No menu items!
Monday, September 16, 2024
No menu items!
Homeರಾಜ್ಯಕಾಶ್ಮೀರದ ಜ್ಯೇಷ್ಟೇಶ್ವರ ದೇವರ ದರ್ಶನ‌ ಪಡೆದು ದೇವೇಗೌಡರು

ಕಾಶ್ಮೀರದ ಜ್ಯೇಷ್ಟೇಶ್ವರ ದೇವರ ದರ್ಶನ‌ ಪಡೆದು ದೇವೇಗೌಡರು

ಶ್ರೀನಗರ, ಆ.31-ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಇಂದು ಕಾಶ್ಮೀರದ ಶಂಕರಾಚಾರ್ಯರ ಬೆಟ್ಟದ ಮೇಲಿರುವ ಜ್ಯೇಷ್ಟೇಶ್ವರ ದೇವರ ದರ್ಶನ‌ ಪಡೆದು ವಿಶೇಷ ಪೂಜೆ ಮಾಡಿದ್ದಾರೆ. ಶಿವನ ದೇವಸ್ಥಾನವೆಂದೇ ಕರೆಯಲ್ಪಡುವ ಈ ಪವಿತ್ರ ಶಂಕರಾಚಾರ್ಯ ದೇವಸ್ಥಾನದಲ್ಲಿ ದೇವರ ದರ್ಶನ‌ ಪಡೆದು ಪ್ರಾಥನೆ ಸಲ್ಲಿಸಿದ್ದಾರೆ.

ಈ ದೇವಸ್ಥಾನಕ್ಕೆ ಭೇಟಿ ನೀಡಿ, ಶಿವನ‌‌ ದರ್ಶನ ಪಡೆಯಬೇಕೆಂಬುದು ನನ್ನ ಜೀವಮಾನದ ಆಸೆಯಾಗಿತ್ತು ಎಂದು ಗೌಡರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಾಶ್ಮೀರ ಕಣಿವೆಯಲ್ಲಿನ ತ್ರಾಸದಾಯಕವಾದ ಈ ದೇವಾಲಯಕ್ಕೆ ಗೌಡರು, ಸೇನೆಯ ಬಿಗಿ ಭದ್ರತೆಯ ಜತೆಗೆ ಸಹಾಯಕರ ಸಹಾಯದಿಂದ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಿನ್ನೆ ಕಾಶ್ಮೀರದ ಉರಿಯ ಜಲ ವಿದ್ಯುತ್ ಉತ್ಪಾದನಾ ಸ್ಥಾವರಕ್ಕೆ ಭೇಟಿ ನೀಡಿದ್ದರು.

RELATED ARTICLES

Latest News