Home Blog Page 70

ತಮಿಳುನಾಡಿನಲ್ಲಿ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಬರಲಿದೆ ದಿನಸಿ

ಚೆನ್ನೈ, ಅ. 4 (ಪಿಟಿಐ) ದೀಪಾವಳಿ ಹಬ್ಬಕ್ಕೆ ತಮಿಳುನಾಡಿನ ಹಿರಿಯ ನಾಗರಿಕರು ಮತ್ತು ವಿಕಲಚೇತನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಅಕ್ಟೋಬರ್‌ 20 ರಂದು ಬರುವ ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ನಾಳೆಯಿಂದ ಎರಡು ದಿನಗಳ ಕಾಲ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ಅಗತ್ಯ ವಸ್ತುಗಳನ್ನು ನೇರವಾಗಿ ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕುಟುಂಬ ಕಾರ್ಡ್‌ದಾರರ ಮನೆಗಳಿಗೆ ತಲುಪಿಸುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.

ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಪ್ರಾರಂಭಿಸಿದ ತಾಯುಮನವರ್‌ ಯೋಜನೆಯಡಿಯಲ್ಲಿ ಈ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಗುವುದು.ರಾಜ್ಯಾದ್ಯಂತ ಏಕಕಾಲದಲ್ಲಿ ವಿತರಣೆಯನ್ನು ಕೈಗೊಳ್ಳಲಾಗುವುದು ಎಂದು ಇಲ್ಲಿ ಅಧಿಕೃತ ಪ್ರಕಟಣೆ ತಿಳಿಸಿದೆ.

70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನ ಕುಟುಂಬ ಪಡಿತರ ಚೀಟಿದಾರರು ತಮ್ಮ ನೆರೆಹೊರೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಮಾಸಿಕ ಪಡಿತರವನ್ನು ಪಡೆಯಲು ಸರತಿ ಸಾಲಿನಲ್ಲಿ ಕಾಯುವ ತೊಂದರೆಯಿಂದ ಮುಕ್ತರಾಗುತ್ತಾರೆ.

ಎಫ್‌ಪಿ ಅಂಗಡಿಗಳಿಂದ ವಾಹನಗಳು ಅಗತ್ಯ ವಸ್ತುಗಳನ್ನು ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ತರುತ್ತವೆ ಮತ್ತು ಪಿಡಿಎಸ್‌‍ ಸಿಬ್ಬಂದಿ ನಿಖರ ಮತ್ತು ಪಾರದರ್ಶಕ ವಿತರಣೆಗಾಗಿ ಎಲೆಕ್ಟ್ರಾನಿಕ್‌ ತೂಕದ ಮಾಪಕಗಳು ಮತ್ತು ಇ-ಪಿಒಎಸ್‌‍ ಯಂತ್ರಗಳನ್ನು ಬಳಸುತ್ತಾರೆ ಎಂದು ಅದು ಹೇಳಿದೆ.

ತಮಿಳುನಾಡಿನಾದ್ಯಂತ ಒಟ್ಟು 21.7 ಲಕ್ಷ ಕಾರ್ಡ್‌ದಾರರು ಈ ಕಾರ್ಯದ ಮೂಲಕ ಪ್ರಯೋಜನ ಪಡೆಯುತ್ತಾರೆ.ಈ ಮಾಹಿತಿಯನ್ನು ತಮ್ಮ ಸೂಚನಾ ಫಲಕಗಳಲ್ಲಿ ಹಾಕಲು ಅಂಗಡಿಗಳಿಗೆ ನಿರ್ದೇಶನ ನೀಡಲಾಗಿದೆ. ವೃದ್ಧರು ಮತ್ತು ಅಂಗವಿಕಲ ಸದಸ್ಯರು ಈ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಪಡೆದುಕೊಂಡು ಪ್ರಯೋಜನ ಪಡೆಯುವಂತೆ ಸರ್ಕಾರ ಮನವಿ ಮಾಡಿಕೊಂಡಿದೆ.

ಉರುಸ್‌‍ ಮೆರವಣಿಗೆ ಸಮಯದಲ್ಲಿ ಕಲ್ಲು ತೂರಾಟ, ಬೆಳಗಾವಿ ಬೂದಿ ಮುಚ್ಚಿದ ಕೆಂಡ

ಬೆಳಗಾವಿ,ಅ.4– ಖಡಕ್‌ ಗಲ್ಲಿಯ ಮೆಹಬೂಬ್‌ ಸುಭಾನಿ ದರ್ಗಾದ ಉರುಸ್‌‍ ಮೆರವಣಿಗೆಯ ಸಮಯದಲ್ಲಿ ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಅನುಮತಿ ನೀಡಿದ ದಾರಿ ಬಿಟ್ಟು ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸಿ ಐ ಲವ್‌ ಮುಹಮದ್‌ ಘೋಷಣೆ ಕೂಗಿದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಇದರಿಂದ ಕೆರಳಿ ಕಲ್ಲು ತೂರಾಟ ನಡೆಸಲಾಗಿದೆ.

ಘಟನೆಯಿಂದ ಬೆಳಗಾವಿ ನಗರ ಉದ್ವಿಗ್ನಗೊಂಡಿದೆ.ಸ್ಥಳಕ್ಕೆ ಬಂದ ಪೊಲೀಈಸರು ಪರಿಸ್ಥಿತಿ ನಿಯಂತ್ರಿಸಿದ್ದರೆ.ಮೆರವಣಿಗೆಗೆ ಅವಕಾಶವಿಲ್ಲದ ಪ್ರದೇಶವಾದ ಖಡಕ್‌ ಗಲ್ಲಿಗೆ ಕೆಲವರು ನುಗ್ಗಿದ್ದರಿ ಇದಕ್ಕೆ ಅಲ್ಲಿನ ನಿವಾಸಿಗಳು ಮಾರ್ಗವನ್ನು ಏಕೆ ಬದಲಾಯಿಸಲಾಗಿದೆ ಎಂದು ಪ್ರಶ್ನಿಸಿದರು ಮತ್ತು ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಇದರಿಂದ ಘರ್ಷಣೆ ಉಂಟಾಗಿ ಉದ್ವಿಘ್ನ ಸನ್ನಿವೇಶ ಸೃಷ್ಠಿಯಾಗಿಕೆಲವರು ಕಲ್ಲು ತೂರಾಟ ನಡೆಸಿದ್ದಾರೆ.ಪೊಲೀಸ್‌‍ ಸಿಬ್ಬಂದಿ ಕೂಡಲೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರೆ
ಗುಂಪುಗಳನ್ನು ಚದುರಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗಾವಿಗೆ ಭೇಟಿ ನೀಡುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.

ಏಕಾಏಕಿ ಮೆರವಣಿಗೆ ಮಾಡಿದವರು ಮತ್ತು ಕಲ್ಲು ತೂರಿದ್ದಾರೆ ಕೆಲವರು ತಲ್ಚಾರ್‌ ಕೂಡ ತೋರಿಸಿ ಬೆದರಿಕೆ ಹಾಕಿದ್ದು ಅವರ ವಿರುದ್ಧ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮನಿ, ಇಬ್ಬರು ಡಿಸಿಪಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸ್ಥಳದಲ್ಲಿ ಬಿಗುವಿಣ ವಾತಾವರಣ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್‌‍ ಕಮಿಷನರ್‌ ಭೂಷಣ್‌ ಬೊರಸೆ ಭೇಟಿ ನೀಡಿ ಸ್ಥಳೀಯರು, ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಡಕ್‌ ಗಲ್ಲಿಯಲ್ಲಿ ಎರಡು ಕೋಮಿನ ಜನರ ನಡುವೆ ಘರ್ಷಣೆ ನಡೆದಿದೆ. ಒಂದು ಧಾರ್ಮಿಕ ಕಾರ್ಯಕ್ರಮ ಇತ್ತು. ಒಂದು ರೂಟ್‌ ಫಿಕ್‌್ಸಇದೆ, ಅದನ್ನ ಬಿಟ್ಟು ಬೇರೆ ರೂಟ್‌ನಲ್ಲಿ ಬಂದಿದ್ದಾರೆ.

