ಹಾಸನದ ವಿವಿಧೆಡೆ ಎಸ್‌‍ಐಟಿ ದಾಳಿ : 7 ಪೆನ್‌ ಡ್ರೈವ್‌, 6 ಹಾರ್ಡ್‌ ಡಿಸ್ಕ್‌, 4 ಲ್ಯಾಪ್ಟಾಪ್‌ ವಶಕ್ಕೆ

ಹಾಸನ, ಮೇ 17- ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ವಿಶೇಷ ತನಿಖಾ ತಂಡಕ್ಕೆ ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಮನೆಯಲ್ಲಿ 7 ಪೆನ್‌ಡ್ರೈವ್‌ಗಳು, ಹಾರ್ಡ್‌ ಡಿಸ್ಕ್‌ ಪತ್ತೆಯಾಗಿವೆ. ಪ್ರೀತಂ ಗೌಡ ಆಪ್ತರು ಮತ್ತು ಪ್ರಕರಣದ ಸಂಬಂಧ ಈಗಾಗಲೇ ಬಂಧಕ್ಕೊಳಗಾಗಿರುವವರ ಮನೆಗಳ ಮೇಲೆ ಎಸ್‌‍ಐಟಿ ಕಳೆದ ಎರಡು ದಿನ ಮುಂಜಾನೆವರೆಗೂ ದಾಳಿ ನಡೆಸಿತ್ತು. ಈಗ ವಶಕ್ಕೆ ಪಡೆದಿರುವ ಪೆನ್‌ಡ್ರೈವ್‌ಗಳನ್ನು ಎಸ್‌‍ಐಟಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಿದೆ. ಪ್ರೀತಂಗೌಡ ಆಪ್ತರ ಮನೆಯಲ್ಲಿ ದೊರೆತ ಪೆನ್‌ಡ್ರೈವ್‌ ಪ್ರಜ್ವಲ್‌ ಪ್ರಕರಣಕ್ಕೆ ಸಂಬಂಧಿಸಿದ್ದೇ ಎಂಬುದ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ತಿಳಿದುಬರಲಿದೆ. ಇನ್ನು ಹಾಸನದ 18 ಕಡೆ ನಡೆಸಿದ ದಾಳಿಯಲ್ಲಿ ಎಸ್‌‍ಐಟಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. 7 ಪೆನ್‌ಡ್ರೈವ್‌, 6 ಹಾರ್ಡ್‌ ಡಿಸ್ಕ್‌, ನಾಲ್ಕು ಲ್ಯಾಪ್‌ ಟಾಪ್‌, ಮೂರು ಡೆಸ್ಕ್‌ ಟಾಪ್‌ ವಶಕ್ಕೆ ಪಡೆದಿದೆ. ದಾಳಿ ನಡೆಸಿದ ಕಡೆಯಲ್ಲಿ ಮನೆ ಕಚೇರಿಗಳಲ್ಲಿ ಅಳವಡಿಸಲಾಗಿದ್ದ … Continue reading ಹಾಸನದ ವಿವಿಧೆಡೆ ಎಸ್‌‍ಐಟಿ ದಾಳಿ : 7 ಪೆನ್‌ ಡ್ರೈವ್‌, 6 ಹಾರ್ಡ್‌ ಡಿಸ್ಕ್‌, 4 ಲ್ಯಾಪ್ಟಾಪ್‌ ವಶಕ್ಕೆ