Home Blog Page 43

ರಷ್ಯಾ ತೈಲ ಖರೀದಿ ನಿಲ್ಲಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ ; ಟ್ರಂಪ್‌

ವಾಷಿಂಗ್ಟನ್‌, ಅ. 16 (ಎಪಿ) ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ದೇಶವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಹೇಳಿದ್ದಾರೆ.

ಭಾರತ ಸರ್ಕಾರವು ದೃಢೀಕರಿಸದ ಈ ಬದಲಾವಣೆಯು, ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ನಡೆಸಲು ಮಾಸ್ಕೋ ಮೇಲೆ ಒತ್ತಡ ಹೇರುವ ಟ್ರಂಪ್‌ ಅವರ ಪ್ರಯತ್ನಗಳನ್ನು ಹೆಚ್ಚಿಸುತ್ತದೆ.

ತೈಲ ಇರುವುದಿಲ್ಲ. ಅವರು ತೈಲ ಖರೀದಿಸುತ್ತಿಲ್ಲ ಎಂದು ಟ್ರಂಪ್‌ ಹೇಳಿದರು. ಬದಲಾವಣೆ ತಕ್ಷಣವೇ ಆಗುವುದಿಲ್ಲ ಎಂದು ಅವರು ಹೇಳಿದರು, ಆದರೆ ಕಡಿಮೆ ಅವಧಿಯಲ್ಲಿ ಅದು ಸಾಧ್ಯವಾಗಲಿದೆ ಎಂದಿದ್ದಾರೆ.

ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕಾಮೆಂಟ್‌ಗಾಗಿ ತಕ್ಷಣ ಪ್ರತಿಕ್ರಿಯಿಸಲಿಲ್ಲ.ಸುಮಾರು ನಾಲ್ಕು ವರ್ಷಗಳ ಹಿಂದೆ ರಷ್ಯಾದ ಆಕ್ರಮಣದೊಂದಿಗೆ ಪ್ರಾರಂಭವಾದ ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಒತ್ತಾಯಿಸಲು ಟ್ರಂಪ್‌ ಅಸಮರ್ಥತೆಯಿಂದ ನಿರಾಶೆಗೊಂಡಿದ್ದಾರೆ.

ನಿರ್ಣಯಕ್ಕೆ ಪ್ರಾಥಮಿಕ ಅಡಚಣೆ ಎಂದು ಅವರು ಹೆಚ್ಚಾಗಿ ವಿವರಿಸುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಬಗ್ಗೆ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಮತ್ತು ಅವರು ನಾಳೆ ಉಕ್ರೇನಿಯನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವರನ್ನು ಭೇಟಿಯಾಗಲಿದ್ದಾರೆ. ಚೀನಾ ನಂತರ ಭಾರತವು ರಷ್ಯಾದ ತೈಲವನ್ನು ಖರೀದಿಸುವ ಎರಡನೇ ಅತಿದೊಡ್ಡ ದೇಶವಾಗಿದೆ ಮತ್ತು ಆಗಸ್ಟ್‌ನಲ್ಲಿ ಟ್ರಂಪ್‌ ಭಾರತವನ್ನು ಹೆಚ್ಚಿನ ಸುಂಕಗಳೊಂದಿಗೆ ಶಿಕ್ಷಿಸಿದ್ದರು.

ವರದಾನವಾಯಿತು ಶಕ್ತಿ ಯೋಜನೆ, ಶೇ.80 ರಷ್ಟು ಮಹಿಳಾ ಭಕ್ತರಿಂದಲೇ ಹಾಸನಾಂಬ ದರ್ಶನ

ಹಾಸನ,ಅ.16-ವರ್ಷಕ್ಕೊಮೆ ದರ್ಶನ ಭಾಗ್ಯ ನೀಡುವ ಶಕ್ತಿ ದೇವತೆ ಹಾಸನಾಂಬ ದರ್ಶನಕ್ಕೆ ರಾಜ್ಯದ ವಿವಿಧ ಮೂಲಗಳಿಂದ ಲಕ್ಷಾಂತರ ಮಹಿಳಾ ಭಕ್ತರು ಆಗಮಿಸುತ್ತಿದ್ದು, ಶಕ್ತಿ ಯೋಜನೆ ವರದಾನವಾಗಿದೆ.ಸಾರ್ವಜನಿಕ ದರ್ಶನ ಪ್ರಾರಂಭವಾದ ಕಳೆದ 6 ದಿನಗಳಿಂದ ಭೇಟಿ ನೀಡಿದ ಭಕ್ತರಲ್ಲಿ ಶೇ.80 ರಷ್ಟು ಮಹಿಳಾ ಭಕ್ತರೆ ಇದ್ದಾರೆ. ಸಾರಿಗೆ ಬಸ್‌‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವಿರುವುದರಿಂದ ಕಳೆದ ವರ್ಷಕ್ಕಿಂತ ಈ ಭಾರಿ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ.

ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ, ರಾಯಚೂರು, ಯಾದಗಿರಿ,ದಾರವಾಡ, ಚಿತ್ರದುರ್ಗ, ತುಮಕೂರು, ಕೋಲಾರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆ ,ತಾಲ್ಲೂಕುಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ಆ.10 ರಿಂದ 15 ರ ವರೆಗೆ ಸುಮಾರು 8,84,503 ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಮಳೆ, ಗಾಳಿ, ಹಗಲು-ರಾತ್ರಿ ಲೆಕ್ಕಿಸದೇ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾಗಿದ್ದಾರೆ. ಈ ಭಾರಿ ಜಿಲ್ಲಾಡಳಿತ ವತಿಯಿಂದ ಬಹಳ ಅಚ್ಚುಕಟ್ಟಾಗಿ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ನಿರಾಸದಾಯಕವಾಗಿ ದರ್ಶನ ಪಡೆಯುತ್ತಿದ್ದಾರೆ.

ಇನ್ನು 7 ದಿನಗಳ ಕಾಲ ದರ್ಶನಕ್ಕೆ ಅವಕಾಶವಿದ್ದು, ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.ಈ ಭಾರಿ ಚಲನಚಿತ್ರ ನಟ-ನಟಿಯರು ,ಜನಪ್ರತಿನಿಧಿಗಳು, ಗಣ್ಯರು ಭೇಟಿ ನೀಡಿ ಶಿಸ್ತಾಗಿ ಶಿಷ್ಟಾಚಾರ ಪಾಲನೆ ಮಾಡುತ್ತಾ ದರ್ಶನ ಪಡೆದಿದ್ದಾರೆ.

ದೇವಿಯ ಅಲಂಕಾರ ಬದಲಾವಣೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2 ರಿಂದ 3.30 ರ ವರೆಗೆ ದರ್ಶನ ವಿರಲಿಲ್ಲ. ಅದೆ ರೀತಿ ರಾತ್ರಿ 12 ರಿಂದ ಬೆಳಗ್ಗೆ 5 ರವರೆಗೆ ದರ್ಶನ ಸೌಲಭ್ಯವಿರುವುದಿಲ್ಲ.
ಪುನಃ ನಾಳೆ ಬೆಳಗ್ಗೆ ಎಂದಿನಂತೆ ದರ್ಶನ ಸಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡ ರವರು ತಿಳಿಸಿದ್ದಾರೆ.

ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸದಂತೆ ನಿಷೇಧಿಸಲು ಸಿಎಂಗೆ ಪ್ರಿಯಾಂಕ ಖರ್ಗೆ ಮತ್ತೊಂದು ಪತ್ರ

ಬೆಂಗಳೂರು, ಅ.16- ಶಾಲಾ ಕಾಲೇಜು, ಪಾರ್ಕ್‌ ಸೇರಿದಂತೆ ಸರ್ಕಾರಿ ಸ್ವತ್ತುಗಳಲ್ಲಿ ಆರ್‌ಎಸ್‌‍ಎಸ್‌‍ನ ಚಟುವಟಿಕೆಗಳನ್ನು ನಿರ್ಬಂಧಿಸಬೇಕೆಂದು ಪತ್ರ ಬರೆದು, ವಿವಾದ ಸೃಷ್ಟಿಸಿರುವ ಸಚಿವ ಪ್ರಿಯಾಂಕ ಖರ್ಗೆ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರಿ ನೌಕರರು ಯಾವುದೇ ಸಂಘಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಕಟ್ಟು ನಿಟ್ಟಿನ ನಿಷೇಧ ಜಾರಿಗೊಳಿಸಲು ಮತ್ತೊಂದು ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆಯಲಾಗಿರುವ ಪತ್ರದಲ್ಲಿ ಪ್ರಿಯಾಂಕ ಖರ್ಗೆ, ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರುಗಳಿಗೆ ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳು, 2021 ಅಡಿ ನಿಯಮ 5(1) ಪ್ರಕಾರ ಜಾರಿಯಲ್ಲಿರುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಲು ಆದೇಶಿಸಬೇಕು ಎಂದಿದ್ದಾರೆ.

ಯಾರೇ ಸರ್ಕಾರಿ ನೌಕರನು, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರತಕ್ಕದ್ದಲ್ಲ ಅಥವಾ ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ, ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ.

ಆದರು ಸಹ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ರಾಜ್ಯದ ಸರ್ಕಾರಿ ಅಧಿಕಾರಿ ಮತ್ತು ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಹಾಗೂ ಇದನ್ನು ಉಲ್ಲಂಘಿಸುವ ಅಧಿಕಾರಿ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ತಿಳಿಸುವ ಸುತ್ತೋಲೆಯನ್ನು ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಪ್ರಿಯಾಂಕ ಖರ್ಗೆ ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರಿ ಸ್ವತ್ತುಗಳಲ್ಲಿ ಸಂಘ ಪರಿವಾರದ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಪತ್ರ ಬರೆದಿದ್ದ ಪ್ರಿಯಾಂಕ ಖರ್ಗೆ ಅವರ ವಿರುದ್ಧ ನಾನಾ ರೀತಿಯ ಟೀಕೆಗಳು ಕೇಳಿ ಬಂದಿದ್ದವು. ಕೆಲವು ದುಷ್ಕರ್ಮಿಗಳು ನಿರಂತರವಾಗಿ ಕರೆ ಮಾಡಿ ತಮಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಖುದ್ದು ಸಚಿವರು ಹೇಳಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ವಿರುದ್ದ ಬಾರಿ ಪ್ರಮಾಣದ ಟೀಕೆಗಳೇ ಕೇಳಿ ಬರುತ್ತಲೇ ಇವೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲೂ ತಾವು ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಹೇಳುತ್ತಲೇ ಸಚಿವರು ಮತ್ತೊಂದು ಪತ್ರ ಬರೆಯುವ ಮೂಲಕ ಸಂಘ ಪರಿವಾರದ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-10-2025)

ನಿತ್ಯ ನೀತಿ : ಅವಿಶ್ರಾಂತ, ನಿಷ್ಕಾಮ ಕರ್ಮಯೋಗಿಗಳಾದ ಸೈನಿಕರ ತ್ಯಾಗ, ಬಲಿದಾನವು ನಮ್ಮ ನೆಮ್ಮದಿಗೆ ಕಾರಣವಾಗಿದೆ. ಅವರನ್ನು ನಮ್ಮ ಹೃನ್ಮನಗಳಲ್ಲಿ ಸದಾ ಸ್ಮರಿಸಬೇಕು.

ಪಂಚಾಂಗ : ಗುರುವಾರ, 16-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಕೃಷ್ಣ / ತಿಥಿ: ದಶಮಿ / ನಕ್ಷತ್ರ: ಆಶ್ಲೇಷಾ / ಯೋಗ: ಶುಭ / ಕರಣ: ಬವ

ಸೂರ್ಯೋದಯ – ಬೆ.06.10
ಸೂರ್ಯಾಸ್ತ – 06.00
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30

ರಾಶಿಭವಿಷ್ಯ :
ಮೇಷ
: ಕೆಲವು ದಾಖಲೆಗಳ ಹುಡುಕಾಟದಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ಸಮಯ ವ್ಯರ್ಥವಾಗಲಿದೆ.
ವೃಷಭ: ಆಹಾರ ವ್ಯತ್ಯಾಸ ದಿಂದ ಪಿತ್ತ ಸಂಬಂ ಅನಾರೋಗ್ಯ ಕಾಡಬಹುದು.
ಮಿಥುನ: ಕಾನೂನು ವ್ಯವಹಾರಗಳು ಶೀಘ್ರವಾಗಿ ಇತ್ಯರ್ಥವಾಗಲಿವೆ. ದೂರ ಪ್ರಯಾಣ ಮಾಡುವಿರಿ.

ಕಟಕ: ಯಾವುದೇ ಪರಿಸ್ಥಿತಿಯಲ್ಲೂ ಅವಸರದ ತೀರ್ಮಾನ ಕೈಗೊಳ್ಳುವುದು ಸೂಕ್ತವಲ್ಲ.
ಸಿಂಹ:ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.
ಕನ್ಯಾ: ಹೊಸ ವ್ಯವಹಾರ ವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.

ತುಲಾ: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಪಠ್ಯದ ವಿಚಾರಕ್ಕಿಂತ ಪಠ್ಯೇತರ ವಿಚಾರದಲ್ಲಿ ಆಸಕ್ತಿ ಮೂಡಲಿದೆ.
ಧನುಸ್ಸು: ಮನೆ ನಿರ್ಮಾಣ ಕೆಲಸದಲ್ಲಿರುವ ಅಡೆತಡೆಗಳು ಸಹೋದರರು, ಬಂಧುಗಳು ನೀಡುವ ಸಲಹೆ-ಸೂಚನೆಗಳಿಂದ ದೂರವಾಗಲಿವೆ.

ಮಕರ: ಸ್ವ ಉದ್ಯೋಗಿ ಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿವೆ.
ಕುಂಭ: ಉನ್ನತ ಅ ಕಾರಿಗಳಿಗೆ ಹೊರ ರಾಜ್ಯಗಳಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ.
ಮೀನ: ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮನದಲ್ಲಿರುವ ದುಗುಡ ನಿವಾರಿಸಿಕೊಳ್ಳಲು ಯತ್ನಿಸುವಿರಿ.

ಬೆಂಗಳೂರಿನ ಮಹಿಳೆಯರೇ ಹುಷಾರ್ : 1 ರೂ. ಬಡ್ಡಿಗೆ ಲೋನ್‌ ಕೊಡುವುದಾಗಿ ಹಣ ದೋಚುತ್ತಿದೆ ಗ್ಯಾಂಗ್

ಬೆಂಗಳೂರು,ಅ.15-ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಹಣ ದೋಚುವ ಮಹಿಳಾ ಗ್ಯಾಂಗ್‌ ನಗರದಲ್ಲಿದೆ ಎಚ್ಚರಿಕೆ. ಕೇವಲ 1 ರೂ. ಬಡ್ಡಿಗೆ ಲೋನ್‌ ಕೊಡಿಸುವುದಾಗಿ ಹೇಳಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಅವರನ್ನು ಸಂಪರ್ಕಿಸಿ ಮರುಳು ಮಾಡುವ ಈ ಗ್ಯಾಂಗ್‌ ತದನಂತರದಲ್ಲಿ ಮೊದಲ ಮೂರು ಕಂತಿನ ಹಣವೆಂದು ಹಾಗೂ ಸರ್ವಿಸ್‌‍ ಚಾರ್ಜ್‌ ಎಂದು ಹಣ ಪಡೆದು ಲೋನ್‌ ಕೊಡದೆ ಕಣರೆಯಾಗುತ್ತಿದೆ.