ಸ್ಥಳೀಯರು ಕಲ್ಲು ತೂರಾಟ ಆಗಿದೆ ಅಂತಾ ದೂರು ಕೊಟ್ಟಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ಆಗುತ್ತೆ. ಯಾರಿಗೂ ಗಾಯ ಆಗಿಲ್ಲ, ಎರಡು ಕೋಮಿನ ಹಿರಿಯರು ಪರಿಸ್ಥಿತಿ ಕೂಡಲೇ ಸರಿಪಡೆಸಿದ್ದಾರೆ ಎಂದು ಹೇಳಿದರು. ಘಟನೆ ಸಂಬಂಧ ಸದ್ಯ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.ಕಡೇಬಜಾರ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-10-2025)

ನಿತ್ಯ ನೀತಿ : ಜೀವನಕ್ಕೆ ಒಂದು ಗುರಿ ಇರಬೇಕು. ಗುರಿ ಇಲ್ಲದ ಬಾಳು ವ್ಯರ್ಥ. ಜೀವನದ ನಿಜವಾದ ಗುರಿಯ ಗುಟ್ಟನ್ನು ಅರ್ಥಮಾಡಿಸುವವನೇ ನಿಜವಾದ ಗುರು.

ಪಂಚಾಂಗ ಶನಿವಾರ 04-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ /ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ದ್ವಾದಶಿ / ನಕ್ಷತ್ರ: ಧನಿಷ್ಕಾ / ಯೋಗ: ಶೂಲ /ಕರಣ: ಕೌಲವ

ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.08
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಸಣ್ಣಪುಟ್ಟ ಕಾಯಿಲೆಗಳು ಕಾಡಬಹುದು. ಸಹೋದ್ಯೋಗಿಗಳಿಂದ ತೊಂದರೆಯಾಗಬಹುದು.
ವೃಷಭ: ವ್ಯಾಪಾರಿಗಳಿಗೆ ಲಾಭದಾಯಕ ದಿನ. ಪೂರ್ಣ ಪ್ರಮಾಣದಲ್ಲಿ ದೈವಾನುಗ್ರಹ ಪ್ರಾಪ್ತಿ ಯಾಗಲಿದೆ. ಮೇಲಕಾರಿಗಳ ಉತ್ತೇಜನ ಸಿಗಲಿದೆ.
ಮಿಥುನ: ಮನೆಯಲ್ಲಿ ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮವಾಗಿರುತ್ತದೆ. ಅನಿರೀಕ್ಷಿತ ಧನವ್ಯಯ.

ಕಟಕ: ಮಕ್ಕಳ ವೃತ್ತಿ ಜೀವನದಲ್ಲಿ ಒಳ್ಳೆಯ ಸುದ್ದಿ ಕೇಳು ವಿರಿ. ಗ್ರಾಹಕ ವರ್ಗಕ್ಕೆ ಹರ್ಷ.
ಸಿಂಹ: ಅಧಿಕ ಆತ್ಮವಿಶ್ವಾಸ ದಿಂದ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡುವಿರಿ.
ಕನ್ಯಾ: ಮಧ್ಯವರ್ತಿಗಳ ಸಹಾಯದಿಂದ ವಿವಾಹದ ವಿಷಯದಲ್ಲಿ ಅನುಕೂಲಕರವಾಗಲಿದೆ.

ತುಲಾ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.
ವೃಶ್ಚಿಕ: ಅಧಿಕ ಆತ್ಮವಿಶ್ವಾಸ ದಿಂದ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡುವಿರಿ
ಧನುಸ್ಸು: ಆತ್ಮಸ್ಥೈರ್ಯದಿಂದ ಮಾಡಿದ ಕೆಲಸಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ.

ಮಕರ: ಅಭಿವೃದ್ಧಿಯಲ್ಲಿ ಹಲವು ಅಡೆತಡೆಗಳು ಎದುರಾಗಲಿವೆ. ಆಯಾಸ ಹೆಚ್ಚಾಗಲಿದೆ.
ಕುಂಭ: ಸರ್ಕಾರದಿಂದ ಬರಬೇಕಿದ್ದ ಹಣ ಬರಲಿದೆ. ಸಮಸ್ಯೆಗಳು ದೂರವಾಗಲಿವೆ.
ಮೀನ: ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಕಡಿಮೆಯಾಗಲಿದೆ.

ಮೂವರು ಭಾರತೀಯ ಬ್ಯಾಟರ್​ಗಳ ಶತಕ : ವಿಂಡೀಸ್ ವಿರುದ್ಧ ಭಾರತ ಬೃಹತ್ ಮುನ್ನಡೆ

ಅಹಮದಾಬಾದ್‌, ಅ. 3 (ಪಿಟಿಐ) ವೆಸ್ಟ್‌ ಇಂಡೀಸ್‌‍ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ ಶತಕ ಬಾರಿಸಿದ್ದಾರೆ. ರಾಹುಲ್​ 197 ಎಸೆತಗಳಲ್ಲಿ 12 ಬೌಂಡರಿ ಸಹಿತ 100 ರನ್​ಗಳಿಸಿದರು. ಇದು ಅವರ ವೃತ್ತಿ ಜೀವನದ 11ನೇ ಹಾಗೂ ಭಾರತದ ನೆಲದಲ್ಲಿ 2ನೇ ಶತಕವಾಗಿದೆ. ಎರಡನೇ ದಿನ 448ರನ್​ಗಳಿಸಿದೆ. ಇಡೀ ದಿನ ವೆಸ್ಟ್ ಇಂಡೀಸ್ ಬೌಲರ್​ಗಳು ಕೇವಲ 3 ವಿಕೆಟ್ ಮಾತ್ರ ಪಡೆಯಲು ಸಾಧ್ಯವಾಯಿತು. ಮೂವರು ಭಾರತೀಯ ಬ್ಯಾಟರ್​ಗಳು ಶತಕ ಸಿಡಿಸಿ ಮಿಂಚಿದರು.

ರಾಹುಲ್ ವಿಕೆಟ್ ನಂತರ ನಂತರ ಒಂದಾದ ಜುರೆಲ್-ಜಡೇಜಾ 5ನೇ ವಿಕೆಟ್ ಜೊತೆಯಾಟದಲ್ಲಿ 206 ರನ್​ಗಳ ಜೊತೆಯಾಟ ನಡೆಸಿದರು. ಈ ಇಬ್ಬರು ಬ್ಯಾಟರ್​ಗಳು 55.1 ಓವರ್​ಗಳ ಕಾಲ ವಿಂಡೀಸ್ ಬೌಲರ್​ಗಳನ್ನ ಹೈರಾಗೊಳಿಸಿದರು. ಜುರೆಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್​ಗಳೊಂದಿಗೆ 125 ರನ್​ಗಳಿಸಿ ಔಟ್ ಆದರು. ಜುರೆಲ್ಗೆ ಇದು ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕವಾಗಿದೆ. ಜುರೆಲ್ ಬೆನ್ನಲ್ಲೇ ಜಡೇಜಾ ಕೂಡ ಶತಕ ಪೂರ್ಣಗೊಳಿಸಿದರು. 168 ಎಸೆತಗಳಲ್ಲಿ ಶತಕ ಪೂರೈಸಿದ ಜಡೇಜಾ ವೃತ್ತಿ ಜೀವನದ 6ನೇ ಶತಕ ದಾಖಲಿಸಿದ್ದಾರೆ.

