Home Blog Page 69

ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಿಸಿದ ಟಿಕೆಟ್‌ ಜಾಗರೂಕತೆಯಿಂದ ಇಟ್ಟುಕೊಳ್ಳುವಂತೆ ವೀಕ್ಷಕರಿಗೆ ಸರ್ಕಾರ ಸೂಚನೆ

ಬೆಂಗಳೂರು, ಅ.4-ರಾಜ್ಯದ ಮಲ್ಟಿಪ್ಲೆಕ್ಸ್ ಗಳಲ್ಲಿನ ಚಲನಚಿತ್ರ ಪ್ರದರ್ಶನದ ಟಿಕೆಟ್‌ ಮೇಲೆ ವಿಧಿಸಿದ್ದ 200 ರೂ.ಮಿತಿಗೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ಮುಂದುವರೆದಿದ್ದು,
ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಸಿನಿಮಾ ವೀಕ್ಷಿಸುವವರು ತಮ್ಮ ಟಿಕೆಟ್‌ ಮತ್ತು ಹಣ ಪಾವತಿಸಿದ ದಾಖಲೆಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳುವಂತೆ ಚಿತ್ರ ವೀಕ್ಷಕರಿಗೆ ರಾಜ್ಯ ಸರ್ಕಾರ ಸೂಚಿಸಿದೆ.

ಚಲನಚಿತ್ರ ವೀಕ್ಷಣೆಗೆ ದುಬಾರಿ ಟಿಕೆಟ್‌ ದರ ನಿಗದಿ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನಗೊಳ್ಳುವ ಚಲನಚಿತ್ರಗಳ ವೀಕ್ಷಣೆಯ ಟಿಕೆಟ್‌ ದರವನ್ನು ಗರಿಷ್ಠ 200 ರೂ.ಗೆಮಿತಿಗೊಳಿಸಿ ಆದೇಶಿಸಿದೆ. ಅದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.ಅದರ ಜೊತೆಗೆ ಮಲ್ಟಿಪ್ಲೆಕ್ಸ್ ಗಳು ಮಾರಾಟವಾದ ಪ್ರತಿ ಟಿಟ್‌ಗೆ ಸಮಗ್ರ ಮತ್ತು ಲೆಕ್ಕ ಪರಿಶೋಧಿಸಬಹುದಾದ ದಾಖಲೆಗಳನ್ನು ನಿರ್ವಹಿಸುವಂತೆ ನಿರ್ದೇಶಿಸಿದೆ.

ಒಂದು ವೇಳೆ ಭಾರತೀಯ ಮಲ್ಟಿಪ್ಲೆಕ್ಸ್ ಗಳ ಸಂಘ ಮತ್ತು ಇತರರು ರಾಜ್ಯ ಸರ್ಕಾರ ನಿಗದಿಪಡಿಸಿದ ಮಿತಿಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿ, ರಾಜ್ಯ ಸರ್ಕಾರದ ಪರ ತೀರ್ಪು ಬಂದರೆ, ಮಲ್ಟಿಪ್ಲೆಕ್ಸ್ ಗಳು ಎಲೆಕ್ಟ್ರಾನಿಕ್‌ ವಿಧಾನಗಳ ಮೂಲಕ ಸಂಗ್ರಹಿಸಿದ ಎಲ್ಲಾ ಮೊತ್ತವನ್ನು ಟಿಕೆಟ್‌ಗಳನ್ನು ಬುಕ್‌ ಮಾಡಿದ ಗ್ರಾಹಕರಿಗೆ ಬುಕ್ಕಿಂಗ್‌ಗೆ ಬಳಸಿದ ಪಾವತಿ ವಿಧಾನದ ಮೂಲಕವೇ ಮರುಪಾವತಿಸಬೇಕು ಎಂದು ನಿರ್ದೇಶಿಸಲಾಗಿದೆ.
ಪ್ರತಿವಾದಿ ಸಂಖ್ಯೆ 1 ಮತ್ತು ಅದರ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಮಲ್ಟಿಪ್ಲೆಕ್‌್ಸಗಳು, ಮಾರಾಟವಾದ ಪ್ರತಿಯೊಂದು ಟಿಕೆಟ್‌ಗೆ ಸಮಗ್ರ ಮತ್ತು ಲೆಕ್ಕಪರಿಶೋಧಿಸಬಹುದಾದ ದಾಖಲೆಗಳನ್ನು ನಿರ್ವಹಿಸಲು ನಿರ್ದೇಶಿಸಲಾಗಿದೆ.

ಮಾರಾಟದ ದಿನಾಂಕ ಮತ್ತು ಸಮಯ, ಆನ್‌ಲೈನ್‌ ಅಥವಾ ಭೌತಿಕ ಕೌಂಟರ್‌ಗಳಲ್ಲಿ ಬುಕಿಂಗ್‌ ಮಾಡಿರುವ ವಿವರ, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌, ಯುಪಿಐ ನೆಟ್‌ ಬ್ಯಾಂಕಿಂಗ್‌ ಅಥವಾ ನಗದು ಪಾವತಿ ಮಾಡಿರುವ ವಿವರ, ಸಂಗ್ರಹಿಸಿದ ಮೊತ್ತ, ಜಿಎಸ್‌‍ಟಿ ಘಟಕ, ಎಲ್ಲಾ ನಗದು ವಹಿವಾಟುಗಳಿಗೆ ಡಿಜಿಟಲ್‌ ಆಗಿ ಪತ್ತೆಹಚ್ಚಬಹುದಾದ ರಸೀದಿಗಳನ್ನು ನೀಡಬೇಕು ಮತ್ತು ಪ್ರತಿದಿನ ಕ್ಯಾಶ್‌ ರಿಜಿಸ್ಟರ್‌ಗಳನ್ನು ಮಲ್ಟಿಪ್ಲೆಕ್‌್ಸನ ವ್ಯವಸ್ಥಾಪಕರು ಪ್ರತಿ ಸಹಿ ಮಾಡಬೇಕು.

