Sunday, October 13, 2024
Homeಬೆಂಗಳೂರುಸರಿಯಾದ ಸ್ಥಳಕ್ಕೆ ಡೆಲಿವರಿ ಕೊಡದ ಕೊರಿಯರ್ ಬಾಯ್‍ಗೆ ಚೂರಿ ಇರಿತ

ಸರಿಯಾದ ಸ್ಥಳಕ್ಕೆ ಡೆಲಿವರಿ ಕೊಡದ ಕೊರಿಯರ್ ಬಾಯ್‍ಗೆ ಚೂರಿ ಇರಿತ

Courier boy stabbed

ಬೆಂಗಳೂರು, ಸೆ.1- ಕ್ಷುಲ್ಲಕ ಕಾರಣಕ್ಕೆ ಕೊರಿಯರ್ ತಂದಿದ್ದ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತೀವ್ರವಾಗಿ ಗಾಯಗೊಂಡಿರುವ ಮಹಮದ್ ಶಫಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು , ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರಿಯಾದ ಸ್ಥಳಕ್ಕೆ ಕೊರಿಯರ್ ತಂದುಕೊಡಲಿಲ್ಲ ಎಂದು ಆರೋಪಿ ರಫೀಗೆ ಕರೆಮಾಡಿ ಕರೆಸಿಕೊಂಡು ಚಾಕುವಿನಿಂದ ನಡು ರಸ್ತೆಯಲ್ಲೇ ಅಟ್ಟಾಡಿಸಿ, ಕುತ್ತಿಗೆಗೆ ಇರಿದಿದ್ದಾನೆ.

ಇದರಿಂದ ಕುಸಿದು ಬಿದ್ದು ಒದ್ದಾಡುತ್ತಿದ್ದ ಶಫಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.ಪ್ರಸ್ತುತ ಅಶೋಕನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

RELATED ARTICLES

Latest News