Home Blog Page 58

ರಾಹುಲ್‌ ಗಾಂಧಿಯಂತೆ ಸಮೀಕ್ಷೆಯೂ ಗೊಂದಲಮಯ : ಆರ್‌.ಅಶೋಕ್‌ ವ್ಯಂಗ್ಯ

ಬೆಂಗಳೂರು,ಅ.9- ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರಂತೆಯೇ ಅಸ್ತವ್ಯಸ್ತವಾಗಿದ್ದು, ಗೊಂದಲಮಯವಾಗಿದೆ ಎಂದು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಇದು ಸಮೀಕ್ಷೆಯಲ್ಲ. ಇದು ದೋಷಗಳ ಸಮೀಕ್ಷೆ, ಅಧಿಕಾರಕ್ಕೆ ಅಂಟಿಕೊಳ್ಳಲು ಸಿಎಂ ಸಿದ್ದರಾಮಯ್ಯನವರ ಚೇಷ್ಟೆಗಳಿಗೆ ಕರ್ನಾಟಕದ ಮಕ್ಕಳು ಬೆಲೆ ತೆರುತ್ತಿದ್ದಾರೆ ಎಂದು ವಾಗ್ದಳಿ ನಡೆಸಿದ್ದಾರೆ.

ಕರ್ನಾಟಕದ ಜಾತಿ ಸಮೀಕ್ಷೆಗೆ ತಯಾರಿ ಇಲ್ಲ. ಯೋಜನೆ ಇಲ್ಲ. ಸ್ಪಷ್ಟ ಉದ್ದೇಶವಿಲ್ಲ. ರಾಹುಲ್‌ಗಾಂಧಿಯಂತೆಯೇ ಆಗಿದೆ. ಈಗ ಕಾಂಗ್ರೆಸ್‌‍ ಸರ್ಕಾರವು ದಸರಾ ರಜೆಯನ್ನು ವಿಸ್ತರಿಸಿದೆ. ಶಿಕ್ಷಕರು ಈ ಅವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ.

ಗಣತಿದಾರರಿಗೆ ಏನು ಕೇಳಬೇಕೆಂದು ತಿಳಿದಿಲ್ಲ, ಶಿಕ್ಷಕರನ್ನು ತರಗತಿಯಿಂದ ದೂರ ಇಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಕತ್ತಲೆಯಲ್ಲಿ ಬಿಡಲಾಗಿದೆ.ಇವೆಲ್ಲವೂ ಕಾಂಗ್ರೆಸ್‌‍ನ ವಿಭಜಿತ ಮತ-ಬ್ಯಾಂಕ್‌ ರಾಜಕೀಯಕ್ಕೆ ಮಾತ್ರ ಕಾರ್ಯನಿರ್ವಹಿಸುವ ರಾಜಕೀಯ ಪ್ರೇರಿತ ಕಸರತ್ತು ಎಂದು ಅಶೋಕ್‌ ಟೀಕಾ ಪ್ರಹಾರ ನಡೆಸಿದ್ದಾರೆ.

ಹೊಸ ಮನೆ ಕಟ್ಟಿ ವಿದ್ಯುತ್‌ ಸಂಪರ್ಕಕ್ಕೆ ಪರದಾಡುತ್ತಿರುವವರಿಗೆ ಸದ್ಯದಲ್ಲೇ ಗುಡ್ ನ್ಯೂಸ್

ಬೆಂಗಳೂರು,ಅ.9- ಹೊಸ ಮನೆ ಕಟ್ಟಿ ವಿದ್ಯುತ್‌ ಸಂಪರ್ಕ ಸಿಗದೆ ಪರದಾಡುತ್ತಿರುವ ನಾಗರಿಕರಿಗೆ ಶೀಘ್ರದಲ್ಲೇ ಗುಡ್‌ ನ್ಯೂಸ್‌‍ ಸಿಗುವ ಸಾಧ್ಯತೆಗಳಿವೆ. 1200 ರಿಂದ 2400 ಚದುರಡಿ ಸುತ್ತಳತೆಯಲ್ಲಿ ನಿರ್ಮಿಸಿರುವ ಹೊಸ ಮನೆಗಳಿಗೆ ಓಸಿ ಮತ್ತು ಸಿಸಿ ಇಲ್ಲದೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸರ್ಕಾರ ಅನುಕೂಲ ಮಾಡಿಕೊಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಹೊಸದಾಗಿ ನಿರ್ಮಿಸುವ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಜಿಬಿಎ ಇಂದ ಕ್ಲಿಯರೆನ್‌್ಸ ಸರ್ಟಿಫಿಕೇಟ್‌ (ಸಿಸಿ) ಹಾಗೂ ಓಸಿ ಪಡೆದುಕೊಳ್ಳಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿತ್ತು.