ಅರ್ಜಿದಾರರು ಅಂತಿಮ ತೀರ್ಪಿನಲ್ಲಿ ನಿರ್ಬಂಧದ ಬಾಕಿ ಇರುವ ಸಮಯದಲ್ಲಿ ಎಲೆಕ್ಟ್ರಾನಿಕ್‌ ವಿಧಾನಗಳ ಮೂಲಕ (ಅನ್ವಯವಾಗುವ ಜಿಎಸ್‌‍ಟಿ ಹೊರತುಪಡಿಸಿ) ಸಂಗ್ರಹಿಸಿದ ಎಲ್ಲಾ ಮೊತ್ತವನ್ನು ಟಿಕೆಟ್‌ಗಳನ್ನು ಬುಕ್‌ ಮಾಡಿದ ವೈಯಕ್ತಿಕ ಗ್ರಾಹಕರಿಗೆ ಬುಕಿಂಗ್‌ಗೆ ಬಳಸುವ ಅದೇ ಪಾವತಿ ವಿಧಾನದ ಮೂಲಕ ಮರುಪಾವತಿಸಬೇಕು.

ಪ್ರತಿವಾದಿ ಸಂಖ್ಯೆ 1 ಇಂದಿನಿಂದ 45 ದಿನಗಳಲ್ಲಿ ಪರವಾನಗಿ ಪ್ರಾಧಿಕಾರಕ್ಕೆ ಮರುಪಾವತಿ ಪ್ರಕ್ರಿಯೆ ಯೋಜನೆಯನ್ನು ಅನುಮೋದನೆಗಾಗಿ ಸಲ್ಲಿಸಬೇಕು. ಇದು ಗ್ರಾಹಕರಿಗೆ ಮರುಪಾವತಿ ಮಾಡುವ ಕಾರ್ಯವಿಧಾನವನ್ನು ವಿವರಿಸುತ್ತದೆ. ಪರವಾನಗಿ ಪ್ರಾಧಿಕಾರದಿಂದ ಅನುಮೋದನೆಯ ನಂತರ ಅದನ್ನು ಅಂತಿಮ ಅನುಮೋದನೆಗಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ.

ನ್ಯಾಯಾಲಯದ ತೀರ್ಪಿನನ್ವಯ, ಹಾಲಿ ಚಲನಚಿತ್ರ ಪ್ರದರ್ಶನಕ್ಕೆ ನೀಡಿರುವ ದರಕ್ಕೆ ಸಂಬಂಧಿಸಿದಂತೆ ಭೌತಿಕವಾಗಿ ಅಥವಾ ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಪಡೆದ ಟಿಕೆಟ್‌ಗಳನ್ನು ಭದ್ರವಾಗಿ ಕಾಯ್ದಿರಿಸಿಕೊಳ್ಳತಕ್ಕದ್ದು, ಹಾಗೆಯೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಎಲ್ಲಾ ರೀತಿಯಾ ಸಿನಿಮಾ ಟಿಕೆಟ್‌ಗಳ ಮಾರಾಟದ ಸಂಪೂರ್ಣ ದಾಖಲೆಗಳನ್ನು ನಿರ್ವಹಿಸಬೇಕಾಗಿರುತ್ತದೆ.

ಈ ಪ್ರಕರಣದಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ರಿಟ್‌ ಅರ್ಜಿ / ಅಪೀಲು ಸಂಬಂಧದಲ್ಲಿ ನೀಡುವ ಅಂತಿಮ ಆದೇಶದಲ್ಲಿ ಅರ್ಜಿದಾರರಿಗೆ ಹಿನ್ನಡೆಯಾದಲ್ಲಿ ಗ್ರಾಹಕರಿಂದ ಸಂಗ್ರಹವಾದ ಹೆಚ್ಚುವರಿ ಮೊಬಲಗನ್ನು ಅವರುಗಳು ಪಾವತಿಸಿದ ವಿಧಾನದಲ್ಲಿಯೇ ಹಿಂದಿರುಗಿಸಲು ಅನುಕೂಲವಾಗುವಂತೆ ಅರ್ಜಿದಾರರು, ರಾಜ್ಯ ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮೇಲಿನ ನಿರ್ದೇಶನಗಳನ್ನುನೀಡಿದೆ.

ಶಿವನ ಆಕ್ಷೇಪಾರ್ಹ ಚಿತ್ರ ಪೋಸ್ಟ್‌ ಮಾಡಿದ್ದವನ ಬಂಧನ

ಬಲಿಯಾ, ಅ. 4 (ಪಿಟಿಐ) ಸಾಮಾಜಿಕ ಮಾಧ್ಯಮದಲ್ಲಿ ಲಾರ್ಡ್‌ ಶಿವನ ಆಕ್ಷೇಪಾರ್ಹ ಚಿತ್ರ ಪ್ರಸಾರ ಮಾಡಿದ ವ್ಯಕ್ತಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.ಬಲಿಯಾ ಜಿಲ್ಲೆಯ ಪಕಾಡಿ ಪ್ರದೇಶದ ಮೇಯುಲಿ ಗ್ರಾಮದ ನಿವಾಸಿ ಸಂದೀಪ್‌ ಗೌತಮ್‌ ಅಲಿಯಾಸ್‌‍ ರಂಜನ್‌ ಬಂಧಿತ ಆರೋಪಿಯಾಗಿದ್ದಾನೆ.

