Sunday, September 15, 2024
Homeಜಿಲ್ಲಾ ಸುದ್ದಿಗಳು | District Newsಬೀದಿ ನಾಯಿಗಳ ದಾಳಿಗೆ 11 ಕುರಿಗಳ ಸಾವು

ಬೀದಿ ನಾಯಿಗಳ ದಾಳಿಗೆ 11 ಕುರಿಗಳ ಸಾವು

11 sheep killed by stray dogs

ಬಾಗೇಪಲ್ಲಿ, ಸೆ.1– ಕುಟುಂಬ ಪೋಷಣೆಗೆ ಆಸರೆಯಾಗಿದ್ದ ಕುರಿಗಳ ರೊಪ್ಪದೊಳಗೆ ಬೀದಿನಾಯಿಗಳು ದಾಳಿ ಮಾಡಿ ಸುಮಾರು 1 ಲಕ್ಷ ರೂ. ಬೆಲೆ ಬಾಳುವ 11 ಕುರಿಗಳನ್ನು ಕಚ್ಚಿ ಸಾಯಿಸಿರುವ ಘಟನೆ ಮಿಟ್ಟೇಮರಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಮಿಟ್ಟೇಮರಿ ಗ್ರಾಮದಲ್ಲಿ ಬೀದಿ ನಾಯಿಗಳು ರೈತ ಕೃಷ್ಣಪ್ಪ ಎಂಬುವವರ ಕುರಿ ರೊಪ್ಪಕ್ಕೆ ನುಗ್ಗಿದ ಬೀದಿ ನಾಯಿಗಳು ಮನಬಂದಂತೆ ಕುರಿಗಳನ್ನು ಕಚ್ಚಿ ಸಾಯಿಸಿವೆ.

ದಾಳಿಯಲ್ಲಿ 15ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿದ್ದು, ಸ್ಥಳದಲ್ಲೆ 11 ಕುರಿಗಳು ಮೃತಪಟ್ಟಿವೆ. ಕುರಿಗಾಹಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಕೃಷ್ಣಪ್ಪಗೆ ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ.

ಕುರಿ ಸಾಕಾಣಿಗೆಯಿಂದ ಬರುವ ಹಣದಿಂದಲೇ ಕುಟುಂಬ ನಿಭಾಯಿಸುತ್ತಿರುವ ಕೃಷ್ಣಪ್ಪಗೆ ಆಕಸಿಕ ಕುರಿಗಳ ಸಾವಿನ ಘಟನೆಯಿಂದ ಆರ್ಥಿಕ ಆಘಾತವನ್ನುಂಟು ಮಾಡಿದ್ದು, ಇದೀಗ ಕುಟುಂಬ ಪೋಷಣೆಗೆ ತೊಂದರೆ ಎದುರಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

RELATED ARTICLES

Latest News