರಯಾಣಿಸಲಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಹಡಗಿನ ಒಳಾಂಗಣವು ಅಪೂರ್ಣವಾಗಿದೆ, ಆದರೆ ಇದು 2,300 ಚದರ ಮೀಟರ್ ಸುಂಕ-ಮುಕ್ತ ಚಿಲ್ಲರೆ ಶಾಪಿಂಗ್ ಡೆಕ್ ಅನ್ನು ಹೊಂದಿರುತ್ತದೆ, ಇದು ಸರಿಸುಮಾರು 100 ಸಾಮಾನ್ಯ ಆಸ್ಟ್ರೇಲಿಯಾದ ಮನೆಗಳ ಗಾತ್ರವಾಗಿದೆ.

ಹಲ್ 096 250 ಟನ್ ಗಿಂತ ಹೆಚ್ಚು ಬ್ಯಾಟರಿಗಳನ್ನು ಹೊಂದಿದೆ ಮತ್ತು ಪ್ರಸ್ತುತ 40 ಮೆಗಾವ್ಯಾಟ್ ಗಂಟೆಗಳಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಶಕ್ತಿ ಶೇಖರಣಾ ವ್ಯವಸ್ಥೆಯನ್ನು (ಇಎಸ್‌ಎಸ್) ಹೊಂದಿದೆ. ಇಎಸ್ಎಸ್ ಹಿಂದಿನ ಯಾವುದೇ ಎಂದಿಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(05-05-2025)

ನಿತ್ಯ ನೀತಿ : ಅರ್ಥ ಮಾಡಿಕೊಂಡವರಿಗೆ ನಮ ಮೌನವೇ ಅತ್ಯುತ್ತಮ ಉತ್ತರವಾಗಿ ಕಾಣುತ್ತೆ. ನಾವು ಅರ್ಥವೇ ಆಗದವರಿಗೆ ನಮ ಮೌನವೇ ಅತೀ ಅಹಂಕಾರವಾಗಿ ತೋರುತ್ತೆ.

ಪಂಚಾಂಗ : ಸೋಮವಾರ, 05-05-2025
ವಿಶ್ವಾವಸು ನಾಮ ಸಂವತ್ಸರ / ಉತ್ತರಾಯಣ / ಸೌರ ಗ್ರೀಷ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಆಶ್ಲೇಷಾ / ಯೋಗ: ವೃದ್ಧಿ / ಕರಣ: ಬಾಲವ
ಸೂರ್ಯೋದಯ – ಬೆ.0.57
ಸೂರ್ಯಾಸ್ತ -06.36
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸಂತಸದಿಂದ ಕೆಲಕಾಲ ಕಳೆಯುವಿರಿ.
ವೃಷಭ: ಸಾಂಸಾರಿಕ ಜೀವನ ತೃಪ್ತಿಕರವಾಗಿರಲಿದೆ. ನೌಕರರಿಗೆ ಹೊಸ ವಸತಿ ವ್ಯವಸ್ಥೆಯಾಗಲಿದೆ.
ಮಿಥುನ: ಸಮಾಧಾನದಿಂದ ಕಾರ್ಯನಿರ್ವಹಿಸಿದಲ್ಲಿ ಕೆಲಸ-ಕಾರ್ಯಗಳಲ್ಲಿ ಜಯ ಕಟ್ಟಿಟ್ಟ ಬುತ್ತಿ.
ಕಟಕ: ಕೌಟುಂಬಿಕ ಕಲಹಗಳು ಬೀದಿಗೆ ಬರುವ ಸಾಧ್ಯತೆಗಳಿವೆ. ಸಹೋದ್ಯೋಗಿಗಳೇ ಶತ್ರುಗಳಾಗುವರು.
ಸಿಂಹ: ಕೆಲಸ-ಕಾರ್ಯ ಗಳು ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗಿಗಳು ಅಲ್ಪ ಪ್ರಗತಿ ಕಾಣುವರು.
ಕನ್ಯಾ: ವೈದ್ಯರಿಗೆ ವಿಶೇಷ ರೀತಿಯ ಅನುಭವ ಸಿಗಲಿದೆ. ಮೇಲ ಕಾರಿಗಳೊಂದಿಗೆ ಮೆಚ್ಚುಗೆ ಪಡೆಯಲು ಹೆಚ್ಚಿನ ಪ್ರಯತ್ನ ನಡೆಸಿ.
ತುಲಾ: ಲೇವಾದೇವಿ ವ್ಯವಹಾರಗಳು ನಿರಂತರ ವಾಗಿ ಮುಂದುವರೆಯಲಿವೆ. ಸದುದ್ದೇಶದಿಂದ ಕೆಲವು ಕೆಲಸಗಳನ್ನು ಗೌಪ್ಯವಾಗಿ ನಿರ್ವಹಿಸಿ.
ವೃಶ್ಚಿಕ: ಹೊಸದಾಗಿ ಪರಿಚಯವಾಗುವ ಉದ್ಯಮಿ ಯೊಂದಿಗೆ ವ್ಯವಹಾರ ಆರಂಭಿಸಲು ಯೋಚಿಸುವಿರಿ.
ಧನುಸ್ಸು: ಹೊಸ ಕೆಲಸ ಆರಂಭಿಸಲು ಕುಟುಂಬ ದವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಮಕರ: ದೂರ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ಮಕ್ಕಳಿಂದ ಸಂತೋಷ ಸಿಗಲಿದೆ.
ಕುಂಭ: ದಾಯಾದಿ ಕಲಹವಾಗಬಹುದು. ದೂರ ಪ್ರಯಾಣ ಮಾಡದಿರುವುದು ಒಳಿತು.
ಮೀನ: ಉದ್ಯೋಗ ನಿಮಿತ್ತ ಪ್ರಯಾಣ ಮಾಡು ವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.