ಈತ ಹಿಂದೂಗಳ ಪರಮ ದೈವವಾದ ಶಿವನ ಆಕ್ಷೇಪಾರ್ಹ ಚಿತ್ರವನ್ನು ಫೇಸ್‌‍ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದ.ಈ ಕುರಿತಂತೆ ಸ್‌‍ಬ್‌‍-ಇನ್‌ಸ್ಪೆಕ್ಟರ್‌ ಮುಖೇಶ್‌ ಯಾದವ್‌ ಅವರ ದೂರಿನ ಆಧಾರದ ಮೇಲೆ, ಗೌತಮ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ 353 (2) (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಚರಣೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಸನೇ ತಕೈಚಿ ಆಯ್ಕೆ ಸಾಧ್ಯತೆ..?

ಟೋಕಿಯೋ, ಅ.4- ಜಪಾನ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನಿ ಆಯ್ಕೆಯಾಗುವ ಸಾಧ್ಯತೆಗಳಿವೆ.ಜಪಾನ್‌ನ ಆಡಳಿತ ಪಕ್ಷವು ಸನೇ ತಕೈಚಿ ಅವರನ್ನು ಹೊಸ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಅವರೇ ಜಪಾನ್‌ ಪ್ರಧಾನಿ ಪಟ್ಟ ಏರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಜಪಾನ್‌ನ ಮಾಜಿ ಆರ್ಥಿಕ ಭದ್ರತಾ ಸಚಿವೆಯಾಗಿದ್ದ ಸನೇ ತಕೈಚಿ ಅವರನ್ನು ಹೊಸ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅಲ್ಲಿನ ಆಡಳಿತ ಪಕ್ಷ ತಿಳಿಸಿದೆ.
ಇದರಿಂದಾಗಿ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗುವ ಸಾಧ್ಯತೆಯಿದೆ.

ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಆಂತರಿಕ ಮತದಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯಿಜುಮಿ ಅವರ ಪುತ್ರ ಕೃಷಿ ಸಚಿವ ಶಿಂಜಿರೊ ಕೊಯಿಜುಮಿ ಅವರನ್ನು ತಕೈಚಿ ಸೋಲಿಸಿದ್ದರು.

62 ಸಾವಿರ ಕೋಟಿ ರೂ.ಗಳ ಪಿಎಂ-ಎಸ್‌‍ಇಟಿಯು ಯೋಜನೆಗೆ ಮೋದಿ ಚಾಲನೆ

ನವದೆಹಲಿ, ಅ. 4 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಇಂದು 62,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯುವ ಕೇಂದ್ರಿತ ಉಪಕ್ರಮಗಳನ್ನು ಅನಾವರಣಗೊಳಿಸಿದರು.ಅದರಲ್ಲೂ ಚುನಾವಣೆ ಸಮೀಪಿಸುತ್ತಿರುವ ಬಿಹಾರಕ್ಕೆ ವಿಶೇಷ ಒತ್ತು ನೀಡಿ ಈ ಯೋಜನೆ ರೂಪಿಸಿರುವುದು ವಿಶೇಷವಾಗಿದೆ.

60,000 ಕೋಟಿ ರೂ. ಹೂಡಿಕೆಯೊಂದಿಗೆ ಕೇಂದ್ರ ಪ್ರಾಯೋಜಿತ ಯೋಜನೆಯಾದ ಪಿಎಂ-ಎಸ್‌‍ಇಟಿಯು (ಪ್ರಧಾನ್‌ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಾವಕಾಶ ಪರಿವರ್ತನೆ ಅಪ್‌ಗ್ರೇಡ್ಡ್‌‍ ಐಟಿಐಗಳು) ಅನ್ನು ಮೋದಿ ಇಂದು ಉದ್ಘಾಟಿಸಿದರು.200 ಹಬ್‌ ಐಟಿಐಗಳು ಮತ್ತು 800 ಸ್ಪೋಕ್‌ ಐಟಿಐಗಳನ್ನು ಒಳಗೊಂಡ ಹಬ್‌‍-ಅಂಡ್‌-ಸ್ಪೋಕ್‌ ಮಾದರಿಯಲ್ಲಿ 1,000 ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೆಗೇರಿಸುವ ಗುರಿಯನ್ನು ಇದು ಹೊಂದಿದೆ.

ಒಟ್ಟಾರೆಯಾಗಿ, ಪಿಎಂ-ಎಸ್‌‍ಇಟಿಯು ಭಾರತದ ಐಟಿಐ ಪರಿಸರ ವ್ಯವಸ್ಥೆಯನ್ನು ಮರು ವ್ಯಾಖ್ಯಾನಿಸುತ್ತದೆ, ಇದು ವಿಶ್ವ ಬ್ಯಾಂಕ್‌ ಮತ್ತು ಏಷ್ಯನ್‌ ಅಭಿವೃದ್ಧಿ ಬ್ಯಾಂಕಿನ ಜಾಗತಿಕ ಸಹ-ಹಣಕಾಸು ಬೆಂಬಲದೊಂದಿಗೆ ಸರ್ಕಾರಿ ಸ್ವಾಮ್ಯದ ಆದರೆ ಉದ್ಯಮ-ನಿರ್ವಹಣೆಯಾಗಿರುತ್ತದೆ ಎಂದು ಪಿಎಂಒ ಹೇಳಿಕೆ ಈ ಹಿಂದೆ ತಿಳಿಸಿದೆ.