ಆದರೆ, ಹೊಸ ನಿಯಮದಡಿ ವಿದ್ಯುತ್‌ ಸಂಪರ್ಕ ಪಡೆಯಲು ಆಗದೆ ಸಾರ್ವಜನಿಕರು ಪರದಾಡುವಂತಾಗಿತ್ತು. ನಂತರ ಸರ್ಕಾರ 1200 ಚದುರಡಿ ಸುತ್ತಳತೆಯಲ್ಲಿ ನಿರ್ಮಿಸುವ ಮನೆಗಳಿಗೆ ಓಸಿ, ಸಿಸಿ ಇಲ್ಲದೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡುವ ಭರವಸೆ ನೀಡಿತ್ತು. ನಂತರ ಅದಕ್ಕೂ ಅವಕಾಶ ಕಲ್ಪಿಸಿರಲಾಗಿರಲಿಲ್ಲ, ಇದೀಗ ಸಾರ್ವಜನಿಕರಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ 2400 ಚದುರಡಿಯಲ್ಲಿ ನಿರ್ಮಿಸಿರುವ ಮನೆಗಳಿಗೂ ಓಸಿ, ಸಿಸಿ ಇಲ್ಲದೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಸಾರ್ವಜನಿಕರ ನೆರವಿಗೆ ಧಾವಿಸಲು ಮುಂದಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ನಿನ್ನೆ ನಡೆದಿದ್ದ ಸಭೆಯಲ್ಲಿ 2400 ಚದುರಡಿವರೆಗಿನ ಮನೆಗಳಿಗೆ ಸಿಸಿ ಮತ್ತು ಓಸಿ ವಿನಾಯಿತಿ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಚೆನ್ನೈ ಮಾದರಿಯಲ್ಲಿ ವಿನಾಯಿತಿ ನೀಡುವ ಕುರಿತು ಬಹುತೇಕ ನಿರ್ಧಾರ ಮಾಡಲಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಇಂದೇ ಸಂಪುಟದಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.

ಚನೈ ನಲ್ಲಿ 2400 ಚದುರಿಡಿವರೆಗೂ ಸಿಸಿ , ಓಸಿಗೆ ವಿನಾಯಿತಿ ಇದೆ 2400 ಅಡಿಯಲ್ಲಿ ನಿರ್ಮಾಣವಾದ ಜೊತೆಗೆ 7200 ಅಡಿವರೆಗಿನ ಕಟ್ಟಡಗಳಿಗೂ ವಿನಾಯಿತಿ ನೀಡಲಾಗಿದೆ ಅದೇ ಮಾದರಿಯಲ್ಲಿ 2400 ಚದುರಡಿ ನಿವೇಶನದಲ್ಲಿ ನಿರ್ಮಾಣ ಮಾಡಿರುವ ಗ್ರೌಂಡ್‌ + ಎರಡಂತಸ್ತಿನ ಕಟ್ಟಡಗಳಿಗೆ ವಿನಾಯಿ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.ವಾಣಿಜ್ಯ ಉದ್ದೇಶದ ಕಟ್ಟಡಗಳನ್ನು ಹೊರತು ಪಡಿಸಿದ ಕೇವಲ ವಸತಿ ಉದ್ದೇಶಿತ ಕಟ್ಟಡಗಳಿಗೆ ವಿನಾಯಿತಿ ನೀಡಲು ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಹಾಸನಾಂಬ ದೇವಾಲಯದ ಬಾಗಿಲು ಓಪನ್, ನಾಳೆಯಿಂದ ಭಕ್ತರಿಗೆ ದರ್ಶನ ಭಾಗ್ಯ

ಹಾಸನ,ಅ.9-ವರ್ಷಕ್ಕೊಮೆ ದರ್ಶನ ಭಾಗ್ಯ ಕರುಣಿಸುವ ನಗರದ ಅದಿ ದೇವತೆ ಹಾಸನಾಂಭ ದೇವಾಲಯದ ಬಾಗಿಲನ್ನು ಇಂದು ಶಾಸ್ತ್ರೋಕ್ತವಾಗಿ ತೆರೆಯಲಾಗಿದ್ದು, ನಾಳೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆಶ್ವಿಜಮಾಸದ ಮೊದಲ ಗುರುವಾರವಾದ ಇಂದು ಮಧ್ಯಾಹ್ನ 12.21ಕ್ಕೆ ಸರಿಯಾಗಿ ಅರಸು ವಂಶಸ್ಥರಾದ ನಂಜರಾಜ ಅರಸ್‌‍ ಅವರು (ಬಾಳೆಕಂದು) ಕಡಿದ ಬಳಿಕ ಪ್ರದಾನ ಅರ್ಚಕರಾದ ನಾಗರಾಜು ಅವರು ಬಾಗಿಲಿಗೆ ಪೂಜೆ ಸಲ್ಲಿಸಿದ ನಂತರ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ, ಸಂಸದ ಶ್ರೇಯಸ್‌‍ ಪಟೇಲ್‌, ಶಾಸಕ ಸ್ವರೂಪ್‌ ಪ್ರಕಾಶ್‌, ಜಿಲ್ಲಾಧಿಕಾರಿ ಲತಾಕುಮಾರಿ, ಜಿಪಂ ಸಿಇಓ ಪೂರ್ಣಿಮ, ಎಸ್‌‍ಪಿ ಮೊಹಮದ್‌ ಸುಜೀತಾ ಸೇರಿದಂತೆ ಹಲವು ಗಣ್ಯರ ಸಮುಖದಲ್ಲಿ ಅದ್ದೂರಿಯಾಗಿ ಬಾಗಿಲನ್ನು ತೆರೆಯಲಾಯಿತು.
ದೇವಾಲಯದ ಗರ್ಭಗುಡಿಯನ್ನು ಶುಚಿಗೊಳಿಸಿ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು.

