Home Blog Page 52

ಶಾಸಕ ಮುನಿರತ್ನ ಮೇಲೆ ಹಲ್ಲೆ : ಕಾಂಗ್ರೆಸ್‌‍ನ ಗೂಂಡಾಗಿರಿ ಅನಾವರಣಗೊಂಡಿದೆ ಎಂದ ಆರ್‌.ಅಶೋಕ್‌

ಬೆಂಗಳೂರು, ಅ.12– ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ನಡೆಸುವ ಮೂಲಕ ಕಾಂಗ್ರೆಸ್‌‍ ಪಕ್ಷದ ಗೂಂಡಾಗಿರಿ ಸಂಸ್ಕೃತಿ ಅನಾವರಣಗೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಸಕರಿಗೆ ಗೌರವ ಕೊಡದೇ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.ಎರಡು ವರ್ಷ ಮಾತ್ರ ನೀವು ಅಧಿಕಾರದಲ್ಲಿ ಇರುತ್ತೀರಿ. ಏಕೆ ಗೂಂಡಾಗಿರಿ ಮಾಡುತ್ತೀರಾ .? ಇದು ನಿಮ ಕಾಂಗ್ರೆಸ್‌‍ ಪಕ್ಷದ ಸಂಸ್ಕೃತಿ ಹಾಗೂ ಗೂಂಡಾಗಿರಿ ಪ್ರವತ್ತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಮುನಿರತ್ನ ಅವರ ಮೇಲೆ ಆಗಿರುವ ಹಲ್ಲೆ , ಪ್ರಜಾಪ್ರಭುತ್ವದ ಮೇಲೆ ಆಗಿರುವ ಹಲ್ಲೆ. ನಾವು ಮುನಿರತ್ನಗೆ ಬೆಂಬಲ ನೀಡಲಿದ್ದೇವೆ. ಪೊಲೀಸರು ಅವರಿಗೆ ರಕ್ಷಣೆ ಕೊಡಬೇಕು. ಕಾಂಗ್ರೆಸ್‌‍ ಔಟ್‌ ಗೋಯಿಂಗ್‌ ಪಾರ್ಟಿ ಎಂದು ಜನ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್‌‍ ಮುಕ್ತ ಭಾರತ ಮಾಡುವುದೇ ನಮ ಅಜೆಂಡಾ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ನಡೆಯನ್ನು ಖಂಡಿಸಿದ ಅವರು, ಇದು ಸರ್ಕಾರದ ಹಣದಲ್ಲಿ ಮಾಡುತ್ತಿರುವ ಕಾರ್ಯಕ್ರಮ. ಕಾಂಗ್ರೆಸ್‌‍ ಪಕ್ಷದ ಕಾರ್ಯಕ್ರಮ ಅಲ್ಲ. ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಆಹ್ವಾನ ನೀಡದೇ ಅವಮಾನ ಮಾಡುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಎಂದು ಟೀಕಿಸಿದರು.

ಆರ್‌ ಎಸ್‌‍ ಎಸ್‌‍ ನಿಷೇಧ ಮಾಡುವ ಬಗ್ಗೆ ಕಾಂಗ್ರೆಸ್‌‍ ನಾಯಕರ ಹೇಳಿಕೆ ವಿಚಾರವಾಗಿ, ಆರ್‌.ಎಸ್‌‍ ಎಸ್‌‍ ನಿಷೇಧಿಸಲು ಮೂರು ಬಾರಿ ಪ್ರಯತ್ನ ಮಾಡಿದ್ದರು. ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಕೈಯಲ್ಲೇ ಆಗಲಿಲ್ಲ. ಇನ್ನು ಇಂತಹವರಿಂದ ಇದು ಸಾಧ್ಯವೇ? ಎಂದು ಅಶೋಕ್‌ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗಹ ಸಚಿವ ಅಮಿತ್‌ ಶಾ ಸೇರಿದಂತೆ ದೇಶದ ಬಹುತೇಕ ರಾಜ್ಯಪಾಲರು ಆರ್‌ ಎಸ್‌‍ ಎಸ್‌‍ ಹಿನ್ನಲೆಯಿಂದಲೇ ಬಂದವರು. ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಕೂಡಾ ಹೀಗೆಯೇ ಲಘುವಾಗಿ ಮಾತನಾಡುತ್ತಾರೆ ಎಂದರೆ ಅವರಿಗೆ ಭಾರತದ ಇತಿಹಾಸ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಇಂತಹವರಿಗೆ ಆರ್‌ ಎಸ್‌‍ ಎಸ್‌‍ ಬಗ್ಗೆ ಮಾತಾಡುವ ಅರ್ಹತೆ ಇಲ್ಲ. ಅದು ರಾಷ್ಟ್ರ ಪ್ರೇಮ ಕೊಡುವ ಸಂಸ್ಥೆ. ಇವರಿಗೆ ರಾಷ್ಟ್ರಪ್ರೇಮ ಇಲ್ಲ, ಕಾಂಗ್ರೆಸ್‌‍ ಗೆ ವೋಟಿನ ಪ್ರೇಮ ಮಾತ್ರ ಇದೆ ಎಂದು ಕುಹಕವಾಡಿದರು. ಇದಕ್ಕೂ ಮುನ್ನ ಆರ್‌ಎಸ್‌‍ಎಸ್‌‍ ಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬನಶಂಕರಿಯಲ್ಲಿ ನಡೆದ ಆರ್‌ಎಸ್‌‍ಎಸ್‌‍ ಪಥ ಸಂಚಲನದಲ್ಲಿ ಗಣವೇಶಧಾರಿಗಳಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ ಅಶೋಕ್‌ ಮತ್ತು ಪಿ ಸಿ ಮೋಹನ್‌ ಮತ್ತಿತರರು ಭಾಗಿಯಾಗಿದ್ದರು.

ನಮಸ್ತೇ ಸದಾ ವತ್ಸಲೇ ಹಾಡು ಹಾಡಿದ ಆರ್‌ ಅಶೋಕ್‌‍, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನೋತ್ಸವ ಆಚರಿಸುತ್ತಿದೆ. ಇವತ್ತು ಶತಮಾನೋತ್ಸವ ಹಿನ್ನೆಲೆ ಪಥಸಂಚಲನ ಮಾಡಿ ಭಾರತಮಾತೆಗೆ ಗೌರವ ಸಲ್ಲಿಸುತ್ತೇವೆ. ದೇಶದ ವಿಚಾರವಾಗಿ, ಸಾಮಾಜಿಕವಾಗಿ ಸಮಸ್ಯೆ ಅಂತಾ ಬಂದಾಗ ಸಂಘ ಮುಂದೆ ನಿಂತಿದೆ. ಆರೆಸ್ಸೆಸ್‌‍ನವನು ಎಂದು ಹೇಳಿಕೊಳ್ಳಲು ನನಗೆ ಹೆಮೆ ಆಗುತ್ತದೆ. ನಾನು ಹಲವು ಹೋರಾಟಗಳಲ್ಲಿ ಭಾಗಿಯಾಗ್ದೆಿ ಎಂದು ಅಶೋಕ್‌ ಹಿಂದಿನ ಘಟನೆಯನ್ನು ನೆನಪಿಸಿಕೊಂಡರು.

ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಅಶ್ವತ್ಥ ನಾರಾಯಣ ಒತ್ತಾಯ

ಬೆಂಗಳೂರು, ಅ.12- ಶಾಸಕ ಮುನಿರತ್ನ ಅವರ ಮೇಲೆ ಯಾರು ಹಲ್ಲೆ ಮಾಡಿದ್ದಾರೋ ಅವರ ವಿರುದ್ಧ ವಿಳಂಬನೀತಿ ತೋರದೇ ತಕ್ಷಣವೇ ಶಿಸ್ತು ಕ್ರಮ ಜರುಗಿಸಬೇಕು ಎಂದು ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ ನಾರಾಯಣ ಒತ್ತಾಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು,ಯಾವುದೇ ಪಕ್ಷದ ಶಾಸಕರಿರಲಿ. ಹಲ್ಲೆ ನಡೆಸುವುದು ಯಾರೊಬ್ಬರಿಗೂ ಶೋಭೆ ತರುವುದಿಲ್ಲ. ಮುನಿರತ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಸ್ಪಷ್ಟ ಸಂದೇಶ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರೇ, ಕಾರ್ಯಕ್ರಮ ಯಶಸ್ವಿಯಾಗಬೇಕು ಅಂದರೆ, ಎಲ್ಲರಿಗೂ ಆಹ್ವಾನ ಕೊಟ್ಟು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.ರಾಜಕೀಯ ಕ್ಷೇತ್ರದಲ್ಲಿ ನಿಮಗೆ ಸಾಕಷ್ಟು ಅನುಭವ ಇದೆ. ನಿಮಂತಹವರಿಂದಲೇ ಈ ರೀತಿ ಎಡವಟ್ಟು ಆದರೆ ಹೇಗೆ ? ಎಂದು ಪ್ರಶ್ನಿಸಿದರು.
ಈ ಕಾರ್ಯಕ್ರಮ ಮಹತ್ವ ಕಳೆದುಕೊಂಡಿದೆ.ಇಲ್ಲಿ ಬರೀ ವೈಯಕ್ತಿಕ ಪ್ರತಿಷ್ಠೆ, ದ್ವೇಷ, ವೈಮನಸ್ಯ ಎದ್ದು ಕಾಣುತ್ತಿದೆ. ನಿಮ ನಡೆ ಸರಿಯಲ್ಲ . ಡಿಕೆ ಶಿವಕುಮಾರ್‌ ವರ್ಸಸ್‌‍ ಮುನಿರತ್ನ ಎಂಬಂತಾಗುತ್ತದೆ. ನಿಮ ಕಾರ್ಯಕ್ರಮವನ್ನು ನೀವೇ ಸೋಲಿಸುತ್ತೀರಾ ? ಇದು ಜನರ ಕಾರ್ಯಕ್ರಮ, ಸರ್ಕಾರದ ಕಾರ್ಯಕ್ರಮ ಎಂದರು.