ಹಿಂದೂ ಧರ್ಮದಿಂದಲೇ ರಾಹುಲ್‌ಗಾಂಧಿ ಉಚ್ಛಾಟನೆ : ಅವಿಮುಕ್ತೇಶ್ವರಾನಂದ ಶ್ರೀ ಘೋಷಣೆ

ನವದೆಹಲಿ,ಮೇ 4- ಕಾಂಗ್ರೆಸ್‌‍ ಮುಖಂಡ ಗಾಂಧಿಯವರು ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಮತ್ತು ಅವರು ತಮ ಹೇಳಿಕೆಗಳಿಗೆ ಸ್ಪಷ್ಟೀಕರಣ ನೀಡಲು ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಹಿಂದೂ ಧರ್ಮದಿಂದಲೇ ಉಚ್ಛಾಟಿಸಲಾಗಿದೆ ಎಂದು ಜ್ಯೋತಿರ್ಮಠ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಗುಡುಗಿದ್ದಾರೆ.

ಬದರಿನಾಥದ ಶಂಕರಾಚಾರ್ಯ ಆಶ್ರಮದಲ್ಲಿ ಈ ಕುರಿತು ಮಾತನಾಡಿರುವ ಅವರು, ಮನುಸತಿಯ ಬಗ್ಗೆ ರಾಹುಲ್‌ ಗಾಂಧಿಯವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಗೆ ಸ್ಪಷ್ಟೀಕರಣ ಬಯಸಿ ಮೂರು ತಿಂಗಳ ಕಾಲ ಗಾಂಧಿಯವರ ಉತ್ತರಕ್ಕಾಗಿ ಕಾಯುತ್ತಿದ್ದೆವು, ಆದರೆ ಜ್ಞಾಪನೆ ಕಳುಹಿಸಲಾಗಿದ್ದರೂ ಅವರು ಪ್ರತಿಕ್ರಿಯಿಸಿಲ್ಲ ಎಂದು ಹೇಳಿದ್ದಾರೆ.

ಡಿಸೆಂಬರ್‌ 2024ರಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡುವಾಗ ರಾಹುಲ್‌ ಗಾಂಧಿಯವರು, ಇದು ನಮ ಧರ್ಮಗ್ರಂಥ (ಧಾರ್ಮಿಕ ಪಠ್ಯ). ಆಡಳಿತ ಪಕ್ಷದ ಪೀಠಗಳತ್ತ ಬೆರಳು ತೋರಿಸಿ, ಮನುಸತಿಯ ವಿರುದ್ಧ ಹೇಳಿಕೆ ನೀಡಿದ್ದರು.

ಉತ್ತರ ಪ್ರದೇಶದ ಮಹಾಕುಂಭಮೇಳದಲ್ಲಿ ಜ್ಯೋತಿರ್ಮಠ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮನುಸತಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಗಾಂಧಿಯವರನ್ನು ಹಿಂದೂ ಧರ್ಮದಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದರು.
ಹತ್ರಾಸ್‌‍ ಅತ್ಯಾಚಾರ ಘಟನೆಯನ್ನು ತಮ ಸಂಸತ್ತಿನ ಭಾಷಣದಲ್ಲಿ ಉಲ್ಲೇಖಿಸಿದ ರಾಹುಲ್‌, ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದಾಗಿ ಹೇಳಿದ್ದರು.

ಅಲ್ಲಿ ಅತ್ಯಾಚಾರಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ ಮತ್ತು ಸಂತ್ರಸ್ತೆಯ ಕುಟುಂಬವು ಅವರ ಮನೆಗೆ ಸೀಮಿತವಾಗಿದೆ ಎಂದಿದ್ದರು. ಸಂವಿಧಾನದಲ್ಲಿ ಇದನ್ನು ಎಲ್ಲಿ ಬರೆಯಲಾಗಿದೆ (ಸಂತ್ರಸ್ತರ ಕುಟುಂಬವು ಬಂಧನದಲ್ಲಿದೆ ಮತ್ತು ಅತ್ಯಾಚಾರಿಗಳು ಮುಕ್ತವಾಗಿ ತಿರುಗಾಡುತ್ತಾರೆ)? ನಿಮ ಪುಸ್ತಕದಲ್ಲಿ ಅಂದರೆ ಮನುಸತಿಯಲ್ಲಿ ಬರೆಯಲಾಗಿದೆ.

ಅದು ಸಂವಿಧಾನದಲ್ಲಿ ಬರೆಯಲಾಗಿಲ್ಲ ಮತ್ತು ನೀವು ಯುಪಿಯಲ್ಲಿ ಆಳ್ವಿಕೆ ನಡೆಸುತ್ತೀರಿ ಮತ್ತು ಸಂವಿಧಾನವು ಅಲ್ಲಿ ಅನ್ವಯಿಸುವುದಿಲ್ಲ ಎಂದು ನೀವು ಹೇಳಿದರೆ. ಮನುಸತಿ ಅಲ್ಲಿ ಅನ್ವಯಿಸುತ್ತದೆಯೇ ಎಂದು ಪ್ರಶ್ನಿಸಿದ್ದರು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಸಂಸತ್ತಿನಲ್ಲಿ ತಮ ಮೊದಲ ಭಾಷಣದಲ್ಲಿ ಎಲ್‌ಒಪಿ ಆಗಿ ಗಾಂಧಿಯವರು ಬಿಜೆಪಿ ನಾಯಕರು ಜನರನ್ನು ಕೋಮುವಾದಿಗಳಾಗಿ ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸುತ್ತಾ, ಗಾಂಧಿಯವರು ಇಡೀ ಹಿಂದೂ ಸಮುದಾಯವನ್ನು ಹಿಂಸಾತಕರು ಎಂದು ಉಲ್ಲೇಖಿಸಿದ್ದಾರೆ ಎಂದಿದ್ದರು.