ಈ ಮಹಿಳಾ ಗ್ಯಾಂಗ್‌ ನಗರದ ವಿವಿಧ ಕಡೆಗಳಲ್ಲಿ ಸುತ್ತಾಡುತ್ತಾ ಅಮಾಯಕ ಮಹಿಳೆಯರನ್ನು ಯಾಮಾರಿಸಿ ಹಣ ಪೀಕಿ ವಂಚಿಸುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದಿರಬೇಕಿದೆ.
ಸುಬ್ಬಲಕ್ಷ್ಮಿ ಚಿಟ್‌ ಫಂಡ್‌ ಹೆಸರಿನಲ್ಲಿ 1 ರೂ. ಬಡ್ಡಿಗೆ 5 ಲಕ್ಷ, 10 ಲಕ್ಷ, 15 ಲಕ್ಷ ಲೋನ್‌ ಕೊಡಿಸುವುದಾಗಿ ಗ್ರಾಹಕರೊಬ್ಬರಿಂದ ಲೋನ್‌ ಸರ್ವಿಸ್‌‍ ಚಾರ್ಜ್‌ ಎಂದು ಹೇಳಿ 30 ರೂ. ಹಣ ಈ ಗ್ಯಾಂಗ್‌ ಪಡೆದುಕೊಂಡಿತ್ತು.

ಈ ಗ್ಯಾಂಗ್‌ನ ಪ್ರಮುಖ ಆರೋಪಿಯೊಬ್ಬಳು ಚಿಟ್‌ ಫಂಡ್‌ನಲ್ಲಿ ನಮ ಸಂಬಂಧಿ ಕೆಲಸ ಮಾಡುತ್ತಿದ್ದು, ಅವರ ಕಡೆಯಿಂದ 10 ಲಕ್ಷ ಲೋನ್‌ಕೊಡಿಸುತ್ತೇನೆ ಕೇವಲ 1 ರೂ. ಬಡ್ಡಿಯಷ್ಟೆ ಎಂದು ಗ್ರಾಹಕರನ್ನು ನಂಬಿಸಿದ್ದಾಳೆ.

ಲೋನ್‌ ಬೇಕಾದರೆ ಮೂರು ಕಂತಿನ ಇಎಂಐ ಹಣವನ್ನು ಮೊದಲೇ ಕೊಡಬೇಕು. ತಿಂಗಳಿಗೆ 10 ಸಾವಿರದಂತೆ 30 ಸಾವಿರ ಹಣದ ಜೊತೆಗೆ ಸರ್ವಿಸ್‌‍ ಶುಲ್ಕ 5 ಸಾವಿರ ರೂ. ಕಟ್ಟಬೇಕೆಂದು ಹೇಳಿ ಹಣ ಪಡೆದುಕೊಂಡು ಲೋನ್‌ ಕೊಡಿಸದೆ ಪ್ರಮುಖ ಆರೋಪಿ ಸೇರಿದಂತೆ ಗ್ಯಾಂಗ್‌ನ ಇತರರು ತಲೆ ಮರೆಸಿಕೊಂಡಿದ್ದಾರೆೆ.

ಈ ರೀತಿ ವಂಚಿಸಿರುವ ಬಗ್ಗೆ ಕೆಪಿ ಅಗ್ರಹಾರ ಹಾಗೂ ಬಸವೇಶ್ವರ ನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.ಈ ಗ್ಯಾಂಗ್‌ ಕೆಪಿ ಅಗ್ರಹಾರದಲ್ಲಿ 16 ಮಹಿಳೆಯರಿಗೆ ಹಾಗೂ ಬಸವೇಶ್ವರ ನಗರದಲ್ಲಿ 1 ಮಹಿಳೆಗೆ ಮೋಸ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಪೊಲೀಸರು ಈ ಗ್ಯಾಂಗ್‌ನ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ. ಈ ಮಹಿಳಾ ಗ್ಯಾಂಗ್‌ ನಗರದ ಬೇರೆ ಬೇರೆ ಕಡೆಗಳಲ್ಲಿಯೂ ವಂಚಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮೊಬೈಲ್‌ ಕಳೆದುಹೋದರೆ-ಕಳ್ಳತನವಾದರೆ ದೂರು ನೀಡಿ, ಇಲ್ಲದಿದ್ರೆ ಸಂಕಷ್ಟ ಗ್ಯಾರಂಟಿ

– ವಿ.ರಾಮಸ್ವಾಮಿ ಕಣ್ವ
ಒಂದ್‌ ಕಾಲದಲ್ಲಿ ದೂರವಾಣಿ ದೂರವಾಗಿಯೇ ಉಳಿದಿತ್ತು. ಉಳ್ಳವರು ಮಾತ್ರ ಹಲೋ ಎನ್ನುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಮೊಬೈಲ್‌ ಇಲ್ಲದ ಕೈಗಳಿಲ್ಲ. ಹಣ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರತಿಯೊಬ್ಬ ಶ್ರೀಸಾಮಾನ್ಯನ ಬಳಿ ಈಗ ವಿವಿಧ ರೀತಿಯ ಮೊಬೈಲ್‌ ಸೆಟ್‌ಗಳು ಇದ್ದೇ ಇರುತ್ತವೆ. ಇನ್ನೂ ಕೆಲವರ ಬಳಿ ಎರಡಲ್ಲ, ಮೂರು ಸೆಟ್‌ಗಳು ಸಹ ಇವೆ.

ಮೊಬೈಲ್ಲೇ ಸರ್ವಸ್ವ:
ಸಂಪರ್ಕ ಕ್ಷೇತ್ರದಲ್ಲಿ ಉಂಟಾದ ಕ್ರಾಂತಿಯಿಂದ ಈಗ ಎಲ್ಲರ ಕೈಗಳಲ್ಲೂ ಮೊಬೈಲ್‌ಗಳು ರಿಂಗಾಣಿಸುತ್ತಿವೆ. ಬಹುತೇಕರ ದೈನಂದಿನ ಜೀವನ ಮೊಬೈಲ್‌ನಿಂದಲೇ ಆರಂಭವಾಗುತ್ತದೆ. ಅಂಗೈನಲ್ಲೇ ಕನ್ನಡಿ ಎನ್ನುವಂತೆ ಸುದ್ದಿ, ಸಿನಿಮಾ, ಧಾರಾವಾಹಿ, ಆರೋಗ್ಯ ಸೇರಿದಂತೆ ಹಲವಾರು ಮಾಹಿತಿಗಳು ಕುಳಿತಲ್ಲೇ, ನಿಂತಲ್ಲೇ ವೀಕ್ಷಿಸಬಹುದಾಗಿದೆ. ವ್ಯಾಪಾರ ಕ್ಷೇತ್ರದಲ್ಲೂ ಮೊಬೈಲ್‌ ತನ್ನ ಛಾಪು ಮೂಡಿಸಿವೆ.

ಇದರಿಂದ ದಿನಪತ್ರಿಕೆಗಳನ್ನು ಓದುವುದು, ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದು, ಬ್ಯಾಂಕ್‌ಗಳಿಗೆ ತೆರಳಿ ಹಣಕಾಸು ವ್ಯವಹಾರ ಮಾಡುವುದು, ಸ್ನೇಹಿತರು ಹಾಗೂ ನೆಂಟರ ಮನೆಗಳಿಗೆ ಹೋಗುವುದನ್ನು ಬಹುತೇಕ ಮಂದಿ ಮರೆತುಬಿಟ್ಟಿದ್ದಾರೆ. ಕೆಲವರಂತೂ ಕುಟುಂಬವನ್ನೇ ಬಿಟ್ಟಿಯಾರು, ಆದರೆ ಮೊಬೈಲ್‌ಅನ್ನು ಬಿಟ್ಟು ಇರಲಾರರು. ಅಷ್ಟರಮಟ್ಟಿಗೆ ಅದರ ಗೀಳು ಅಂಟಿಸಿಕೊಂಡಿದ್ದಾರೆ. ಇನ್ನೂ ಕೆಲವರಿಗೆ ಮೊಬೈಲ್‌ ನೋಡದಿದ್ದರೆ ನಿದ್ರೆಯೇ ಬರುವುದಿಲ್ಲವಂತೆ. ನಿಜ, ಮೊಬೈಲ್‌ ಬಳಸುವುದರಿಂದ ಬಹಳಷ್ಟು ಉಪಯೋಗಗಳಿವೆ. ಇದರಲ್ಲಿ ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ. ಒಳ್ಳೆಯದಕ್ಕೆ ಮಾತ್ರ ಬಳಸಬೇಕು. ಇಲ್ಲದಿದ್ದರೆ ಸಂಕಷ್ಟ ಎದುರಾಗುತ್ತದೆ.