ಇಂದಿನಿಂದ 23 ರ ವರೆಗೆ ಹಾಸನಾಂಭ ಹಾಗೂ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಲಿದ್ದು, ಪ್ರಥಮ ದಿನವಾದ ಇಂದು ಮತ್ತು ಬಾಗಿಲು ಮುಚ್ಚುವ ದಿನವಾದ 23 ರಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ.

ನಾಳೆ ಬೆಳಗ್ಗೆ 6 ಗಂಟೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ದಿನದ 24 ಗಂಟೆಗಳ ಕಾಲ ದರ್ಶನವಿರಲಿದ್ದು, ಪ್ರತಿ ದಿನದ ನೈವೇದ್ಯಮತ್ತು ಅಲಂಕಾರ ಕಾರ್ಯಗಳಿಗೆ ಮಧ್ಯಾಹ್ನ 2 ರಿಂದ 3 ಗಂಟೆ ಮತ್ತು ಬೆಳಗಿನ ಜಾವ 2 ರಿಂದ 5 ಗಂಟೆ ವರೆಗೆ ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ.

ಅ.22 ರಂದು ಸಂಜೆ 7 ಗಂಟೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಅ.23 ರಂದು ಪೂಜಾ ಕಾರ್ಯಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಕಳೆದ ವರ್ಷ ಅ.24 ರಿಂದ ನ.3 ರ ವರೆಗೆ ಜಾತ್ರಾ ಮಹೋತ್ಸವ ನಡೆದಿತ್ತು. ಈ ವೇಳೆ 20 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದರು.ಕಳೆದ ನ.3 ರಂದು ಗರ್ಭಗುಡಿ ಬಾಗಿಲನ್ನು ಮುಚ್ಚಲಾಗಿದ್ದು, ಇಂದು ತೆರೆಯಲಾಯಿತು. ಈ ಭಾರಿ 25 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.

ಧರ್ಮದರ್ಶನ ಹಾಗೂ 300 ರೂ., ಹಾಗೂ 1000 ರೂ. ಟಿಕೆಟ್‌ ಪಡೆದವರಿಗೆ ಮೂರು ಪ್ರತ್ಯೇಕ ಸಾಲುಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಶಾಸಕರುಗಳು, ಸಚಿವರುಗಳು, ನ್ಯಾಯಮೂರ್ತಿಗಳು, ಉನ್ನತ ಅಧಿಕಾರಿಗಳು ಹಾಗೂ ಇತರೆ ಗಣ್ಯರು ಆಗಮನದ ದಿನಾಂಕವನ್ನು ಮೊದಲೇ ಜಿಲ್ಲಾಧಿಕಾರಿ ಕಚೇರಿಗೆ ತಿಳಿಸಬೇಕಾಗಿದೆ.

ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರ ವರೆಗೆ ಮಾತ್ರ ಗಣ್ಯರಿಗೆ ಅವಕಾಶವಿರುತ್ತದೆ. ಈ ಬಾರಿ ಹಲವು ಕಾರ್ಯಕ್ರಮಗಳನ್ನು ಹಮಿಕೊಂಡಿದ್ದು, ಜಾನಪದ ಕಲೆ, ಸಾಂಸ್ಕೃತಿಕ ಕಾರ್ಯಕ್ರಮ, ಹೆಲಿಕಾಪ್ಟ್ರರ್‌ ಪ್ರವಾಸ, ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಭೈರೇಗೌಡರವರು ಈಗಾಗಲೇ ಜಿಲ್ಲಾಧಿಕಾರಿ ಪೊಲೀಸ್‌‍ ವರಿಷ್ಟಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಭಾರಿ ಹಾಸನಾಂಭ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಹಃ ಹಲವು ಮಾರ್ಪಾಡುಗಳೊಂದಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸುಸುತೊ್ತ್ರೕವಾಗಿ ಜಾತ್ರಾ ಮಹೋತ್ಸವ ನಡೆಸಲು ಸಜ್ಜಾಗಿದೆ.