ಇದಕ್ಕೆ ರಾಹುಲ್‌ ಉತ್ತರಿಸುತ್ತಾ, ನರೇಂದ್ರ ಮೋದಿ ಅವರು ಇಡೀ ಹಿಂದೂ ಸಮುದಾಯವಲ್ಲ, ಬಿಜೆಪಿ ಇಡೀ ಹಿಂದೂ ಸಮುದಾಯವಲ್ಲ, ಆರ್‌ಎಸ್‌‍ಎಸ್‌‍ ಸಂಪೂರ್ಣ ಹಿಂದೂ ಸಮುದಾಯವಲ್ಲ ಎಂದು ಪ್ರತ್ಯುತ್ತರ ನೀಡಿದ್ದರು.

ರಾಜ್ಯದ 381 ಪರೀಕ್ಷಾ ಕೇಂದ್ರಗಳಲ್ಲಿ ನೀಟ್‌ ಪರೀಕ್ಷೆ

ಬೆಂಗಳೂರು, ಮೇ 4- ರಾಜ್ಯದ 381 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಯುಜಿ ನೀಟ್‌ ಪರೀಕ್ಷೆ ನಡೆಯಿತು. ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷ ನಡೆದಿದೆ. 1,49,000 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಇಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ವರೆಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪತ್ರದೊಂದಿಗೆ ಕಾಲೇಜಿನಿಂದ ನೀಡಿರುವ ಗುರುತಿನಚೀಟಿ, ಆಧಾರ್‌ ಕಾರ್ಡ್‌ ಸೇರಿದಂತೆ ಅಂಗೀಕೃತ ಗುರುತಿನ ಚೀಟಿ ಜೊತೆ, ಒಂದು ಪೋಸ್ಟ್‌ ಕಾರ್ಡ್‌ ಮತ್ತು ಎರಡು ಪಾಸ್‌‍ ಪೋರ್ಟ್‌ ಅಳತೆಯ ಫೋಟೋಗಳೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿದ್ದರು.

ನಿಯೋಜಿತ ಪೊಲೀಸ್‌‍ ಸಿಬ್ಬಂದಿಯಿಂದ ವಿದ್ಯಾರ್ಥಿಗಳ ಸುರಕ್ಷತಾ ತಪಾಸಣೆ ನಡೆಸಲಾಯಿತು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳು ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಸೂಚನೆಗಳನ್ವಯ ಮಾರ್ಗಸೂಚಿಯನ್ನು ಪಾಲಿಸಬೇಕೆಂದು ಸೂಚಿಸಲಾಗಿತ್ತು.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ನಿಯೋಜಿತ ಅಧಿಕಾರಿ/ಸಿಬ್ಬಂದಿಯನ್ನು ಹೊರತುಪಡಿಸಿ, ಇತರ ಯಾವುದೇ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ.

ಮುಸ್ಲಿಂ ಮುಖಂಡರ ಧಮ್ಕಿಗೆ ಹೆದರಿದರೇ ಗೃಹಸಚಿವರು..?

ಮಂಗಳೂರು,ಮೇ4- ಮತಾಂಧರಿಂದ ಹತ್ಯೆಯಾದ ಸುಹಾಸ್‌‍ ಶೆಟ್ಟಿ ಮನೆಗೆ ಕಾಂಗ್ರೆಸ್‌‍ನ ಸಚಿವರು, ಶಾಸಕರು, ಮುಖಂಡರು ಭೇಟಿ ನೀಡಬಾರದು ಎಂದು ಮುಸ್ಲಿಂ ಮುಖಂಡರು ಧಮ್ಕಿ ಹಾಕಿರುವ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ನಿನ್ನೆ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಮಂಗಳೂರಿಗೆ ಭೇಟಿ ನೀಡಿದ್ದರು. ಅಲ್ಲಿಗೆ ಆಗಮಿಸಿದ ಕಾಂಗ್ರೆಸ್‌‍ನ ಮುಸ್ಲಿಂ ಮುಖಂಡರು ಸಚಿವರ ಜೊತೆ ಪ್ರತ್ಯೇಕ ಚರ್ಚೆ ನಡೆಸಿದರು. ಈ ವೇಳೆ ಹಲವಾರು ವಿಚಾರಗಳು ಚರ್ಚೆಯಾಗಿದ್ದು, ಜಿಲ್ಲೆಯಲ್ಲಿ ಕೋಮು ದ್ವೇಷದ ಹತ್ಯೆಗಳನ್ನು ಹತ್ತಿಕ್ಕಬೇಕು. ಶಾಂತಿ ಸುವ್ಯವಸ್ಥೆ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರು ಒತ್ತಾಯಿಸಿರುವುದಾಗಿ ಹೇಳಿಕೊಂಡಿದ್ದರು.