ಜೋಪಾನ ಬಲು ಕಷ್ಟ:
ಒಮೆ ಮೊಬೈಲ್‌ ಸೆಟ್‌ ಕೊಳ್ಳುವುದು ಸುಲಭ. ಆದರೆ, ಅದನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಕಷ್ಟ. ಏಕೆಂದರೆ ಬಸ್‌‍, ರೈಲುಗಳಲ್ಲಿ ಪ್ರಯಾಣಿಸುವಾಗ, ಸ್ನೇಹಿತರ ಜೊತೆ ಕುಳಿತು ಹರಟೆ ಹೊಡೆಯುವಾಗ, ಹೊಟೇಲ್‌ಗಳಲ್ಲಿ ತಿಂಡಿ, ಊಟ ಮಾಡುವಾಗ ಕರೆ ಬಂದರೆ ಮಾತನಾಡಿ ಅಲ್ಲೇ ಇಟ್ಟು ತೆಗೆದುಕೊಂಡು ಹೋಗುವುದನ್ನೇ ಮರೆತುಬಿಡುತ್ತೇವೆ. ಯಾರಾದರೂ ಪ್ರಾಮಾಣಿಕರಿಗೆ ಅಥವಾ ಸ್ನೇಹಿತರಿಗೆ ಸಿಕ್ಕಿದಾಗ ಮಾತ್ರ ಮೊಬೈಲ್‌ ವಾಪಸ್‌‍ ತಂದು ಕೊಡುತ್ತಾರೆ. ಕಳ್ಳಕಾಕರ ಕೈಗೆ ಸಿಕ್ಕಿದರೆ ಅಪಾಯ ಕಟ್ಟಿಟ್ಟ ಬುತ್ತಿ..! ಬೆಂಗಳೂರು ನಗರದಲ್ಲಿ ಈ ಹಿಂದೆ ಸಿಕ್ಕ ಸಿಕ್ಕ ರಸ್ತೆಗಳಲ್ಲಿ ಹಗಲು-ರಾತ್ರಿ ಎನ್ನದೆ ದರೋಡೆಕೋರರು ಸರ ಅಪಹರಣ ಮಾಡುತ್ತಿದ್ದರು. ಈಗ ಅದೇ ರೀತಿ ಮೊಬೈಲ್‌ ಸೆಟ್‌ಗಳ ಅಪಹರಣವಾಗುತ್ತಿವೆ.

2023ರಲ್ಲಿ 385 ಮತ್ತು 2024ರಲ್ಲಿ 296 ಮೊಬೈಲ್‌ ಸೆಟ್‌ಗಳನ್ನು ದರೋಡೆಕೋರರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದರಲ್ಲಿ ಭಾರೀ ಬೆಲೆಯ ಸೆಟ್‌ಗಳೂ ಸೇರಿವೆ. ಕದ್ದ ದ್ವಿಚಕ್ರ ವಾಹನಗಳಲ್ಲಿ ನಗರದಲ್ಲಿ ಸುತ್ತಾಡುವ ದರೋಡೆಕೋರರು ರಾತ್ರಿ ವೇಳೆ ಒಂಟಿಯಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದು ಹೋಗುವವರು ಅಥವಾ ನಿರ್ಜನ ಪ್ರದೇಶದಲ್ಲಿ ನಿಂತು ಕ್ಯಾಬ್‌ ಬುಕ್‌ ಮಾಡುವವರು ಅಥವಾ ಡೆಲಿವರಿ ಮಾಡಲು ರಸ್ತೆ ಬದಿ ನಿಂತಿರುವ ಡೆಲಿವರಿ ಬಾಯ್‌ಗಳನ್ನೇ ಗುರಿ ಮಾಡಿಕೊಂಡು ಅವರುಗಳ ಮೊಬೈಲ್‌ಗಳಣ್ನು ಕಿತ್ತುಕೊಂಡು ಪರಾರಿಯಾಗುತ್ತಾರೆ.ಇನ್ನೂ ಕೆಲವು ದರೋಡೆಕೋರರು ತಡರಾತ್ರಿ ನಡೆದು ಹೋಗುವ ವ್ಯಕ್ತಿಗಳನ್ನೇ ಅಡ್ಡಗಟ್ಟಿ ಬೆದರಿಸಿ ಇಲ್ಲವೆ ಹಲ್ಲೆ ಮಾಡಿ ಹಣ-ಆಭರಣಗಳ ಜೊತೆಗೆ ಮೊಬೈಲ್‌ ಸೆಟ್‌ಗಳನ್ನೂ ಸಹ ಕಸಿದುಕೊಂಡು ಹೋಗುತ್ತಾರೆ.

ದುರಂತವೆಂದರೆ ದರೋಡೆಗೆ ಒಳಗಾದ ಅಥವಾ ಮೊಬೈಲ್‌ ಕಳೆದುಕೊಂಡ ಬಹುತೇಕ ಮಂದಿ ಪೊಲೀಸರಿಗೆ ದೂರು ನೀಡುವುದಿಲ್ಲ. ಹೋದರೆ ಹೋಗಲಿ ಹೊಸದೊಂದು ಸೆಟ್‌ ತೆಗೆದುಕೊಳ್ಳುವ ಎಂದು ನಿರ್ಧರಿಸುತ್ತಾರೆ. ಇದು ಮಹಾ ತಪ್ಪು. ದರೋಡೆಕೋರ ಅಥವಾ ಕಳ್ಳ ನಿಮ ಮೊಬೈಲ್‌ಅನ್ನು ಕಡಿಮೆ ಬೆಲೆಗೆ ಉಗ್ರಗಾಮಿಗಳಿಗೋ ಅಥವಾ ಸಮಾಜಘಾತುಕರಿಗೋ ಅಥವಾ ಅಪರಾಧದ ಹಿನ್ನೆಲೆಯುಳ್ಳ ಕ್ರಿಮಿನಲ್‌ಗಳಿಗೋ ಮಾರಾಟ ಮಾಡಿದರೆ ಏನು ಮಾಡುತ್ತೀರಿ..? ಕ್ರಿಮಿನಲ್‌ಗಳು ನಿಮ ನಂಬರ್‌ ಅಥವಾ ಮೊಬೈಲ್‌ ಸೆಟ್‌ ಬಳಸಿ ಘೋರ ಅಪರಾಧ ಕೃತ್ಯವೆಸಗಿದರೆ ತಕ್ಷಣವೇ ಪೊಲೀಸರು ನಿಮ ಮನೆ ಬಾಗಿಲು ತಟ್ಟುತ್ತಾರೆ. ಆಗ ಮಾಡದೆ ಇರುವ ತಪ್ಪಿಗೆ ಅಲೆದಾಡಬೇಕಾಗುತ್ತದೆ. ಮಿತಿಮೀರಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಚ್ಚರ..!