ಇಂತಹ ಘಟನೆಗಳಿಗೆ ನೀವೇ ಕಾರಣೀಭೂತರು. ನೀವು ನೀಡಿರುವ ಸ್ವಾತಂತ್ರ್ಯದಿಂದ ಕಾರ್ಯಕರ್ತರು ಅವರಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ.ಕಾರ್ಯಕ್ರಮ ಅಲ್ಲ, ಹಲ್ಲೆ ಎಂದುಕೇಳಿದ್ದೇನೆ. ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಬೆಂಗಳೂರಿನ ಆರು ಭಾಗಗಳಲ್ಲಿ ಡಿಕೆ ಶಿವಕುಮಾರ್‌ ಅವರು ಕಾರ್ಯಕ್ರಮ ಮಾಡುತ್ತಿದ್ದಾರೆ. ಒಳ್ಳೆಯದು. ಈ ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗೆ ಅವಮಾನ ಮಾಡುವುದು, ಹಲ್ಲೆ ನಡೆಸುವುದು, ತಿರಸ್ಕಾರ ಮಾಡುವುದು ಸರಿಯಲ್ಲ. ಆಹ್ವಾನ ಕೊಡದೇ ಈ ರೀತಿ ಕಾರ್ಯಕ್ರಮ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರಿಯಾದ ದಾರಿಯಲ್ಲಿ ನಡೆದುಕೊಳ್ಳುವುದು ನಿಮ ಕರ್ತವ್ಯ ಎಂದು ಹೇಳಿದರು.

ಮೆಟ್ರೋದ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ, ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು,ಅ.12- ಇತ್ತೀಚೆಗೆ ಆರಂಭಗೊಂಡ ನಮ ಮೆಟ್ರೋದ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯವಾಗಿದೆ. ಹಳದಿ ಮಾರ್ಗದಲ್ಲಿ ಸಂಚರಿಸುವ ಒಂದು ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಪ್ರತಿ 25 ನಿಮಿಷದ ಅಂತರದಲ್ಲಿ ರೈಲುಗಳು ಸಂಚರಿಸಲಿವೆ.

ಆರ್‌ವಿ ಕಾಲೇಜ್‌ ರಸ್ತೆಯಿಂದ ಬೊಮಸಂದ್ರದ ವರೆಗೆ ಸಾಗುವ 19.15 ಕಿಮೀ. ಉದ್ದದ ಹಳದಿ ಮಾರ್ಗಕ್ಕೆ ಆಗಸ್ಟ್‌ 10 ರಂದು ಪ್ರಧಾನಿ ನರೇಂದ್ರಮೋದಿಯವರು ಚಾಲನೆ ನೀಡಿದ್ದರು. ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿದ್ದು, 3 ಮೆಟ್ರೋ ಲೈನ್‌ಗೆ ಸಂಪರ್ಕ ಕಲ್ಪಿಸುತ್ತದೆ.

ಒಟ್ಟು 4 ರೈಲುಗಳು ಪ್ರಸ್ತುತ ಸಂಚಾರ ನಡೆಸುತ್ತಿದ್ದು, ಶೀಘ್ರವೇ 5 ನೇ ರೈಲು ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ತುಸು ಅಡಚಣೆಯಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

BIG NEWS : ತಾಲಿಬಾನ್ ದಾಳಿಯಿಂದ ಪಾಕಿಸ್ತಾನದಲ್ಲಿ ಸಾವಿನ ಕೇಕೆ, ಒಂದೇ ರಾತ್ರಿಯಲ್ಲಿ 150ಕ್ಕೂ ಹೆಚ್ಚು ಸೈನಿಕರ ಹತ್ಯೆ..!

ನವದೆಹಲಿ, ಅ.12- ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಖಿ ಭಾರತ ಪ್ರವಾಸದಲ್ಲಿರುವಾಗಲೇ ಅತ್ತ ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ತಾಲಿಬಾನ್‌ ಪಡೆಗಳು ಗಡಿಯಲ್ಲಿ ಪಾಕಿಸ್ತಾನಿ ಪಡೆಗಳ ಮೇಲೆ ಮುಗಿ ಬಿದಿದ್ದು, 25ಕ್ಕೂ ಹೆಚ್ಚು ಪಾಕ್‌ ಸೇನೆಯ ಕ್ಯಾಂಪ್‌ ಗಳನ್ನು ವಶಕ್ಕೆ ತೆಗೆದುಕೊಂಡಿವೆ. ಈ ಸಂಘರ್ಷದಲ್ಲಿ 150ಕ್ಕೂ ಹೆಚ್ಚು ಪಾಕ್‌ ಸೈನಿಕರ ಹತ್ಯೆಯಾಗಿದೆ ಎಂದು ಹೇಳಲಾಗಿದೆ.

ಶುಕ್ರವಾರ ರಾತ್ರಿ ಪಾಕಿಸ್ತಾನ ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲ್‌ ವಾಯುನೆಲೆ ಮೇಲೆ ದಾಳಿ ಮಾಡಿದ ಬೆನ್ನಲ್ಲೆ ಆಫ್ಘಾನಿಸ್ತಾನ ರೊಚ್ಚಿಗೆದ್ದಿದ್ದು, ಪಾಕಿಸ್ತಾನದ ಮೇಲೆರಗಿದೆ. ಪ್ರತಿಕಾರಕ್ಕಾಗಿ ನಡೆದ ಈ ದಾಳಿಯಿಂದ ಪಾಕಿಸ್ತಾನ ತತ್ತರಿಸಿದ್ದು, ಗಡಿಯಲ್ಲಿ ಪಾಕ್‌ ಸೈನಿಕರು ತಮ ಶಿಬಿರಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ತಾಲಿಬಾನ್‌ ಸೈನಿಕರು ಪಾಕಿಸ್ತಾನದ ಬಂಕರ್‌ಗಳನ್ನು ನಾಶ ಪಡಿಸಿದ್ದಾರೆ.

ಗಡಿ ಪ್ರದೇಶಗಳಲ್ಲಿ ಅಫ್ಘನ್‌ ಪಡೆಗಳು ನಡೆಸಿದ ಅಪ್ರಚೋದಿತ ದಾಳಿಗಳಿಗೆ ಪಾಕಿಸ್ತಾನ ಪ್ರತಿಕ್ರಿಯಿಸಿದ್ದು, ಹಲವಾರು ಅಫ್ಘನ್‌ ಗಡಿ ಠಾಣೆಗಳು, ತರಬೇತಿ ಶಿಬಿರಗಳು ಮತ್ತು ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಲಾಗಿದೆ ಎಂದು ಭದ್ರತಾ ಮೂಲಗಳು ಭಾನುವಾರ ತಿಳಿಸಿವೆ.

ತಾಲಿಬಾನ್‌ ಸರ್ಕಾರದ ರಕ್ಷಣಾ ಸಚಿವಾಲಯ ಭಾನುವಾರ ಮುಂಜಾನೆ ದಾಳಿಗಳನ್ನು ದೃಢಪಡಿಸಿದ್ದು, ತನ್ನ ಪಡೆಗಳು ಪ್ರತೀಕಾರಾತಕ ಮತ್ತು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿವೆ ಎಂದು ಹೇಳಿದೆ.ಎದುರಾಳಿ ಪಕ್ಷವು ಮತ್ತೊಮೆ ಅಫ್ಘನಿಸ್ತಾನದ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದರೆ, ನಮ ಸಶಸ್ತ್ರ ಪಡೆಗಳು ದೇಶದ ಗಡಿಗಳನ್ನು ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿವೆ ಮತ್ತು ಬಲವಾದ ಪ್ರತಿಕ್ರಿಯೆಯನ್ನು ನೀಡುತ್ತವೆ ಎಂದು ಸಚಿವಾಲಯ ತಿಳಿಸಿದೆ.

ಅಫ್ಘನ್‌ ಪಡೆಗಳು ಖೈಬರ್‌, ಪಖ್ತುಂಖ್ವಾದ ಅಂಗೂರ್‌ ಅಡ್ಡಾ, ಬಜೌರ್‌, ಕುರ್ರಮ್‌, ದಿರ್‌ ಮತ್ತು ಚಿತ್ರಾಲ್‌ ಮತ್ತು ಬಲೂಚಿಸ್ತಾನದ ಬರಮ್ಚಾದಲ್ಲಿ ಪಾಕಿಸ್ತಾನಿ ಠಾಣೆಗಳನ್ನು ಗುರಿಯಾಗಿಸಿಕೊಂಡಿವೆ.ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್‌ ನಖ್ವಿ, ಗಡಿ ಠಾಣೆಗಳ ಮೇಲಿನ ತಾಲಿಬಾನ್‌ ದಾಳಿಯನ್ನು ಅಪ್ರಚೋದಿತ ಎಂದು ದೂರಿದ್ದು, ಆಫ್ಘನ್‌ ಪಡೆಗಳು ನಾಗರಿಕರ ಮೇಲೆ ಗುಂಡು ಹಾರಿಸಿವೆ ಎಂದು ಆರೋಪಿಸಿದ್ದಾರೆ.