ಯೋಜನೆಯ ಅನುಷ್ಠಾನದ ಮೊದಲ ಹಂತದಲ್ಲಿ, ಬಿಹಾರದ ಪಾಟ್ನಾ ಮತ್ತು ದರ್ಭಂಗಾದಲ್ಲಿರುವ ಐಟಿಐಗಳ ಮೇಲೆ ವಿಶೇಷ ಗಮನ ಹರಿಸಲಾಗುವುದು. ಈ ಕಾರ್ಯಕ್ರಮದ ವಿಶೇಷ ಒತ್ತು ಬಿಹಾರದಲ್ಲಿ ಪರಿವರ್ತನಾತ್ಮಕ ಯೋಜನೆಗಳ ಮೇಲೆ ಇರುತ್ತದೆ, ಇದು ರಾಜ್ಯದ ಶ್ರೀಮಂತ ಪರಂಪರೆ ಮತ್ತು ಯುವ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

ಮೋದಿಯವರು ಬಿಹಾರದ ಪರಿಷ್ಕೃತ ಮುಖ್ಯಮಂತ್ರಿ ನಿಶ್ಚಿತ ಸ್ವಯಂ ಸಹಾಯತ ಭತ್ತ ಯೋಜನೆಯನ್ನು ಪ್ರಾರಂಭಿಸಿದರು, ಇದರ ಅಡಿಯಲ್ಲಿ ಸುಮಾರು ಐದು ಲಕ್ಷ ಪದವೀಧರರು ಎರಡು ವರ್ಷಗಳವರೆಗೆ ತಲಾ 1,000 ರೂ.ಗಳ ಮಾಸಿಕ ಭತ್ಯೆಯನ್ನು ಉಚಿತ ಕೌಶಲ್ಯ ತರಬೇತಿಯೊಂದಿಗೆ ಪಡೆಯುತ್ತಾರೆ.

ಅವರು ಮರುವಿನ್ಯಾಸಗೊಳಿಸಲಾದ ಬಿಹಾರ ವಿದ್ಯಾರ್ಥಿ ಕ್ರೆಡಿಟ್‌ ಕಾರ್ಡ್‌ ಯೋಜನೆಯನ್ನು ಸಹ ಪ್ರಾರಂಭಿಸಿದರು, ಇದು 4 ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಶಿಕ್ಷಣ ಸಾಲಗಳನ್ನು ಒದಗಿಸುತ್ತದೆ, ಇದು ಉನ್ನತ ಶಿಕ್ಷಣದ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.ಈ ಯೋಜನೆಯಡಿಯಲ್ಲಿ 3.92 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ 7,880 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ಸಾಲಗಳನ್ನು ಪಡೆದಿದ್ದಾರೆ.

ರಾಜ್ಯದಲ್ಲಿ ಯುವ ಸಬಲೀಕರಣವನ್ನು ಮತ್ತಷ್ಟು ಬಲಪಡಿಸುತ್ತಾ, 18 ರಿಂದ 45 ವರ್ಷದೊಳಗಿನ ಜನರಿಗೆ ಶಾಸನಬದ್ಧ ಆಯೋಗವಾದ ಬಿಹಾರ ಯುವ ಆಯೋಗವನ್ನು ಮೋದಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು ಎಂದು ಅದು ಹೇಳಿದೆ.

ಕೇಂದ್ರ ಮತ್ತು ರಾಜ್ಯದ ಎನ್‌ಡಿಎ ಸರ್ಕಾರಗಳ ಹಲವಾರು ಅಭಿವೃದ್ಧಿ ಮತ್ತು ಕಲ್ಯಾಣ ಉಪಕ್ರಮಗಳ ಕೇಂದ್ರಬಿಂದು ಬಿಹಾರ.ಜಾಗತಿಕವಾಗಿ ಸ್ಪರ್ಧಾತ್ಮಕ ಕಾರ್ಯಪಡೆಯನ್ನು ಸೃಷ್ಟಿಸಲು ಉದ್ಯಮ-ಆಧಾರಿತ ಕೋರ್ಸ್‌ಗಳು ಮತ್ತು ವೃತ್ತಿಪರ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪ್ರಧಾನಮಂತ್ರಿಯವರು ಜನ್‌ ನಾಯಕ್‌ ಕರ್ಪೂರಿ ಠಾಕೂರ್‌ ಕೌಶಲ್ಯ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿದರು.

ಜಾತಿ ಗಣತಿ ಕಾರ್ಯದಿಂದ ವಾಪಸ್‌‍ ಮನೆಗೆ ತೆಳುವಾಗ ರಸ್ತೆ ಅಪಘಾತದಲ್ಲಿ ಶಿಕ್ಷಕಿ ಸಾವು

ಬಾಗಲಕೋಟೆ,ಅ.4– ಜಾತಿ ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಕೆಲಸ ಮುಗಿಸಿ ವಾಪಸ್‌‍ ಮನೆಗೆ ತೆಳುವಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ತಾಲೂಕಿನ ತಿಮ್ಮಾಪೂರ ಕ್ರಾಸ್‌‍ ಬಳಿ ನಡೆದಿದೆ.ಬಸವನಬಾಗೇವಾಡಿ ತಾಲೂಕಿನ ವಂದಾಲ ಗ್ರಾಮದ ದಾನಮ ವಿಜಯಕುಮಾರ ನಂದರಗಿ (52) ಸಾವನ್ನಪ್ಪಿರುವ ಶಿಕ್ಷಕಿ.

