ಬೆಂಗಳೂರಲ್ಲಿ ಮಿತಿಮೀರಿದ ಬೌಬೌ ಹಾವಳಿ : 8 ತಿಂಗಳಲ್ಲಿ 16888 ಮಂದಿಗೆ ನಾಯಿ ಕಡಿತ, ಮೂವರು ಬಲಿ

ಬೆಂಗಳೂರು,ಸೆ.2- ನಗರದಲ್ಲಿ ರಕ್ಕಸ ನಾಯಿಗಳ ಆರ್ಭಟ ಮಿತಿ ಮೀರಿದೆ. ಗಲ್ಲಿ ಗಲ್ಲಿಗಳಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಕೇವಲ ಎಂಟು ತಿಂಗಳಲ್ಲಿ 16888 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿದೆ. ಇದರ ಜೊತೆಗೆ ನಾಯಿ ಕಡಿತದಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ನಾಯಿ ಕಚ್ಚಿದ ಪ್ರಕರಣಗಳಲ್ಲಿ ಶೇ.40 ರಷ್ಟು ಸಾಕು ನಾಯಿಗಳ ಪಾತ್ರವೂ ಇರುವುದರಿಂದ ನಗರದಲ್ಲಿ ಜನ ಬೀದಿಯಲ್ಲಿ ಓಡಾಡಬೇಕಾದರೆ ಎಚ್ಚರಿಕೆ ವಹಿಸಬೇಕು ಇಲ್ಲದಿದ್ದರೆ ನಾಯಿ ಕಡಿತಕ್ಕೆ ಒಳಗಾಗಬೇಕಾಗುತ್ತದೆ. ಕಳೆದ ಎಂಟು ತಿಂಗಳಲ್ಲಿ 16888 ಮಂದಿಗೆ ನಾಯಿ ಕಚ್ಚಿರುವುದು ಬಿಬಿಎಂಪಿಯ … Continue reading ಬೆಂಗಳೂರಲ್ಲಿ ಮಿತಿಮೀರಿದ ಬೌಬೌ ಹಾವಳಿ : 8 ತಿಂಗಳಲ್ಲಿ 16888 ಮಂದಿಗೆ ನಾಯಿ ಕಡಿತ, ಮೂವರು ಬಲಿ