ಜಡೇಜಾ 176 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್​ಗಳ ಸಹಿತ ಅಜೇಯ 104 ರನ್​ಗಳಿಸಿದ್ದು 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಅಜೇಯ 9 ರನ್​ಗಳಿಸಿದ್ದರು.
ರೋಸ್ಟನ್ ಚೇಸ್ 90ಕ್ಕೆ2, ಖಾರಿ ಪಿಯರ್ 91ಕ್ಕೆ1, ಜೊಮೆಲ್ ವಾರಿಕನ್ 102ಕ್ಕೆ1, ಜೇಡನ್ ಸೀಲ್ಸ್ 53ಕ್ಕೆ1 ವಿಕೆಟ್ ಪಡೆದರು.

ಎಸ್‌‍ಎಲ್‌ ಬೈರಪ್ಪರಿಗೆ `ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಸಿಎಂಗೆ ಯದುವೀರ್‌ ಪತ್ರ

ಬೆಂಗಳೂರು,ಅ.3- ಇತ್ತೀಚಿಗೆ ನಿಧನರಾದ ಖ್ಯಾತ ಕದಂಬರಿಕಾರ, ಹಾಗೂ ಪ್ರತಿಷ್ಟಿತ ಪದವಿಭೂಷಣ ಪ್ರಶಸ್ತಿ ಪುರಸ್ಕೃತ ಎಸ್‌‍.ಎಲ್‌ ಬೈರಪ್ಪ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಮೈಸೂರು ಕ್ಷೇತ್ರದ ಸಂಸದ, ರಾಜವಂಶಸ್ಥ ಯದುವೀರ್‌ ಒಡೆಯರ್‌ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಸಂಸದ ಯದುವೀರ್‌ ಒಡೆಯರ್‌,ಕನ್ನಡದ ಜನಮನ್ನಣೆಯ ಮೇರು ಸಾಹಿತಿ ಮಹಾನ್‌ ಕಾದಂಬರಿಕಾರರು ಹಾಗೂ ಸರಸ್ವತಿ ಸವಾನ ಪದಭೂಷಣ ಡಾ. ಎಸ್‌‍. ಎಲ್‌‍. ಭೈರಪ್ಪ ಅವರ ಅಗಲಿಕೆಯು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಅವರನ್ನು ಗೌರವಿಸಲು, ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವಂತೆ ಮತ್ತು ಮೈಸೂರು ನಗರ ಕೇಂದ್ರ ಗ್ರಂಥಾಲಯವನ್ನು ಅವರ ಸರಣಾರ್ಥ ಮರುನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಖ್ಯಾತ ನಟ ಡಾ. ವಿಷ್ಣುರ್ವಧನ್‌ ಹಾಗೂ ಚಿತ್ರನಟಿ ಬಿ ಸರೋಜದೇವಿ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು.

ಕರ್ನಾಟಕ ರತ್ನ ಪ್ರಶಸ್ತಿಯು ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆಯುವವರಿಗೆ 50 ಗ್ರಾಂ ತೂಕದ ಚಿನ್ನದ ಪದಕ, ನೆನಪಿನ ಕಾಣಿಕೆ ನೀಡಿ, ಶಾಲನ್ನು ಹೊದಿಸಿ ಗೌರವಿಸಲಾಗುತ್ತದೆ. ಕರ್ನಾಟಕ ರತ್ನ ಪ್ರಶಸ್ತಿಯನ್ನ ಈವರೆಗೆ ಒಂಬತ್ತು ಸಾಧಕರಿಗೆ ನೀಡಲಾಗಿದೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊದಲ ಬಾರಿಗೆ 1991 ರಲ್ಲಿ ಆರಂಭಿಸಲಾಯಿತು. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಕರ್ನಾಟಕ ಪ್ರಶಸ್ತಿಯನ್ನು ಮೊದಲ ಬಾರಿಗೆ 1992 ರಲ್ಲಿ ನೀಡಲಾಯಿತು.

ಮೊದಲ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಷ್ಟ್ರಕವಿ ಕುವೆಂಪು ಅವರಿಗೆ ನೀಡಿ ಗೌರವಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಹತ್ತು ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಬಾರಿ ಅಂದರೆ 2021ರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕುವೆಂಪು – ಸಾಹಿತ್ಯ – 1992
ಡಾ. ರಾಜ್‌ಕುಮಾರ್‌ – ಚಲನಚಿತ್ರ – 1992
ಎಸ್‌‍.ನಿಜಲಿಂಗಪ್ಪ – ರಾಜಕೀಯ – 1999
ಸಿ.ಎನ್‌.ಆರ್‌.ರಾವ್‌ – ವಿಜ್ಞಾನ – 2000
ದೇವಿಪ್ರಸಾದ್‌ ಶೆಟ್ಟಿ – ವೈದ್ಯಕೀಯ – 2001
ಭೀಮಸೇನ ಜೋಷಿ – ಸಂಗೀತ – 2005
ಶ್ರೀ ಶಿವಕುಮಾರ ಸ್ವಾಮೀಜಿ – ಸಾಮಾಜಿಕ ಸೇವೆ – 2007
ದೇ. ಜವರೇಗೌಡ – ಸಾಹಿತ್ಯ -2008
ಡಿ. ವೀರೇಂದ್ರ ಹೆಗ್ಗಡೆ – ಸಾಮಾಜಿಕ ಸೇವೆ – 2009.
ಪುನೀತ್‌ ರಾಜ್‌ಕುಮಾರ್‌- ಸಿನಿಮಾ ಹಾಗೂ ಸಾಮಾಜಿಕ ಸೇವೆ -2021

ಕಾಂಗ್ರೆಸ್‌ನಲ್ಲಿ ಮತ್ತೆ ಭುಗಿಲೆದ್ದ ಸಿಎಂ ಕುರ್ಚಿ ಕದನ

ಬೆಂಗಳೂರು, ಅ.3- ಸೆಪ್ಟಂಬರ್‌ ಮುಗಿದರೂ ಕ್ರಾಂತಿಯ ಸುಳಿವೇ ಇಲ್ಲದಂತೆ ಎಲ್ಲವೂ ತಣ್ಣಗಿ ರುವುದು, ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡುತ್ತಿರುವುದು, ಮುಂದಿನ ಎರಡು ತಿಂಗಳಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದವರಿಗೆ ನೋಟಿಸ್‌‍ ನೀಡುತ್ತಿರುವುದು, ಉಪಮುಖ್ಯ ಮಂತ್ರಿಯವರ ಮೌನ, ಎಲ್ಲವೂ ಕಾಂಗ್ರೆಸ್‌‍ನಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಸನ್ನಿವೇಶವನ್ನು ಸೃಷ್ಟಿಸಿದೆ.

ಕಾಂಗ್ರೆಸ್‌‍ ನಾಯಕ, ಮಾಜಿ ಶಾಸಕ ಎಲ್‌.ಆರ್‌. ಶಿವರಾಮೇಗೌಡ ಮುಂದಿನ ಎರಡು ತಿಂಗಳಿನಲ್ಲಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರು. ಅದಕ್ಕೆ ಪೂರಕವಾಗಿ ಕುಣಿಗಲ್‌ ಕ್ಷೇತ್ರದ ಶಾಸಕ ಹೆಚ್‌.ಡಿ.ರಂಗನಾಥ್‌ ಡಿ.ಕೆ.ಶಿವ ಕುಮಾರ್‌ಗೆ ಬಹುಪರಾಕ್‌ ಹಾಕಿದ್ದರು. ಈ ಇಬ್ಬರಿಗೂ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್‌‍ ನೀಡಿ ಒಂದು ವಾರದಲ್ಲಿ ಉತ್ತರ ನೀಡುವಂತೆ ತಾಕೀತು ಮಾಡಿದೆ.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಾಯಕರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಯಾರೂ ಕೂಡ ಸ್ಪಷ್ಟವಾಗಿ ಹೀಗೆಯೇ ನಡೆಯುತ್ತದೆ ಎಂದು ಹೇಳುತ್ತಿಲ್ಲ.

