Sunday, September 15, 2024
Homeಬೆಂಗಳೂರುಅಳಿಯನ ಮನೆಗೆ ಬಂದಿದ್ದ ಅತ್ತೆಯನ್ನು ಕಚ್ಚಿ ಸಾಯಿಸಿದ ಬೀದಿ ನಾಯಿಗಳು..!

ಅಳಿಯನ ಮನೆಗೆ ಬಂದಿದ್ದ ಅತ್ತೆಯನ್ನು ಕಚ್ಚಿ ಸಾಯಿಸಿದ ಬೀದಿ ನಾಯಿಗಳು..!

76-year-old woman on morning walk killed by stray dogs in Bengaluru

ಬೆಂಗಳೂರು,ಆ.28- ಜಾಲಹಳ್ಳಿ ಈಸ್ಟ್‌ನ ವಾಯುಪಡೆ ವಸತಿ ಸಮುಚ್ಚಯದಲ್ಲಿ ವಾಯುವಿಹಾರ ಮಾಡುತ್ತಿದ್ದ ನಿವೃತ್ತ ಶಿಕ್ಷಕಿ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ಸಾಯಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಬಿಹಾರ ಮೂಲದ ನಿವೃತ್ತ ಶಿಕ್ಷಕಿ ರಾಜ್‌ ದುಲಾರಿಯ ಸಿನ್ಹಾ(76) ಮೃತಪಟ್ಟವರು.ಸಿನ್ಹಾ ಅವರ ಮಗಳು, ಅಳಿಯ ಪೂರ್ವ ಏರ್‌ಫೋರ್ಸ್‌, 7ನೇ ರೆಸಿಡೆನ್ಸಿ ಚಾಂಪ್‌ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದು, ಅಳಿಯ ಅಮಿತ್‌ಕುಮಾರ್‌ ವಾಯುದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಗಳ ಮನೆಗೆ ರಾಜ್‌ ದುಲಾರಿಯ ಸಿನ್ಹಾ ಅವರು ಬಂದಿದ್ದರು. ಇಂದು ಬೆಳಗ್ಗೆ 6.30ರ ಸುಮಾರಿನಲ್ಲಿ ವಸತಿ ಸಮುಚ್ಚಯದಲ್ಲೇ ವಾಯುವಿಹಾರ ಮಾಡುತ್ತಿದ್ದಾಗ 10 ರಿಂದ 12 ಬೀದಿನಾಯಿಗಳು ಏಕಾಏಕಿ ಇವರ ಮೇಲೆ ದಾಳಿ ಮಾಡಿ ತಲೆ, ಹೊಟ್ಟೆ, ಕೈಕಾಲು ಸೇರಿದಂತೆ ದೇಹದ ಇನ್ನಿತರೆ ಭಾಗಗಳಿಗೆ ಕಚ್ಚಿವೆ.

ಕೂಗಾಟ ಕೇಳಿ ಸ್ಥಳೀಯರು ನಾಯಿಗಳನ್ನು ಓಡಿಸಿದ್ದಾರೆ. ತಕ್ಷಣ ಅಳಿಯ, ಮಗಳು ಬಂದು ಗಂಭೀರ ಗಾಯಗೊಂಡಿದ್ದ ಸಿನ್ಹಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಮೃತದೇಹವನ್ನು ಎಂ.ಎಸ್‌‍.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಗಂಗಮನಗುಡಿ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

RELATED ARTICLES

Latest News