ಬಾಗಲಕೋಟೆ ತಾಲೂಕಿನ ರಾಂಪೂರ ಸರ್ಕಾರಿ ಆಶ್ರಯ ಕಾಲೋನಿ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಅವರು ನಿನ್ನೆ ಸಂಜೆ ಕೆಲಸ ಮುಗಿಸಿ ರಾತ್ರಿ ಪುತ್ರನ ಜೊತೆ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.

ಗಣತಿ ಕಾರ್ಯದ ಒತ್ತಡದಲ್ಲಿದ್ದ ದಾನಮ ಮಗ ವಿಕಾಸ್‌‍ ಬೈಕ್‌ ಹೋಗುವಾಗ ಹದಗೆಟ್ಟ ರಸ್ತೆಯಿಂದಾಗು ಆಯತಪ್ಪಿ ವಾಹನದಿಂದ ಜಾರಿ ಕೆಳಗೆ ಬಿದ್ದಿದ್ದಾರೆ.ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.ಈ ಕುರಿತು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಗಳಿಂದ ಜಿಲ್ಲೆಗೆ ಹಬ್ಬುತ್ತಿದೆ ‘ಐ ಲವ್‌ ಮಹಮದ್‌’ ಬ್ಯಾನರ್‌ ವಿವಾದ

ಬೆಂಗಳೂರು,ಅ.4-ಐ ಲವ್‌ ಮಹಮದ್‌ ಬ್ಯಾನರ್‌ ಹಾವಳಿ ಜಿಲ್ಲೆಗಳಿಂದ ಜಿಲ್ಲೆಗೆ ಹಬ್ಬುತಿದ್ದು ಸಂಘರ್ಷಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಪ್ರಪ್ರಥಮವಾಗಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಈ ಬ್ಯಾನರ್‌ ಹಾವಳಿ ಕಾಣಿಸಿಕೊಂಡಿದ್ದು ಇದೀಗ ಬೆಳಗಾವಿ, ಕಲ್ಬುರ್ಗಿ ಜಿಲ್ಲೆಗಳಿಗೂ ಆವರಿಸಿದೆ.

ದಾವಣಗೆರೆ: ಕೆಲವು ದಿನಗಳ ಹಿಂದೆಯಷ್ಟೆ ದಾವಣಗೆರೆಯ ಕಾರ್ಲ್‌ಮಾರ್ಕ್ಸ್ ನಗರದಲ್ಲಿ ಐ ಲವ್‌ ಮಹಮದ್‌ ಬ್ಯಾನರ್‌ ಹಾಕಿದ್ದ ವಿಚಾರ ಹಿಂದೂ-ಮುಸ್ಲೀಂರ ನಡುವೆ ಸಂಘರ್ಷಕ್ಕೆ ಕಾರಣವಾಗಿ ಕಲ್ಲು ತೂರಾಟ ನಡೆದಿತ್ತು.

ಈ ಬರಹವುಳ್ಳ ಫ್ಲೇಕ್ಸ್ ಹಾಕಿದ್ದನ್ನು ಹರಿದು ಹಾಕಲಾಗಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಸಂಘರ್ಷ ನಡೆದಿತ್ತು. ನಂತರ ಪೊಲೀಸರು ತಿಳಿಗೊಳಿಸಿದರು.

ಬೆಳಗಾವಿ:ನಗರದ ಖಡಕ್‌ ಗಲ್ಲಿಯ ಮೆಹಬೂಬ್‌ ಸುಭಾನಿ ದರ್ಗಾದ ಉರುಸ್‌‍ ಮೆರವಣಿಗೆಯ ಸಮಯದಲ್ಲಿ ನಿನ್ನೆ ರಾತ್ರಿ ಹಿಂದೂಗಳು ಹಾಗೂ ಅವರ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಅನುಮತಿ ನೀಡಿದ ದಾರಿ ಬಿಟ್ಟು ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸಿ ಐ ಲವ್‌ ಮುಹಮದ್‌ ಘೋಷಣೆ ಕೂಗಿದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಲ್ಲು ತೂರಾಟ ನಡೆಸಲಾಗಿದೆ.
ಘಟನೆಯಿಂದ ಬೆಳಗಾವಿ ನಗರ ಉದ್ವಿಗ್ನಗೊಂಡಿದೆ. ಸ್ಥಳದಲ್ಲಿ ಪೊಲೀಸರು ಗಸ್ತಿನಲ್ಲಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಕಲ್ಬುರ್ಗಿ:
ವೈದ್ಯಕೀಯ ಶಿಕ್ಷಣ ಸಚಿವರ ತವರು ಕ್ಷೇತ್ರವಾದ ಸೇಡಂ ತಾಲ್ಲೂಕಿನ ಊಡಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಐ ಲವ್‌ ಮಹಮದ್‌ ಬ್ಯಾನರ್‌ ಕಂಡು ಬಂದಿದ್ದು, ವಿವಿಧ ಹಿಂದೂ ಸಂಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಒಟ್ಟಾರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುರುವಾಗಿ ದೇಶದ ವಿವಿಧೆಡೆ ಹಬ್ಬಿರುವ ಐ ಲವ್‌ ಮಹಮದ್‌ ಬ್ಯಾನರ್‌ ಹಾಗೂ ಘೋಷಣೆ ಈಗ ಕರ್ನಾಟಕದ ಹಲವು ಜಿಲ್ಲೆಗಳಿಗೆ ಹಬ್ಬಿರುವುದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ರಶ್ಮಿಕಾ – ವಿಜಯ್