ಮುಂದಿನ ದಸರಾವನ್ನು ಬಹುಶಃ ನಾನೇ ಉದ್ಘಾಟನೆ ಮಾಡುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೊತೆಯಲ್ಲೇ ಹೈಕಮಾಂಡ್‌ ತೀರ್ಮಾನಕ್ಕೆ ನಾವು ಬದ್ಧ ಎಂದು ಸೇರಿಸಿದ್ದಾರೆ.
ಡಿ.ಕೆ.ಶಿವಕುಮಾರ್‌ ತಮ ಹೇಳಿಕೆಯಲ್ಲಿ, ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಅಧಿಕಾರ ಹಂಚಿಕೆಯ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ. ಯಾರಿಗೂ ಈ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದಿದ್ದಾರೆ. ಅಷ್ಟಕ್ಕೆ ಸುಮನಾಗದ ಅವರು ತಮ ಪರವಾಗಿ ಮಾತನಾಡಿರುವವರಿಗೆ ನೋಟಿಸ್‌‍ ನೀಡಲು ನಾನೇ ಹೇಳಿದ್ದೇನೆ ಎಂದಿದ್ದಾರೆ. ಹೈಕಮಾಂಡ್‌ ತೀರ್ಮಾನಕ್ಕೆ ನಾವು ಬದ್ಧ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಅಷ್ಟೇ. ಅದಕ್ಕೆ ನಾವೇಲ್ಲಾ ಬದ್ಧ ಎಂದಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಯಾವುದೇ ಕಾರ್ಯಕ್ರಮ ಅಥವಾ ವೇದಿಕೆಗಳಾದರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಆದರೆ ಇಬ್ಬರ ನಡುವೆ ಮೊದಲಿದ್ದ ಅನ್ಯೋನ್ಯತೆ ಕಂಡು ಬರುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿಯಾಗಿ, ಪಕ್ಷದ ಅಧ್ಯಕ್ಷರಾಗಿದ್ದರೂ ಅವರನ್ನು ಸಂಪುಟದ ಸಚಿವರಂತೆ ಸಿದ್ದರಾಮಯ್ಯ ಪರಿಗಣಿಸುತ್ತಿರುವುದು ಎದ್ದು ಕಾಣುತ್ತಿದೆ.

ನಿನ್ನೆ ದಸರಾ ಉದ್ಘಾಟನೆ ಸಂದರ್ಭದಲ್ಲಿ ನಡೆದ ತೆರೆದ ಜೀಪಿನ ಮೆರವಣಿಗೆಯಲ್ಲಿ ಸಿದ್ದರಾಮಯ್ಯ ಮೊದಲ ಸಾಲಿನಲ್ಲಿ ನಿಂತಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ.ಮಹದೇವಪ್ಪ ಸಿದ್ದರಾಮಯ್ಯ ನಂತರ ನಿಂತು ಕೈ ಬೀಸುತ್ತಿರುವುದು ಕಂಡು ಬಂತು. ಡಿ.ಕೆ.ಶಿವಕುಮಾರ್‌ ಅದಕ್ಕಿಂತಲೂ ಹಿಂದಿನ ಸಾಲಿನಲ್ಲಿ ನಿಂತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಡಿ.ಕೆ.ಶಿವಕುಮಾರ್‌ ಅವರನ್ನು ಮುಂದೆ ಬಿಟ್ಟು ಮಹದೇವಪ್ಪ ಹಿಂದೆ ಸರಿದರು.
ಹಲವು ವೇದಿಕೆಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ ಡಿ.ಕೆ.ಶಿವಕುಮಾರ್‌ ಅವರನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸುವುದು, ಬಲವಂತವಾಗಿ ಡಿ.ಕೆ.ಶಿವಕುಮಾರ್‌ ತಮ ಪ್ರಾಧಾನ್ಯತೆಯನ್ನು ಪಡೆದುಕೊಳ್ಳುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ರೀತಿಯ ಅನಾಧಾರಣೆಯನ್ನೂ ಸಹಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್‌ ತಮ ಪರವಾಗಿ ಹೇಳಿಕೆ ನೀಡುವವರಿಗೆ ನೋಟಿಸ್‌‍ ಕೊಟ್ಟು ಬಾಯಿ ಮುಚ್ಚಿಸುತ್ತಿರುವುದೇಕೆ ಎಂಬ ಅನುಮಾನಗಳು ಹಾಗೂ ಕುತೂಲಹ ಹೆಚ್ಚಿದೆ.

ವಿಧಾನಸಭೆ ಚುನಾವಣೆ ಬಳಿಕ ನಡೆದ ಅಧಿಕಾರ ಹಂಚಿಕೆ ಮಾತುಕತೆಯಲ್ಲಿ ಹಿನ್ನೆಡೆ ಅನುಭವಿಸಿದ್ದ ಡಿ.ಕೆ.ಶಿವಕುಮಾರ್‌ ಮೊದಲ ಅವಧಿಗೆ ಮುಖ್ಯಮಂತ್ರಿ ಹುದ್ದೆ ಸಿಗದೇ ನಿರಾಶರಾಗಿದ್ದಾರೆ. ಹಾಲುಮತದವರಿಂದ ಅಧಿಕಾರ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೋಡಿಹಳ್ಳಿ ಶ್ರೀಗಳ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಸದ್ಯದ ವಾತಾವರಣದಲ್ಲಿ ಸಿದ್ದರಾಮಯ್ಯ ತಾವಾಗಿಯೇ ಅಧಿಕಾರ ಬಿಟ್ಟುಕೊಡುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೈಕಮಾಂಡ್‌ ಸ್ಥಾನ ಪಲ್ಲಟ ಮಾಡುವ ಸೂಚನೆಗಳಂತೂ ಇಲ್ಲ.

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್‌‍ನಲ್ಲಿ ಒಂದು ಬಣ ಒಳಗೊಳಗೆ ಕೈ ಹಿಸುಕಿಕೊಳ್ಳುತ್ತಿದೆ. ಮತ್ತೊಂದು ಬಣ ಸಿದ್ದರಾಮಯ್ಯ ಮುಂದುವರೆಯಬೇಕು ಎಂಬ ಭಾವನೆಗೆ ಸೀಮಿತವಾಗಿದೆ. ನಿಷ್ಟಾವಂತ ಹಾಗೂ ಮೂಲ ಕಾಂಗ್ರೆಸ್ಸಿಗರಲ್ಲಿ ಬಹುತೇಕರು ಸಿದ್ದರಾಮಯ್ಯ ಕ್ಯಾಂಪ್‌ಗೆ ಜಂಪ್‌ ಆಗಿದ್ದಾರೆ. ಡಿ.ಕೆ.ಶಿವಕುಮಾರ್‌ ಜಂಬದ ನಾಯಕ ಎಂಬ ತೆಗಳಿಕೆಗೆ ಗುರಿಯಾಗಿರುವುದು ಇದಕ್ಕೆ ಮೂಲ ಕಾರಣವಾಗಿದೆ. ಎಷ್ಟೇ ದೊಡ್ಡ ನಾಯಕರಾಗಿದ್ದರೂ ಅವರೊಂದಿಗೆ ಡಿ.ಕೆ.ಶಿವಕುಮಾರ್‌ ಮುಖಕೊಟ್ಟು ಮಾತನಾಡುವುದಿಲ್ಲ. ಎಲ್ಲಿಯೋ ನೋಡುತ್ತಾ ಅನಾಧಾರಣೆಯ ಪ್ರತಿಕ್ರಿಯೆ ನೀಡುತ್ತಾರೆ. ಸಿದ್ದರಾಮಯ್ಯ ಹಾಗಲ್ಲ ಹೆಗಲ ಮೇಲೆ ಕೈ ಹಾಕಿ ಉಭಯ ಕುಶಲೋಪರಿ ವಿಚಾರಿಸುತ್ತಾರೆ. ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯಲಿ ಎಂಬ ಭಾವನೆ ಬಹಳಷ್ಟು ನಾಯಕರಲ್ಲಿದೆ. ರಾಜಕೀಯವಾಗಿ ಇಂತಹ ಸಣ್ಣ ವಿಚಾರಗಳು ದೊಡ್ಡ ಪರಿಣಾಮ ಬೀರಿದ ಉದಾಹರಣೆಗಳಿವೆ.