ಒಂದು ವೇಳೆ ನಿಮ ಮೊಬೈಲ್‌ ಸೆಟ್‌ ಕಳೆದುಹೋದರೆ ಅಥವಾ ಕಳುವಾದರೆ ಅಥವಾ ದರೋಡೆಯಾದರೆ ಮೊದಲು ಸಂಬಂಧಿಸಿದ ಟೆಲಿಕಾಂ ಸಂಸ್ಥೆಯನ್ನು ಸಂಪರ್ಕಿಸಿ ನಿಮ ಮೊಬೈಲ್‌ ನಂಬರ್‌ನ ಸಂಪರ್ಕವನ್ನು ಸ್ಥಗಿತಗೊಳಿಸಿ ನಂತರ ಹತ್ತಿರದ ಪೊಲೀಸ್‌‍ ಠಾಣೆಗೆ ಹೋಗಿ ದೂರು ಕೊಡಿ.

ಉದಾಸೀನ ಮಾಡಬೇಡಿ ಜೋಕೆ.!
ಪೊಲೀಸ್‌‍ ಇಲಾಖೆ ಜಾರಿಗೆ ತಂದಿರುವ ಇ-ಪೋರ್ಟಲ್‌ (CEIR Portal) ನಲ್ಲಿ ದೂರು ದಾಖಲಿಸಿ ಮನೆಯಲ್ಲೇ ಕುಳಿತು ಪೋರ್ಟಲ್‌ನಲ್ಲಿ ಸುಲಭವಾಗಿ ಸಂಪರ್ಕಿಸಬಹುದು ಅಥವಾ ಇ-ಲಾಸ್ಟ್‌ನಲ್ಲಿ ತಿಳಿಸಿ ಯಾವುದೇ ಸಂದರ್ಭವಾದರೂ ಸರಿಯೇ ದೂರು ದಾಖಲಿಸುವುದನ್ನು ಮಾತ್ರ ಮರೆಯಬೇಡಿ. ಉದಾಸೀನ ಮಾಡಿದರೆ ಸಂಕಷ್ಟಕ್ಕೆ ಒಳಗಾಗುತ್ತೀರಿ ಜೋಕೆ..!

ಹೆಚ್ಚಿನ ಸಂಖ್ಯೆಯಲ್ಲಿ
ಮೊಬೈಲ್‌ ಕಳ್ಳರು, ದರೋಡೆಕೋರ ರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಬೆಂಗಳೂರು ನಗರ ಪೊಲೀಸರು ವಿಫಲರಾಗಿದ್ದಾರೆ. ಇದು ಪೊಲೀಸರ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತದೆ.

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತದ ಸಾರಥ್ಯ

ನ್ಯೂಯಾರ್ಕ್‌, ಅ.15 (ಪಿಟಿಐ)- ಭಾರತವು 2026-28ರ ಅವಧಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ (ಯುಎನ್‌ಎಚ್‌ಆರ್‌ಸಿ) ಆಯ್ಕೆಯಾಗಿದ್ದು, ಇದು ಜಿನೀವಾ ಮೂಲದ ಹಕ್ಕುಗಳ ಸಂಸ್ಥೆಯಲ್ಲಿ ದೇಶದ ಏಳನೇ ಅವಧಿಯನ್ನು ಗುರುತಿಸುತ್ತದೆ. ನಿನ್ನೆ ನಡೆದ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಿದ ಯುಎನ್‌ಎಚ್‌ಆರ್‌ಸಿ, ಭಾರತದ ಮೂರು ವರ್ಷಗಳ ಅವಧಿ ಜನವರಿ 1, 2026 ರಂದು ಪ್ರಾರಂಭವಾಗಲಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.

ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್‌‍, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಎಲ್ಲಾ ನಿಯೋಗಗಳ ಅಗಾಧ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದರು.2026-28ರ ಅವಧಿಗೆ ಭಾರತ ಇಂದು ಏಳನೇ ಬಾರಿಗೆ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿದೆ ಎಂದು ಅವರು ಹೇಳಿದರು.

ಈ ಚುನಾವಣೆಯು ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳಿಗೆ ಭಾರತದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಜತಾಂತ್ರಿಕರು ಹೇಳಿದರು.ನಮ್ಮ ಅಧಿಕಾರಾವಧಿಯಲ್ಲಿ ಈ ಉದ್ದೇಶವನ್ನು ಪೂರೈಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.ಯುಎನ್‌ ಮಾನವ ಹಕ್ಕುಗಳ ಮಂಡಳಿಯು ಸಮಾನ ಭೌಗೋಳಿಕ ವಿತರಣಾ ನಿಯಮಗಳ ಅಡಿಯಲ್ಲಿ ಮೂರು ವರ್ಷಗಳ ಅವಧಿಗೆ ಯುಎನ್‌ ಜನರಲ್‌ ಅಸೆಂಬ್ಲಿಯಿಂದ ಆಯ್ಕೆಯಾದ 47 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.

ಐದು ಪ್ರಾದೇಶಿಕ ಗುಂಪುಗಳಿಗೆ ಕೌನ್ಸಿಲ್‌ ಸ್ಥಾನಗಳನ್ನು ಈ ಕೆಳಗಿನಂತೆ ಹಂಚಲಾಗಿದೆ: ಆಫ್ರಿಕನ್‌ ರಾಜ್ಯಗಳು, 13 ಸ್ಥಾನಗಳು; ಏಷ್ಯಾ-ಪೆಸಿಫಿಕ್‌ ರಾಜ್ಯಗಳು, 13 ಸ್ಥಾನಗಳು; ಪೂರ್ವ ಯುರೋಪಿಯನ್‌ ರಾಜ್ಯಗಳು, 6 ಸ್ಥಾನಗಳು; ಲ್ಯಾಟಿನ್‌ ಅಮೇರಿಕನ್‌ ಮತ್ತು ಕೆರಿಬಿಯನ್‌ ರಾಜ್ಯಗಳು, 8 ಸ್ಥಾನಗಳು; ಮತ್ತು ಪಶ್ಚಿಮ ಯುರೋಪಿಯನ್‌ ಮತ್ತು ಇತರ ರಾಜ್ಯಗಳು, 7 ಸ್ಥಾನಗಳು.

ಸತತ ಎರಡು ಅವಧಿಗಳ ನಂತರ 2024 ರಲ್ಲಿ ಯುಎನ್‌ಎಚ್‌ಆರ್‌ಸಿಯಲ್ಲಿ ಕೊನೆಯ ಬಾರಿಗೆ ಸೇವೆ ಸಲ್ಲಿಸಿದ ಭಾರತ, ಈ ವರ್ಷ ಸ್ವಲ್ಪ ಅಂತರವನ್ನು ತೆಗೆದುಕೊಂಡು 2026-28 ಅವಧಿಗೆ ಚುನಾವಣೆಗೆ ಸ್ಪರ್ಧಿಸುವ ಮೊದಲು ಮೂರನೇ ನೇರ ಅಧಿಕಾರಾವಧಿಯನ್ನು ನಿರ್ಬಂಧಿಸುವ ನಿಯಮಗಳಿಗೆ ಅನುಸಾರವಾಗಿದೆ.2011, 2018 ಮತ್ತು 2025 ರಲ್ಲಿ ಮೂರು ಕಡ್ಡಾಯ ವಿರಾಮಗಳನ್ನು ಹೊರತುಪಡಿಸಿ, 2006 ರಲ್ಲಿ ರಚನೆಯಾದಾಗಿನಿಂದ ಭಾರತವು ನಿರಂತರವಾಗಿ ಕೌನ್ಸಿಲ್‌ನ ಸದಸ್ಯ ರಾಷ್ಟ್ರವಾಗಿದೆ.

