Sunday, September 15, 2024
Homeಬೆಂಗಳೂರುಬೆಂಗಳೂರಲ್ಲಿ ಮಿತಿಮೀರಿದ ಬೌಬೌ ಹಾವಳಿ : 8 ತಿಂಗಳಲ್ಲಿ 16888 ಮಂದಿಗೆ ನಾಯಿ ಕಡಿತ, ಮೂವರು...

ಬೆಂಗಳೂರಲ್ಲಿ ಮಿತಿಮೀರಿದ ಬೌಬೌ ಹಾವಳಿ : 8 ತಿಂಗಳಲ್ಲಿ 16888 ಮಂದಿಗೆ ನಾಯಿ ಕಡಿತ, ಮೂವರು ಬಲಿ

Stray dog bite cases surge in Bengaluru amid population control efforts

ಬೆಂಗಳೂರು,ಸೆ.2- ನಗರದಲ್ಲಿ ರಕ್ಕಸ ನಾಯಿಗಳ ಆರ್ಭಟ ಮಿತಿ ಮೀರಿದೆ. ಗಲ್ಲಿ ಗಲ್ಲಿಗಳಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಕೇವಲ ಎಂಟು ತಿಂಗಳಲ್ಲಿ 16888 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿದೆ. ಇದರ ಜೊತೆಗೆ ನಾಯಿ ಕಡಿತದಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ನಾಯಿ ಕಚ್ಚಿದ ಪ್ರಕರಣಗಳಲ್ಲಿ ಶೇ.40 ರಷ್ಟು ಸಾಕು ನಾಯಿಗಳ ಪಾತ್ರವೂ ಇರುವುದರಿಂದ ನಗರದಲ್ಲಿ ಜನ ಬೀದಿಯಲ್ಲಿ ಓಡಾಡಬೇಕಾದರೆ ಎಚ್ಚರಿಕೆ ವಹಿಸಬೇಕು ಇಲ್ಲದಿದ್ದರೆ ನಾಯಿ ಕಡಿತಕ್ಕೆ ಒಳಗಾಗಬೇಕಾಗುತ್ತದೆ. ಕಳೆದ ಎಂಟು ತಿಂಗಳಲ್ಲಿ 16888 ಮಂದಿಗೆ ನಾಯಿ ಕಚ್ಚಿರುವುದು ಬಿಬಿಎಂಪಿಯ ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ.

ಅದರಲ್ಲೂ ಪೂರ್ವ ಮತ್ತು ಪಶ್ಚಿಮ ವಲಯದಲ್ಲೇ ಅತಿ ಹೆಚ್ಚು ನಾಯಿಗಳ ದಾಳಿ ಪ್ರಕರಣಗಳು ನಡೆದಿರುವುದು ವರದಿಯಲ್ಲಿ ಬಯಲಾಗಿದೆ.
ನಾಯಿ ಕಡಿತದ ವಿವರ: ಕಳೆದ ಜನವರಿಯಿಂದ ಆ.31ರವರೆಗೆ ನಗರದಲ್ಲಿ 16888 ನಾಯಿ ಕಡಿತ ಪ್ರಕರಣಗಳು ದಾಖಲಾಗಿದೆ. ಅದರ ವಲಯವಾರು ವಿವರ ಇಂತಿದೆ.

ಬೊಮನಹಳ್ಳಿ- 782
ದಾಸರಹಳ್ಳಿ -475
ಪೂರ್ವ ವಲಯ -2107
ಮಹದೇವಪುರ -1359
ಆರ್‌.ಆರ್.ನಗರ -1328
ದಕ್ಷಿಣ ವಲಯ -1258
ಪಶ್ಚಿಮ ವಲಯ -3479
ಯಲಹಂಕ ವಲಯ- 660
ಒಟ್ಟು -11448

ಸಾಕು ನಾಯಿಗಳ ದಾಳಿಗಳನ್ನು ನೋಡೋದಾದ್ರೆ.
ದಾಸರಹಳ್ಳಿ ವಲಯ -271
ಪೂರ್ವ ವಲಯ- 975
ಮಹದೇವಪುರ -683
ಆರ್‌.ಆರ್.ನಗರ -778
ದಕ್ಷಿಣ ವಲಯ- 489
ಪಶ್ಚಿಮ ವಲಯ -1505
ಯಲಹಂಕ ವಲಯ- 392
ಒಟ್ಟು- 5440
ಸಾವು -003

RELATED ARTICLES

Latest News