Home ಇದೀಗ ಬಂದ ಸುದ್ದಿ ದಲಿತರ ಹೆಸರು ಹೇಳಿ ಗೆದ್ದು ಅವರ ಹಣವನ್ನೇ ಲೂಟಿ ಮಾಡಿದ ಕಾಂಗ್ರೆಸ್‌‍ ಸರ್ಕಾರ : ಅಶೋಕ್‌ ಕಿಡಿ

ದಲಿತರ ಹೆಸರು ಹೇಳಿ ಗೆದ್ದು ಅವರ ಹಣವನ್ನೇ ಲೂಟಿ ಮಾಡಿದ ಕಾಂಗ್ರೆಸ್‌‍ ಸರ್ಕಾರ : ಅಶೋಕ್‌ ಕಿಡಿ

0
ದಲಿತರ ಹೆಸರು ಹೇಳಿ ಗೆದ್ದು ಅವರ ಹಣವನ್ನೇ ಲೂಟಿ ಮಾಡಿದ ಕಾಂಗ್ರೆಸ್‌‍ ಸರ್ಕಾರ : ಅಶೋಕ್‌ ಕಿಡಿ

ಬೆಂಗಳೂರು,ಜು.15- ರಾಜ್ಯದ ಇತಿಹಾಸದಲ್ಲಿ 187 ಕೋಟಿ ದಲಿತರ ಹಣ ಲೂಟಿಯಾಗಿದೆ. ದಲಿತರ ಪರ ಹೇಳುತ್ತಾ ಮತ ಪಡೆದ ಕಾಂಗ್ರೆಸ್‌‍ ಅವರ ಹಣವನ್ನೇ ಲೂಟಿ ಹೊಡೆದಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದರು.

ಈ ಸರ್ಕಾರ ನೈತಿಕವಾಗಿ ಸತ್ತು ಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮರ್ಯಾದೆ ಇದ್ದರೆ ಕೂಡಲೇ ತಮ ಸ್ಥಾನಕ್ಕೆ ರಾಜೀನಾಮೆ ಕೋಡಬೇಕು ಎಂದು ಆಗ್ರಹಿಸಿದರು. 187 ಕೋಟಿ ಲೂಟಿ ಮಾಡಿರುವ ಕಾಂಗ್ರೆಸ್‌‍ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸದನದ ಒಳಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಸಿಎಂ ತಮನ್ನು ರಕ್ಷಣೆ ಮಾಡಿಕೊಳ್ಳಲು ಆಗಲು ನಿವೃತ್ತ ನ್ಯಾಯಮೂರ್ತಿಗಳ ಮುಖಾಂತರ ನ್ಯಾಯಾಂಗ ತನಿಖೆ ಮಾಡಿಸುತ್ತಿದ್ದಾರೆ. ಇವರ ಮೇಲೆ ಆರೋಪ ಬಂದರೆ ನ್ಯಾಯಂಗ ತನಿಖೆ. ಯಡಿಯೂರಪ್ಪ ಮೇಲಾದರೆ ಎಸ್‌‍ಐಟಿ ತನಿಖೆಯೇ? ಎಂದು ವ್ಯಂಗ್ಯವಾಡಿದರು.

ಶಾಸಕ ಅಶ್ವಥನಾರಾಯಣ್‌ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆಮುಡಾ ಹಗರಣದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿದ್ದಾ. ಸಿಬಿಐಗೆ ಹಸ್ತಾಂತರ ಮಾಡಬೇಕಿತ್ತು. ಸಿಎಂ ರಾಜೀನಾಮೆ ಕೊಡಬೇಕು. ಕಾಂಗ್ರೆಸ್‌‍ಗೆ ನೈತಿಕತೆ ಇಲ್ಲ, ಹೈಕಮಾಂಡ್‌ ನಾಯಕರೂ ಕೂಡ ಪ್ರತಿಕ್ರಿಯೆ ನೀಡಿಲ್ಲ. ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿ ಚರ್ಚಿಸುತ್ತೇವೆ ಎಂದರು.