ಎಗ್ಗಿಲ್ಲದೆ ನಡೆಯುತ್ತಿದೆ ಪಡಿತರ ಅಕ್ಕಿ ಕಳ್ಳಸಾಗಾಣಿಕೆ : ಆರ್‌.ಅಶೋಕ್‌ ಆಕ್ರೋಶ

ಬೆಂಗಳೂರು,ಅ.15– ಕಲ್ಯಾಣ ಕರ್ನಾಟಕದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಪಡಿತರ ಅಕ್ಕಿ ಕಳ್ಳಸಾಗಾಣಿಕೆ ದಂಧೆಯಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲೆಷ್ಟು? ಎಂದು ಸಚಿವ ಪ್ರಿಯಾಂಕ ಖರ್ಗೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಬಡವರಿಗೆ ಸೇರಬೇಕಾದ ಅಕ್ಕಿಯಲ್ಲೂ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರ ಮಾಡುತ್ತಿರುವ ಲಜ್ಜೆಗೆಟ್ಟ ಕಾಂಗ್ರೆಸ್‌‍ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಈ ಕಳ್ಳದಂಧೆಯಲ್ಲಿ ನಿಮ ಪಾಲೆಷ್ಟು? ನಿಮ ಪರಮೋಚ್ಛ ನಾಯಕ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಪಾಲೆಷ್ಟು? ಎಂದು ಪ್ರಶ್ನಿಸಿದ್ದಾರೆ.

ಪಡಿತರ ಅಕ್ಕಿ ಕಳ್ಳಸಾಗಾಣಿಕೆ ದಂಧೆಯನ್ನು ಸಚಿವ ಪ್ರಿಯಾಂಕ ಖರ್ಗೆ ಅವರೇ ಯಾವಾಗ ನಿಷೇಧ ಮಾಡುತ್ತೀರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಬಿಡಿಗಾಸಿನ ಯುವನಿಧಿ ಅಲ್ಲ ಸ್ವಾಮಿ. ಶಾಶ್ವತವಾಗಿ ಅನ್ನ ಹಾಕುವ ಉದ್ಯೋಗದ ಗ್ಯಾರಂಟಿ ಕೊಡಿ. ಸಿಎಂ ಹಾಗೂ ಡಿಸಿಎಂ ಅವರೇ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 3 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಭರ್ತಿ ಮಾಡಿಕೊಂಡು ನಮ ಯುವಕರಿಗೆ ಉದ್ಯೋಗದ ಗ್ಯಾರಂಟಿ ಕೊಡಿ ಸ್ವಾಮಿ ಎಂದು ಒತ್ತಾಯಿಸಿದ್ದಾರೆ.

ಯುವನಿಧಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಯುವಕರ ಮೂಗಿಗೆ ತುಪ್ಪ ಸವರುವ ನಾಟಕ ಸಾಕು. ನಿಮಗೆ ನಿಜವಾಗಿಯೂ ನಾಡಿನ ಯುವಕರ ಭವಿಷ್ಯದ ಬಗ್ಗೆ ಬದ್ಧತೆ ಇದ್ದರೆ, ನೀವು ಹೇಳಿಕೊಳ್ಳುವಂತೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಖಾಲಿ ಇರುವ ಎಲ್ಲಾ 3 ಲಕ್ಷ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಮುಂದಿನ ಆರು ತಿಂಗಳಲ್ಲಿ ಭರ್ತಿ ಮಾಡಿಕೊಂಡು ಉದ್ಯೋಗದ ಗ್ಯಾರಂಟಿ ಕೊಡಿ ಎಂದು ಆಗ್ರಹಿಸಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ ಬೆಂಗಳೂರಿನ ರಸ್ತೆಗುಂಡಿಗಳ ದುಸ್ಥಿತಿಯ ಬಗ್ಗೆ ಉದ್ಯಮಿಗಳು, ಸಾರ್ವಜನಿಕರು ದನಿ ಎತ್ತಿದರೆ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ವಿಶ್ವಾಸ ತುಂಬುವುದು ಬಿಟ್ಟು ಕಾಂಗ್ರೆಸ್‌‍ ಸಚಿವರು, ಅವರ ಮೇಲೆಯೇ ಮುಗಿಬೀಳುತ್ತಿದ್ದಾರೆ. ಸಚಿವ ಎಂ.ಬಿ.ಪಾಟೀಲ್‌ ಅವರೇ, ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಡಿಸಿಎಂ ಶಿವಕುಮಾರ್‌ ಅವರು ನೋಡಿದರೆ, ಇದ್ದರೆ ಇರಿ ಇಲ್ಲವೇ ಹೋಗಿ ಎನ್ನುವ ಬೇಜವಾಬ್ದಾರಿ ಮಾತುಗಳ ಮೂಲಕ ಉದ್ಯಮಿಗಳ, ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಸದಾ ಆರ್‌ಎಸ್‌‍ಎಸ್‌‍ ಜಪದಲ್ಲಿ ಬ್ಯುಸಿ ಆಗಿರುವ ಐಟಿ-ಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಅವರ ಖಾತೆ ಯಾವುದು? ಅವರ ಜವಾಬ್ದಾರಿ ಏನು? ಎನ್ನುವುದೇ ನೆನಪಿದ್ದಂತಿಲ್ಲ. ಆದರೆ ತಮಂತಹ ಹಿರಿಯ ಅನುಭವಿ ಸಚಿವರಿಂದ ಈ ರೀತಿಯ ಬೇಜವಾಬ್ದಾರಿ ಮಾತುಗಳನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಉದ್ಯಮಿಗಳು, ಕೈಗಾರಿಕೆಗಳು ತಾವೇ ರಸ್ತೆ ಗುಂಡಿ ಮುಚ್ಚಬೇಕು ಎನ್ನುವುದಾದರೆ ಅವರು ತೆರಿಗೆ ಯಾಕೆ ಕಟ್ಟಬೇಕು? ಸರ್ಕಾರ ಯಾಕೆ ಇರಬೇಕು? ಸಚಿವರು ಯಾಕಿರಬೇಕು? ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವದ ಪಾಲುದಾರರಾದ ಉದ್ಯಮಿಗಳು, ಸಾರ್ವಜನಿಕರು ಟೀಕೆ ಮಾಡುವುದು ಸಹಜ. ಅದು ಮತದಾರರ ಸಂವಿಧಾನದತ್ತ ಹಕ್ಕು. ಅದನ್ನು ಸಕಾರಾತಕವಾಗಿ ತೆಗೆದುಕೊಂಡು ಸ್ಪಂದಿಸುವುದು ಬಿಟ್ಟು ಈ ರೀತಿ ಬೇಜವಾಬ್ದಾರಿಯ ಮಾತುಗಳನ್ನು ಆಡಿದರೆ ಕರ್ನಾಟಕದ ಪ್ರಜ್ಞಾವಂತ ಮತದಾರರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಕಾಂಗ್ರೆಸ್‌‍ ನಾಯಕರು ಆರ್‌ ಎಸ್‌‍ ಎಸ್‌‍ ನಿಷೇಧ ಮಾಡುವ ಚಿಂತೆಯಲ್ಲಿದ್ದರೆ, ಅಲ್ಲಿ ಉದ್ಯಮಗಳು ಕರ್ನಾಟಕವನ್ನೇ ನಿಷೇಧ ಮಾಡುತ್ತಿವೆ. ಇದಕ್ಕೆ ಯಾರು ಕಾರಣ? ಕಾಂಗ್ರೆಸ್‌‍ ಸರ್ಕಾರದ ಬೇಜವಾಬ್ದಾರಿತನ, ಅಸಮರ್ಥ ಆಡಳಿತ, ಉದ್ಯಮ-ವಿರೋಧಿ ನೀತಿಗಳು.ಇದರಿಂದ ಯಾರಿಗೆ ನಷ್ಟ? ಉದ್ಯೋಗ ಸೃಷ್ಟಿ ಇಲ್ಲದೆ ಕರ್ನಾಟಕದ ಯುವಕರಿಗೆ ನಷ್ಟ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇನ್ನಾದರೂ ಕಾಂಗ್ರೆಸ್‌‍ ಸರ್ಕಾರದ ಮಂತ್ರಿಗಳು ಅನವಶ್ಯಕ ಹೇಳಿಕೆಗಳನ್ನು ಕೊಡುವುದನ್ನು ಬಿಡಬೇಕು. ಉದ್ಯಮ-ಸ್ನೇಹಿ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕದ ವರ್ಚಸ್ಸಿಗೆ ಕಳಂಕ ತರದೇ ಉದ್ಯಮ, ಹೂಡಿಕೆಯನ್ನು ಆಕರ್ಷಿಸುವ ಮೂಲಕ ನಮ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವತ್ತ ಗಮನ ಹರಿಸಬೇಕು ಎಂದು ಅಶೋಕ್‌ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ನಾಳೆ ಆಂಧ್ರಕ್ಕೆ ಮೋದಿ : 13,430 ಕೋಟಿ ರೂ.ಗಳ ಯೋಜನೆಗೆ ಚಾಲನೆ