ಅದರ ಜೊತೆಯಲ್ಲಿ ಕಾಂಗ್ರೆಸ್‌‍ನ ಯಾವ ಪ್ರಮುಖ ನಾಯಕರೂ ಕೊಲೆಯಾದ ಹಿಂದೂ ಕಾರ್ಯಕರ್ತ ಸುಹಾಸ್‌‍ ಶೆಟ್ಟಿಯ ಮನೆಗೆ ಭೇಟಿ ನೀಡಬಾರದು. ಒಂದು ವೇಳೆ ಭೇಟಿ ನೀಡಿದರೆ ನಾವು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಮುಸ್ಲಿಂ ಮುಖಂಡರು ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.

ಈ ಕುರಿತಂತೆ ಆಡಿಯೋವೊಂದು ವೈರಲ್‌ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ಪ್ರವಾಸಿಮಂದಿರಕ್ಕೆ ಗೃಹಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬಂದಿದ್ದರು. ನಾವು ಅವರನ್ನು ಭೇಟಿ ಮಾಡಲು ಹೋದಾಗ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಸುಹಾಸ್‌‍ ಶೆಟ್ಟಿ ಮನೆಗೆ ಯಾರೂ ಭೇಟಿ ನೀಡಬಾರದು ಎಂದು ಹೇಳಿದ್ದೇವೆ. ಇದಕ್ಕೆ ಅವರು ಸಕಾರಾತಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಆಡಿಯೋದಲ್ಲಿರುವ ಮಾತುಗಳನ್ನು ಕೇಳಿದರೆ ಈ ರೀತಿ ಮಾತನಾಡಿರುವುದು ಮುಸ್ಲಿಂ ಸಮುದಾಯದ ವ್ಯಕ್ತಿ ಎಂದು ಭಾವಿಸುವಂತಿದೆ. ಸುಹಾಸ್‌‍ ಶೆಟ್ಟಿ ಮನೆಗೆ ಭೇಟಿ ನೀಡದೇ ಹೋದುದಕ್ಕೆ ಸಮರ್ಥನೆ ನೀಡಿರುವ ಗೃಹಸಚಿವರು, ಇದೊಂದು ಕೊಲೆ ಪ್ರಕರಣ ಸುಹಾಸ್‌‍ ಶೆಟ್ಟಿ ಮೇಲೆ ಕ್ರಿಮಿನಲ್‌ ಪ್ರಕರಣಗಳಿದ್ದವು.

ಈ ಒಂದು ಕಾರಣಕ್ಕೆ ಚುನಾಯಿತ ಪ್ರತಿನಿಧಿಗಳು ಅವರ ಮನೆಗೆ ಭೇಟಿ ನೀಡಲಿಲ್ಲ ಎಂದು ಹೇಳಿದ್ದಾರೆ. ಆದರೆ ಆಡಿಯೋ ವೈರಲ್‌ ಆದ ಬಳಿಕ ಅಸಲಿ ಕಾರಣ ಬಯಲಿಗೆ ಬಂದಂತಾಗಿದೆ. ಮುಸ್ಲಿಂ ಮುಖಂಡರುಗಳ ಧಮ್ಕಿಗೆ ಬೆದರಿ ಸಚಿವರಾದ ಪರಮೇಶ್ವರ್‌ ಮತ್ತು ದಿನೇಶ್‌ಗುಂಡೂರಾವ್‌ ಹಾಗೂ ಶಾಸಕರು ಸುಹಾಸ್‌‍ ಶೆಟ್ಟಿ ಮನೆಗೆ ಭೇಟಿ ನೀಡಲಿಲ್ಲವೇ ಎಂಬ ಅನುಮಾನಗಳು ದೃಢವಾಗುತ್ತಿವೆ.

ಈ ಹಿಂದೆ ದಕ್ಷಿಣ ಕರ್ನಾಟಕ ಜಿಲ್ಲೆಯಲ್ಲಿ ಕೋಮುವಾಧಾರಿತ ಸರಣಿ ಹತ್ಯೆಗಳು ನಡೆದಿದ್ದವು. ಆದರೆ ಜಿಲ್ಲೆಗೆ ಭೇಟಿ ನೀಡಿದ ಆಗಿನ ಮುಖ್ಯಮಂತ್ರಿ ಬಸವರಾಜು ಬೊಮಾಯಿ, ಹತ್ಯೆಯಾದ ಒಂದು ಕೋಮಿನ ವ್ಯಕ್ತಿಯ ಮನೆಗೆ ಭೇಟಿ ನೀಡಿದ್ದು, ಮತ್ತೊಂದು ಕೋಮಿನ ವ್ಯಕ್ತಿಯ ಮನೆಗೆ ಭೇಟಿ ನೀಡದೇ ಇರುವ ಬಗ್ಗೆ ಟೀಕೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಯಿತು.

ಈಗ ಗೃಹಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿಗೆ ಭೇಟಿ ನೀಡಿದ್ದು, ಕೊಲೆಯಾದವರ ಮನೆಗೆ ಹೋಗದೇ ವಾಪಸ್‌‍ ಬಂದಿದ್ದಾರೆ. ಕಳೆದ ವಾರ ಗುಂಪೊಂದು ಅಶೋಕ್‌ ಎಂಬ ವ್ಯಕ್ತಿಯನ್ನು ಕೊಲೆ ಮಾಡಿತ್ತು. ಮೇ 1 ರಂದು ಸುಹಾಸ್‌‍ ಶೆಟ್ಟಿಯ ಹತ್ಯೆಯಾಗಿದೆ. ಈ ಇಬ್ಬರು ವ್ಯಕ್ತಿಗಳ ಕುಟುಂಬದ ಸದಸ್ಯರನ್ನು ಭೇಟಿ ಮಾಡುವ ಗೋಜಿಗೆ ಜನಪ್ರತಿನಿಧಿಗಳು ಹೋಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ಬೆಂಗಳೂರಿಗರೇ, ನಿಮ್ಮ ಕೈಯಲ್ಲಿರುವ ಮೊಬೈಲ್‌ ಹುಷಾರ್‌..!