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಪ್ರೀತಿ ಬಗ್ಗೆ ಗುಸಗುಸು ಇಂದು ನಿನ್ನೆಯದ್ದಲ್ಲ. ಇವರು ಪ್ರೀತಿಯಲ್ಲಿದ್ದಾರೆ ಎಂಬುದು ಬಹು ವರ್ಷಗಳಿಂದ ಕೇಳಿಬರುತ್ತಿರುವ ಅಂತೆ-ಕಂತೆಗಳು. ಈ ಪ್ರೇಮಪಕ್ಷಿಗಳೂ ಕೂಡಾ ಆಗಾಗ್ಗೆ ವದಂತಿಗಳಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದರು. ಹಬ್ಬ ಹರಿದಿನಗಳಿಗೆ ರಶ್ಮಿಕಾ, ವಿಜಯ್ ಮನೆಗೆ ಹೋಗ್ತಾ ಇದ್ದದ್ದು, ಬರ್ತ್ ಡೇ, ನ್ಯೂ ಇಯರ್ ಇಬ್ಬರು ಒಟ್ಟಾಗಿ ಟ್ರಿಪ್ ಹೋಗ್ತಾ ಇದ್ದದ್ದು.

ಅದನ್ನ ಹೈಡ್ ಮಾಡಿ ಸಿಕ್ಕಿ ಬೀಳ್ತಾ ಇದ್ದದ್ದು, ಎಲ್ಲವೂ ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದೀಗ ಫೈನಲ್ ಒಂದು ಸ್ಪೆಷಲ್ ನ್ಯೂಸ್ ಸಿಕ್ಕಿದೆ. ಟಾಲಿವುಡ್ ಅಂಗಳದಲ್ಲೆಲ್ಲಾ ಅದು ಹರಿದಾಡುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಿಶ್ಚಿತಾರ್ಥವಾಗಿದೆಯಂತೆ. ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಿನ್ನೆ, ಶುಕ್ರವಾರ ಹೈದರಾಬಾದ್ನಲ್ಲಿ ಎರಡೂ ಕುಟುಂಬಗಳು ಮತ್ತ ಆತ್ಮೀಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದೆ. 2026ರ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

2017ರಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಿಶ್ಚಿತಾರ್ಥವಾಗಿತ್ತು, ಆದ್ರೆ ಕಾರಣಾಂತರಗಳಿಂದ ಇಬ್ಬರ ಮದುವೆ ಮುರಿದುಬಿದ್ದಿತ್ತು.. ರಶ್ಮಿಕಾ ಮಂದಣ್ಣ ಟಾಲಿವುಡ್ಗೆ ಕಾಲಿಟ್ಟ ದಿನದಿಂದ ವಿಜಯ್ ದೇವರಕೊಂಡ ಜೊತೆ ಅವರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಇತ್ತು. ‘ಗೀತಾ ಗೋವಿಂದಂ’ ಸಿನಿಮಾ ಇಬ್ಬರ ವೃತ್ತಿ ಬದುಕಿಗೆ ಏಳಿಗೆ ಕೊಟ್ಟಿದ್ದಷ್ಟೇ ಅಲ್ಲದೇ.

ವೈಯಕ್ತಿಕ ಬದುಕಲ್ಲೂ ಬೆಳಕು ಮೂಡಿಸಿತ್ತು. ಇದೀಗ ಸದ್ದಿಲ್ಲದೇ ನಿಶ್ಚತಾರ್ಥ ಮಾಡಿಕೊಂಡು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ಸುದ್ದಿಯನ್ನು ರಶ್ಮಿಕಾ ಮಂದಣ್ಣ ಅವರಾಗಲೀ, ವಿಜಯ್ ದೇವರಕೊಂಡರಾಗಲಿ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ.

ಟ್ರಂಪ್‌ ಗುಣಗಾನ ಮಾಡಿದ ಪ್ರಧಾನಿ ಮೋದಿ

ನವದೆಹಲಿ, ಅ.4- ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯದಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ ಎಂಬ ಪರಿಸ್ಥಿತಿಯ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್‌ ಅವರ ಕಾರ್ಯವೈಖರಿಯ ಗುಣಗಾನ ಮಾಡಿರುವುದು ಅಚ್ಚರಿ ಮೂಡಿಸಿದೆ.