ನಾನು ಮುಖ್ಯಮಂತ್ರಿಯಾಗುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಯಾವ ಶಾಸಕರ ಬೆಂಬಲವೂ ನನಗೆ ಅಗತ್ಯ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಈಗಾಗಲೇ ಹೇಳಿಯೂ ಆಗಿದೆ. ಹಳೆಯ ಮೈಸೂರು ಭಾಗದಲ್ಲಿ ಒಂದಿಷ್ಟು ಶಾಸಕರು ಡಿ.ಕೆ.ಶಿವಕುಮಾರ್‌ ಪರವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡುತ್ತಿದ್ದ ಕೆ.ಎನ್‌.ರಾಜಣ್ಣರನ್ನು ಸಂಪುಟದಿಂದ ಉಚ್ಛಾಟನೆ ಮಾಡಿದ ಬಳಿಕ ಒಂದಿಷ್ಟು ಮಂದಿಗೆ ರಾಜಕೀಯವಾಗಿ ಮಾತನಾಡಲು ಧೈರ್ಯ ಸಾಲದೇ ಒಳಗೊಳಗೆ ಅಳುಕಿದೆ.

ಅಧಿಕಾರ ಇರುವ ಕಾರಣಕ್ಕೆ ಸಿದ್ದರಾಮಯ್ಯ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಯಾರೇ ಮುಖ್ಯಮಂತ್ರಿಯಾದರೂ ಜನ ಬೆಂಬಲ ಅಧಿಕಾರಸ್ಥರ ಜೊತೆಗಿರುವುದು ಸಾಮಾನ್ಯ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಮರಳಿ ಅಧಿಕಾರಕ್ಕೆ ಬರಲಿದೆ. ಇಲ್ಲವಾದರೆ 2018ರ ಫಲಿತಾಂಶವೇ ಮರುಕಳಿಸಲಿದೆ ಎಂದು ಹಲವು ಮಂದಿ ವ್ಯಾಖ್ಯಾನಿಸುತ್ತಿದ್ದಾರೆ. ವಾದ ವಿವಾದಗಳು ಏನೇ ಇದ್ದರೂ ಸದ್ಯಕ್ಕೆ ಸೆಪ್ಟಂಬರ್‌ ಮುಗಿದಿದೆ. ಮುಂದೆ ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ, ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದು ಕೆಲವರು ಹೇಳಿಕೊಂಡು ತಿರುಗುತ್ತಿದ್ದಾರೆ. ಬಾಯಿ ಬಿಟ್ಟವರಿಗೆ ನೋಟಿಸ್‌‍ ನೀಡಿ, ಬಾಯಿ ಮುಚ್ಚಿಸುತ್ತಿರುವ ಡಿ.ಕೆ.ಶಿವಕುಮಾರ್‌ ಅವರ ಇಕ್ಕಮತ್‌ ಅರ್ಥವಾಗದೆ ವಿರೋಧಿ ಬಣ ಗೊಂದಲಕ್ಕೀಡಾಗಿದೆ. ಕಾಂಗ್ರೆಸ್‌‍ ನಲ್ಲಿ ಎಲ್ಲವೂ ಸರಿ ಇದೆ, ಆದರೆ ಏನೋ ಸರಿ ಇಲ್ಲ ಎಂಬ ವಾತಾವರಣವಂತೂ ಮನೆ ಮಾಡಿದೆ. ಬೂದಿ ಮುಚ್ಚಿದ ಕೆಂಡಕ್ಕೆ ಯಾರು ಗಾಳಿ ಹಾಕುತ್ತಾರೋ ಅದು ಯಾವಾಗ ಜ್ವಾಲಾಗ್ನಿಯಾಗಲಿದೆಯೋ ಕಾದು ನೋಡಬೇಕಿದೆ.

ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್‌ ಮೈತ್ರಿ : ಹೆಚ್​ಡಿಡಿ ಘೋಷಣೆ

ಬೆಂಗಳೂರು, ಅ.3- ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿ ಬಗ್ಗೆ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಹಂತದ ಚುನಾವಣೆಗಳಲ್ಲೂ ಎರಡೂ ಪಕ್ಷಗಳ ಮೈತ್ರಿ ಮುಂದುವರೆಯುತ್ತದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡರು ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಮುಂದಿನ ವಿಧಾನಸಭೆ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್‌‍ ಮೈತ್ರಿ ಮುಂದುವರೆಯುತ್ತದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಒಡನಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ನನ್ನ ಬಗ್ಗೆ ಪ್ರಧಾನಿಯವರು ಒಂದೇ ಒಂದು ಮಾತನ್ನೂ ಲಘುವಾಗಿ ಆಡಿಲ್ಲ. ಎರಡೂ ಪಕ್ಷಗಳ ನಡುವಿನ ಸಂಬಂಧ ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದರು. ಬಿಡದಿ ಟೌನ್‌ಶಿಪ್‌ ವಿರೋಧಿಸಿ ರೈತರು ಪ್ರತಿಭಟನೆ ಮಾಡುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ವಿಚಾರದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ. ನಮದು ಸಣ್ಣ ರಾಜಕೀಯ ಪಕ್ಷವಾಗಿದ್ದು, ಅದನ್ನು ಉಳಿಸಿ-ಬೆಳೆಸಲು ಶಕ್ತಿಮೀರಿ ಕೆಲಸ ಮಾಡುತ್ತೇವೆ. ಚುನಾವಣೆ ಬಂದಾಗ ಜನರು ತೀರ್ಪು ನೀಡುತ್ತಾರೆ. ಅಲ್ಲಿಯವರೆಗೂ ಕಾಯಲೇಬೇಕು ಎಂದು ಮಾರ್ಮಿಕವಾಗಿ ನುಡಿದರು.

ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಉಸ್ತುವಾರಿ ಸಚಿವರುಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಬೇಕು. ಇನ್ನೂ ಮೂರ್ನಾಲ್ಕು ದಿನಗಳ ನಂತರ ನಾನು ಕೂಡ ಗುಲ್ಬರ್ಗಾಕ್ಕೆ ಭೇಟಿ ನೀಡಿ ಅಲ್ಲಿ ಹಾನಿಗೊಳಗಾಗಿರುವ ಪ್ರದೇಶಗಳ ವಾಸ್ತವಾಂಶ ಹಾಗೂ ಸಂಕಷ್ಟದಲ್ಲಿರುವ ಜನರ ಅಭಿಪ್ರಾಯ ಪಡೆದು ನಂತರ ಪ್ರಧಾನಿಯವರಿಗೆ ಪತ್ರ ಬರೆಯುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯ ಸರ್ಕಾರ ಯಾವ ರೀತಿ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಸಕಾರಾತಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಲವಾರು ಹಳ್ಳಿಗಳು, ರಸ್ತೆ, ಸೇತುವೆಗಳು ನಾಶವಾಗಿವೆ. ಜೀವ ಹಾಗೂ ಬೆಳೆಹಾನಿಯಾಗಿದೆ. ಜಾನುವಾರುಗಳು ಮೃತಪಟ್ಟಿವೆ ಎಂದರು. ಇದೇ ಮೊದಲ ಬಾರಿಗೆ ಭೀಮಾ ನದಿಯಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ರಾಜ್ಯ ಸರ್ಕಾರದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ ಎಂದು ಕಾಂಗ್ರೆಸ್‌‍ ಶಾಸಕರೇ ಹೇಳುತ್ತಿದ್ದಾರೆ. ಅವರಲ್ಲೇ ಗೊಂದಲವಿದೆ. ಇಂತಹ ಪರಿಸ್ಥಿತಿ ಉಂಟಾದಾಗ ರಾಜ್ಯ ಸರ್ಕಾರ ಶಕ್ತಿ ಮೀರಿ ಜನರಿಗೆ ಸಹಾಯ ಮಾಡುವ ಜವಾಬ್ದಾರಿ ಇದೆ ಎಂದು ಹೇಳಿದರು. ಮಹಿಳಾ ಸಮಾವೇಶ: ಅಕ್ಟೋಬರ್‌ 12ರಂದು ಮಹಿಳಾ ಸಮಾವೇಶ ನಡೆಸಿ ನಮ ಶಕ್ತಿ ಪ್ರದರ್ಶನ ಮಾಡಲಾಗುವುದು. ಸಾಧ್ಯವಾದರೆ ಅರಮನೆ ಮೈದಾನದಲ್ಲೇ ಈ ಸಮಾವೇಶ ನಡೆಸಲಾಗುವುದು. ಬೆಂಗಳೂರು ನಗರ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ಅವರು ಜಿಬಿಎ ಚುನಾವಣೆಯಲ್ಲಿ 40 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಜಿಬಿಎ ಮಾತ್ರವಲ್ಲ, ಜಿಪಂ, ತಾಪಂ ಚುನಾವಣೆಯಲ್ಲೂ ನಮ ಮಹಿಳಾ ಶಕ್ತಿ ಪ್ರದರ್ಶನವಾಗಬೇಕು. ಹಾಗಾಗಿ ಒಂದು ಬೃಹತ್‌ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು 60 ರಿಂದ 65 ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಅವರು ಸೋತ ನಂತರ ತಮ ಅನುಭವವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಿದೆ. ನನಗೆ ಮಂಡಿನೋವು ಹೊರತುಪಡಿಸಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಟಿ.ಎನ್‌.ಜವರಾಯಿಗೌಡ, ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌, ಮಾಜಿ ಶಾಸಕ ಎಚ್‌.ನಿಂಗಪ್ಪ, ಬೆಂಗಳೂರು ಮಹಾನಗರ ಜೆಡಿಎಸ್‌‍ ಘಟಕದ ಅಧ್ಯಕ್ಷ ರಮೇಶ್‌ಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಕೆ.ಎನ್‌.ತಿಪ್ಪೇಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ ಮತ್ತಿತರರಿದ್ದರು.

ದಸರಾ ಅವಾಂತರ : ಟಿಕೆಟ್‌ ಪಡೆದರೂ ಸಿಗದ ಪ್ರವೇಶ

ಬೆಂಗಳೂರು,ಅ.3- ನಾಡಹಬ್ಬ ಮೈಸೂರು ದಸರಾ ಆಚರಣೆ ವೇಳೆ ಅವ್ಯವಸ್ಥೆಯ ಜೊತೆಗೆ ಅವ್ಯವಹಾರ ನಡೆದಿದ್ದು, ಟಿಕೆಟ್‌ ಪಡೆದರೂ ಪ್ರವೇಶ ಸಿಗದ ಪ್ರವಾಸಿಗರು ಹಾಗೂ ಜನಸಾಮಾನ್ಯರಲ್ಲಿ ರಾಜ್ಯ ಸರ್ಕಾರ ಕೂಡಲೇ ಕ್ಷಮೆ ಕೇಳಿ ಟಿಕೆಟ್‌ ಹಣವನ್ನು ತತ್‌ ಕ್ಷಣವೇ ಹಿಂತಿರುಗಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌ ಒತ್ತಾಯಿಸಿದ್ದಾರೆ. ಈ ಸಬಂಧ ತಮ ಸಾಮಾಜಿಕ ಜಾಲ ತಾಣ X ನಲ್ಲಿ ಸರ್ಕಾರದ ವಿರುದ್ದ ಪ್ಟೋ್‌ ಮಾಡಿರುವ ಅವರು, ನಾಡಹಬ್ಬ ದಸರಾ ಆಚರಣೆಯಲ್ಲೂ ಕಾಂಗ್ರೆಸ್‌‍ ಸರ್ಕಾರದ ಅವ್ಯವಸ್ಥೆ ಮತ್ತು ಅವ್ಯವಹಾರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ವೀಕ್ಷಣೆಗೆ ಸಾವಿರಾರು ರೂಪಾಯಿ ಕೊಟ್ಟು ಗೋಲ್ಡ್‌‍ ಕಾರ್ಡ್‌, ವಿಐಪಿ ಟಿಕೆಟ್‌ ಪಡೆದಿದ್ದರೂ ಒಳಗೆ ಪ್ರವೇಶ ಸಿಗದೇ ಪ್ರವಾಸಿಗರು ಪರದಾಡಿದ್ದಾರೆ. ಕಾಂಗ್ರೆಸ್‌‍ ಸರ್ಕಾರ ನಾಡಹಬ್ಬ ದಸರಾ ಆಚರಣೆಯ ಬಗ್ಗೆ ಎಷ್ಟು ನಿರ್ಲಕ್ಷ್ಯ, ಅಸಡ್ಡೆ ತೋರಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎಂದು ವಾಗ್ದಳಿ ನಡೆಸಿದ್ದಾರೆ.

ಪ್ರವೇಶ ನೀಡಲು ಸಾಧ್ಯವಾಗದ ಮೇಲೆ 6,500 ಪಡೆದು ಗೋಲ್ಡ್‌‍ ಕಾರ್ಡ್‌ ಯಾಕೆ ವಿತರಿಸಬೇಕಿತ್ತು? ಲಭ್ಯವಿರುವ ಸ್ಥಳಾವಕಾಶಕ್ಕಿಂತ ಹೆಚ್ಚು ಗೋಲ್ಡ್‌‍ ಕಾರ್ಡ್‌ ಮಾರಾಟ ಮಾಡುವ ನಿರ್ಧಾರ ಯಾರದ್ದು? ಇದರ ಯೋಜನೆ, ನಿರ್ವಹಣೆಯ ಜವಾಬ್ದಾರಿ ಯಾರದ್ದು? ಈ ಎಲ್ಲ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಉತ್ತರಿಸಬೇಕು ಎಂದು ಅಶೋಕ್‌ ಆಗ್ರಹಿಸಿದ್ದಾರೆ.