ತಾಲಿಬಾನ್‌ ಪಡೆಗಳು ಪಾಕಿಸ್ತಾನಿ ಸೈನಿಕರ ವಿರುದ್ಧ ದಾಳಿ ನಡೆಸಿ, ಪುನರಾವರ್ತಿತ ಗಡಿ ಉಲ್ಲಂಘನೆ ಮಾಡಿವೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನಿ ಪಡೆಗಳು ಇಟ್ಟಿಗೆಗಳು, ಕಲ್ಲಿನಿಂದ ಪ್ರತಿಕ್ರಿಯಿಸುತ್ತಿವೆ ಎಂದು ಹೇಳಿದ್ದಾರೆ. ನಾಗರಿಕರ ಮೇಲೆ ಅಫ್ಘನ್‌ ಪಡೆಗಳು ಗುಂಡು ಹಾರಿಸುವುದು ಅಂತರರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಪಾಕಿಸ್ತಾನದ ಧೈರ್ಯಶಾಲಿ ಪಡೆಗಳು ತ್ವರಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಯನ್ನು ನೀಡಿವೆ, ಯಾವುದೇ ಪ್ರಚೋದನೆಯನ್ನು ಸಹಿಸುವುದಿಲ್ಲ ಎಂದು ಅವರು ತಮ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಪಾಕಿಸ್ತಾನ ಗಡಿಯಲ್ಲಿ ಸುಮಾರು ಆರು ಸ್ಥಳಗಳಲ್ಲಿ ಅಫ್ಘನ್‌ ದಾಳಿಗಳು ನಡೆದಿವೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ರೇಡಿಯೋ ಸುದ್ದಿ ಪ್ರಸಾರ ಮಾಡಿದೆ.
ಅಫ್ಘನ್‌ ಪ್ರದೇಶದ ಮೇಲೆ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ ಪ್ರತೀಕಾರದ ದಾಳಿಗಳನ್ನು ನಡೆಸಲಾಗಿದೆ ಎಂದು ಅಫ್ಘನ್‌ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖ್ವಾರಿಜಿ ಶನಿವಾರ ತಡರಾತ್ರಿ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ದಾಳಿಯಿಂದಾಗಿ ಬಂದೂಕು, ಫಿರಂಗಿ ಸದ್ದು ಜೋರಾಗಿತ್ತು ಮತ್ತು ಕ್ಷಿಪಣಿಗಳ ದಾಳಿಯಿಂದ ಆಕಾಶದಲ್ಲಿ ರಾತ್ರಿಯ ವೇಳೆ ಬೆಳಕು ಕಾಣಿಸಿಕೊಂಡಿತ್ತು ಎಂದು ಆಫ್ಘನ್‌ ಪಡೆಗಳು ತಿಳಿಸಿದ್ದು, ವಿಡಿಯೋ ತುಣಕನ್ನು ಹಂಚಿಕೊಂಡಿವೆ. ಘರ್ಷಣೆಗಳು ಕೊನೆಗೊಂಡಿದೆ ಎಂದು ಆಫ್ಘನ್‌ ಪಡೆಗಳು ಹೇಳಿಲ್ಲ.

ಅಫ್ಘನ್‌ ರಾಜಧಾನಿ ಕಾಬೂಲ್‌ ಮೇಲೆ ವಾಯುದಾಳಿಯ ಸ್ಫೋಟದ ನಂತರ ಈ ಹೋರಾಟ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಅಫ್ಘನ್‌ ಗಡಿಯ ಬಳಿ ಪಾಕಿಸ್ತಾನ ತಾಲಿಬಾನ್‌ ಸಶಸ್ತ್ರ ಗುಂಪಿನ ಮೂರು ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 19 ಸೈನಿಕರು ಮತ್ತು 45 ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.

ವಾಯುವ್ಯ ಖೈಬರ್‌, ಪಖ್ತುಂಖ್ವಾಪ್ರಾಂತ್ಯದ ಜಿಲ್ಲೆಯ ಬಜೌರ್‌ನಲ್ಲಿ 22 ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಶನಿವಾರ ಸೇನೆ ತಿಳಿಸಿದೆ. ದಕ್ಷಿಣ ವಜೀರಿಸ್ತಾನ್‌ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅದು ಹೇಳಿದೆ. ದಕ್ಷಿಣ ವಜೀರಿಸ್ತಾನ್‌ನಲ್ಲಿ 12 ಸೈನಿಕರು ಶೌರ್ಯದಿಂದ ಹೋರಾಡಿ, ಹುತಾತ್ಮರಾದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಲೋವರ್‌ ದಿರ್‌ ಪ್ರದೇಶದಲ್ಲಿ ನಡೆದ ಮತ್ತೊಂದು ಘರ್ಷಣೆಯಲ್ಲಿ, ಸೈನಿಕರು ಉಗ್ರಗಾಮಿ ಅಡಗುತಾಣವನ್ನು ಕಂಡುಹಿಡಿದ್ದು, ಗುಂಡಿನ ಚಕಮಕಿಯಲ್ಲಿ ಏಳು ಸೈನಿಕರು ಮತ್ತು 10 ಬಂಡಾಯ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಸೇನೆ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

ತೆಹ್ರೀಕ್‌-ಎ-ತಾಲಿಬಾನ್‌ (ಟಿಟಿಪಿ) ಎಂದೂ ಕರೆಯಲ್ಪಡುವ ಸಾಮಾಜಿಕ ಮಾಧ್ಯಮದ ಸಂದೇಶದಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇಸ್ಲಾಮಾಬಾದ್‌ ಅಫ್ಘಾನಿಸ್ತಾನದಲ್ಲಿ ನೆಲೆಗೊಂಡಿರುವುದಾಗಿ ಹೇಳಿಕೊಳ್ಳುವ ಈ ಗುಂಪು, ಪ್ರತ್ಯೇಕವಾಗಿದೆ ಆದರೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್‌ನೊಂದಿಗೆ ನಿಕಟ ಸಂಬಂಧ ಹೊಂದಿದೆ. ಕಾಬೂಲ್‌ನಲ್ಲಿರುವ ತಾಲಿಬಾನ್‌ ಸರ್ಕಾರವು ತನ್ನ ಜವಾಬ್ದಾರಿಗಳನ್ನು ಎತ್ತಿಹಿಡಿಯಬೇಕು, ಪಾಕಿಸ್ತಾನದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ತನ್ನ ಮಣ್ಣನ್ನು ಬಳಸುವುದನ್ನು ನಿರಾಕರಿಸಬೇಕು ಎಂದು ಒತ್ತಾಯಿಸಿದೆ. ಕೊಲ್ಲಲ್ಪಟ್ಟ ಹೋರಾಟಗಾರರನ್ನು ಖ್ವಾರಿಜ್‌ ಎಂದು ಮಿಲಿಟರಿ ಬಣ್ಣಿಸಿದೆ, ಈ ಪದವನ್ನು ಪಾಕಿಸ್ತಾನ ಸರ್ಕಾರ ತಾಲಿಬಾನ್‌ಗೆ ಬಳಸುತ್ತದೆ ಮತ್ತು ಅವರು ಭಾರತದಿಂದ ಬೆಂಬಲಿತರಾಗಿದ್ದಾರೆ ಎಂದು ಆರೋಪಿಸಿದೆ, ಆದರೆ ಈ ಆರೋಪಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ.

ಈ ನಡುವೆ ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಖಿ ಅವರ ಭಾನುವಾರದ ಆಗ್ರಾ ಭೇಟಿಯನ್ನು ರದ್ದುಗೊಳಿಸಿದ್ದಾರೆ. ತಾಜ್‌ ಮಹಲ್‌ ನೋಡಲು ಅಫ್ಘಾನ್‌ ವಿದೇಶಾಂಗ ಸಚಿವರು ಆಗ್ರಾಕ್ಕೆ ಪ್ರಯಾಣಿಸಬೇಕಿತ್ತು. ಯಾವುದೇ ಕಾರಣ ನೀಡದೆ ಅವರ ಭೇಟಿ ರದ್ದುಗೊಂಡಿದೆ.

ಪಾಕಿಸ್ತಾನ ಗಡಿಯಲ್ಲಿ ಸುಮಾರು ಆರು ಸ್ಥಳಗಳಲ್ಲಿ ಅಫ್ಘನ್‌ ದಾಳಿಗಳು ನಡೆದಿವೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ರೇಡಿಯೋ ಸುದ್ದಿ ಪ್ರಸಾರ ಮಾಡಿದೆ. ಅಫ್ಘನ್‌ ಪ್ರದೇಶದ ಮೇಲೆ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ ಪ್ರತೀಕಾರದ ದಾಳಿಗಳನ್ನು ನಡೆಸಲಾಗಿದೆ ಎಂದು ಅಫ್ಘನ್‌ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖ್ವಾರಿಜಿ ಶನಿವಾರ ತಡರಾತ್ರಿ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ದಾಳಿಯಿಂದಾಗಿ ಬಂದೂಕು, ಫಿರಂಗಿ ಸದ್ದು ಜೋರಾಗಿತ್ತು ಮತ್ತು ಕ್ಷಿಪಣಿಗಳ ದಾಳಿಯಿಂದ ಆಕಾಶದಲ್ಲಿ ರಾತ್ರಿಯ ವೇಳೆ ಬೆಳಕು ಕಾಣಿಸಿಕೊಂಡಿತ್ತು ಎಂದು ಆಫ್ಘನ್‌ ಪಡೆಗಳು ತಿಳಿಸಿದ್ದು, ವಿಡಿಯೋ ತುಣಕನ್ನು ಹಂಚಿಕೊಂಡಿವೆ. ಘರ್ಷಣೆಗಳು ಕೊನೆಗೊಂಡಿದೆ ಎಂದು ಆಫ್ಘನ್‌ ಪಡೆಗಳು ಹೇಳಿಲ್ಲ.

