ಬೌಬೌ ಸಿಟಿಯಾದ ಬೆಂಗಳೂರು, ಮಿತಿಮೀರಿದ ಬೀದಿ ನಾಯಿಗಳ ಹಾವಳಿ

ಬೆಂಗಳೂರು, ಡಿ.14- ಪೋಷಕರೇ ಎಚ್ಚರ..! ನಗರದಲ್ಲಿ ಹೆಚ್ಚಾಗುತ್ತಿರುವೆ ಬೀದಿ ನಾಯಿಗಳ ಹಾವಳಿ… ತಮ್ಮ ಮಕ್ಕಳನ್ನು ಮನೆಯಿಂದ ಒಬ್ಬೊಬ್ಬರನ್ನೇ ಬಿಡಬೇಡಿ. ದಿನನಿತ್ಯ ಮಕ್ಕಳ ಮೇಲೆ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಪೋಷಕರು ಕಂಗಾಲಾಗಿದ್ದಾರೆ. ಪಶು ಸಂಗೋಪನಾ ಇಲಾಖೆಯಿಂದಲೇ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ. ಪ್ರತಿದಿನ ಸರಾಸರಿ 70ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸುತ್ತಿವೆ. ಕಳೆದ ಮೂರು ವರ್ಷಗಳಲ್ಲಿ 70,057 ಪ್ರಕರಣಗಳು ದಾಖಲಾಗಿವೆ. 2019-20ರಲ್ಲಿ 42,818 , 2020-21ರಲ್ಲಿ 18,629, 2021-22ರಲ್ಲಿ 17,610 ಪ್ರಕರಣಗಳು ದಾಖಲಾಗಿವೆ. […]