ಇದೆ ಮೊದಲ ಬಾರಿಗೆ ಭಾರತಕ್ಕೆ ಬಂದ ತಾಲಿಬಾನ್‌ ಸರ್ಕಾರದ ವಿದೇಶಾಂಗ ಸಚಿವ

ನವದೆಹಲಿ, ಅ.9– ತಾಲಿಬಾನ್‌ ಸರ್ಕಾರದ ಅಫ್ಘಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಇಂದು ದೆಹಲಿಗೆ ಆಗಮಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿನ ಸಚಿವರೊಬ್ಬರ ಮೊದಲ ಭಾರತ ಭೇಟಿ ಇದಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುತಾಕಿ ಅವರಿಗೆ ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ತಾತ್ಕಾಲಿಕ ವಿನಾಯಿತಿ ನೀಡಿದ್ದರಿಂದ ಮುತ್ತಕಿ ಭಾರತಕ್ಕೆ ಬಂದಿದ್ದಾರೆ. 2021ರ ಆಗಸ್ಟ್‌ನಲ್ಲಿ ತಾಲಿಬಾನ್‌ ಅಧಿಕಾರ ವಶಪಡಿಸಿಕೊಂಡ ನಂತರ ಮೊದಲ ಉನ್ನತ ಮಟ್ಟದ ಸಭೆ ನಡೆಯಲಿರುವ ಕಾರಣ ಭಾರತ-ಅಫ್ಘಾನ್‌ ಸಂಬಂಧದ ಹೊಸ ಅಧ್ಯಾಯ ತೆರೆಯಲಿದೆ. 2022 ರಲ್ಲಿ ಹಿರಿಯ ರಾಜತಾಂತ್ರಿಕ ಜೆಪಿ ಸಿಂಗ್‌ ನೇತೃತ್ವದ ತಂಡ ಕಾಬೂಲ್‌ನಲ್ಲಿ ಅಮೀರ್‌ ಖಾನ್‌ ಮುತ್ತಕಿ ಅವರನ್ನು ಭೇಟಿಯಾಗಿತ್ತು.

ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ಬಳಿಕ ಇದು ಭಾರತದ ಮೊದಲ ಭೇಟಿಯಾಗಿತ್ತು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ್ರಿ ಮತ್ತು ಹಿರಿಯ ಐಎಫ್‌ಎಸ್‌‍ ಅಧಿಕಾರಿ ಜೆ.ಪಿ. ಸಿಂಗ್‌ ಸೇರಿದಂತೆ ಭಾರತೀಯ ಅಧಿಕಾರಿಗಳು ಮುತ್ತಕಿ ಮತ್ತು ಇತರ ತಾಲಿಬಾನ್‌ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಆಗಾಗ ದುಬೈನಂತಹ ತಟಸ್ಥ ಸ್ಥಳಗಳಲ್ಲಿ ಭೇಟಿಯಾಗುತ್ತಿದ್ದರು.ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ್ರಿ, ದುಬೈನಲ್ಲಿ ಅಫ್ಘಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಅವರನ್ನು ಭೇಟಿಯಾಗಿದ್ದರು. ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಮಾನವೀಯ ನೆರವು, ವಿಶೇಷವಾಗಿ ಆರೋಗ್ಯ ವಲಯವನ್ನು ಬಲಪಡಿಸುವುದು ಮತ್ತು ನಿರಾಶ್ರಿತರ ಪುನರ್ವಸತಿಯನ್ನು ಬೆಂಬಲಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಕೋವಿಡ್‌ ಸಮಯದಲ್ಲಿ ಭಾರತ ಉಚಿತವಾಗಿ ಲಸಿಕೆಯನ್ನು ನೀಡಿತ್ತು. ಈಗಲೂ ಭಾರತ ಅಫ್ಘಾನಿಸ್ತಾನಕ್ಕೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.ಭಾರತವು ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಮೇ 15 ರಂದು ವಿದೇಶಾಂಗ ಸಚಿವ ಎಸ್‌‍. ಜೈಶಂಕರ್‌ ಅವರು ಮುತ್ತಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು.

ಇದು 2021 ರ ನಂತರದ ಮೊದಲ ಸಚಿವ ಮಟ್ಟದ ಸಂಪರ್ಕವಾಗಿತ್ತು. ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ತಾಲಿಬಾನ್‌ ಖಂಡಿಸಿದ್ದಕ್ಕಾಗಿ ಜೈಶಂಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತ ಮತ್ತು ಅಫ್ಘಾನ್‌ ಜನರೊಂದಿಗಿನ ಸಾಂಪ್ರದಾಯಿಕ ಸ್ನೇಹವನ್ನು ಪುನರುಚ್ಚರಿಸಿದರು.