ಅಫ್ಘನ್‌ ರಾಜಧಾನಿ ಕಾಬೂಲ್‌ ಮೇಲೆ ವಾಯುದಾಳಿಯ ಸ್ಫೋಟದ ನಂತರ ಈ ಹೋರಾಟ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಅಫ್ಘನ್‌ ಗಡಿಯ ಬಳಿ ಪಾಕಿಸ್ತಾನ ತಾಲಿಬಾನ್‌ ಸಶಸ್ತ್ರ ಗುಂಪಿನ ಮೂರು ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 58 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.

ವಾಯುವ್ಯ ಖೈಬರ್‌, ಪಖ್ತುಂಖ್ವಾಪ್ರಾಂತ್ಯದ ಜಿಲ್ಲೆಯ ಬಜೌರ್‌ನಲ್ಲಿ 22 ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಶನಿವಾರ ಸೇನೆ ತಿಳಿಸಿದೆ. ದಕ್ಷಿಣ ವಜೀರಿಸ್ತಾನ್‌ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅದು ಹೇಳಿದೆ. ದಕ್ಷಿಣ ವಜೀರಿಸ್ತಾನ್‌ನಲ್ಲಿ 12 ಸೈನಿಕರು ಶೌರ್ಯದಿಂದ ಹೋರಾಡಿ, ಹುತಾತ್ಮರಾದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಲೋವರ್‌ ದಿರ್‌ ಪ್ರದೇಶದಲ್ಲಿ ನಡೆದ ಮತ್ತೊಂದು ಘರ್ಷಣೆಯಲ್ಲಿ, ಸೈನಿಕರು ಉಗ್ರಗಾಮಿ ಅಡಗುತಾಣವನ್ನು ಕಂಡುಹಿಡಿದ್ದು, ಗುಂಡಿನ ಚಕಮಕಿಯಲ್ಲಿ ಏಳು ಸೈನಿಕರು ಮತ್ತು 10 ಬಂಡಾಯ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಸೇನೆ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

ತೆಹ್ರೀಕ್‌-ಎ-ತಾಲಿಬಾನ್‌ (ಟಿಟಿಪಿ) ಎಂದೂ ಕರೆಯಲ್ಪಡುವ ಸಾಮಾಜಿಕ ಮಾಧ್ಯಮದ ಸಂದೇಶದಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇಸ್ಲಾಮಾಬಾದ್‌ ಅಫ್ಘಾನಿಸ್ತಾನದಲ್ಲಿ ನೆಲೆಗೊಂಡಿರುವುದಾಗಿ ಹೇಳಿಕೊಳ್ಳುವ ಈ ಗುಂಪು, ಪ್ರತ್ಯೇಕವಾಗಿದೆ ಆದರೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್‌ನೊಂದಿಗೆ ನಿಕಟ ಸಂಬಂಧ ಹೊಂದಿದೆ. ಕಾಬೂಲ್‌ನಲ್ಲಿರುವ ತಾಲಿಬಾನ್‌ ಸರ್ಕಾರವು ತನ್ನ ಜವಾಬ್ದಾರಿಗಳನ್ನು ಎತ್ತಿಹಿಡಿಯಬೇಕು, ಪಾಕಿಸ್ತಾನದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ತನ್ನ ಮಣ್ಣನ್ನು ಬಳಸುವುದನ್ನು ನಿರಾಕರಿಸಬೇಕು ಎಂದು ಒತ್ತಾಯಿಸಿದೆ. ಕೊಲ್ಲಲ್ಪಟ್ಟ ಹೋರಾಟಗಾರರನ್ನು ಖ್ವಾರಿಜ್‌ ಎಂದು ಮಿಲಿಟರಿ ಬಣ್ಣಿಸಿದೆ, ಈ ಪದವನ್ನು ಪಾಕಿಸ್ತಾನ ಸರ್ಕಾರ ತಾಲಿಬಾನ್‌ಗೆ ಬಳಸುತ್ತದೆ ಮತ್ತು ಅವರು ಭಾರತದಿಂದ ಬೆಂಬಲಿತರಾಗಿದ್ದಾರೆ ಎಂದು ಆರೋಪಿಸಿದೆ, ಆದರೆ ಈ ಆರೋಪಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ.

ಈ ನಡುವೆ ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಖಿ ಅವರ ಭಾನುವಾರದ ಆಗ್ರಾ ಭೇಟಿಯನ್ನು ರದ್ದುಗೊಳಿಸಿದ್ದಾರೆ. ತಾಜ್‌ ಮಹಲ್‌ ನೋಡಲು ಅಫ್ಘಾನ್‌ ವಿದೇಶಾಂಗ ಸಚಿವರು ಆಗ್ರಾಕ್ಕೆ ಪ್ರಯಾಣಿಸಬೇಕಿತ್ತು. ಯಾವುದೇ ಕಾರಣ ನೀಡದೆ ಅವರ ಭೇಟಿ ರದ್ದುಗೊಂಡಿದೆ.

ಹಾಸನಾಂಬೆ ದರ್ಶನ : ಅಚ್ಚುಕಟ್ಟು ವ್ಯವಸ್ಥೆಗೆ ಭಕ್ತಗಣ ಮೆಚ್ಚುಗೆ

ಹಾಸನ , ಅ.12– ಹಾಸನಾಂಬ ದರ್ಶನೋತ್ಸವದ ಎರಡನೇ ದಿನವಾದ ಶನಿವಾರ ಭಕ್ತರ ದಂಡೆ ಹರಿದು ಬಂದಿದ್ದು, ಅಚ್ಚುಕಟ್ಟಾದ ವ್ಯವಸ್ಥೆ, ಸುಲಲಿತಾ ದರ್ಶನಕ್ಕೆ ಮನಸೋತಿರುವ ಭಕ್ತಗಣ, ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ಕಾರ್ಯವೈಖರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಜಾನೆಯಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಜನರು ದರ್ಶನಕ್ಕೆ ಆಗಮಿಸುತ್ತಿದ್ದು ಸರ್ವದರ್ಶನ ಸೇರಿದಂತೆ ಗೋಲ್ಡನ್‌ ಪಾಸ್‌‍,1 ಸಾವಿರ ಹಾಗೂ 300 ರೂಗಳ ಟಿಕೆಟ್‌ ಪಡೆದ ಭಕ್ತರು ಅತ್ಯಂತ ಕಡಿಮೆ ಸಮಯದಲ್ಲಿ ದರ್ಶನ ಪಡೆದು ಹೊರ ಬರುತ್ತಿರುವುದು ಸಾಮಾನ್ಯವಾಗಿತ್ತು.

ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾಧಿಕಾರಿ ಕೆ.ಎಸ್‌‍ ಲತಾ ಕುಮಾರಿ, ಉಪವಿಭಾಗಾಧಿಕಾರಿ ಮತ್ತು ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ಸೇರಿದಂತೆ ಇಡೀ ಆಡಳಿತ ವರ್ಗ ಕೈಗೊಂಡಿರುವ ಕ್ರಮದಿಂದಾಗಿ ಹಾಗೂ ವಿಶೇಷ ಪಾಸ್‌‍ಗಳ ವ್ಯವಸ್ಥೆಯ ರದ್ದಿನಿಂದಾಗಿ ಸಾರ್ವಜನಿಕರ ದರ್ಶನಕ್ಕೆ ಯಾವುದೇ ಅಡೆತಡೆ ಆಗುತ್ತಿಲ್ಲ ಮತ್ತು ಶಿಷ್ಟಾಚಾರ ಪಾಲನೆ ನೆಪದಲ್ಲಿ ತಾಸುಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿಲ್ಲ ಎಂದು ಭಕ್ತಗಣ ಹರ್ಷವ್ಯಕ್ತಪಡಿಸಿದೆ.

ಸಚಿವರಿಂದ ಖುದ್ದು ಸ್ಥಳ ಪರಿಶೀಲನೆ:
ಹಾಸನಾಂಬ , ಸಿದ್ದೇಶ್ವರ ಸ್ವಾಮೀ ದರ್ಶನೋತ್ಸವ ಪ್ರಾರಂಭವಾದಾಗಿನಿಂದಲೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ದೇವಸ್ಥಾನದ ಆವರಣ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಖುದ್ದು ಸ್ಥಳ ಪರಿಶೀಲನೆ ನಡೆಸಿ ಉಸ್ತುವಾರಿ ಕೈಗೊಳ್ಳುತ್ತಿದ್ದಾರೆ. ಅಧಿಕಾರಿಗಳು ಸಹ ಉತ್ತಮ ಕಾರ್ಯ ಪ್ರವೃತ್ತರಾಗಿರುವುದರಿಂದ ದರ್ಶನ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗುತ್ತಿಲ್ಲ. ಇಂದು ಸಹ ಕಷ್ಣಭೈರೇಗೌಡ ಅವರು ದೇವಸ್ಥಾನದ ಆವರಣದಲ್ಲಿ ಸರ್ವದರ್ಶನ ಸೇರಿದಂತೆ ಇತರೆ ಸಾಲುಗಳಲ್ಲಿ ಆಗಮಿಸುವಂತಹ ಭಕ್ತರ ಅಭಿಪ್ರಾ ಯಗಳನ್ನು ಆಲಿಸಿದ್ದು ಮತ್ತಷ್ಟು ಉತ್ತಮ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳುವ ಕುರಿತು ಮಾತನಾಡಿದ್ದಾರೆ.

