ಬೆಳ್ಳಂಬೆಳಿಗ್ಗೆ ಕುಖ್ಯಾತ ರೌಡಿಶೀಟರ್‌ ಚೈಲ್ಡ್ ರವಿಯ ಬರ್ಬರ ಹತ್ಯೆ

ಹಾಸನ, ಜೂ. 5- ಬೆಳ್ಳಂಬೆಳಿಗ್ಗೆ ಕುಖ್ಯಾತ ರೌಡಿಶೀಟರ್‌ ಚೈಲ್ಡ್ ರವಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೇಮಾವತಿ ನಗರ ಬಡಾವಣೆಯಲ್ಲಿ ನಡೆದಿದೆ. ಕುಡಿಯಲು ನೀರು ತರಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಸಾರ್ವಜನಿಕರು ಓಡಾಡುತ್ತಿದ್ದ ಸಮಯದಲ್ಲೇ ಬೈಕಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದಾರೆ. ವಾಯುವಿಹಾರ ಮಾಡುತ್ತಿದ್ದ ಜನರು ಶಾಲೆಗೆ ಹೋಗಲು ಬಸ್‌‍ಗಾಗಿ ಕಾಯುತ್ತಿದ್ದ ಮಕ್ಕಳು ಹಾಗೂ ಅಂಗಡಿಗಳಲ್ಲಿ ದಿನನಿತ್ಯ ವಸ್ತುಗಳನ್ನು ಖರೀದಿ … Continue reading ಬೆಳ್ಳಂಬೆಳಿಗ್ಗೆ ಕುಖ್ಯಾತ ರೌಡಿಶೀಟರ್‌ ಚೈಲ್ಡ್ ರವಿಯ ಬರ್ಬರ ಹತ್ಯೆ