ಬೆಂಗಳೂರು,ಮೇ 4-ಪ್ರತಿ ದಿನ ನಗರದ ಒಂದಲ್ಲಾ ಒಂದು ಕಡೆ ಮೊಬೈಲ್‌ ದರೊಡೆಗಳು ನಡೆಯುತ್ತಿವೆ. ಕಳೆದ ರಾತ್ರಿ ನಗರದ ಐದು ಕಡೆಗಳಲ್ಲಿ ಸರಣಿ ಮೊಬೈಲ್‌ ದರೊಡೆಗಳ ಪ್ರಕರಣಗಳು ನಡೆದಿವೆ.

ವಿಲ್ಸನ್‌ ಗಾರ್ಡನ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ 2.30 ರ ಸಮಯದಲ್ಲಿ ವ್ಯಕ್ತಿಯೊಬ್ಬರು ರಸ್ತೆಯ ಬದಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದರೊಡೆಕೋರರು ಅವರ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇದೇ ರೀತಿ ಮಹಾಲಕ್ಷ್ಮಿ ಲೇಔಟ್‌, ಆಡುಗೋಡಿ, ಬ್ಯಾಟರಾಯನಪುರ,ಪುಲಕೇಶಿನಗರ ಪೊಲೀಸ್‌‍ ಠಾಣೆಗಳ ವ್ಯಾಪ್ತಿಗಳಲ್ಲಿ ದರೊಡೆಕೋರರು ವ್ಯಕ್ತಿಗಳಿಂದ ಮೊಬೈಲ್‌ಗಳನ್ನು ಕಸಿದುಕೊಂಡು ಹೋಗಿದ್ದಾರೆ.

ಸುದ್ದಿ ತಿಳಿದ ನಗರ ಪೊಲೀಸರು ರಾತ್ರಿಯಿಂದ ಮುಂಜಾನೆವರೆಗೂ ನಗರದಾದ್ಯಂತ ನಾಕಾಬಂಧಿ ಮಾಡಿ ದರೊಡೆಕೋರರಿಗಾಗಿ ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.ದರೊಡೆಕೋರರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ.

ಮೊಬೈಲ್‌ಗಳು ದರೊಡೆಯಾದ ಸಂದರ್ಭದಲ್ಲಿ ಬಹುತೇಕ ಮಂದಿ ಪೊಲೀಸ್‌‍ ಠಾಣೆಗೆ ದೂರು ನೀಡುವುದಿಲ್ಲಘಿ. ಅವರುಗಳು ಠಾಣೆಗೆ ಬಂದು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹಿರಿಯ ಪೊಲೀಸ್‌‍ ಅ ಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಜೆಗೆ ಮಾತನಾಡುತ್ತಿದ್ದ ಅವರು ಮೊಬೈಲ್‌ ಕಳೆದುಕೊಂಡವರು ಅಥವಾ ದರೊಡೆಗೆ ಒಳಗಾದವರು ತಕ್ಷಣ ಪೊಲೀಸ್‌‍ ಠಾಣೆಗೆ ದೂರು ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಪದಶ್ರೀ ಪ್ರಶಸ್ತಿ ಪುರಸ್ಕೃತ 128 ವರ್ಷದ ಬಾಬಾ ನಿಧನ

ವಾರಣಾಸಿ, ಮೇ 4- ಪದ್ಮಶ್ರೀ ಪುರಸ್ಕೃತ ಆಧ್ಯಾತ್ಮಿಕ ಗುರು 128 ವರ್ಷದ ಬಾಬಾ ಶಿವಾನಂದ್‌ ಅವರು ಅನಾರೋಗ್ಯದಿಂದ ವಾರಣಾಸಿಯಲ್ಲಿ ನಿಧನರಾಗಿದ್ದಾರೆ.ಬಾಬಾ ಶಿವಾನಂದ್‌ ಅವರನ್ನು ಏಪ್ರಿಲ್‌ 30 ರಂದು ಬಿಎಚ್ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ರಾತ್ರಿ ನಿಧನರಾದರು.ಅವರ ಪಾರ್ಥಿವ ಶರೀರವನ್ನು ಕಬೀರ್‌ ನಗರ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ.

ಅವರ ಅಂತಿಮ ವಿಧಿಗಳನ್ನು ಇಂದು ಸಂಜೆ ನಡೆಸಲಾಗುವುದು ಎಂದು ಶಿಷ್ಯರು ತಿಳಿಸಿದ್ದಾರೆ.ಆಗಸ್ಟ್‌ 8, 1896 ರಂದು ಈಗಿನ ಬಾಂಗ್ಲಾದೇಶದ ಸಿಲ್ಹೆಟ್‌ ಜಿಲ್ಲೆಯಲ್ಲಿ ಜನಿಸಿದ ಬಾಬಾ ಶಿವಾನಂದ್‌ ಅವರು ಕೇವಲ ಆರು ವರ್ಷದವರಿದ್ದಾಗ ಹಸಿವಿನಿಂದ ಪೋಷಕರನ್ನು ಕಳೆದುಕೊಂಡರು.