ಮಾರಾಟ ಮಳಿಗೆಯತ್ತ ಜನ ಜಾತ್ರೆ:
ಇನ್ನು ಹಾಸನಾಂಬ ದರ್ಶನ ಪಡೆದ ನಂತರ ಸಾರ್ವಜನಿಕರು ದೇವಾಲಯದ ಸುತ್ತಮುತ್ತ ಹಾಕಲಾಗಿರುವ ವಿವಿಧ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದು ಜನ ಜಾತ್ರೆಯೇ ಕಾಣುತ್ತಿದೆ.ಕಡ್ಲೆಪುರಿ, ಬೋಂಡಾ-ಬಜ್ಜಿ, ಸಿಹಿ ಪದಾರ್ಥಗಳು, ಹೆಣ್ಣು ಮಕ್ಕಳಿಗೆ ಬೇಕಾದಂತಹ ವಿವಿಧ ಬಗೆಯ ಬಳೆ, ಅಲಂಕಾರಿಕ ಸಾಮಗ್ರಿಗಳು, ಮಕ್ಕಳಿಗೆ ಆಟದ ವಸ್ತುಗಳು ಸೇರಿದಂತೆ ಮತ್ತಿತರ ಅಂಗಡಿಗಳು ಹೆಚ್ಚು ಆಕರ್ಷಿಸುತ್ತಿವೆ.

ಕುಟುಂಬದೊಂದಿಗೆ ಸಚಿವ ತಂಗಡಗಿಯಿಂದ ದೇವಿಯ ದರ್ಶನ:
ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ಎಸ್‌‍. ತಂಗಡಗಿ ಕುಟುಂಬ ಸಮೇತರಾಗಿ ದೇವಿ ದರ್ಶನ ಪಡೆದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ಸಮೇತನಾಗಿ ದೇವಿ ದರ್ರ್ಶನ ಪಡೆದಿದ್ದೇನೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ ರೈತರಿಗೆ ಉತ್ತಮ ಬೆಳೆ ಸಿಗಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.

ಕಳೆದ ಬಾರಿ ಒಬ್ಬನೇ ಬಂದಿದ್ದು ಈ ಬಾರಿ ಪತ್ನಿ ಜೊತೆಗೆ ಬಂದಿದ್ದೇನೆ.ವಿಶಿಷ್ಟವಾಗಿ ಅದ್ಭುತವಾಗಿ ಹಾಸನಾಂಬ ದೇವಿ ದರ್ಶನ ಆಗಿದೆ. ಜಿಲ್ಲಾ ಆಡಳಿತದಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದ್ದು ಇದನ್ನು ಕಣ್ಣಾರೆ ಕಾಣುತಿದ್ದೇನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಮುತುವರ್ಜಿಯಿಂದ ವ್ಯವಸ್ಥೆಯನ್ನು ಮಾಡಿದ್ದಾರೆ. ಜನರಿಗೆ ಯಾವುದೇ ತೊಂದರೆ ಆಗುತ್ತಿಲ್ಲ ಎಲ್ಲರೂ ಆರಾಮಾಗಿ ದರ್ಶನ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ಸುನಿಲ್‌ ಬೋಸ್‌‍ರಿಂದ ಹಾಸನಾಂಬ ದರ್ಶನ:
ಶಿಷ್ಟಾಚಾರದ ಪ್ರಕಾರ ದೇವಿ ದರ್ಶನ ಪಡೆದ ಸಂಸದ ಸುನಿಲ್‌ ಬೋಸ್‌‍ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷ ನವರಾತ್ರಿ ಆದಮೇಲೆ ವರ್ಷಕ್ಕೆ ಒಂದು ಬಾರಿ ದೇವಾಲಯ ತೆರೆಯುತ್ತದೆ ಇದು ಪವಾಡವಿರುವಂತಹ ದೇವಸ್ಥಾನ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರಾದ ಕಷ್ಣಭೈರೇಗೌಡ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ ಎಂದರು. ಕಳೆದ ಬಾರಿ ಬಹಳ ಗೊಂದಲಗಳು ಸಷ್ಟಿಯಾಗಿತ್ತು. ಜನಸಾಮಾನ್ಯರು ಜಿಲ್ಲಾಡಳಿತಕ್ಕೆ ಶಾಪ ಹಾಕಿರುವುದನ್ನು ನೋಡಿದ್ದೇನೆ ಎಂದರು. ತಾಯಿ ಹಾಸನಾಂಬ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಶುಭ ಕೋರಿದರು.

ಬಿಜೆಪಿಯಲ್ಲೂ ಗೊಂದಲ ಕಚ್ಚಾಟ ಇದೆ: ಬೆಲ್ಲದ್‌
ಬಿಜೆಪಿಯಲ್ಲಿ ಸ್ವಲ್ಪ ಗೊಂದಲ, ಕಚ್ಚಾಟ ಇದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ ಅದೆಲ್ಲ ಸರಿ ಹೋಗುತ್ತೆ ಅನ್ನುವ ಭರವಸೆ ಇದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ್‌ ಬೆಲ್ಲದ್‌ ಹೇಳಿದರು. ಹಾಸನಾಂಬೆ ದೇವಿ ದರ್ಶನದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಒಂದು ಮನೆ ಎಂದ ಮೇಲೆ ಬೇರೆ ಬೇರೆ ಅಭಿಪ್ರಾಯ ಇರುತ್ತದೆ, ಐದು ಬೆರಳು ಒಂದೇ ಸಮನೆ ಇರಲ್ಲ. ನಮ ಪಕ್ಷದಲ್ಲಿ ಒಳಜಗಳ ಇರುವುದು ಓಪನ್‌ ಸಿಕ್ರೇಟ್‌‍, ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಸರ್‌ಥಿಸಿಕೊಂಡರು.

ಸಮೀಕ್ಷೆಯಲ್ಲಿ ಲಿಂಗಾಯಿತ, ವೀರಶೈವ ಬರೆಸಿ ಎಂಬ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿದ ಅರವಿಂದ್‌ ಬೆಲ್ಲದ್‌‍, ಭಾರತ ದೇಶದಲ್ಲಿ ಇರುವವರೆಲ್ಲಾ ಹಿಂದೂಗಳೇ, ಬಸವಣ್ಣ ಎಲ್ಲಿಯೂ ಸಹಿತ ಸನಾತನ ರ್‌ಮ ಅನುಸರಿಸ ಮಾಡಬೇಡಿ ಅಂಥ ಹೇಳಿಲ್ಲ ಬಸವಣ್ಣ ಕೂಡಲ ಸಂಗಮ ಹೆಸರು ತಗೊಂಡು ಎಲ್ಲಾ ವಚನ ಬರೆದರು. ಅಕ್ಕಮಹಾದೇವಿ ಚನ್ನಮಲ್ಲಿ ಕರ್‌ಜುನ ಹೆಸರು ತಗೊಂಡು ವಚನ ಬರೆದರು. ಎಲ್ಲಾ ಶರಣರು ದೇವರ ಹೆಸರು ತಗೊಂಡು ವಚನ ಬರೆದಿದ್ದಾರೆ.ಎಡಪಂಥೀಯರು ಬಸವಣ್ಣ ಅವರನ್ನು ನಕ್ಸಲ್‌ ಹೀರೋ ಮಾಡಲು ಹೊರಟಿದ್ದಾರೆ. ಬಸವಣ್ಣ ಅವರಿಗೆ ಯಾವುದೇ ಧರ್‌ಮಿಕ ಚಿಂತನೆ ಇರಲಿಲ್ಲ ಎಂದರು.

ಒಂದೇ ದಿನ ಒಂದು ಕೋಟಿ ಆದಾಯ:
ವರ್ಷಕ್ಕೊಮೆ ದರ್ಶನ ನೀಡುವ ಹಾಸನಾಂಬ ಜಾತ್ರಾ ಮಹೋತ್ಸವ ಶುರುವಾಗಿದ್ದು ಶನಿವಾರ ಒಂದೇ ದಿನ 1 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹರಿದುಬಂದಿದೆ.ವಾರಾಂತ್ಯದ ಹಿನ್ನಲೆ ಟಿಕೆಟ್‌ ಮಾರಾಟದಿಂದ ದಾಖಲೆ ಆದಾಯ ಸಂಗ್ರಹವಾಗಿದೆ. ಒಂದು ಸಾವಿರ ರೂ. ಮೌಲ್ಯದ ಟಿಕೆಟ್‌ ಮಾರಾಟದಿಂದ 65 ಲಕ್ಷ ರೂ., 300 ರೂ. ಮೌಲ್ಯದ ಟಿಕೆಟ್‌ ಮಾರಾಟದಿಂದ 35 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕಷ್ಣಬೈರೇಗೌಡ ಮಾಹಿತಿ ನೀಡಿ, ಆರಂಭದ ದಿನಗಳಲ್ಲಿ ಹಾಸನಾಂಬೆ ದರ್ಶನದಲ್ಲಿ ದಾಖಲೆ ಆದಾಯ ಸಂಗ್ರಹವಾಗುತ್ತಿದೆ. ಶನಿವಾರ ಒಂದೇ ದಿನ 1000 ರೂ. ಹಾಗೂ 300ರೂ. ಟಿಕೆಟ್‌ ಮಾರಾಟದಿಂದ 1 ಕೋಟಿರೂ. ಸಂಗ್ರಹವಾಗಿದೆ.ಶುಕ್ರವಾರ 67 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು. ಕಳೆದ ವರ್ಷ 12 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಈ ವರ್ಷ 15 ಕೋಟಿಗೂ ಹೆಚ್ಚು ಆದಾಯ ಸಂಗ್ರಹ ನಿರೀಕ್ಷೆ ಇದೆ. ಯಾವುದೇ ಗೊಂದಲವಿಲ್ಲದೆ ದರ್ಶನ ಚೆನ್ನಾಗಿ ನಡೀತಿದೆ. ಪ್ರತಿದಿನ ಕನಿಷ್ಠ 2 ಲಕ್ಷ ಭಕ್ತರು ಬರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ರಾಗಿಗೆ ಜೀವದಾನ ನೀಡಿದ ಮಳೆರಾಯ, ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿ ರೈತರು

ಹುಳಿಯಾರು, ಅ.12- ಕಳೆದ ಮೂರ್ನಾಲ್ಕು ದಿನಗಳಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬೀಳುತ್ತಿರುವ ಮಳೆಯಿಂದ ತಾಲ್ಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ರಾಗಿ ಬೆಳೆಗೆ ಜೀವದಾನ ಲಭಿಸಿದಂತಾಗಿದ್ದು, ಬೆಳೆಗಾರರು ಈಗ ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.

