Home ಇದೀಗ ಬಂದ ಸುದ್ದಿ ಪುನಿತ್‌ ಕೆರೆಹಳ್ಳಿಗೆ ಪೊಲೀಸರ ಹಲ್ಲೆ : ಠಾಣೆ ಎದುರು ಪ್ರತಾಪ್‌ ಸಿಂಹ ಪ್ರತಿಭಟನೆ

ಪುನಿತ್‌ ಕೆರೆಹಳ್ಳಿಗೆ ಪೊಲೀಸರ ಹಲ್ಲೆ : ಠಾಣೆ ಎದುರು ಪ್ರತಾಪ್‌ ಸಿಂಹ ಪ್ರತಿಭಟನೆ

0
ಪುನಿತ್‌ ಕೆರೆಹಳ್ಳಿಗೆ ಪೊಲೀಸರ ಹಲ್ಲೆ : ಠಾಣೆ ಎದುರು ಪ್ರತಾಪ್‌ ಸಿಂಹ ಪ್ರತಿಭಟನೆ

ಬೆಂಗಳೂರು,ಜು.31- ಮಾಜಿ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಇಂದು ಬೆಳಗ್ಗೆ ಬಸವೇಶ್ವರ ನಗರ ಠಾಣೆ ಮುಂದೆ ಜಮಾಯಿಯಿಸಿ ಪ್ರತಿಭಟನೆ ನಡೆಸಿದರು.

ಹಿಂದೂ ಕಾರ್ಯಕರ್ತ ಪುನಿತ್‌ ಕೆರೆಹಳ್ಳಿ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿರುವ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿ ನಂತರ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಕಳೆದ ವಾರ ರಾಜಸ್ಥಾನದಿಂದ ನಗರದ ರೈಲ್ವೆ ನಿಲ್ದಾಣಕ್ಕೆ ಬಂದ ಮಾಂಸ ಕಳಪೆಯಾಗಿದೆ. ಅದು ಕುರಿಯದ್ದಲ್ಲ, ನಾಯಿಯ ಮಾಂಸವೆಂದು ಗಲಾಟೆ ಮಾಡಿದ್ದರು.

ಆ ಸಂದರ್ಭದಲ್ಲಿ ಸ್ಥಳಕ್ಕೆ ಕಾಟನ್‌ಪೇಟೆ ಪೊಲೀಸರು ಆಗಮಿಸಿದ್ದಾಗ ಪುನಿತ್‌ ಕೆರೆಹಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಗಲಾಟೆ ಮಾಡಿದ್ದರಿಂದ ಅವರನ್ನು ಬಂಧಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ಇದೀಗ ಪುನೀತ್‌ ಕೆರೆಹಳ್ಳ ಜಾಮೀನು ಪಡೆದು ಹೊರಬಂದಿದ್ದಾರೆ.