ಬ್ರಿಸ್ಬೇನ್, ಡಿ.13- ಈಶಾನ್ಯ ಆಸ್ಟ್ರೇಲಿಯಾದ ಕರಾವಳಿ ಕಡೆಗೆ ಜಾಸ್ಪರ್ ಚಂಡಮಾರುತ ಬರುತ್ತಿರುವುದರಿಂದ ಪ್ರಬಲವಾದ ಗಾಳಿ ಬೀಸುತ್ತಿದ್ದು,ವಾಹನ ಸಂಚಾರ ಬಂದ್ ಮಾಡಿ ಎಚ್ಚರಿಕೆ ಸಮದೇಶ ನೀಡಲಾಗಿದೆ.ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೇನ್ಸ್‍ರ್ ವಿಮಾನ ನಿಲ್ದಾಣವನ್ನು ತಡರಾತ್ರಿ ಮುಚ್ಚಲಾಗಿದೆ.ಇಂದು ರಾತ್ರಿ ವೇಳೆಗೆ ಆಸ್ಟ್ರೇಲಿಯಾದ ಕರಾವಳಿಯನ್ನು ದಾಟುವ
ಜಾಸ್ಪರ್ ಚಂಡಮಾರುತದಿಂದ ಈಗಗಾಲೆ ಅವಾಂತರ ಸೃಷ್ಠಿಯಾಗಿದೆ. ಕರಾವಳಿ ಸಮೀಪದಲ್ಲಿರುವ ಮರಗಳು ಬುಡಮೇಲಾಗಿದೆ.ತಗ್ಗು ಪ್ರದೇಶಗಳಲ್ಲಿನ ಮನೆಗಳು ಹಾನಿಯಾಗಿದೆ.
ಚಂಡಮಾರುತವು ಕ್ವೀನ್ಸ್‍ಲ್ಯಾಂಡ್ ಕರಾವಳಿಯನ್ನು ದಾಟುವ ಸಾಧ್ಯತೆ ಇದ್ದು,ಕೇನ್ರ್ಸ್ ನಗರದಿಂದ ಉತ್ತರಕ್ಕೆ ಹೋಪ್ ವೇಲ್‍ವರೆಗೆ ವಿರಳ ಜನಸಂಖ್ಯೆಯ ಪ್ರದೇಶ ಹಾದು ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆಯಿದೆ ಗಾಳಿಯ ವೇಗ 200 ರಿಂದ 140 ಕಿ.ಮಿ ಇರಬಹುದು,ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ಕ್ವೀನ್ಸ್‍ಲ್ಯಾಂಡ್ ರಾಜ್ಯ ಉಪ ಪ್ರೀಮಿಯರ್ ಸ್ಟೀವನ್ ಮೈಲ್ಸ್ ಬ್ರಿಸ್ಬೇನ್‍ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ನಾಯಕರನ್ನು ಜೀವಂತ ಸಮಾಧಿ ಮಾಡಲು ಸಿಪಿಐ(ಎಂ) ನಿರ್ಧರಿಸಿತ್ತು : ಸಹಾ
90 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನುತೊರೆದಿದ್ದಾರೆ,ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಪರಿಸ್ಥಿತಿಗಳು ಹದಗೆಡುವ ಮೊದಲು ಪರಿಹಾರ ಕೇಂದ್ರಗಳಿಗೆ ತೆರಳಲು ಎಂದು ಪೊಲೀಸ್ ಉಪ ಆಯುಕ್ತ ಶೇನ್ ಚೆಲೆಪಿ ತಿಳಿಸಿದ್ದಾರೆ.ಮಳೆ ಶುರುವಾಗಿದೆ ಜಾಸ್ಪರ್‍ಚಂಡ ಮಾರುತ ಕರಾವಳಿಯನ್ನು ದಾಟುತ್ತಿದ್ದಂತೆ ಭಾರಿ ವರ್ಷಧಾರೆಯಾಗಿ ಹಠಾತ್ ಪ್ರವಾಹ ದೊಡ್ಡ ಅಪಾಯವನ್ನುಂಟು ಮಾಡಬಹುದು ಎಂದು ಸರ್ಕಾರಿ ಹವಾಮಾನಶಾಸಜ್ಞ ಲಾರಾ ಬೋಕೆ ಹೇಳಿದ್ದಾರೆ.
ಚಂಡಮಾರುತವು ಒಳನಾಡಿಗೆ ಚಲಿಸುತ್ತಿದ್ದಂತೆ ಗಾಳಿಯು ತ್ವರಿತವಾಗಿ ದುರ್ಬಲಗೊಳ್ಳುವ ನಿರೀಕ್ಷೆಯಿದ್ದರೂ,ಮಳೆಯು ಹಲವು ದಿನಗಳವರೆಗೆ ಮುಂದುವರಿಯಬಹುದು. ನದಿಯ ಪ್ರವಾಹ ಮತ್ತು ಚಂಡಮಾರುತದ ಉಲ್ಬಣದ ಅಪಾಯವಿದೆ ಎಂದು ಬೋಕೆ ಹೇಳಿದರು. ನಾವು ದೊಡ್ಡ ಪ್ರಮಾಣದ ಹಾನಿಯನ್ನು ನೋಡುತ್ತೇವೆ ಹೇಳಿದ್ದಾರೆ. ನಗರದ 1.60,000 ನಿವಾಸಿಗಳು ಮುಂದಿನ ಐದು ದಿನಗಳವರೆಗೆ ವಿದ್ಯುತ್ ಇಲ್ಲದೆ ಕಾಲಕಳೆಯವ ಪರಿಸೀತಿಗೆ ಸಿದ್ಧಪಡಿಸುವಂತೆ ಕೈನ್ರ್ಸ್ ನಗರದ ಮೇಯರ್ ಟೆರ್ರಿ ಜೇಮ್ಸï ಆತಂಕ ವ್ಯಕ್ತಪಡಿಸಿದ್ದಾರೆ.