ಅಮರಾವತಿ, ಅ. 15– ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ಆಂಧ್ರಪ್ರದೇಶಕ್ಕೆ ಬಹು ಕಾರ್ಯಕ್ರಮಗಳಿಗಾಗಿ ಭೇಟಿ ನೀಡಲಿದ್ದಾರೆ, ಈ ಸಂದರ್ಭದಲ್ಲಿ ಅವರು 13,430 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕರ್ನೂಲ್‌ನಲ್ಲಿ ಸೂಪರ್‌ ಜಿಎಸ್‌‍ಟಿ ಸೂಪರ್‌ ಸೇವಿಂಗ್ಸ್ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಲಿದ್ದಾರೆ.ಈ ಯೋಜನೆಗಳು ಕೈಗಾರಿಕೆ, ವಿದ್ಯುತ್‌ ಪ್ರಸರಣ, ರಸ್ತೆಗಳು,
ರೈಲ್ವೆಗಳು, ರಕ್ಷಣಾ ಉತ್ಪಾದನೆ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಪ್ರಮುಖ ಕ್ಷೇತ್ರಗಳನ್ನು ವ್ಯಾಪಿಸಿವೆ.ಪ್ರಧಾನಿ ಮೋದಿ ಗುರುವಾರ ಬೆಳಿಗ್ಗೆ ನಂದ್ಯಾಲ್‌ ಜಿಲ್ಲೆಯ ಶ್ರೀಶೈಲಂನಲ್ಲಿರುವ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

ನಂತರ, ಅವರು ಶ್ರೀಶೈಲಂನಲ್ಲಿರುವ ಶ್ರೀ ಶಿವಾಜಿ ಸ್ಪೂರ್ತಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ನಂತರ ಕರ್ನೂಲ್‌ಗೆ ತೆರಳಿ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ.ಮೋದಿ ಸುಮಾರು 13,430 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆ ಮತ್ತು ದೇಶಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಯೋಜನೆಗಳು ಪ್ರಮುಖ ವಲಯಗಳಲ್ಲಿ ವ್ಯಾಪಿಸಿವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕರ್ನೂಲ್‌‍- ಪೂಲಿಂಗ್‌ ಸ್ಟೇಷನ್‌ನಲ್ಲಿ 2,880 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯಲ್ಲಿ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸಲು ಅವರು ಅಡಿಪಾಯ ಹಾಕಲಿದ್ದಾರೆ.ಈ ಯೋಜನೆಯು 765 ಕೆವಿ ಡಬಲ್‌‍-ಸರ್ಕ್‌ಯೂಟ್‌ ಕರ್ನೂಲ್‌‍- ಪೂಲಿಂಗ್‌ ಸ್ಟೇಷನ್‌‍-ಚಿಲಕಲುರಿಪೇಟೆ ಪ್ರಸರಣ ಮಾರ್ಗದ ನಿರ್ಮಾಣವನ್ನು ಒಳಗೊಂಡಿದೆ, ಇದು 6,000 ರಷ್ಟು ರೂಪಾಂತರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ರಾಷ್ಟ್ರದ ಬೆಳವಣಿಗೆಯನ್ನು ಬೆಂಬಲಿಸಲು ನವೀಕರಿಸಬಹುದಾದ ಶಕ್ತಿಯ ದೊಡ್ಡ ಪ್ರಮಾಣದ ಪ್ರಸರಣವನ್ನು ಸಕ್ರಿಯಗೊಳಿಸುತ್ತದೆ.

ಅದೇ ರೀತಿ, ಕರ್ನೂಲ್‌ನ ಓರ್ವಕಲ್‌ ಕೈಗಾರಿಕಾ ಪ್ರದೇಶ ಮತ್ತು ಕಡಪದ ಕೊಪ್ಪರ್ತಿ ಕೈಗಾರಿಕಾ ಪ್ರದೇಶಕ್ಕೆ ಅವರು ಶಿಲಾನ್ಯಾಸ ಮಾಡಲಿದ್ದಾರೆ, ಒಟ್ಟು 4,920 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯೊಂದಿಗೆ.ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್‌ ಮತ್ತು ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಲಿಮಿಟೆಡ್‌ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಆಧುನಿಕ ಬಹು-ವಲಯ ಕೈಗಾರಿಕಾ ಕೇಂದ್ರಗಳು ಪ್ಲಗ್‌‍-ಅಂಡ್‌‍-ಪ್ಲೇ ಮೂಲಸೌಕರ್ಯ ಮತ್ತು ವಾಕ್‌‍-ಟು-ವರ್ಕ್‌ ಪರಿಕಲ್ಪನೆಯನ್ನು ಹೊಂದಿವೆ.

ಈ ಕೇಂದ್ರಗಳು 21,000 ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಸುಮಾರು ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಇದು ದಕ್ಷಿಣ ರಾಜ್ಯದ ರಾಯಲಸೀಮಾ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.ಪ್ರಧಾನಮಂತ್ರಿಯವರು 960 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಸಬ್ಬಾವರಂನಿಂದ ಶೀಲಾನಗರದವರೆಗಿನ ಆರು ಪಥಗಳ ಹಸಿರುಮನೆ ಹೆದ್ದಾರಿಗೆ ಅಡಿಪಾಯ ಹಾಕಲಿದ್ದಾರೆ.

ಈ ಯೋಜನೆಯು ಬಂದರು ನಗರ ವಿಶಾಖಪಟ್ಟಣದಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ವ್ಯಾಪಾರ ಮತ್ತು ಉದ್ಯೋಗವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.ಇದಲ್ಲದೆ, ಪ್ರಧಾನಮಂತ್ರಿಯವರು ಕಡಪ – ನೆಲ್ಲೂರು ಗಡಿಯಿಂದ ಸಿಎಸ್‌‍ ಪುರಂವರೆಗೆ ಅಗಲೀಕರಣಗೊಳಿಸುವ ಪಿಲೇರು-ಕಲೂರು ವಿಭಾಗದ ರಸ್ತೆಯ ಚತುಷ್ಪಥ ಮತ್ತು -165 ರಲ್ಲಿ ಗುಡಿವಾಡ ಮತ್ತು ನುಜೆಲ್ಲಾ ರೈಲು ನಿಲ್ದಾಣಗಳ ನಡುವಿನ ಚತುಷ್ಪಥ ರೈಲ್‌ ಓವರ್‌ ಬ್ರಿಡ್‌್ಜ ಅನ್ನು ಉದ್ಘಾಟಿಸಲಿದ್ದಾರೆ.