ದಳಪತಿ ವಿಜಯ್‌ ಮನೆಗೆ ಬಾಂಬ್‌ ಬೆದರಿಕೆ

ಚೆನ್ನೈ, ಅ.9- ತಮಿಳುನಾಡಿನ ಖ್ಯಾತ ನಟ ಕಮ್‌ ರಾಜಕಾರಣಿ ದಳಪತಿ ವಿಜಯ್‌ ನಿವಾಸಕ್ಕೆ ಬಾಂಬ್‌ ಬೆದರಿಕೆ ಕರೆ ಬಂದಿದೆ. ಕರೂರು ಕಾಲ್ತುಳಿತ ಸಂಭವಿಸಿದ ಕೆಲ ದಿನಗಳ ಬಳಿಕ ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್‌ ಅವರ ಚೆನ್ನೈ ನಿವಾಸಕ್ಕೆ ಬಾಂಬ್‌ ಬೆದರಿಕೆ ಕರೆ ಬಂದಿದೆ.

ಕರೂರ್‌ ಜಿಲ್ಲೆಯಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಹಲವರು ಗಾಯಗೊಂಡ ನಂತರ ವಿಜಯ್‌ ವಿರುದ್ಧ ಟೀಕೆಗಳು ಕೇಳಿಬರುತ್ತಿರುವ ನಡುವೆಯೇ ಈ ಕರೆ ಬಂದಿರುವುದು ವಿಶೇಷವಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ವಿಜಯ್‌ ಅವರ ನೀಲಂಕರೈ ನಿವಾಸದ ಸುತ್ತ ಭದ್ರತೆಯನ್ನು ಬಲಪಡಿಸಲಾಗಿದೆ. ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ, ಮತ್ತು ಅಧಿಕಾರಿಗಳು ಕರೆ ಸುಳ್ಳು ಎಂದು ದೃಢಪಡಿಸಿದ್ದಾರೆ.ಈ ಕರೆಯ ಮೂಲವನ್ನು ಪತ್ತೆಹಚ್ಚಲು ಮತ್ತು ವ್ಯಕ್ತಿ ಅಥವಾ ಗುಂಪನ್ನು ಗುರುತಿಸಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ವಿಜಯ್‌ ಅವರ ಮನೆಯನ್ನು ಗುರಿಯಾಗಿಸಿಕೊಂಡು ಬಂದಿರುವ ಬಾಂಬ್‌ ಬೆದರಿಕೆಗೂ ಮೊದಲು ಕಳೆದ ಎರಡು ವಾರಗಳಿಂದ ಪ್ರಮುಖ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ವ್ಯಾಪಕ ಬೆದರಿಕೆಗಳು ಬಂದಿವೆ. ಒಂದು ವಾರದ ಹಿಂದೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಬಾಂಬ್‌ ಬೆದರಿಕೆ ಬಂದಿರುವುದಾಗಿ ವರದಿಯಾಗಿತ್ತು.

ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ, ಡಿಎಂಕೆ ಸಂಸದೆ ಕನಿಮೋಳಿ, ನಟಿ ತ್ರಿಶಾ, ಹಾಸ್ಯನಟ ಮತ್ತು ನಟ ಎಸ್‌‍.ವಿ. ಶೇಖರ್‌, ಹಿಂದೂ ಪತ್ರಿಕಾಲಯ ಹಾಗೆಯೇ ಕಮಲಾಲಯದಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಧಾನ ಕಚೇರಿಗಳಿಗೂ ಹುಸಿ ಬಾಂಬ್‌ ಬೆದರಿಕೆ ಕರೆಗಳು ಬಂದಿದ್ದವು.

ಮಡಿಕೇರಿ : ವಸತಿ ಶಾಲೆಯಲ್ಲಿ ಅಗ್ನಿ ಅವಘಡ, ವಿದ್ಯಾರ್ಥಿ ಸಜೀವ ದಹನ

ಮಡಿಕೇರಿ,ಅ.9-ಇಲ್ಲಿನ ವಸತಿ ಶಾಲೆಯಲ್ಲಿ ಸಂಭವಿಸಿದ ಅಗ್ನಿಅವಘಡದಲ್ಲಿ 2ನೇ ತರಗತಿ ವಿದ್ಯಾರ್ಥಿ ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ಚೆಟ್ಟಿಮಾನಿ ಗ್ರಾಮದ ನಿವಾಸಿ ಪುಷ್ಪಕ್‌(7) ಮೃತ ವಿದ್ಯಾರ್ಥಿ.