ಅಂದಿನಿಂದ, ಅವರು ತಪಸ್ಸು ಮತ್ತು ಶಿಸ್ತಿನ ಜೀವನವನ್ನು ಅನುಸರಿಸಿದರು, ಅರ್ಧ ಹೊಟ್ಟೆ ಆಹಾರವನ್ನು ಮಾತ್ರ ಸೇವಿಸಿದರು ಎಂದು ಅವರು ಹೇಳಿದರು.ಅವರ ಹೆತ್ತವರ ನಿಧನದ ನಂತರ, ಅವರನ್ನು ಓಂಕಾರಾನಂದ್‌ ಅವರ ಆರೈಕೆಯಲ್ಲಿ ಕರೆದೊಯ್ಯಲಾಯಿತು, ಅವರು ಅವರ ಪೋಷಕ ಮತ್ತು ಮಾರ್ಗದರ್ಶಕರಾದರು. ಅವರ ಮಾರ್ಗದರ್ಶನದಲ್ಲಿ ಬಾಬಾ ಶಿವಾನಂದರು ಆಧ್ಯಾತ್ಮಿಕ ಶಿಕ್ಷಣ ಮತ್ತು ಜೀವನ ಬೋಧನೆಗಳನ್ನು ಪಡೆದರು.ಯೋಗ ಮತ್ತು ಆಧ್ಯಾತ್ಮಿಕತೆಗೆ ನೀಡಿದ ಕೊಡುಗೆಗಳನ್ನು ಗುರುತಿಸಿದ ಬಾಬಾ ಶಿವಾನಂದ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅವರ ಶಿಷ್ಯರು ಅವರ ದೀರ್ಘಾಯುಷ್ಯ ಮತ್ತು ದೃಢವಾದ ಆರೋಗ್ಯವನ್ನು ಅವರ ಶಿಸ್ತುಬದ್ಧ ಜೀವನಶೈಲಿಗೆ ಕಾರಣವೆಂದು ಹೇಳಿದರು. ಅವರು ಪ್ರತಿದಿನ ಮುಂಜಾನೆ 3 ಗಂಟೆಗೆ ಎದ್ದು, ಯೋಗಾಭ್ಯಾಸ ಮಾಡುತ್ತಾರೆ ಮತ್ತು ಅವರ ಎಲ್ಲಾ ಕೆಲಸಗಳನ್ನು ತಾವೇ ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು. ಅವರು ಬೇಯಿಸಿದ ಆಹಾರವನ್ನು ಮಾತ್ರ ತಿನ್ನುತ್ತಿದ್ದನು ಮತ್ತು ಚಾಪೆಯ ಮೇಲೆ ಮಲಗುತ್ತಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಯೋಗ ಗುರುವಿಗೆ ಗೌರವ ಸಲ್ಲಿಸಿದರು ಮತ್ತು ಅವರ ಮೋಕ್ಷಕ್ಕಾಗಿ ಪ್ರಾರ್ಥಿಸಿದರು.

ಯೋಗ ಕ್ಷೇತ್ರದಲ್ಲಿ ಸಾಟಿಯಿಲ್ಲದ ಕೊಡುಗೆ ನೀಡಿದ ಕಾಶಿಯ ಪ್ರಸಿದ್ಧ ಯೋಗ ಗುರು ಪದ್ಮಶ್ರೀ ಸ್ವಾಮಿ ಶಿವಾನಂದ ಜಿ ಅವರು ನಿಧನರಾಗಿರುವುದು ತುಂಬಾ ದುಃಖಕರವಾಗಿದೆ. ಅವರಿಗೆ ವಿನಮ್ರ ಶ್ರದ್ಧಾಂಜಲಿ! ಎಂದು ಅವರು ಎಕ್‌್ಸ ನಲ್ಲಿ ಬರೆದಿದ್ದಾರೆ. ನಿಮ್ಮ ಸಾಧನೆ ಮತ್ತು ಯೋಗ ತುಂಬಿದ ಜೀವನವು ಇಡೀ ಸಮಾಜಕ್ಕೆ ದೊಡ್ಡ ಸ್ಫೂರ್ತಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

“ಮಂಗಳೂರಿನಲ್ಲಿ ಮತ್ತಿಬ್ಬರು ಹಿಂದೂ ಕಾರ್ಯಕರ್ತರ ಟಾರ್ಗೆಟ್‌ ಮಾಡಿದ್ದಾರೆ”