ತಾಲೂಕಿನಲ್ಲಿ ಮಳೆಯ ಕೊರತೆಯಿಂದ ವಾಣಿಜ್ಯ ಬೆಳೆ ಕೈ ಕೊಟ್ಟಿತ್ತು. ನಂತರ ಅನುಮಾನದಿಂದಲೇ ರಾಗಿ ಬಿತ್ತನೆ ಮಾಡಿದ್ದ ರೈತರಿಗೆ ಆಗಸ್ಟ್‌‍ನಲ್ಲಿ ಸುರಿದ ಮಳೆ ಭರವಸೆ ಮೂಡಿಸಿತ್ತು. ನಂತರ ಮಳೆ ಬಾರದೇ ಬಿಸಿಲಿಗೆ ಪೈರೆಲ್ಲಾ ಒಣಗಿಸಲಾರಂಭಿಸಿತ್ತು.

ಕೊಳವೆಬಾವಿಯಲ್ಲಿ ಹೆಚ್ಚು ನೀರು ಇರುವ ಕೆಲವು ರೈತರು ರಾಗಿ ಬೆಳೆಗೆ ತುಂತುರು ನೀರಾವರಿ ಮೂಲಕ ನೀರು ಹಾಯಿಸಿ ರಾಗಿ ಪೈರು ರಕ್ಷಣೆ ಮಾಡಿಕೊಂಡಿದ್ದರು. ಇನ್ನೂ ಕೆಲವರು ಅಕ್ಕಪಕ್ಕದ ತೋಟದವರಿಂದ ಇಂತಿಷ್ಟು ರಾಗಿ ಕೊಡುವ ಒಪ್ಪಂದ ಮಾಡಿಕೊಂಡು ನೀರು ಪಡೆದು ರಾಗಿ ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಯಾವುದೇ ನೀರಿನ ವ್ಯವಸ್ಥೆ ಇಲ್ಲದ ರೈತರು ದೇವರ ಮೇಲೆ ಭಾರ ಹಾಕಿ ಕಪೆ ತೋರು ವರುಣ ಎಂದು ಕೈ ಮುಗಿದು ಪ್ರಾರ್ಥಿಸುತ್ತಿದ್ದರು.

ರೈತರ ಪ್ರಾರ್ಥನೆ ವರುಣನಿಗೆ ಮುಟ್ಟಿದ ಪರಿಣಾಮವೋ ಏನೋ ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ರಾತ್ರಿಯಿಡಿ ಸುರಿದ ಜಡಿಮಳೆ ರಾಗಿ ಬೆಳೆಗೆ ಮರುಜೀವ ನೀಡಿ ರೈತರು ನಿಟ್ಟುಸಿರು ಬಿಡುವಂತೆ ಮಾಡಿದೆ.

ತಾಲೂಕಿನ ಕೆಲ ಭಾಗದಲ್ಲಿ ದಾಖಲೆಯ 100 ಮಿಮೀ ಮಳೆಯಾಗಿದೆ. ಉಳಿದ ಕಡೆದ ಎರಡು ದಿನವೂ ಸರಾಸರಿ 30 ಮಿಮೀ ಮಳೆಯಾಗಿದೆ. ಪರಿಣಾಮ ಮುಂಚೆ ಬಿತ್ತಿದ ರಾಗಿ ಈಗಾಗಲೇ ತೆನೆ ಹೊಡೆದಿದೆ. ತಡವಾಗಿ ಬಿತ್ತಿದ್ದ ರಾಗಿ ಇನ್ನೇನು ಕೆಲವೇ ದಿನಗಳಲ್ಲಿ ತೆನೆಯೊಡೆಯಲಿದೆ. ಮುಂದಿನ ದಿನಗಳಲ್ಲಿ ಒಂದೆರಡು ಉತ್ತಮ ಮಳೆ ಆದರೆ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ. ಅಲ್ಲದೆ ರಾಗಿ ಹುಲ್ಲು ಕೂಡ ಚೆನ್ನಾಗಿ ಬೆಳೆದು ದನಕರಗಳ ಮೇವಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದು ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಬೀದರ್‌ : ಆಟ ಆಡುವಾಗ ಬಾವಿಗೆ ಬಿದ್ದು ಮಗು ಸಾವು

ಬೀದರ್‌,ಅ.13- ಆಟ ಆಡುವಾಗ ಬಾವಿಗೆ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಬೀದರ್‌ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಈಶ್ವರ ಕಾಲೋನಿಯಲ್ಲಿ ನಡೆದಿದೆ. ಶೇಖ್‌ ನುಸ್ತಕಿಮ್‌ ಅಕ್ಬರಲಿ(6) ಮೃತ ಬಾಲಕನಾಗಿದ್ದಾನೆ.

ಮನೆಯ ಪಕ್ಕದಲ್ಲಿ ಆಟ ಆಡುವ ವೇಳೆ ಆವರಣದಲ್ಲಿದ್ದ ಬಾವಿಗೆ ಆಕಸಿಕವಾಗಿ ಬಾಲಕ ಬಿದ್ದಿದೆ.ಮೊದಲು ಯಾರಿಗೂ ತಿಳಿಯಲಿಲ್ಲ ನಂತರ ಕಳೆದ ರಾತ್ರಿ ವಿಷಯ ತಿಳಿದು ಸ್ಥಳಕ್ಕೆ ದೌಡಾಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನ ಶವ ಹೊರತೆಗೆದಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಾಲಕನ ಶವ ರವಾನೆ ಮಾಡಿದ್ದಾರೆ. ಬಸವಕಲ್ಯಾಣ ನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3ನೇ ಮದುವೆಗೆ ಸಮ್ಮತಿ ನೀಡದ 2ನೇ ಪತ್ನಿಗೆ ಬೆಂಕಿ ಹಚ್ಚಿ ಕೊಂದ

ಪಾಟ್ನಾ, ಅ.12- ಹೆಣ್ಣುಬಾಕನೊಬ್ಬ ಮತ್ತೊಂದು ಮದುವೆಯಾಗಲು ಸಮ್ಮತಿ ನೀಡದ ಎರಡನೇ ಹೆಂಡತಿಯನ್ನು ಬೆಂಕಿ ಹಚ್ಚಿ ಕೊಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ತನ್ನ ಎರಡನೇ ಪತ್ನಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಂದ ಪಾಪಿಯನ್ನು ನಳಂದ ಜಿಲ್ಲೆಯ ವಿಕಾಸ್‌‍ ಕುಮಾರ್‌ ಹಾಗೂ ಗಂಡನ ಕ್ರೌರ್ಯಕ್ಕೆ ಬಲಿಯಾದ ಮಹಿಳೆಯನ್ನು ಸುನೀತಾ ಎಂದು ಗುರುತಿಸಲಾಗಿದೆ.

ಈತ ತನ್ನ ಗೆಳತಿಯನ್ನು ಮದುವೆಯಾಗಲು ಬಯಸಿದ್ದ, ಆದರೆ ಅವರ ಎರಡನೇ ಹೆಂಡತಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕೋಪಗೊಂಡ ಆತ ಆಕೆಯ ಮೇಲೆ ಪೆಟ್ರೋಲ್‌ ಸುರಿದು, ಸಿಲಿಂಡರ್‌ನಿಂದ ಎಲ್‌ಪಿಜಿ ಸುರಿದು, ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಕಾಸ್‌‍ ಕುಮಾರ್‌ ಐದು ವರ್ಷಗಳ ಹಿಂದೆ ಸುನೀತಾ ದೇವಿಯನ್ನು (25) ವಿವಾಹವಾಗಿದ್ದರು. ಇದಕ್ಕೂ ಮುನ್ನ ಆತ ಮತ್ತೊಂದು ಮದುವೆ ಮಾಡಿಕೊಂಡಿದ್ದ ವಿಚಾರ ಬಯಲಾಗಿತ್ತು. ಆದರೂ ಕುಟುಂಬದವರು ಪತಿಯೊಂದಿಗೆ ಜೀವನ ಸಾಗಿಸುವಂತೆ ಸುನೀತಾ ಅವರಿಗೆ ಬುದ್ದಿವಾದ ಹೇಳಿದರು.

