Monday, September 16, 2024
Homeಬೆಂಗಳೂರುಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ: ಯುವತಿಯ ಮೇಲೆ ದಾಳಿ

ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ: ಯುವತಿಯ ಮೇಲೆ ದಾಳಿ

ಬೆಂಗಳೂರು,ಆ.30- ನಗರದಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗತೊಡಗಿದೆ. ಬೀದಿ ನಾಯಿ ದಾಳಿಗೆ ಮಹಿಳೆ ಬಲಿಯಾದ ಪ್ರಕರಣ ಜನ ಮಾನಸದಿಂದ ಮರೆಯಾಗುವ ಮುನ್ನವೇ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ನಾಯಿ ದಾಳಿ ನಡೆಸಿರುವ ಘಟನೆ ನಡೆದಿದೆ.

ಬಾಣಸವಾಡಿಯ ಓಎಂಬಿಆರ್‌ ಲೇಔಟ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ದಾಳಿ ನಡೆಸಿರುವ ಬೀದಿ ನಾಯಿಯೊಂದು ಆಕೆಯ ಕಾಲು ಕಚ್ಚಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಗರದ ಬೀದಿ ಬೀದಿಗಳಲ್ಲಿ ಕಂಡು ಬರುವ ಹಿಂಡು ಹಿಂಡು ನಾಯಿಗಳಿಂದ ಜನ ತಪ್ಪಿಸಿಕೊಂಡು ಓಡಾಡುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲೂ ಓಎಂಬಿಆರ್‌ ಬಡಾವಣೆಯಲ್ಲಿ 36 ಬೀದಿ ನಾಯಿಗಳ ಹಿಂಡಿದೆ. ನಾಯಿಗಳ ಹಾವಳಿಯಿಂದ ಕೆಲವರು ಪ್ರತಿಷ್ಠಿತ ಪ್ರದೇಶವನ್ನು ತೊರೆದು ಹೋಗುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

RELATED ARTICLES

Latest News