ಬೆಂಗಳೂರು,ಮೇ4- ರಾಜ್ಯ ಕಾಂಗ್ರೆಸ್‌‍ ಸರ್ಕಾರದ ಕುಮಕ್ಕಿನಿಂದಲೇ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ ಎಂದು ಆರೋಪಿಸಿದ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಂಗಳೂರಿನಲ್ಲಿ ಮತ್ತಿಬ್ಬರನ್ನು ಗುರಿ ಮಾಡಿ ಪೋಸ್ಟ್‌ ಹಾಕಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್‌‍ ಹತ್ಯೆ ಬಗ್ಗೆ ಪೊಲೀಸರಿಗೆ ಮೊದಲೇ ಗೊತ್ತಿತ್ತು. ಅವರಿಗೆ ರಕ್ಷಣೆ ಕೊಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಪೊಲೀಸ್‌‍ ಇಲಾಖೆ ಸರ್ಕಾರದ ನಿಯಂತ್ರದಲ್ಲಿಲ್ಲ. ಮತ್ತಿಬ್ಬರು ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡಿದ್ದೀವಿ ಎಂದು ಪೋಸ್ಟ್‌ ಹಾಕಿರುವವರ ಮನೆಗೆ ನುಗ್ಗಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದಕ್ಕಾಗಿ ಇಡೀ ದೇಶವೇ ಪಾಕಿಸ್ತಾನದ ವಿರುದ್ಧ ರೋಷಗೊಂಡಿದೆ. ಹೀಗಾಗಿ ಪೋಸ್ಟ್‌ ಹಾಕಿದವರಿಗೆ ತಕ್ಕ ಶಾಸ್ತಿ ಮಾಡಬೇಕು. ಇಲ್ಲವೇ ಅಧಿಕಾರ ಬಿಟ್ಟು ತೊಲಗಿ ಎಂದು ಕಾಂಗ್ರೆಸ್‌‍ ನಾಯಕರಿಗೆ ತಿರುಗೇಟು ನೀಡಿದರು.

ಒಳಮೀಸಲಾತಿ ಹೆಸರಿನಲ್ಲಿ ಸಮಯವನ್ನು ದೂಡಲು ದತ್ತಾಂಶ ಸಮೀಕ್ಷೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ನಿಜವಾಗಲೂ ಒಳಮೀಸಲಾತಿ ಕೊಡುವುದೇ ಆಗಿದ್ದರೆ 2011ರ ಜನಗಣತಿಯ ಅಂಕಿಅಂಶಗಳ ಆಧಾರದ ಮೇಲೆ ನೀಡಬಹುದಿತ್ತು. ನೆರೆಯ ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ಈಗಾಗಲೇ ಮೀಸಲಾತಿ ಜಾರಿ ಮಾಡಿವೆ ಎಂದರು.

ಜಾತಿಗಣತಿ ಮಾಡುವುದು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆಯೇ ಹೊರತು ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರ ಜನಗಣತಿ ಜೊತೆ ಜಾತಿ ಗಣತಿಯನ್ನೂ ಮಾಡಲಿದೆ. ಆಗ ದತ್ತಾಂಶ ಸರಿ ಇದೆ ಎಂದು ಒಪ್ಪಿಕೊಳ್ಳುವುದು? ಎಂದು ಪ್ರಶ್ನಿಸಿದ ಅವರು, ಸರ್ಕಾರ ಕೇವಲ ಕಣ್ಣೋರೆಸುವ ತಂತ್ರವನ್ನು ಅನುಸರಿಸುತ್ತಿದೆ.

ಮಲ್ಲಿಕಾರ್ಜುನ ಖರ್ಗೆಗೆ ಸವಾಲು:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನಶಿಲ್ಪಿ ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌‍ ಸೋಲಿಸಲಿಲ್ಲ. ಕಮ್ಯೂನಿಸ್ಟ್‌ ಪಕ್ಷದ ದಾಂಗೆ ಹಾಗೂ ಆರ್‌ಎಸ್‌‍ಎಸ್‌‍ನ ಸಾರ್ವಕರ್‌ ಅವರುಗಳು ಅಂಬೇಡ್ಕರ್‌ನ್ನು ಸೋಲಿಸಿದ್ದು ಎಂದು ಹೇಳಿದ್ದಾರೆ. ಇದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್‌ ಖರ್ಗೆ, ರಾಜ್ಯಸಭಾ ಸದಸ್ಯ ಜಯರಾಮ್‌ ರಮೇಶ್‌ ಕೂಡ ಹೇಳಿದ್ದಾರೆ. ಈ ನಾಲ್ವರಿಗೂ ಈ ವಿಚಾರದಲ್ಲಿ ಸಾಬೀತುಪಡಿಸಲು ಸವಾಲು ಹಾಕುತ್ತೇನೆ. ಒಂದು ವೇಳೆ ಅವರು ಸಾಬೀತುಪಡಿಸಿದರೆ ನಾನು ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರಾ? ಎಂದು ಸವಾಲು ಹಾಕಿದರು.

ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಅವರು ಸಾಬೀತುಪಡಿಸಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಇಲ್ಲವಾದಲ್ಲಿ ಈ ನಾಲ್ವರೂ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ. ನನ್ನ ಸಂಬಳದಲ್ಲಿ ಒಂದು ಲಕ್ಷದ ಒಂದು ರೂಪಾಯಿಯನ್ನು ಬಹುಮಾನವಾಗಿ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್‌ ಖರ್ಗೆ ಅವರು ಡಬಲ್‌ ಇಂಜಿನ್‌ ಸುಳ್ಳುಗಾರರು. ವಿಧಾನಸೌಧದ ಮುಂಭಾಗದಲ್ಲಿ ವೇದಿಕೆ ಸಿದ್ದಪಡಿಸಿ ಜನರನ್ನು ಕರೆಯಿರಿ. ನಾನು ಆ ಪತ್ರವನ್ನು ತೆಗೆದುಕೊಂಡು ಬರುತ್ತೇನೆ. ಚರ್ಚೆ ಮಾಡೋಣ ಎಂದು ಸವಾಲು ಹಾಕಿದರಲ್ಲದೆ, ಸಾಬೀತುಪಡಿಸಿದರೆ ಅಂದೇ ಮುಖ್ಯಮಂತ್ರಿಯ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳುತ್ತೇನೆ ಎಂದರು. ಅಂಬೇಡ್ಕರ್‌ ಅವರು ನಿಧನರಾದಾಗ ಅಂತ್ಯ ಸಂಸ್ಕಾರಕ್ಕೂ ಕಾಂಗ್ರೆಸ್‌‍ ಜಾಗ ಕೊಟ್ಟಿಲ್ಲ. ಅಂಬೇಡ್ಕರ್‌ಗೆ ಗೌರವ ಸಿಕ್ಕಿದ್ದು ಬಿಜೆಪಿಯಿಂದ ಸಮರ್ಥಿಸಿಕೊಂಡರು.