ಹೀಗಾಗಿ ಸುನೀತಾ ಕುಮಾರ್‌ನೊಂದಿಗೆ ಜೀವನ ಸಾಗಿಸುತ್ತಿದ್ದರು. ಅವರಿಗೆ ಹುಟ್ಟಿದ ಇಬ್ಬರು ಮಕ್ಕಳು ಸ್ವಲ್ಪ ಸಮಯದ ನಂತರ ನಿಧನರಾದರು. ಇದಾದ ನಂತರ ಕುಮಾರ್‌ ತನ್ನ ಗೆಳತಿಯನ್ನು ಮದುವೆಯಾಗುವ ಬಗ್ಗೆ ಮಾತನಾಡಲು ಪ್ರಾರಂಭಿಸಿದಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ್ಗೆ ವಾದಗಳಿಗೆ ಕಾರಣವಾಯಿತು, ನಂತರ ಸುನೀತಾ ತಮ್ಮ ಪೋಷಕರೊಂದಿಗೆ ವಾಸಿಸಲು ನಿರ್ಧರಿಸಿದರು.

ಕಳೆದ ತಿಂಗಳು ಪ್ರಾರಂಭವಾದ ದುರ್ಗಾ ಪೂಜಾ ಹಬ್ಬಕ್ಕೆ ಮೊದಲು, ಕುಮಾರ್‌ ಸುನೀತಾಳ ಮನೆಗೆ ಹೋಗಿ ತನ್ನೊಂದಿಗೆ ಹಿಂತಿರುಗಲು ಕೇಳಿಕೊಂಡರು. ಮನೆಗೆ ಬಂದ ಪತ್ನಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಸುನೀತಾ ಪೋಷಕರು ದೂರು ನೀಡಿದ್ದಾರೆ.ಕುಮಾರ್‌ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಹಲವು ರಾಜ್ಯಗಳಲ್ಲಿ ಲಿಂಗಾನುಪಾತ ಕ್ಷೀಣಿಸುತ್ತಿರುವುದಕ್ಕೆ ನ್ಯಾಯಮೂರ್ತಿ ನಾಗರತ್ನ ಕಳವಳ

ನವದೆಹಲಿ, ಅ.12– ದೇಶದ ಹಲವು ರಾಜ್ಯಗಳಲ್ಲಿ ಹೆಣ್ಣು ಶಿಶುಹತ್ಯೆ ಮತ್ತು ಭ್ರೂಣಹತ್ಯೆಯಿಂದಾಗಿ ಕ್ಷೀಣಿಸುತ್ತಿರುವ ಲಿಂಗ ಅನುಪಾತದ ಬಗ್ಗೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶೆ ಬಿ.ವಿ. ನಾಗರತ್ನ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಬಾಲ ನ್ಯಾಯ ಸಮಿತಿಯು ಯುನಿಸೆಫ್‌ ಇಂಡಿಯಾ ಸಹಯೋಗದೊಂದಿಗೆ ಆಯೋಜಿಸಿದ್ದ ಹೆಣ್ಣು ಮಗುವನ್ನು ರಕ್ಷಿಸುವುದು: ಭಾರತದಲ್ಲಿ ಅವಳಿಗೆ ಸುರಕ್ಷಿತ ಮತ್ತು ಸಕ್ರಿಯಗೊಳಿಸುವ ಪರಿಸರದ ಕಡೆಗೆ ಎಂಬ ರಾಷ್ಟ್ರೀಯ ವಾರ್ಷಿಕ ಪಾಲುದಾರರ ಸಮಾಲೋಚನೆಯಲ್ಲಿ ಅವರು ಮಾತನಾಡುತ್ತಿದ್ದರು.

ನ್ಯಾಯಮೂರ್ತಿ ನಾಗರತ್ನ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರ ಸಮ್ಮುಖದಲ್ಲಿ ಮಾತನಾಡುತ್ತಿದ್ದರು. ಜೆಜೆಸಿ ಸದಸ್ಯ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ಇತರ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾರತದಲ್ಲಿ ಒಬ್ಬ ಯುವತಿಯನ್ನು ತನ್ನ ಪುರುಷ ಪ್ರತಿರೂಪವು ಸಾಧಿಸಬಹುದಾದ ಯಾವುದನ್ನಾದರೂ ಮುಕ್ತವಾಗಿ ಸಾಧಿಸಲು ಆಶಿಸಿದಾಗ ಮತ್ತು ಲಿಂಗ-ನಿರ್ದಿಷ್ಟ ಅಡೆತಡೆಗಳನ್ನು ಎದುರಿಸದೆ ಅದೇ ಗುಣಮಟ್ಟದ ಬೆಂಬಲ ಮತ್ತು ಸಂಪನ್ಮೂಲಗಳನ್ನು ಪಡೆದಾಗ ಮಾತ್ರ ನಿಜವಾದ ಸಮಾನ ನಾಗರಿಕ ಎಂದು ಪರಿಗಣಿಸಬಹುದು ಎಂದು ಅವರು ಪ್ರತಿಪಾದಿಸಿದರು.

ಬೇರೆ ರೀತಿಯಲ್ಲಿ ಹೇಳುವುದಾದರೆ, ಅವಳು ಜನಿಸುವ ಸಾಧ್ಯತೆಗಳು, ಸರಿಯಾದ ಪೋಷಣೆ, ಆರೈಕೆ, ಶಿಕ್ಷಣ ಮತ್ತು ಭೌತಿಕ ಸಂಪನ್ಮೂಲಗಳು, ಸುರಕ್ಷಿತ ಮತ್ತು ಸುರಕ್ಷಿತ ವಾತಾವರಣ, ವಿಶಿಷ್ಟವಾದ ಸ್ವಯಂ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಮತ್ತು ಈ ದೇಶದಲ್ಲಿ ಜನಿಸಿದ ಗಂಡು ಮಗುವಿಗೆ ಸಮನಾಗಿರಲು ಅವಳು ಏನು ಬೇಕಾದರೂ ಸಾಧಿಸಲು ಸಾಧ್ಯವಾಗುತ್ತದೆ. ಅವಳು ಕೇವಲ ಬದುಕುಳಿಯಬಾರದು, ಆದರೆ ಸಕ್ರಿಯವಾಗಿ ಅಭಿವೃದ್ಧಿ ಹೊಂದಬೇಕು ಎಂದು ಅವರು ಹೇಳಿದರು.

ಭಾರತದಲ್ಲಿ ಹೆಣ್ಣು ಮಗು ಎದುರಿಸುವ ಮೊದಲ ಅಡಚಣೆ ಹುಟ್ಟುವ ಕ್ರಿಯೆಯಾಗಿದೆ ಎಂದು ಅವರು ಗಮನಿಸಿದರು. ಮಗು ಗಂಡು ಮಗುವಲ್ಲ, ಹೆಣ್ಣು ಮಗು ಎಂದು ಕೇಳಿದಾಗ ಅನೇಕ ಕುಟುಂಬಗಳು ನಿರಾಶೆ ಅಥವಾ ನಿರಾಶೆಯನ್ನು ಅನುಭವಿಸಬಹುದು ಎಂಬುದು ದುರದೃಷ್ಟಕರ ವಾಸ್ತವ.

ಭಾರತದಲ್ಲಿ ಮಕ್ಕಳ ಲಿಂಗ ಅನುಪಾತ (0-6 ವರ್ಷಗಳು) ಅಲ್ಪ ಸುಧಾರಣೆ ಕಂಡಿದೆ, 2011 ರ ಜನಗಣತಿಯಲ್ಲಿ 1000 ಗಂಡು ಮಕ್ಕಳಿಗೆ 914 ಹುಡುಗಿಯರಿಂದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 ರಲ್ಲಿ 1000 ಗಂಡು ಮಕ್ಕಳಿಗೆ 929 ಹುಡುಗಿಯರಿಗೆ ತಲುಪಿದೆ. ಕೆಲವು ರಾಜ್ಯಗಳಲ್ಲಿ ಹೆಣ್ಣು ಶಿಶುಹತ್ಯೆ/ಭ್ರೂಣಹತ್ಯೆಯಿಂದ ಉಂಟಾಗುವ ಲಿಂಗ ಅನುಪಾತಗಳು ಹದಗೆಡುತ್ತಿರುವ ಬಗ್ಗೆ ಇತ್ತೀಚೆಗೆ ವರದಿಗಳಿವೆ ಎಂದು ಅವರು ಹೇಳಿದರು, ಆದಾಗ್ಯೂ, ಇತರ ಹಲವು ರಾಜ್ಯಗಳು ತಮ್ಮ ಲಿಂಗ ಅನುಪಾತಗಳಲ್ಲಿ ಸುಧಾರಣೆ ಕಂಡಿವೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನ ಬಾಲ ನ್ಯಾಯ ಸಮಿತಿಯ (ಜೆಜೆಸಿ) ಅಧ್ಯಕ್ಷರಾಗಿ, ನ್ಯಾಯಮೂರ್ತಿ ನಾಗರತ್ನ ಅವರು ಪೌಷ್ಠಿಕಾಂಶದ ಆರೈಕೆಯ ಮಹತ್ವವನ್ನು ಒತ್ತಿ ಹೇಳಿದರು, ಸರಿಯಾದ ಪೋಷಣೆ ಇಲ್ಲದೆ, ಹೆಣ್ಣು ಮಗುವನ್ನು ಉನ್ನತೀಕರಿಸುವ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಬಹುದು ಎಂದು ಹೇಳಿದರು.ಹೆಣ್ಣು ಮಕ್ಕಳಿಗೆ ಉದ್ದೇಶಪೂರ್ವಕವಾಗಿ ಅವರ ಸಹೋದರರಿಗಿಂತ ಕಡಿಮೆ ಅಥವಾ ಕಡಿಮೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ.