ಅದೇ ರೀತಿ, ಅವರು -565 ರಲ್ಲಿ ಕಣಿಗಿರಿ ಬೈಪಾಸ್‌‍ ಅನ್ನು ಉದ್ಘಾಟಿಸಲಿದ್ದಾರೆ ಮತ್ತು -544 ಯಲ್ಲಿ . ಗುಂಡ್ಲಪಲ್ಲಿ ಪಟ್ಟಣದಲ್ಲಿ ಬೈಪಾಸ್‌‍ ಮಾಡಿದ ವಿಭಾಗವನ್ನು ಸುಧಾರಿಸಲಿದ್ದಾರೆ.ಮೋದಿ 1,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ರೈಲ್ವೆ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ.ಅವರು ಕೊಥವಲಸ-ವಿಜಯನಗರಂ ನಾಲ್ಕನೇ ರೈಲ್ವೆ ಮಾರ್ಗ ಮತ್ತು ಪೆಂಡುರ್ಟಿ ಮತ್ತು ಸಿಂಹಾಚಲಂ ಉತ್ತರ ನಡುವಿನ ರೈಲು ಮೇಲ್ಸೇತುವೆಗೆ ಅಡಿಪಾಯ ಹಾಕಲಿದ್ದಾರೆ.ಅವರು ಕೊಟ್ಟವಲಸ-ಬೊಡ್ಡಾವರ ವಿಭಾಗ ಮತ್ತು ಶಿಮಿಲಿಗುಡ-ಗೋರಾಪುರ ವಿಭಾಗದ ದ್ವಿಗುಣಗೊಳಿಸುವಿಕೆಯನ್ನು ಉದ್ಘಾಟಿಸಲಿದ್ದಾರೆ.

ಇಂಧನ ವಲಯದಲ್ಲಿ, ಪ್ರಧಾನ ಮಂತ್ರಿ ಅವರು ಗೈಲ್‌ ಇಂಡಿಯಾ ಲಿಮಿಟೆಡ್‌ನ ಶ್ರೀಕಾಕುಲಂ-ಅಂಗುಲ್‌ ನೈಸರ್ಗಿಕ ಅನಿಲ ಪೈಪ್‌ಲೈನ್‌‍ ಅನ್ನು ಉದ್ಘಾಟಿಸಲಿದ್ದಾರೆ, ಇದನ್ನು ಆಂಧ್ರಪ್ರದೇಶದಲ್ಲಿ ಸುಮಾರು 124 ಕಿ.ಮೀ ಮತ್ತು ಒಡಿಶಾದಲ್ಲಿ 298 ಕಿ.ಮೀ. ವೆಚ್ಚದಲ್ಲಿ ನಿರ್ಮಿಸಲಾಗಿದೆ.ಅದೇ ರೀತಿ, ಚಿತ್ತೂರಿನಲ್ಲಿ ಇಂಡಿಯನ್‌ ಆಯಿಲ್‌ನ 60 ಟಿಎಂಟಿಪಿಎ (ವಾರ್ಷಿಕ ಸಾವಿರ ಮೆಟ್ರಿಕ್‌ ಟನ್‌‍) ಎಲ್‌ಪಿಜಿ ಬಾಟ್ಲಿಂಗ್‌ ಸ್ಥಾವರವನ್ನು ಅವರು ಉದ್ಘಾಟಿಸಲಿದ್ದಾರೆ, ಇದನ್ನು ಸುಮಾರು 200 ಕೋಟಿ ರೂ. ಹೂಡಿಕೆಯಲ್ಲಿ ಸ್ಥಾಪಿಸಲಾಗಿದೆ.

ರಸ್ತೆ ಸರಿಪಡಿಸದಿದ್ದರೆ ತೆರಿಗೆ ಕಟ್ಟಲ್ಲ : ರೊಚ್ಚಿಗೆದ್ದ ಐಟಿ-ಬಿಟಿ ಮಂದಿ

ಬೆಂಗಳೂರು, ಅ.15– ಸೂಕ್ತ ಸೌಲಭ್ಯ ಕಲ್ಪಿಸಿ ಇಲ್ಲವೇ ನಾವು ಇನ್ನು ಮುಂದೆ ಆಸ್ತಿ ತೆರಿಗೆ ಪಾವತಿಸುವುದಿಲ್ಲ ಎಂದು ಐಟಿ-ಬಿಟಿ ಮಂದಿ ಪಟ್ಟು ಹಿಡಿದಿದ್ದಾರೆ. ಇಲ್ಲಿನ ರಸ್ತೆ ಗುಂಡಿಗ ಳಿಂದ ಆಗಬಾರದ ಅನಾಹುತಗಳಾಗುತ್ತಿವೆ ಇಂತಹ ಸನ್ನಿವೇಶದಲ್ಲಿ ನಾವು ಯಾಕೆ ಆಸ್ತಿ ತೆರಿಗೆ ಪಾವತಿಸಬೇಕು ಎಂದು ಟ್ಯಾಕ್ಸ್ ಪೇಯರ್‌ರ‍ಸ ಫೋರಂ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಅತಿ ಹೆಚ್ಚು ಐಟಿ-ಬಿಟಿ ಮಂದಿ ವಾಸಿಸುವ ವರ್ತೂರು ಹಾಗೂ ಪಣತ್ತೂರಿನ ನಿವಾಸಿಗಳು ಟ್ಯಾಕ್ಸ್ ಪೇಯರ್‌ರ‍ಸ ಫೋರಂ ರಚನೆ ಮಾಡಿಕೊಂಡು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.ನಗರದ ಇಂತಹ ದುಸ್ಥಿತಿ ತಲುಪಿರುವ ಸಂದರ್ಭದಲ್ಲಿ ನಾವು ಆಸ್ತಿ ತೆರಿಗೆ ಕಟ್ಟುವುದಿಲ್ಲ, ನಮ್ಮಿಂದ ತೆರಿಗೆ ಕೇಳಬೇಡಿ ಎಂದು ಅವರು ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದಾರೆ.

ವರ್ತೂರು ಮತ್ತು ಪಣತ್ತೂರು ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇರುವ ರಸ್ತೆಗಳಲ್ಲಿ ಗುಂಡಿಗಳಿವೆ ಹೀಗಾಗಿ ಇಲ್ಲಿ ನಿತ್ಯ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌‍ ಉಂಟಾಗುತ್ತಿದೆ. ನಿತ್ಯ ಸ್ಕೂಲ್‌ ಬಸ್‌‍ಗಳ ಅಪಘಾತದಿಂದ ಬೆಸತ್ತು ನಾವು ಈ ರೀತಿಯ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಫೋರಂ ಸದಸ್ಯರು ತಿಳಿಸಿದ್ದಾರೆ.

ಗುಂಡಿ ಮುಕ್ತ ರಸ್ತೆ ಮಾಡಿ ಮೂಲಭೂತ ಸೌಕರ್ಯ ಕಲ್ಪಿಸಿದ ನಂತರ ತೆರಿಗೆ ಕೇಳಿ ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ… ಈ ಭಾಗದ ಜನ ವಾರ್ಷಿಕ ಅಂದಾಜು 800 ಕೋಟಿ ತೆರಿಗೆ ಪಾವತಿ ಮಾಡುತ್ತಿದ್ದಾರಂತೆ. ಇಲ್ಲಿನ ಪರಿಸ್ಥಿತಿಯಿಂದಾಗಿ ಹೂಡಿಕೆದಾರರ ಎದುರು ಬೆಂಗಳೂರಿನ ಮಾನ ಮರ್ಯಾದೆ ಹರಾಜಾಗುತ್ತಿದೆ ಎಂದು ಅವರುಗಳು ಅಲವತ್ತುಕೊಂಡಿದ್ದಾರೆ. ಉದ್ಯಮಿ ಕಿರಣ್‌ ಮಜುಂದಾರ್‌ ಶಾ ಅವರು ಬೆಂಗಳೂರಿನ ಪರಿಸ್ಥಿತಿ ಬಗ್ಗೆ ಎಕ್‌್ಸ ಮಾಡಿದ ನಂತರ ಐಟಿ-ಬಿಟಿ ಉದ್ದಿಮೆದಾರರು ಇದೀಗ ಒಂದಾಗಿ ಹೋರಾಟ ನಡೆಸಲು ಮುಂದಾಗಿದ್ದಾರೆ.