ತಾಲೂಕಿನ ಕಾಟಗೇರಿ ಗ್ರಾಮದಲ್ಲಿರುವ ಹರ್‌ ಮಂದಿರ್‌ ವಸತಿ ಶಾಲೆಯಲ್ಲಿ ಪುಷ್ಪಕ್‌ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ರಾತ್ರಿ ಎಂದಿನಂತೆ ಊಟ ಮಾಡಿ ವಸತಿ ಶಾಲೆಯ ಮಕ್ಕಳು ಮಲಗಿದ್ದಾರೆ. ಇಂದು ಮುಂಜಾನೆ 4.30ರ ವೇಳೆಯಲ್ಲಿ ಯಮನಂತೆ ಬೆಂಕಿ ಆವರಿಸಿಕೊಂಡಿದೆ. ದೊಡ್ಡ ಕೊಣೆಯಲ್ಲಿ ಸಾಲು ಸಾಲು ಬೆಡ್‌ನಲ್ಲಿ ಸುಮಾರು 29 ಮಕ್ಕಳು ಮಲಗಿದ್ದರು.

ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಎಚ್ಚೆತ್ತ ಶಾಲೆಯ ಸಿಬ್ಬಂಧಿ ಮಕ್ಕಳನ್ನುಎಬ್ಬಿಸಿ ಹೊರಗೆ ಕರೆ ತಂದು ಅಗ್ನಿ ಶಾಮಕ ದಳಕ್ಕೆ ತಿಳಿಸಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾದರೂ ಈ ವೇಳೆ ಪುಷ್ಪಕ್‌ ಭಾರಿ ಹೊಗೆಯಿಂದ ಹೊರಬರಲಾಗದೆ ಮೃತಪಟ್ಟಿದ್ದಾನೆ .

ಅಗ್ನಿ ಅವಘಡಕ್ಕೆ ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸ್‌‍ ಠಾಣೆ ಸರ್ಕಲ್‌ ಇನ್‌್ಸಪೆಕ್ಟರ್‌ ಚಂದ್ರಶೇಖರ್‌, ಆಗ್ನಿ ಶಾಮಕ ಅಧಿಕಾರಿ ನಾಗರಾಜ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಷಯ ತಿಳಿಯುತ್ತಿದಂತೆ ಮಕ್ಕಳ ಪೋಷಕರು ಸಹ ಶಾಲೆಯತ್ತ ದೌಡಾಯಿಸಿದ್ದಾರೆ. ತಮ ಮಗ ಪುಷ್ಪಕ್‌ನನ್ನು ಕಳೆದುಕೊಂಡ ಪೋಷಕರು ಹಾಗೂ ಸಂಬಂಧಿಕರ ರೋಧನ ಹೇಳತೀರದಾಗಿತ್ತು.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯಾವ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕಲಬೆರಿಕೆ ಕೆಮ್ಮಿನ ಸಿರಪ್‌ ತಯಾರಿಸಿದ್ದ ಫಾರ್ಮಾ ಮಾಲೀಕನ ಬಂಧನ

ಚೆನ್ನೈ, ಅ.9- ಕಲಬೆರಕೆ ಕೆಮಿನ ಸಿರಪ್‌ ಸೇವಿಸಿ 20 ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಸ್ರೇಸನ್‌ ಫಾರ್ಮಾದ ಮಾಲೀಕರನ್ನು ಇಂದು ಮುಂಜಾನೆ ಮಧ್ಯಪ್ರದೇಶ ಪೊಲೀಸರು ಚೆನ್ನೈ ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ. ಮಧ್ಯಪ್ರದೇಶ ಪೊಲೀಸರು ಮತ್ತು ಚೆನ್ನೈ ಪೊಲೀಸರ ತಂಡಗಳು ಫಾರ್ಮಾ ಮಾಲೀಕ ರಂಗನಾಥನ್‌ ಅವರನ್ನು ಪತ್ತೆಹಚ್ಚಲು ಕಳೆದ ಹುಡುಕಾಟ ಆರಂಭಿಸಿತ್ತು.

ಅವರ ಕಂಪನಿಯು ತಯಾರಿಸಿದ ಕೋಲ್ಡ್ರಿಫ್‌ ಕೆಮಿನ ಸಿರಪ್‌ ದೇಶದ ಅನೇಕ ರಾಜ್ಯಗಳಲ್ಲಿ 20 ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.ಮಧ್ಯರಾತ್ರಿಯ ಕಾರ್ಯಾಚರಣೆಯ ನಂತರ ಅವರನ್ನು ನಗರದಲ್ಲಿ ಬಂಧಿಸಿ ವಿಚಾರಣೆಗಾಗಿ ಸುಂಗುವರ್ಚತ್ರಂ ಪೊಲೀಸ್‌‍ ಠಾಣೆಗೆ ಕರೆದೊಯ್ಯಲಾಯಿತು ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯದ ಕಾನೂನು ಪ್ರಕ್ರಿಯೆ ನಂತರ ಮಧ್ಯಪ್ರದೇಶ ಪೊಲೀಸರು ಆರೋಪಿಯನ್ನು ವಿವರವಾದ ತನಿಖೆಗಾಗಿ ಅವರ ರಾಜ್ಯಕ್ಕೆ ಕರೆದೊಯ್ಯುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು,ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಕ್ರಮಕ್ಕೆ ಮುಂದಾಗಿದೆ.