ಸಾಮಾಜಿಕ ನ್ಯಾಯಕ್ಕೆ ಬದ್ಧ : ಸಚಿವ ಶಿವರಾಜ್‌ ತಂಗಡಗಿ ಭರವಸೆ

ಬೆಂಗಳೂರು, ಮೇ 4- ಹಿಂದುಳಿದ ಪ್ರತಿಯೊಂದು ಸಮುದಾಯಗಳಿಗೆ ಆದ್ಯತೆ ನೀಡಿದರೆ ಬಸವಾದಿ ಶರಣರು, ಬುದ್ಧ ಮತ್ತು ಅಂಬೇಡ್ಕರ್‌ ಅವರು ಹೇಳಿದ ಸಮ- ಸಮಾಜ ನಿರ್ಮಾಣದ ಕನಸು ಸಾಕಾರಗೊಳ್ಳಲು ಸಾಧ್ಯವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ಎಸ್‌‍. ತಂಗಡಗಿ ಅವರು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಭಗೀರಥ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಸಮಾನತೆ ಇರಬಾರದು. ಎಲ್ಲ ಸಮುದಾಯವರಿಗೂ ಸಮವಾಗಿ ಸವಲತ್ತುಗಳು ದೊರೆಯುವಂತಾಗಬೇಕು. ನಮ ಸರ್ಕಾರ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಬದ್ಧತೆಯನ್ನು ಇಟ್ಟುಕೊಂಡಿದೆ ಎಂದು ಹೇಳಿದರು.

ಎರಡು ತಿಂಗಳಲ್ಲಿ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 42 ಕೋಟಿ ರೂ. ಅನುದಾನ ನೀಡಲಾಗಿದೆ. ಇಷ್ಟು ಮೊತ್ತದ ಅನುದಾನವನ್ನು ಯಾರು ಕೂಡ ನೀಡಿರಲಿಲ್ಲ ಎಂದರು.

ನಿರಂತರ ಪ್ರಯತ್ನದ ಫಲವಾಗಿ ಏನನ್ನು ಬೇಕಾದರೂ ಪಡೆಯಬಹುದು ಎಂಬ ಮಾತಿಗೆ ಭಗೀರಥ ಪ್ರತಿರೂಪದಂತಿದ್ದಾರೆ. ಎಸ್‌‍ಎಸ್‌‍ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಮನೆ ಬಿಟ್ಟು ಹೋಗುವುದು, ಅನಾಹುತಗಳನ್ನು ಮಾಡಿಕೊಳ್ಳುವುದು ನಿಜಕ್ಕೂ ದುರದೃಷ್ಟಕರ. ಹೀಗಾಗಿ ಮಕ್ಕಳಿಗೆ ನಿರಂತರ ಪ್ರಯತ್ನ ಮಾಡುವ ಬಗ್ಗೆ ಭಗೀರಥ ಹಾಗೂ ಇನ್ನಿತರ ಆದರ್ಶವುಳ್ಳ ಕಥೆಗಳನ್ನು ಪೋಷಕರು ತಿಳಿಸಬೇಕಿದೆ ಎಂದು ಅವರು ಕಿವಿ ಮಾತು ಹೇಳಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಹಾಗೂ ಜಯಪ್ರಕಾಶ್‌ ಹೆಗ್ಡೆ ಅವರ ವರದಿ ಅವೈಜ್ಞಾನಿಕವಾಗಿದೆ ಎಂದು ವಿರೋಧಿಸುತ್ತಿದ್ದಾರೆ. ಪ್ರತಿಯೊಂದು ಸಮುದಾಯದವರು ನಮವರು ರಾಜ್ಯದಲ್ಲಿ 50 ಲಕ್ಷ, ಕೋಟಿಯಷ್ಟಿದೆ ಎಂದು ಹೇಳುತ್ತಿದ್ದಾರೆ. ಈ ಸಂಖ್ಯೆಯನ್ನು ಕೇಳಿದರೆ ರಾಜ್ಯದ ಜನಸಂಖ್ಯೆ ಅಂದಾಜು 15 ಕೋಟಿಯಷ್ಟು ತಲುಪಲಿದೆ ಎಂದು ತೀಕ್ಷ್ಣವಾಗಿ ಸಚಿವರು ತಿಳಿಸಿದರು.

ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಕೆ.ಎನ್‌.ರವೀಂದ್ರನಾಥ್‌, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಯು.ವೆಂಕೋಬ, ಉಪ್ಪಾರ ಸಂಘದ ಬೆಂಗಳೂರು ಜಿಲ್ಲಾಧ್ಯಕ್ಷ ಎನ್‌.ಸುನೀಲ್‌ ಕುಮಾರ್‌, ಪ್ರಾಧ್ಯಾಪಕ ಡಾ.ಸಂಗಮೇಶ್‌ ಎಸ್‌‍.ಗಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.