Friday, May 3, 2024
Homeಬೆಂಗಳೂರುಮೆಟ್ರೋದಲ್ಲಿ ಯುವಕನಿಂದ ಲೈಂಗಿಕ ಕಿರುಕುಳ

ಮೆಟ್ರೋದಲ್ಲಿ ಯುವಕನಿಂದ ಲೈಂಗಿಕ ಕಿರುಕುಳ

ಬೆಂಗಳೂರು, ಡಿ.8- ನಮ್ಮ ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ರಾಜಾಜಿನಗರದಲ್ಲಿ ನಿನ್ನೆ ಬೆಳಗ್ಗೆ 9.40ರ ಸುಮಾರಿನಲ್ಲಿ 22 ವರ್ಷದ ಯುವತಿ ನಮ್ಮ ಮೆಟ್ರೋ ಹತ್ತಿ ಪ್ರಯಾಣ ಮಾಡುತ್ತಿದ್ದಾಗ ಯುವಕನೊಬ್ಬ ಆಕೆಯ ಮೈ-ಕೈ ಮುಟ್ಟಿದ್ದಾನೆ. ಆ ಯುವತಿ ಕೂಗಿಕೊಂಡಾಗ ಆ ಯುವಕ ಮುಂದಿನ ನಿಲ್ದಾಣದಲ್ಲಿ ಇಳಿದು ಪರಾರಿಯಾಗಲು ಯತ್ನಿಸಿದಾಗ ಮೆಟ್ರೋ ಸಿಬ್ಬಂದಿ ಆತನನ್ನು ಹಿಡಿದು ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಉಪ್ಪಾರಪೇಟೆ ಠಾಣೆ ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆತ ಹಳೆ ಕಳ್ಳನಾಗಿದ್ದು, ಮೊಬೈಲ್ ಕಳ್ಳತನ ಮಾಡಲು ಆ ಯುವತಿ ಬಳಿ ಹೋದಾಗ ಆಕೆಯ ಮೈ-ಕೈ ತಾಗಿರುವುದು ಗೊತ್ತಾಗಿದೆ. ಆದರೆ, ಯುವತಿ ಇದುವರೆಗೂ ಯಾವುದೇ ದೂರು ನೀಡಿಲ್ಲ.

ನೆಲಮಂಗಲ ಮೂಲದ ಲೋಕೇಶ್ ಪೊಲೀಸರ ವಶದಲ್ಲಿರುವ ಮೊಬೈಲ್ ಕಳ್ಳ. ಈತ ಈ ಹಿಂದೆ ಬಿಎಂಟಿಸಿ ಬಸ್‍ನಲ್ಲಿ ಯುವತಿಯೊಬ್ಬರ ಮೊಬೈಲ್ ಕದಿಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದನು. ಮೊಬೈಲ್ ಕದಿಯಲು ಯುವತಿಯ ಮೈ-ಕೈ ಮುಟ್ಟಿದ್ದನೇ ಅಥವಾ ಲೈಂಗಿಕ ಕಿರುಕುಳ ನೀಡಿದ್ದಾನೆಯೇ ಎಂಬ ಬಗ್ಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

RELATED ARTICLES

Latest News