ಬನ್ನಿ ಉತ್ಸವದ ಕಾಳಗಕ್ಕೆ ಇಬ್ಬರು ಬಲಿ, 90 ಮಂದಿಗೆ ಗಾಯ

0

ದೇವರಗಟ್ಟು, ಅ. 3 (ಪಿಟಿಐ) ಆಂಧ್ರ ಪ್ರದೇಶದ ಕರ್ನೂಲ್‌ ಜಿಲ್ಲೆಯ ದೇವರಗಟ್ಟು ಬನ್ನಿ ಉತ್ಸವದ ಅಂಗವಾಗಿ ಆಯೋಜಿಸಲಾದ ಕೋಲು ಕಾಳಗದಲ್ಲಿ ಇಬ್ಬರು ಸಾವನ್ನಪ್ಪಿದ್ದು, 90 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಜಯ ದಶಮಿಯಂದು ಆಚರಿಸಲಾಗುವ ಬನ್ನಿ ಉತ್ಸವವು ಮಲೆ ಮಲ್ಲೇಶ್ವರ ಸ್ವಾಮಿಯ ವಿವಾಹದ ನಂತರ ಮಧ್ಯರಾತ್ರಿಯ ಆಚರಣೆಗಳ ನಂತರ ಪ್ರಾರಂಭವಾಗಿ ಮುಂಜಾನೆ ಮುಕ್ತಾಯಗೊಳ್ಳುತ್ತಿತ್ತು, ವಾರ್ಷಿಕವಾಗಿ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಗ್ರಾಮಸ್ಥರನ್ನು ಆಕರ್ಷಿಸುತ್ತಿತ್ತು.

ಉಪವಾಸ, ಬ್ರಹ್ಮಚರ್ಯ ಮತ್ತು ಆಹಾರ ಪದ್ಧತಿಯ ಕಟ್ಟುನಿಟ್ಟಿನ ಪ್ರತಿಜ್ಞೆಗಳನ್ನು ಅನುಸರಿಸಿ ಭಾಗವಹಿಸುವವರು, ವಿಗ್ರಹವನ್ನು ಸಾಂಕೇತಿಕವಾಗಿ ಸೆರೆಹಿಡಿಯಲು ಸಾಂಪ್ರದಾಯಿಕ ಕೋಲು ಕಾಳಗಗಳಲ್ಲಿ ತೊಡಗುತ್ತಾರೆ, ಕಾರ್ಯಕ್ರಮದ ಸಮಯದಲ್ಲಿ ಸಣ್ಣಪುಟ್ಟ ಗಾಯಗಳಿಗೆ ಅರಿಶಿನವನ್ನು ಹಚ್ಚುತ್ತಾರೆ. ಒಬ್ಬರು ತಲೆಗೆ ತೀವ್ರವಾದ ಗಾಯದಿಂದ ಸಾವನ್ನಪ್ಪಿದರೆ, ಇನ್ನೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಉಪ-ಸಂಗ್ರಾಹಕ ಮೌರ್ಯ ಭಾರದ್ವಾಜ್‌ ಹೇಳಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಾಯಗಳು ಕಡಿಮೆ ಎಂದು ಅವರು ಹೇಳಿದರು.

ಕರ್ನೂಲ್‌ ಜಿಲ್ಲೆಯಲ್ಲಿ ದೇವರಗಟ್ಟು ಬನ್ನಿ ಉತ್ಸವದ ಕೋಲು ಕಾಳಗದಲ್ಲಿ ಇಬ್ಬರು ಸಾವನ್ನಪ್ಪಿದರು ಮತ್ತು 90 ಜನರು ಗಾಯಗೊಂಡರು ಎಂದು ಮೌರ್ಯ ಸುದ್ದಿಗಾರರಿಗೆ ತಿಳಿಸಿದರು. ಈ ವರ್ಷ ಸುಮಾರು 1,000 ಪೊಲೀಸ್‌‍ ಸಿಬ್ಬಂದಿ ಮತ್ತು 10 ಡ್ರೋನ್‌ಗಳನ್ನು ನಿಯೋಜಿಸಲಾಗಿದ್ದು, 16 ಗ್ರಾಮಗಳಲ್ಲಿ 32 ಕ್ಕೂ ಹೆಚ್ಚು ಜಾಗೃತಿ ಅಭಿಯಾನಗಳು ಹಿಂಸಾತ್ಮಕ ಘರ್ಷಣೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಿವೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ (ಎಸ್‌‍ಪಿ) ವಿಕ್ರಾಂತ್‌ ಪಾಟೀಲ್‌ ಹೇಳಿದ್ದಾರೆ.

ಆಗಾಗ್ಗೆ ಗಾಯಗಳಾಗಿದ್ದರೂ, ಗ್ರಾಮಸ್ಥರು ಪ್ರಾಚೀನ ಪದ್ಧತಿಗಳನ್ನು ಎತ್ತಿಹಿಡಿಯುತ್ತಿರುವುದರಿಂದ, ಅಧಿಕಾರಿಗಳು ಸಂಪ್ರದಾಯವನ್ನು ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯೊಂದಿಗೆ ಸಮತೋಲನಗೊಳಿಸುತ್ತಿರುವುದರಿಂದ ಉತ್ಸವವು ಸಂಯಮ ಮತ್ತು ಭಕ್ತಿಯಿಂದ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಕೃಷಿ ಉತ್ಪನ್ನ, ಔಷಧಿ ಮತ್ತಿತರ ವಸ್ತು ಖರೀದಿಗೆ ರಷ್ಯಾ ನಿರ್ಧಾರ

ಮಾಸ್ಕೋ, ಅ. 3 (ಪಿಟಿಐ) ನವದೆಹಲಿಯಿಂದ ಭಾರೀ ಕಚ್ಚಾ ತೈಲ ಆಮದು ಉಂಟಾಗಿರುವುದರಿಂದ ಭಾರತದೊಂದಿಗೆ ವ್ಯಾಪಾರ ಅಸಮತೋಲನವನ್ನು ತಗ್ಗಿಸಲು ಭಾರತದಿಂದ ಹೆಚ್ಚಿನ ಕೃಷಿ ಉತ್ಪನ್ನಗಳು ಮತ್ತು ಔಷಧಿಗಳನ್ನು ಖರೀದಿಸುವುದು ಸೇರಿದಂತೆ ಇನ್ನಿತರ ಕ್ರಮಗಳನ್ನು ರೂಪಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆದೇಶಿಸಿದ್ದಾರೆ. ಡಿಸೆಂಬರ್‌ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಾರ್ಷಿಕ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ವಾರಗಳ ಮೊದಲು ಪುಟಿನ್‌ ಅವರ ಘೋಷಣೆ ಬಂದಿದೆ.

