Saturday, September 14, 2024
Homeರಾಷ್ಟ್ರೀಯ | Nationalಅಕ್ರಮ ಸಂಬಂದಕ್ಕಾಗಿ ಪತಿಯನ್ನು ಕೊಂದು ಶೌಚಾಲಯದಲ್ಲಿ ಶವ ಹೂತಿಟ್ಟ ಪತ್ನಿ

ಅಕ್ರಮ ಸಂಬಂದಕ್ಕಾಗಿ ಪತಿಯನ್ನು ಕೊಂದು ಶೌಚಾಲಯದಲ್ಲಿ ಶವ ಹೂತಿಟ್ಟ ಪತ್ನಿ

Woman And Lover Kill Her Husband, Bury Body In Toilet Pit At Home: Punjab Police

ಜೈಪುರ,ಸೆ.1- ಪತ್ನಿಯೊಬ್ಬಳು ಅಕ್ರಮ ಸಂಬಂದಕ್ಕಾಗಿ ಕೈ ಹಿಡಿದ ಪತಿಯನ್ನೇ ಕೊಲೆ ಮಾಡಿ ಶವವನ್ನು ಮನೆಯ ಶೌಚಾಲಯದಲ್ಲೇ ಹೂತಿಟ್ಟಿದ್ದ ಪ್ರಕರಣ ರಾಜಸ್ಥಾನವನ್ನು ಬೆಚ್ಚಿ ಬೀಳಿಸಿದೆ.

ರಾಜಸ್ಥಾನದ ಹನುಮಾನ್‌ಗಢದಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹೆಂಡತಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದಿದ್ದಾಳೆ. ಬಳಿಕ, ಪತಿಯ ಶವವನ್ನು ಮನೆಯ ಶೌಚಾಲಯದಲ್ಲಿ ಹೂತಿಟ್ಟಿದ್ದಾಳೆ.

ಈ ವಿಷಯ ಬೆಳಕಿಗೆ ಬಂದಾಗ ಇಡೀ ಪ್ರದೇಶವೇ ಬೆಚ್ಚಿ ಬಿದ್ದಿದೆ. ಆ ಗ್ರಾಮದ ರೂಪರಾಮ್‌ 16 ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಆತ ಬೇರೆ ಊರಿಗೆ ಹೋಗಿರಬಹುದು ಅಕ್ಕಪಕ್ಕದವರು ಅಂದುಕೊಂಡಿದ್ದರು.

ಆದರೆ, ರೂಪರಾಮ್‌ ನಾಪತ್ತೆಯ ಹಿಂದೆ ಆತನ ಹೆಂಡತಿಯ ಕೈವಾಡವಿರಬಹುದು ಎಂದು ಆತನ ಪೋಷಕರಿಗೆ ಅನುಮಾನ ಬಂದಿತ್ತು. ಹೀಗಾಗಿ, ಈ ಬಗ್ಗೆ ಮತ ರೂಪಾರಾಮ್‌ ಕುಟುಂಬಸ್ಥರು ಠಾಣೆಗೆ ದೂರು ಸಲ್ಲಿಸಿದ್ದರು.

ಇಷ್ಟೆಲ್ಲಾ ಆದರೂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಕೋಪಗೊಂಡ ಕುಟುಂಬಸ್ಥರು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದು, ಬಳಿಕ ಪೊಲೀಸರು ಕಾರ್ಯಪ್ರವತ್ತರಾಗಿದ್ದಾರೆ. ಕೊನೆಗೆ ಈ ಬಗ್ಗೆ ತನಿಖೆ ಪ್ರಾರಂಭವಾಯಿತು.ಪೊಲೀಸರು ರೂಪರಾಮ್‌ ಅವರ ಪತ್ನಿಯನ್ನು ಕರೆಸಿ ವಿಚಾರಣೆ ನಡೆಸಿದಾಗ, ಅವಳು ತನ್ನ ಅಪರಾಧವನ್ನು ಒಪ್ಪಿಕೊಂಡಳು.

ಪರಾಮ್‌‍ನನ್ನು ಕೊಲೆ ಮಾಡಿ ಆತನ ಶವವನ್ನು ಬಾತ್‌ ರೂಂನಲ್ಲಿ ಹೂತು ಹಾಕಿದ್ದೇವೆ. ನನ್ನ ಪ್ರಿಯಕರನ ಜೊತೆ ಸೇರಿ ಈ ಕತ್ಯ ಎಸಗಿದ್ದೇನೆ ಎಂದು ಹೇಳಿದಳು. ಇದು ಬಹಿರಂಗವಾಗುತ್ತಿದ್ದಂತೆಯೇ ಪೊಲೀಸರು ಮನೆಯಲ್ಲಿದ್ದ ಶೌಚಾಲಯವನ್ನು ಅಗೆದು ರೂಪರಾಮ್‌ ಶವವನ್ನು ಹೊರತೆಗೆದಿದ್ದಾರೆ.

RELATED ARTICLES

Latest News