ಇಸ್ರೇಲ್‌‍-ಗಾಜಾ ಸಂಘರ್ಷ ಕೊನೆಗೊಳಿಸಿ ಶಾಂತಿ ಸ್ಥಾಪಿಸಲು ಟ್ರಂಪ್‌ ಮಾಡಿದ ಪ್ರಯತ್ನ, ವಿಶೇಷವಾಗಿ ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ವಿಚಾರದಲ್ಲಿ ಟ್ರಂಪ್‌ ನಾಯಕತ್ವವನ್ನು ಸ್ವಾಗತಿಸಿರುವ ಮೋದಿ, ಶಾಶ್ವತ ಶಾಂತಿಗಾಗಿ ಭಾರತದ ಬೆಂಬಲ ಮುಂದುವರಿಯಲಿದೆ ಎಂದಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ತೆರಿಗೆ ಸಮರ ಹಾಗೂ ನಂತರದ ಬೆಳವಣಿಗೆಗಳಿಂದ ಭಾರತ-ಅಮೆರಿಕ ನಡುವಣ ಸಂಬಂಧ ಹದಗೆಡುತ್ತಲೇ ಹೋಗಿದ್ದು ಎಲ್ಲರಿಗೂ ತಿಳಿದಿದೆ. ಇದೀಗ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರನ್ನು ಶ್ಲಾಘಿಸಿದ್ದಾರೆ.

ಇಸ್ರೇಲ್‌‍-ಗಾಜಾ ನಡುವಣ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಟ್ರಂಪ್‌ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಈ ವಿಚಾರದಲ್ಲಿ ಟ್ರಂಪ್‌ ನಾಯಕತ್ವವನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ಗಾಜಾದಲ್ಲಿ ಶಾಂತಿ ಸ್ಥಾಪನೆ ಕಾರ್ಯದಲ್ಲಿ ನಿರ್ಣಾಯಕ ಪ್ರಗತಿ ಸಾಧಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಾಜಾದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನಗಳಲ್ಲಿ ನಿರ್ಣಾಯಕ ಪ್ರಗತಿಯ ಮಧ್ಯೆ, ನಾವು ಅಧ್ಯಕ್ಷ ಟ್ರಂಪ್‌ ಅವರ ನಾಯಕತ್ವವನ್ನು ಸ್ವಾಗತಿಸುತ್ತೇವೆ. ಒತ್ತೆಯಾಳುಗಳ ಬಿಡುಗಡೆಯ ಸುಳಿವು ಒಂದು ಪ್ರಮುಖ ಹೆಜ್ಜೆಯಾಗಿದೆ. ಶಾಶ್ವತ ಮತ್ತು ನ್ಯಾಯಯುತ ಶಾಂತಿಗಾಗಿನ ಎಲ್ಲಾ ಪ್ರಯತ್ನಗಳನ್ನು ಬಲವಾಗಿ ಬೆಂಬಲಿಸುವುದನ್ನು ಭಾರತ ಮುಂದುವರಿಸುತ್ತದೆ ಎಂದು ಮೋದಿ ಎಕ್‌್ಸ ಮಾಡಿದ್ದಾರೆ.

ಗಾಜಾದಲ್ಲಿ ಕದನ ವಿರಾಮಕ್ಕಾಗಿ 20 ಅಂಶಗಳ ಶಾಂತಿ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸಿದ್ಧಪಡಿಸಿದ್ದರು. ಇದನ್ನು ಇಸ್ರೇಲ್‌ ಅಂಗೀಕರಿಸಿತ್ತು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಗಾಜಾದ ಅಧಿಕಾರವನ್ನು ಇತರ ಪ್ಯಾಲೆಸ್ತೀನಿಯನ್ನರಿಗೆ ಹಸ್ತಾಂತರಿಸಲು ಸಹ ಹಮಾಸ್‌‍ ಒಪ್ಪಿಕೊಂಡಿದೆ ಎನ್ನಲಾಗಿದೆ. ಆದಾಗ್ಯೂ, ಶಾಂತಿ ಪ್ರಸ್ತಾವನೆಯ ಇತರ ಹಲವು ಅಂಶಗಳ ಬಗ್ಗೆ ಸಮಾಲೋಚನೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹಮಾಸ್‌‍ ಹೇಳಿದೆ.

ಶಾಂತಿ ಪ್ರಸ್ತಾವನೆಯ ಕುರಿತು ನಿರ್ಧಾರ ತೆಗೆದುಕೊಳ್ಳಲು ಟ್ರಂಪ್‌ ಭಾನುವಾರ ಸಂಜೆ 6 ಗಂಟೆಯವರೆಗೆ ಹಮಾಸ್‌‍ಗೆ ಗಡುವು ನೀಡಿದ್ದಾರೆ. ಶಾಂತಿ ಪ್ರಸ್ತಾವನೆಯನ್ನು ಹಮಾಸ್‌‍ ಒಪ್ಪದಿದ್ದರೆ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಟ್ರಂಪ್‌ ಎಚ್ಚರಿಕೆಯನ್ನೂ ನೀಡಿದ್ದಾರೆ.

ಟ್ರಂಪ್‌ ಎಚ್ಚರಿಕೆ ನೀಡಿದ ನಂತರ, ಅಕ್ಟೋಬರ್‌ ರಂದು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌‍ ಒಪ್ಪಿಕೊಂಡಿದೆ. ಹಲವು ಅಂಶಗಳು ಇನ್ನೂ ನಿರ್ಧಾರವಾಗಬೇಕಿದ್ದರೂ, ಒತ್ತೆಯಾಳುಗಳ ಬಿಡುಗಡೆಯು ಗಾಜಾಗೆ ಶಾಂತಿ ತರುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ. ಹಮಾಸ್‌‍ ಪ್ರಸ್ತುತ 48 ಇಸ್ರೇಲಿ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ, ಅವರಲ್ಲಿ ಸರಿಸುಮಾರು 20 ಜನರು ಸಾವನ್ನಪ್ಪಿದ್ದಾರೆ.

