
ನವದೆಹಲಿ,ಜು.14-ಆಹಾರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ,ಭಾರತೀಯರು ಕಾಲ ಬದಲಾದಂತೆ ತಮ ಆಹಾರ ಪದ್ಧತಿ ಬದಲಿಸುತ್ತಿರುವುದೇ ಆರೋಗ್ಯ ಸಮಸ್ಯೆಗೆ ಕಾರಣ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ವಿಜ್ಞಾನಿಗಳು ತಿಳಿಸಿದ್ದಾರೆ.ಆಯಾ ಪ್ರಾಂತ್ಯ, ರಾಜ್ಯ, ಜಿಲ್ಲೆಗಳಲ್ಲಿ ಆಯಾ ಆಹಾರ ಪದ್ಧತಿ ಇದೆ. ಆದರೆ ಇವೆಲ್ಲವನ್ನೂ ಅಚ್ಚುಕಟ್ಟಾಗಿ ಯಾರೂ ಪಾಲಿಸುತ್ತಿಲ್ಲ ಎಂಬುದು ಸ್ಪಷ್ಟ ಹೀಗಾಗಿ ನಡೆಸಿದ ಮಹತ್ವದ ಅಧ್ಯಯನ ವರದಿ ಐಸಿಎಂಆರ್ ಬಿಡುಗಡೆ ಮಾಡಿದೆ.
ಭಾರತೀಯ ಆಹಾರ ಪದ್ಧತಿಯಲ್ಲಿ ಆಗಿರುವ ಬದಲಾವಣೆ ಹೃದಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಬಹಿರಂಗವಾಗಿದೆ. ಈ ವರದಿ ಪ್ರಕಾರ ಭಾರತೀಯರು ಪ್ರತಿ ದಿನ ತಮ ಆಹಾರದಲ್ಲಿ ಅತೀಯಾದ ಉಪ್ಪು ಸೇವಿಸುತ್ತಿರುವುದೇ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದಿದೆ.
ದೇಹಕ್ಕೆ ಉಪ್ಪು ಅಗತ್ಯ. ಆದರೆ ಅತೀಯಾದರೇ ವಿಷ ಎಂದು ಎಚ್ಚರಿಸಲಾಗಿದೆ. ಹೊಸ ಆಹಾರ ಪದ್ಧತಿಯಲ್ಲಿ ಉಪ್ಪು, ಎಣ್ಣೆಯಲ್ಲಿ ಕರಿದ ಆಹಾರಗಳಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಒಬ್ಬ ವ್ಯಕ್ತಿ ಪ್ರತಿ ದಿನ ಗರಿಷ್ಠ 5 ಗ್ರಾಂ ಉಪ್ಪು ಸೇವಿಸಬಹುದು. ಇದಕ್ಕಿಂತ ಹೆಚ್ಚಾದರೆ ಉಪ್ಪು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದಿದೆ.
ಆದರೆ ಭಾರತೀಯರು ಸರಾಸರಿ ಅಂಕಿ ಅಂಶ ಪ್ರಕಾರ ಒಬ್ಬ ವ್ಯಕ್ತಿ 9.2 ಗ್ರಾಂ ಉಪ್ಪು ಸೇವಿಸುತ್ತಿದ್ದಾರೆ. ಹಲವು ಖಾದ್ಯಗಳ ಮೂಲಕ ಈ ಉಪ್ಪು ದೇಹ ಸೇರುತ್ತಿದೆ ಎಂದು ವರದಿ ತಿಳಿಸಿದೆ.
ಇದು ಭಾರತೀಯರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ .ಭಾರತೀಯರು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಉಪ್ಪು ಸೇವಿಸುತ್ತಿದ್ದಾರೆ. ಇದು ಅತ್ಯಂತ ಅಪಾಯಾಕಾರಿ ಎಂದಿದೆ.
ಅಧಿಕ ಉಪ್ಪು ಸೇವನೆಯಿಂದ ಹೈಪರ್‌ಟೆನ್ಶನ್, ಸ್ಟ್ರೋಕ್, ಹೃದಯ ಸಂಬಂಧಿ ಸಮಸ್ಯೆ,ಕಿಡ್ನಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಉಪ್ಪು ಅಧಿಕ ಸೇವನೆಯಿಂದ ರಕ್ತದ ಒತ್ತಡ (ಬಿಪಿ )ಭಾರಿ ವ್ಯತ್ಯಸಾವಾಗುತ್ತಿದೆ. ಇದರಿಂದ ದೇಹದ ಎಲ್ಲಾ ಭಾಗಗಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತದ ಚಲನವಲನದಲ್ಲಿ ವ್ಯತ್ಯಾಸವಾಗಲಿದೆ.
ಕಡಿಮೆ ಸೋಡಿಯಂ ಸೇವನೆಯಿಂದ ರಕ್ತದೊತ್ತಡ ಕಡಿಮೆ ಮಾಡಲು ಸಾಧ್ಯವಾಗಲಿದೆ. ದೇಹದ ಬಿಪಿ ಸರಿಯಾಗಿರಬೇಕು ಎಂದು ಜನಸಾಮಾನ್ಯರಿಗೆ ಸಲಹೆ ನೀಡಿದೆ.ಲೋ ಬಿಪಿ, ಹೈ ಬಿಪಿ ಎರಡೂ ಅತ್ಯಂತ ಅಪಾಯಕಾರಿ. ಇದಕ್ಕೆ ಕಡಿಮೆ ಸೋಡಿಯಂ ಸೇವನೆಯೇ ಮುಖ್ಯ ಔಷಧಿ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.
- ಗ್ಯಾರಂಟಿ ಸರ್ಕಾರದಿಂದ ಶಕ್ತಿಯೋಜನೆ ಯಶಸ್ಸಿನ ಸಂಭ್ರಮಾಚರಣೆ, ಖುದ್ದು ಉಚಿತ ಟಿಕೆಟ್ ವಿತರಿಸಿದ ಸಿಎಂ
- ಸಿಗಂದೂರು ಸೇತುವೆ ಉದ್ಘಾಟನೆಗೆ ನನಗೆ ಆಹ್ವಾನ ನೀಡಿಲ್ಲ : ಸಿಎಂ ಸಿದ್ದರಾಮಯ್ಯ ಅಸಮಾಧಾನ
- ಸಿಗಂಧೂರಿಗೆ ಸಂಪರ್ಕ ಕಲ್ಪಿಸುವ ದೇಶದ 2ನೇ ಅತಿದೊಡ್ಡ ತೂಗು ಸೇತುವೆ ಲೋಕಾರ್ಪಣೆ
- ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯತ್ತ ಶುಭಾಂಶು ಶುಕ್ಲಾ ಪ್ರಯಾಣ ಆರಂಭ
- ಪುತ್ರನ ರಕ್ಷಣೆಗೆ ಅಖಾಡಕ್ಕಿಳಿದ ರಾಜಾಹುಲಿ