ಕನಕಪುರ : ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಯ ಭೀಕರ ಕೊಲೆ

ಕನಕಪುರ,ಅ.9- ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕನಕಪುರ ಗ್ರಾಮಾಂತರ ಪೋಲಿಸ್‌‍ ಠಾಣಾ ವ್ಯಾಪ್ತಿಯ ಭದ್ರೇಗೌಡನದೊಡ್ಡಿ ನಡೆದಿದೆ. ಬೆಂಗಳುರು ಕೆಂಗೇರಿ ಬಳಿಯ ಹೆಮಿಗೆಪುರ ಗ್ರಾಮದ ಚಿರಂಜೀವಿ (25) ಕೊಲೆಯಾದ ರೌಡಿಶೀಟರ್‌.

ಈತ ಕಳೆದ ಒಂದು ವರ್ಷದ ಹಿಂದೆ ತಲಘಟ್ಟಪುರ ಪೋಲಿಸ್‌‍ ಠಾಣಾ ವ್ಯಾಪ್ತಿ ಕೊಲೆ ಪ್ರಕರಣದಲ್ಲಿ ಜೈಲವಾಸ ಅನುಭವಿಸಿ ಕಳೆದ 2 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ತಾನು ವಾಸವಿದ್ದ ಸ್ಥಳದಲ್ಲಿ ಜೀವ ಭಯವಿದೆ ಎಂದು ಹೆದರಿ ತನ್ನ ಪತ್ನಿಯ ಸ್ವಗ್ರಾಮ ಹಾರೋಹಳ್ಳಿ ತಾಲೂಕು ಪಿಚ್ಚನಕೆರೆ ಗ್ರಾಮದಲ್ಲಿ ವಾಸವಿದ್ದನು. ಕಳೆದ ವಾರ ತನ್ನ ಅಜ್ಜಿಯವ ಊರು ಭದ್ರೇಗೌಡನದೊಡ್ಡಿಗೆ ತೆರಳಿದ್ದಾಗ ಹೆಬ್ಬಿದರಮೆಟ್ಟಿಲು ಹಾಗೂ ಸಮೀಪದ ಚಿಕ್ಕಕಲ್‌ಬಾಳು ಗ್ರಾಮದ ಯುವಕರೊಂದಿಗೆ ಕಿರಿಕ್‌ ಮಾಡಿ ಗಲಾಟೆ ಮಾಡಿಕೊಂಡಿದ್ದಾನೆ. ರಾತ್ರಿ ನಾಲ್ವರು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಶ್ರೀನಿವಾಸ್‌‍ಗೌಡ, ಸಹಾಯಕ ವರಿಷ್ಠಾಧಿಕಾರಿಗಳಾದ ರಾಮಚಂದ್ರಪ್ಪ, ಸುರೇಶ್‌, ಡಿ.ವೈ.ಎಸ್‌‍.ಪಿ ಗಿರಿ, ಸರ್ಕಲ್‌ ಇನ್‌್ಸಪೆಕ್ಟರ್‌ ವಿಕಾಸ್‌‍, ಗ್ರಾಮಾಂತರ ಠಾಣಾಧಿಕಾರಿ ಆಕಾಶ್‌, ಪರಿಶೀಲನೆ ನಡೆಸಿದ್ದಾರೆ.

ಸಹೋದರ ನಂದೀಶ್‌ ನೀಡಿದ ದೂರು ನೀಡಿದ್ದು, ಚಿಕ್ಕಕಲ್‌ಬಾಳು ಪ್ರಜ್ವಲ್‌, ಪವನ್‌ ಹಾಗೂ ಬೆಂಗಳೂರಿನ ಮೋಹನ್‌ ಮತ್ತು ಚೇತನ್‌ ಎಂಬುವವರು ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಮೇರೆಗೆ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

6 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನಿಗೆ 25 ವರ್ಷ ಶಿಕ್ಷೆ

ಬಲಿಯಾ, ಅ. 9 (ಪಿಟಿಐ) ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನಿಗೆ ಉತ್ತರ ಪ್ರದೇಶದ ನ್ಯಾಯಲಯ 25 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಕಳೆದ 2021ರಲ್ಲಿ 6 ವರ್ಷದ ಬಾಲಕಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದ ಮೊಹಮದ್‌ ರಾಜಾನಿಗೆ ಶಿಕ್ಷೆ ವಿಧಿಸುವುದರ ಜೊತೆಗೆ 25 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ.