ಒತ್ತೆಯಾಳುಗಳನ್ನು 72 ಗಂಟೆಗಳ ಒಳಗೆ ಬಿಡುಗಡೆ ಮಾಡಲಾಗುವುದು ಎಂದು ಹಮಾಸ್‌‍ ಹೇಳಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಯಾಗಿ, ಗಾಜಾ ಮೇಲಿನ ದಾಳಿಗಳನ್ನು ನಿಲ್ಲಿಸಲು ಇಸ್ರೇಲ್‌ ಒಪ್ಪಿಕೊಂಡಿದೆ. ಗಾಜಾದಿಂದ ಇಸ್ರೇಲಿ ಪಡೆಗಳನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುವುದು ಸಹ ಶಾಂತಿ ಒಪ್ಪಂದದಲ್ಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ.

ವಾಯು ವಿಹಾರ ಮಾಡುತ್ತಿದ್ದವರ ಮೇಲೆ ಕಾರು ಹರಿದು ಮೂವರ ದುರ್ಮರಣ

ಗಾಜಿಯಾಬಾದ್‌, ಅ. 4 (ಪಿಟಿಐ) ಬೆಳಗಿನ ವಾಯು ವಿಹಾರ ಮಾಡುತ್ತಿದ್ದವರ ಮೇಲೆ ಕಾರು ಹರಿದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಗಾಜಿಯಬಾದ್‌ನಲ್ಲಿ ಇಂದು ಬೆಳಗಿನ ನಡಿಗೆಗೆ ಹೊರಟಿದ್ದವರ ಮೇಲೆ ಕಾರು ಹರಿದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಟಿ ರಸ್ತೆಯ ರಾಕೇಶ್‌ ಮಾರ್ಗದ ಬಳಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಅತಿ ವೇಗದ ಕಾರು ಶತಮ್‌ ವಿಹಾರ್‌ ಕಾಲೋನಿಯ ವಿಪಿನ್‌ ಶರ್ಮಾ (47) ಮತ್ತು ಕೊಟ್ವಾಲಿ ಪ್ರದೇಶದ ನ್ಯೂ ಕೋಟ್‌ಗಾಂವ್‌‍ ನಿವಾಸಿಗಳಾದ ಮೀನು ಪ್ರಜಾಪತಿ (56), ಕಮಲೇಶ್‌ (55) ಮತ್ತು ಸಾವಿತ್ರಿ ದೇವಿ (60) ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ನಾಲ್ವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮೀನು ಮತ್ತು ಸಾವಿತ್ರಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು, ಆದರೆ ಕಮಲೇಶ್‌ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌‍ ಉಪ ಆಯುಕ್ತ (ಡಿಸಿಪಿ) (ನಗರ) ಧವಲ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಘಟನೆಯ ನಂತರ ಕಾರು ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ, ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಚಾಲಕನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇಂಡೀಸ್‌‍ ವಿರುದ್ಧದ ಮೊದಲ ಟೆಸ್ಟ್‌ : 448 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡ ಭಾರತ

ಅಹಮದಾಬಾದ್‌, ಅ. 4 (ಪಿಟಿಐ) ಭಾರತ ಕ್ರಿಕೆಟ್‌ ತಂಡ ವೆಸ್ಟ್‌ ಇಂಡೀಸ್‌‍ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 448 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿದೆ. ಮೂರನೇ ದಿನದ ಆರಂಭದಲ್ಲಿ 286 ರನ್‌ಗಳ ಗಮನಾರ್ಹ ಮುನ್ನಡೆಯೊಂದಿಗೆ 5 ವಿಕೆಟ್‌ಗೆ 448 ರನ್‌ಗಳೊಂದಿಗೆ ಆಟ ಆರಂಭಿಸಬೇಕಿದ್ದ ಭಾರತ ಇಂದು ಬೆಳಿಗ್ಗೆ ಏಕಾಏಕಿ ಡಿಕ್ಲೇರ್‌ ಘೋಷಿಸಿಕೊಂಡಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ (100), ಧ್ರುವ್‌ ಜುರೆಲ್‌ (125) ಮತ್ತು ರವೀಂದ್ರ ಜಡೇಜಾ (104 ಅಜೇಯ) ಅವರ ಶತಕಗಳು ಪ್ರಮುಖವಾಗಿದ್ದವು. ಜಡೇಜಾ ಇಂದು ಬೆಳಿಗ್ಗೆ ಆಟ ಆರಂಭಿಸಬೇಕಿತ್ತಾದರೂ ಇಂದು ಏಕಾಏಕಿ ಡಿಕ್ಲೇರ್‌ ಮಾಡಿಕೊಂಡು ವೆಸ್ಟ್‌ ಇಂಡೀಸ್‌‍ ಎರಡನೇ ಇನಿಂಗ್ಸ್ ಅವಕಾಶ ಕಲ್ಪಿಸಲಾಗಿದೆ. ಸಂಕ್ಷಿಪ್ತ ಸ್ಕೋರ್‌ಗಳು: ವೆಸ್ಟ್‌ ಇಂಡೀಸ್‌‍ ಮೊದಲ ಇನ್ನಿಂಗ್‌್ಸನಲ್ಲಿ 162 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಭಾರತ 448/5 ಡಿಕ್ಲೇರ್‌ ಮಾಡಿದೆ.