Saturday, September 14, 2024
Homeಇದೀಗ ಬಂದ ಸುದ್ದಿಹುತ್ತಕ್ಕೆ ಹಾಲೇರಿಯುವುದು ವೌಢ್ಯ

ಹುತ್ತಕ್ಕೆ ಹಾಲೇರಿಯುವುದು ವೌಢ್ಯ

ಬೆಂಗಳೂರು, ಆ, 11– ಹುತ್ತಕ್ಕೆ ಹಾಲೆರೆಯುವುದು ಸೂಕ್ತವಲ್ಲ. ಇಂತಹ ಕಾರ್ಯಗಳಿಂದ ಹಾವು ಸೇರಿದಂತೆ ಇತರೆ ಜೀವಿಗಳಿಗೆ ಹಾನಿಯಾಗುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಇ ಬಸವರಾಜು ತಿಳಿಸಿದ್ದಾರೆ.

ವಿಧ್ಯಾರ್ಥಿ ಬಂಧುತ್ವ ವೇದಿಕೆ ಯಿಂದ ಗಾಂಧಿನಗರದ ವಿನೋಬಾ ಬಾವೆ ಅನಾಥ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನಾಗರ ಪಂಚಮಿಯಿಂದ ಉಂಟಾ ಗುವ ಪರಿಸರ ಹಾನಿ ಮತ್ತು ಹಾಲನ್ನು ವ್ಯರ್ಥ ಮಾಡುತ್ತಿರುವ ಕುರಿತು ವಿದ್ಯಾರ್ಥಿಗಳಲ್ಲಿ ಇದೇ ಸಂದರ್ಭದಲ್ಲಿ ಅವರು ಅರಿವು ಮೂಡಿಸಿದರು.

ಹುತ್ತಕ್ಕೆ ಹಾಲೆರೆಯುವ ಬದಲು ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ಮೂಲಕ ಮೌಢ್ಯ ತೊರೆದು ಬಸವ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಪತ್ರಕರ್ತ ಆಲ್ಬೂರು ಶಿವರಾಜ ಮಾತನಾಡಿ, ಹಬ್ಬ ಹರಿದಿನಗಳ ಆಚರಣೆಗೆ ವಿರೋಧವಿಲ್ಲ.

ಆದರೆ ನಾಗರ ಪಂಚಮಿಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳ ಬೇಕು ಎಂದರು.ಎಂ.ಬಿ.ವಿ ಜಿಲ್ಲಾ ಸಮಿತಿಯ ಡಿ ವೀರಣ್ಣ, ಸಂಚಾಲಕರಾದ ತೋರಣ್ ಕುಮಾರ್ ಹಾಗೂ ಆಶ್ರಮದ ಮುಖ್ಯಸ್ಥರು ಉಪಸ್ಥಿತರಿದ್ದರು.

RELATED ARTICLES

Latest News