ಮಧ್ಯಾಹ್ನದ ಊಟ ಯೋಜನೆ, ರಕ್ತಹೀನತೆ ಮುಕ್ತ ಭಾರತ್‌ ಕಾರ್ಯಕ್ರಮ ಮತ್ತು ಪೋಷಣ್‌ ಅಭಿಯಾನದಂತಹ ಯೋಜನೆಗಳು ಚಿಕ್ಕ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕಾಂಶ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ದೊಡ್ಡ ಪ್ರಗತಿಯನ್ನು ಸಾಧಿಸಿವೆ, ಆದರೆ ಆರಂಭಿಕ ವರ್ಷಗಳಲ್ಲಿ ಅಪೌಷ್ಟಿಕತೆಯು ಹೆಣ್ಣು ಮಗುವಿನ ದೈಹಿಕವಾಗಿ ಸಕ್ರಿಯರಾಗಲು, ಯೋಚಿಸಲು ಮತ್ತು ಸಮಸ್ಯೆ-ಪರಿಹರಿಸಲು ಇರುವ ಸಾಮರ್ಥ್ಯದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳನ್ನು ಸಾಕಷ್ಟು ಪ್ರಚಾರ ಮಾಡುವುದು ಮುಖ್ಯ ಎಂದು ಅವರು ಮತ್ತಷ್ಟು ಹೇಳಿದರು.

ಬಾಲ್ಯ ವಿವಾಹವನ್ನು ಉದ್ದೇಶಿಸಿ ಮಾತನಾಡಿದ ಅವರು, ಸತತ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳಲ್ಲಿ ಕಂಡುಬರುವ ಸಕಾರಾತ್ಮಕ ಪ್ರವೃತ್ತಿಯನ್ನು ಒಪ್ಪಿಕೊಂಡರು, ಇದು ಬಾಲ್ಯ ವಿವಾಹದ ಹರಡುವಿಕೆಯಲ್ಲಿ ಸ್ಥಿರವಾದ ಕುಸಿತವನ್ನು ತೋರಿಸುತ್ತದೆ. ಕಳೆದ ಹದಿನೈದು ವರ್ಷಗಳಲ್ಲಿ, ಸಂಯೋಜಿತ ನೀತಿ ಪ್ರಯತ್ನಗಳು ಮತ್ತು ಸಮುದಾಯದ ಭಾಗವಹಿಸುವಿಕೆ ಭಾರತದಲ್ಲಿ ಬಾಲ್ಯ ವಿವಾಹದ ಪ್ರಮಾಣವನ್ನು ಅರ್ಧಕ್ಕೆ ಇಳಿಸಿವೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ರಂತಹ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಡಿಯಲ್ಲಿ ಭಾರತದ ಅಂತರರಾಷ್ಟ್ರೀಯ ಬಾಧ್ಯತೆಗಳಿಗೆ ಅನುಗುಣವಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಸಾಂದರ್ಭಿಕವಾಗಿ ಯುನಿಸೆಫ್‌ ಸಹಯೋಗದೊಂದಿಗೆ, ಹಲವಾರು ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿವೆ.

ಪ್ರಾದೇಶಿಕ ವಿಶಿಷ್ಟತೆಗಳಿಗೆ ಸಮರ್ಪಕವಾಗಿ ಅನುಗುಣವಾಗಿ ಸಮಗ್ರ ಪರಿಹಾರಗಳನ್ನು ಅಳವಡಿಸಿಕೊಳ್ಳುವುದು, ಕೈಗೊಂಡ ಮಧ್ಯಸ್ಥಿಕೆಗಳು ಹೆಚ್ಚು ಪರಿಣಾಮಕಾರಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.ಹೆಣ್ಣು ಮಗುವಿನ ಶಿಕ್ಷಣದ ಬಗ್ಗೆ, ನ್ಯಾಯಮೂರ್ತಿ ನಾಗರತ್ನ ಅವರು ಗುಣಮಟ್ಟದ ಶಿಕ್ಷಣವು ಹುಡುಗಿಯರ ಸಬಲೀಕರಣಕ್ಕೆ ಮಾತ್ರವಲ್ಲದೆ ರಾಷ್ಟ್ರದ ಸಮೃದ್ಧಿಗೂ ಅತ್ಯಗತ್ಯ ಎಂದು ಹೇಳಿದರು. ಭಾರತವು ಜಾಗತಿಕವಾಗಿ ಸೂಪರ್‌ ಪವರ್‌ ಆಗಲು, ಇಂದಿನ ಯುವತಿಯರು ದೇಶದ ಪಥವನ್ನು ರೂಪಿಸುವ ಭವಿಷ್ಯದ ಮಹಿಳೆಯರಾಗಲು ಸಮರ್ಪಕವಾಗಿ ಬೆಂಬಲಿತರಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ರಾಮಭದ್ರಾಚಾರ್ಯರ ಅವಹೇಳನಕಾರಿ ವಿಡಿಯೋ ಡಿಲಿಟ್‌ ಮಾಡಲು ಆದೇಶ

ಲಕ್ನೋ,ಅ.12- ಖ್ಯಾತ ರಾಮಕಥಾ ನಿರೂಪಕ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಜಗದ್ಗುರು ರಾಮಭದ್ರಾಚಾರ್ಯರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಕ್ಷೇಪಾರ್ಹ ವೀಡಿಯೊಗಳನ್ನು 48 ಗಂಟೆಗಳ ಒಳಗೆ ತೆಗೆದುಹಾಕುವಂತೆ ಅಲಹಾಬಾದ್‌ ಹೈಕೋರ್ಟ್‌ನ ಲಕ್ನೋ ಪೀಠ ಮೆಟಾ ಮತ್ತು ಗೂಗಲ್‌ಗೆ ನಿರ್ದೇಶನ ನೀಡಿದೆ.

ಶರದ್‌ ಚಂದ್ರ ಶ್ರೀವಾಸ್ತವ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಶೇಖರ್‌ ಬಿ ಸರಾಫ್‌ ಮತ್ತು ನ್ಯಾಯಮೂರ್ತಿ ಪ್ರಶಾಂತ್‌ ಕುಮಾರ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ನೀಡಿದೆ.ತೆಗೆದುಹಾಕುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸಂಬಂಧಿತ ಲಿಂಕ್‌ಗಳನ್ನು ಒದಗಿಸುವಂತೆ ನ್ಯಾಯಾಲಯವು ಅರ್ಜಿದಾರರಿಗೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್‌ 11 ಕ್ಕೆ ನಿಗದಿಪಡಿಸಲಾಗಿದೆ.

ಯೂಟ್ಯೂಬ್‌‍, ಫೇಸ್‌‍ಬುಕ್‌‍ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬಹು ಚಾನೆಲ್‌ಗಳನ್ನು ನಿರ್ವಹಿಸುವ ಶಶಾಂಕ್‌ ಶೇಖರ್‌ ಎಂಬವರು ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ದಿವ್ಯಾಂಗ್‌ ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ ರಾಮಭದ್ರಾಚಾರ್ಯರ ವಿರುದ್ಧ ಅವಹೇಳನಕಾರಿ ಮತ್ತು ಮಾನನಷ್ಟಕರ ವೀಡಿಯೊಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ರಾಮಭದ್ರಾಚಾರ್ಯರ ಅನುಯಾಯಿಗಳು ಎತ್ತಿದ ಆಕ್ಷೇಪಣೆಗಳ ಹೊರತಾಗಿಯೂ, ವೀಡಿಯೊಗಳು ಆನ್‌ಲೈನ್‌ನಲ್ಲಿಯೇ ಉಳಿದಿವೆ ಎಂದು ವರದಿಯಾಗಿದೆ ಮತ್ತು ಅವುಗಳನ್ನು ತೆಗೆದುಹಾಕಲು ಸಂಬಂಧಪಟ್ಟ ವೇದಿಕೆಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅದು ಹೇಳಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಯಂತ್ರಿಸಲು ನಿಯಮಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆಯೂ ಅರ್ಜಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲಾಗಿದೆ, ಆನ್‌ಲೈನ್‌ನಲ್ಲಿ ಮಾನಹಾನಿಕರ ವಿಷಯಗಳ ಹರಡುವಿಕೆಯನ್ನು ತಡೆಯುವ ಅಗತ್ಯವನ್ನು ಎತ್ತಿ ತೋರಿಸಲಾಗಿದೆ.

ಅರ್ಜಿದಾರರು ಈ ವಿಷಯವು ಮಾನಹಾನಿಕರ ಮಾತ್ರವಲ್ಲದೆ, ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡ ರಾಮಭದ್ರಾಚಾರ್ಯ ಅವರ ಅಂಗವೈಕಲ್ಯವನ್ನು ಅಣಕಿಸುವಂತಿದೆ ಎಂದು ವಾದಿಸಿದರು.ವಿಚಾರಣೆಯ ಸಮಯದಲ್ಲಿ, ರಾಜ್ಯ ಅಂಗವಿಕಲರ ಆಯುಕ್ತರ ಕಚೇರಿಯು ಈ ವಿಷಯವನ್ನು ಈಗಾಗಲೇ ಗಮನದಲ್ಲಿಟ್ಟುಕೊಂಡು ಶೇಖರ್‌ ಅವರಿಗೆ ನೋಟಿಸ್‌‍ ನೀಡಿ, ಅಕ್ಟೋಬರ್‌ 18 ರಂದು ಆಯೋಗದ ಮುಂದೆ ಹಾಜರಾಗುವಂತೆ ನಿರ್ದೇಶಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.