ದಕ್ಷಿಣ ರಷ್ಯಾದ ಸೋಚಿಯ ಕಪ್ಪು ಸಮುದ್ರದ ರೆಸಾರ್ಟ್‌ನಲ್ಲಿ ಭಾರತ ಸೇರಿದಂತೆ 140 ದೇಶಗಳ ಭದ್ರತಾ ಮತ್ತು ಭೌಗೋಳಿಕ ರಾಜಕೀಯ ತಜ್ಞರ ಅಂತರರಾಷ್ಟ್ರೀಯ ವಾಲ್ಡೈ ಚರ್ಚಾ ವೇದಿಕೆಯಲ್ಲಿ ರಷ್ಯಾದ ಅಧ್ಯಕ್ಷರು ಮಾತನಾಡುತ್ತಿದ್ದರುಅಮೆರಿಕದ ದಂಡನಾತ್ಮಕ ಸುಂಕಗಳಿಂದಾಗಿ ಭಾರತ ಎದುರಿಸುತ್ತಿರುವ ನಷ್ಟಗಳನ್ನು ರಷ್ಯಾದಿಂದ ಕಚ್ಚಾ ತೈಲ ಆಮದುಗಳಿಂದ ಸಮತೋಲನಗೊಳಿಸಲಾಗುತ್ತದೆ, ಜೊತೆಗೆ ಅದು ಸಾರ್ವಭೌಮ ರಾಷ್ಟ್ರವಾಗಿ ಪ್ರತಿಷ್ಠೆಯನ್ನು ಪಡೆಯುತ್ತದೆ ಎಂದು ಪುಟಿನ್‌ ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ನವದೆಹಲಿಯ ಮೇಲೆ ವಿಧಿಸಿದ ಹೆಚ್ಚುವರಿ 25 ಪ್ರತಿಶತ ಸುಂಕವನ್ನು ರಷ್ಯಾದ ತೈಲ ಖರೀದಿಗೆ ದಂಡವಾಗಿ ಉಲ್ಲೇಖಿಸುತ್ತಿದ್ದರು, ಇದು ಭಾರತದ ಮೇಲೆ ಅಮೆರಿಕ ವಿಧಿಸಿದ ಒಟ್ಟು ಸುಂಕಗಳನ್ನು ಶೇಕಡಾ 50 ಕ್ಕೆ ತರುತ್ತದೆ.ವ್ಯಾಪಾರ ಅಸಮತೋಲನವನ್ನು ತೆಗೆದುಹಾಕಲು, ರಷ್ಯಾ ಭಾರತದಿಂದ ಹೆಚ್ಚಿನ ಕೃಷಿ ಉತ್ಪನ್ನಗಳು ಮತ್ತು ಔಷಧಿಗಳನ್ನು ಖರೀದಿಸಬಹುದು ಎಂದು ಪುಟಿನ್‌ ಹೇಳಿದರು.

ಭಾರತದಿಂದ ಹೆಚ್ಚಿನ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು. ಔಷಧೀಯ ಉತ್ಪನ್ನಗಳು, ಔಷಧಗಳಿಗೆ ಸಂಬಂಧಿಸಿದಂತೆ ನಮ್ಮ ಕಡೆಯಿಂದ ಕೆಲವು ಕ್ರಮಗಳನ್ನು ಕೈಗೊಳ್ಳಬಹುದು ಎಂದು ಪುಟಿನ್‌ ಹೇಳಿದರು.ಭಾರತೀಯ ಸ್ನೇಹಿತರು ಮತ್ತು ಸಹವರ್ತಿಗಳಿಗೆ ಸಹಕಾರದ ಅತ್ಯಂತ ಭರವಸೆಯ ಕ್ಷೇತ್ರಗಳು ಮತ್ತು ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿನ ಅಸಮತೋಲನವನ್ನು ರಷ್ಯಾ ಹೇಗೆ ಸುಗಮಗೊಳಿಸಬಹುದು ಎಂಬ ಬಗ್ಗೆ ಪ್ರಸ್ತಾವನೆಗಳನ್ನು ಪರಿಗಣಿಸಲು ರಷ್ಯಾ ಸರ್ಕಾರಕ್ಕೆ ಸೂಚಿಸಿದ್ದೇನೆ ಎಂದು ಅಧ್ಯಕ್ಷರು ಹೇಳಿದರು.

ರಷ್ಯಾ ಮತ್ತು ಭಾರತದ ನಡುವಿನ ಆರ್ಥಿಕ ಸಹಕಾರಕ್ಕೆ ವ್ಯಾಪಕವಾದ ಸಾಮರ್ಥ್ಯವನ್ನು ಪುಟಿನ್‌ ಗಮನಿಸಿದರು ಆದರೆ ಈ ಅವಕಾಶಗಳನ್ನು ಸಂಪೂರ್ಣವಾಗಿ ಅನ್ಲಾಕ್‌ ಮಾಡಲು ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಒಪ್ಪಿಕೊಂಡರು.ಹೋಲಿಕೆಗಾಗಿ, ರಷ್ಯಾ ಮತ್ತು ಭಾರತದ ನಡುವಿನ ವ್ಯಾಪಾರ ವಹಿವಾಟು ಸುಮಾರು 63 ಬಿಲಿಯನ್‌ ಮತ್ತು ಬೆಲಾರಸ್‌‍ನೊಂದಿಗೆ 50 ಬಿಲಿಯನ್‌ ಆಗಿದೆ ಎಂದು ಅವರು ಹೇಳಿದರು. ಅದೇ ಸಮಯದಲ್ಲಿ, ಭಾರತದಲ್ಲಿ ಜನಸಂಖ್ಯೆ 1.5 ಬಿಲಿಯನ್‌ ಮತ್ತು ಬೆಲಾರಸ್‌‍ನಲ್ಲಿ 10 ಮಿಲಿಯನ್‌‍. ಇದು ನಮ್ಮ ಸಂಭಾವ್ಯ ಅವಕಾಶಗಳಿಗೆ ಸ್ಪಷ್ಟವಾಗಿ ಹೊಂದಿಕೆಯಾಗುವುದಿಲ್ಲ ಎಂದು ಪುಟಿನ್‌ ಒತ್ತಿ ಹೇಳಿದರು.

ನಮ್ಮ ಅವಕಾಶಗಳು ಮತ್ತು ಸಂಭಾವ್ಯ ಅನುಕೂಲಗಳನ್ನು ಅನ್ಲಾಕ್‌ ಮಾಡಲು ನಾವು ಸಂಪೂರ್ಣ ಶ್ರೇಣಿಯ ಕಾರ್ಯಗಳನ್ನು ಪರಿಹರಿಸಬೇಕಾಗಿದೆ ಎಂದು ಪುಟಿನ್‌ ಹೇಳಿದರು, ಹಣಕಾಸು, ಲಾಜಿಸ್ಟಿಕ್‌್ಸ ಮತ್ತು ಪಾವತಿ ಅಡಚಣೆಗಳನ್ನು ಪ್ರಮುಖ ಕಾಳಜಿಗಳಾಗಿ ಗುರುತಿಸಿದರು.ರಷ್ಯಾ ಭಾರತದೊಂದಿಗೆ ಯಾವುದೇ ಸಮಸ್ಯೆಗಳನ್ನು ಅಥವಾ ಅಂತರರಾಜ್ಯ ಉದ್ವಿಗ್ನತೆಯನ್ನು ಎಂದಿಗೂ ಹೊಂದಿರಲಿಲ್ಲ ಎಂದು ಪುಟಿನ್‌ ಒತ್ತಿ ಹೇಳಿದರು ಮತ್ತು ಎರಡೂ ದೇಶಗಳು ಯಾವಾಗಲೂ ಆಯಾ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮಗಳನ್ನು ತೆಗೆದುಕೊಂಡವು ಎಂದು ಗಮನಿಸಿದರು.

ವಿಶೇಷವಾಗಿ ರಷ್ಯಾದಿಂದ ತೈಲ ಆಮದುಗಳನ್ನು ನಿಲ್ಲಿಸಲು ಅಮೆರಿಕದ ಒತ್ತಡವನ್ನು ನಿರ್ಲಕ್ಷಿಸುವ ಭಾರತದ ನಿರ್ಧಾರದ ಬಗ್ಗೆ.ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಸವಲತ್ತು ಪಾಲುದಾರಿಕೆಯ ಘೋಷಣೆಯು ಶೀಘ್ರದಲ್ಲೇ ತನ್ನ 15 ನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ ಎಂದು ಪುಟಿನ್‌ ನೆನಪಿಸಿಕೊಂಡರು. ಅವರು ತಮ್ಮ ರಾಜಕೀಯ ಸಂಬಂಧಗಳಲ್ಲಿ, ರಷ್ಯಾ ಮತ್ತು ಭಾರತ ಯಾವಾಗಲೂ ತಮ್ಮ ಕಾರ್ಯಗಳನ್ನು ಸಮನ್ವಯಗೊಳಿಸುತ್ತವೆ ಎಂದು ಗಮನಿಸಿದರು.