Thursday, September 19, 2024
Homeಮನರಂಜನೆಆಕ್ಷನ್‌ ಬಿಟ್ಟು ಭಿನ್ನ ಚಿತ್ರಗಳತ್ತ ಮುಖಮಾಡಿದ ಸಲ್ಲು ಭಾಯ್

ಆಕ್ಷನ್‌ ಬಿಟ್ಟು ಭಿನ್ನ ಚಿತ್ರಗಳತ್ತ ಮುಖಮಾಡಿದ ಸಲ್ಲು ಭಾಯ್

ನವದೆಹಲಿ,ಆ.17- ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್‌ ಭಾಯ್‌ಜಾನ್‌ ಸಲಾನ್‌ಖಾನ್‌ ಅವರು ಇದೀಗ ಭಿನ್ನ ಮಾದರಿಯ ಸಿನಿಮಾ ನಿರ್ದೇಶಕರಿಗೆ ಕಾಲ್‌ಶೀಟ್‌ ನೀಡಿದ್ದಾರೆ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಟೈಗರ್‌-3 ಸಿನಿಮಾ ಕೂಡ ಕೈಕೊಟ್ಟಿದ್ದರಿಂದ ಸಲಾನ್‌ಖಾನ್‌ ಆಕ್ಷನ್‌ ಚಿತ್ರಗಳಿಗೆ ಗುಡ್‌ಬೈ ಹೇಳಿ ಭಿನ್ನ ಪಾತ್ರಗಳಲ್ಲಿ ನಟಿಸಲು ಮನಸು ಮಾಡಿದ್ದಾರೆ.

ಕ್ಲಾಸಿಕ್‌ ಎನಿಸಿಕೊಂಡಿರುವ ಜಿಂದಗಿ ನಾ ಮಿಲೇಗಿ ದುಬಾರಾ, ಗಲ್ಲಿ ಬಾಯ್‌‍ ಇನ್ನಿತರೆ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಜನಪ್ರಿಯ ನಿರ್ದೇಶಕಿ ಜೋಯಾ ಅಖ್ತರ್‌ ಜೊತೆಗೆ ಸಲಾನ್‌ ಖಾನ್‌ ಕೈ ಜೋಡಿಸಿದ್ದಾರೆ. ಜೋಯಾ ಅಖ್ತರ್‌ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಸಲಾನ್‌ ಖಾನ್‌ ನಟಿಸಲಿದ್ದಾರೆ. ಸಲಾನ್‌ ಖಾನ್‌ರ ಈ ಹಿಂದಿ ಸಿನಿಮಾಗಳ ರೀತಿ ಅಲ್ಲದೆ, ಬಹಳ ಭಿನ್ನವಾದ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆಯಂತೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಜೋಯಾ ಅಖ್ತರ್‌ ಅವರು, ಸಲಾನ್‌ ಖಾನ್‌ ಜೊತೆಗೆ ಕೆಲಸ ಮಾಡುವುದು ಅತ್ಯದ್ಭುತ ಅನುಭೂತಿ ಆಗಲಿದೆ. ಇಬ್ಬರಿಗೂ ಒಟ್ಟಿಗೆ ಕೆಲಸ ಮಾಡುವ ಆಸೆಯಿದೆ. ಆದರೆ ಸಲಾನ್‌ ಖಾನ್‌ ಅವರು ಸೂಪರ್‌ ಸ್ಟಾರ್‌ ಅವರ ನಿರೀಕ್ಷೆಗಳ ಜೊತೆಗೆ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಗಳೂ ಸಹ ಜೊತೆಗಿರುತ್ತವೆ. ಹಾಗಾಗಿ ಸಲಾನ್‌ ಖಾನ್ ಅವರ ಅಭಿಮಾನಿಗಳು ಹಾಗೂ ನನಗೆ ಮೂವರಿಗೂ ಒಪ್ಪಿಗೆ ಆಗುವ ವಿಷಯದ ಹುಡುಕಾಟದಲ್ಲಿದ್ದೇನೆ. ವಿಷಯ ಸಿಕ್ಕಿದ ಕೂಡಲೇ ತಡ ಮಾಡುವುದಿಲ್ಲ ಎಂದಿದ್ದಾರೆ.

ಸಲಾನ್‌ ಖಾನ್‌ ಪ್ರಸ್ತುತ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಲಾನ್‌ ಖಾನ್‌ ಪ್ರಸ್ತುತ ಚೋಪ್ರಾ ಫಿಲಮ್ಸ್‌‍ನ ಗೂಢಚಾರಿ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಅವರ ಗೆಳೆಯ ಸಾಜಿದ್‌ ನಾಡಿಯಾವಾಲ ನಿರ್ಮಾಣ ಮಾಡುತ್ತಿರುವ ಹೊಸ ಆಕ್ಷನ್‌ ಸಿನಿಮಾ ಒಂದರಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತಮಿಳಿನ ಜನಪ್ರಿಯ ಆಕ್ಷನ್‌ ನಿರ್ದೇಶಕ ಎಆರ್‌ ಮುರುಗದಾಸನ್‌ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ಕನ್ನಡತಿ ರಶಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.

RELATED ARTICLES

Latest News