ವಿಶೇಷ ನ್ಯಾಯಾಧೀಶ (ಪೋಕ್ಸೊ ಕಾಯ್ದೆ) ಪ್ರಥಮ್‌ ಕಾಂತ್‌ ಅವರು ಅಪರಾಧಿ ಮೊಹಮ್ಮದ್‌ ರಾಜಾಗೆ 25,000 ರೂ. ದಂಡ ವಿಧಿಸಿದ್ದಾರೆ.ಮಧುಬನಿ ಗ್ರಾಮದ ನಿವಾಸಿ ರಾಜಾ, ಹತ್ತಿರದ ಹಳ್ಳಿಯಿಂದ ಅಪ್ರಾಪ್ತ ವಯಸ್ಕಳನ್ನು ಆಮಿಷವೊಡ್ಡಿ ಟೆಂಪೋದಲ್ಲಿ ಕರೆದೊಯ್ದು, ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಆರೋಪಕ್ಕೆ ಗುರಿಯಾಗಿದ್ದ.

ಹುಡುಗಿಯ ತಂದೆ ನೀಡಿದ ದೂರಿನ ನಂತರ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ರಾಜಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.ವಿಶೇಷ ಸಾರ್ವಜನಿಕ ಅಭಿಯೋಜಕ ವಿಮಲ್‌ ಕುಮಾರ್‌ ರೈ ಅವರು ವಾದ ವಿವಾದ ಪೂರ್ಣಗೋಳಿಸಿದ ನ್ಯಾಯಲಯ ಈ ಮಹತ್ವದ ತೀರ್ಪು ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.

ಗಾಜಾ ಕುರಿತ ಟ್ರಂಪ್‌ ಶಾಂತಿ ಯೋಜನೆ ಸ್ವಾಗತಿಸಿದ ಪ್ರಧಾನಿ ಮೋದಿ

ನವದೆಹಲಿ, ಅ. 9 (ಪಿಟಿಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಪಶ್ಚಿಮ ಏಷ್ಯಾದ ಶಾಂತಿ ಯೋಜನೆಯ ಮೊದಲ ಹಂತದ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.

ಈ ಯೋಜನೆ ಅಡಿಯಲ್ಲಿ ಇಸ್ರೇಲ್‌ ಮತ್ತು ಹಮಾಸ್‌‍ ಗಾಜಾದಲ್ಲಿ ಹೋರಾಟವನ್ನು ನಿಲ್ಲಿಸಲು ನಿರ್ಧರಿಸಿವೆ.ಈ ಒಪ್ಪಂದವು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಬಲವಾದ ನಾಯಕತ್ವದ ಪ್ರತಿಬಿಂಬವಾಗಿದೆ ಎಂದು ಮೋದಿ ಹೇಳಿದರು.

ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಶಾಂತಿ ಯೋಜನೆಯ ಮೊದಲ ಹಂತದ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಇದು ಪ್ರಧಾನಿ ನೆತನ್ಯಾಹು ಅವರ ಬಲವಾದ ನಾಯಕತ್ವದ ಪ್ರತಿಬಿಂಬವೂ ಆಗಿದೆ ಎಂದು ಮೋದಿ ಎಕ್ಸ್ ಮಾಡಿದ್ದಾರೆ.

ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಜಾದ ಜನರಿಗೆ ವರ್ಧಿತ ಮಾನವೀಯ ನೆರವು ಅವರಿಗೆ ವಿಶ್ರಾಂತಿ ತರುತ್ತದೆ ಮತ್ತು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.

ಟ್ರಂಪ್‌ ಆಡಳಿತವು ಮಂಡಿಸಿದ ಒಪ್ಪಂದದಲ್ಲಿ ಇಸ್ರೇಲ್‌ ಮತ್ತು ಹಮಾಸ್‌‍ ಗಾಜಾದಲ್ಲಿ ಹೋರಾಟವನ್ನು ನಿಲ್ಲಿಸಲು ಮತ್ತು ಕನಿಷ್ಠ ಕೆಲವು ಒತ್ತೆಯಾಳುಗಳು ಮತ್ತು ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿವೆ.ಈ ಒಪ್ಪಂದವು ಎರಡು ವರ್ಷಗಳಷ್ಟು ಹಳೆಯದಾದ ವಿನಾಶಕಾರಿ ಯುದ್ಧದಲ್ಲಿ ತಿಂಗಳುಗಳಲ್ಲಿ ಅತಿದೊಡ್ಡ ಪ್ರಗತಿಯನ್ನು ಸೂಚಿಸುತ್ತದೆ.