Thursday, September 19, 2024
Homeರಾಷ್ಟ್ರೀಯ | Nationalಅತ್ಯಾಚಾರವೆಸಗಿ ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ ಸ್ಕೂಲ್‌ ಪ್ಯೂನ್‌

ಅತ್ಯಾಚಾರವೆಸಗಿ ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ ಸ್ಕೂಲ್‌ ಪ್ಯೂನ್‌

Girl, 13, Pregnant after being raped by School Peon in Uttar Pradesh

ಫರೂಕಾಬಾದ್‌, ಸೆ.1 (ಪಿಟಿಐ) ಇಲ್ಲಿನ 13 ವರ್ಷದ ಬಾಲಕಿಯೊಬ್ಬಳು ಸರ್ಕಾರಿ ಶಾಲೆಯ ಪ್ಯೂನ್‌ನಿಂದ ಅತ್ಯಾಚಾರಕ್ಕೊಳಗಾದ ನಂತರ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ನಡೆದ ಘಟನೆಯ ಸಂದರ್ಭದಲ್ಲಿ ಸಹಾಯ ಮಾಡಿದ ಕೌನ್ಸಿಲ್‌ ಶಾಲೆಯ ಪ್ಯೂನ್‌ ಮತ್ತು ಆತನ ಸಹಚರನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

13 ವರ್ಷದ ಬಾಲಕಿಯ ಕುಟುಂಬದವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಾಲಕಿ ರಾತ್ರಿ ಮಲ ವಿಸರ್ಜನೆಗೆ ಹೋಗಿದ್ದ ವೇಳೆ ಗ್ರಾಮದ ಪಂಕಜ್‌ ಮತ್ತು ಅಮಿತ್‌ ಎಂಬವರು ಆಕೆಯನ್ನು ಹಿಡಿದು ಖಾಲಿ ಮನೆಗೆ ಕರೆದೊಯ್ದು ಪಂಕಜ್‌ ಅತ್ಯಾಚಾರವೆಸಗಿದ್ದರೆ. ಅಮಿತ್‌ ಹೊರಗೆ ನಿಂತು ಕಾವಲು ಕಾಯುತ್ತಿದ್ದ ಎನ್ನಲಾಗಿದೆ.

ಆರೋಪಿಗಳು ಆಕೆಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದಾರೆ, ನಂತರ ದೂರು ನೀಡಿದರೆ ಕೊಲ್ಲುತ್ತೇವೆ ಎಂದು ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಆದರೆ ಬಾಲಕಿ ಐದು ತಿಂಗಳ ಗರ್ಭಿಣಿಯಾದಾಗ ಆಕೆಯ ತಾಯಿಗೆ ವಿಷಯ ತಿಳಿದಿದೆ. ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಗಳ ವಿರುದ್ಧ ಅತ್ಯಾಚಾರದ ಆರೋಪದ ಮೇಲೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News