ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಅವರೊಂದಿಗೆ ಕಳೆದ ಜನವರಿ 6 ರಂದು ಮದುವೆಯಾಗಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್, ಇದೀಗ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್ 23ರಂದು ಮಗುವಿಗೆ ಜನ್ಮ ನೀಡಿರುವ ಸ್ವರಾ ಅವರು ಈ ಖುಷಿಯ ವಿಷಯವನ್ನು ಮೂರು ದಿನಗಳ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಜೋಡಿ ಈ ಹಿಂದೆ ದಿಢೀರ್ ಆಗಿ ಈ ಬಗ್ಗೆ ಘೋಷಿಸಿತ್ತು. ಸ್ವರಾ ತಮ್ಮ ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದ ಫೋಟೋ ಶೇರ್ ಮಾಡಿದ್ದರು. ನಂತರ ಫೆಬ್ರುವರಿ ತಿಂಗಳಿನಲ್ಲಿ ಇವರ ಮದುವೆ ಮುಸ್ಲಿಂ ಸಂಪ್ರದಾಯದಂತೆ ನಡೆದಿತ್ತು.
ಸ್ವರಾ ಮತ್ತು ಫಹಾದ್ ಇಬ್ಬರೂ ಮಗುವಿನ ನಿರೀಕ್ಷೆಯಲ್ಲಿದ್ದಾಗ ಸಾಕಷ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಟ್ರೋಲಿಗರು, ನಿಮ್ಮ ಪ್ರೀತಿ ನಿಜವಾಗಿದ್ದರೆ, ಧೈರ್ಯವಿದ್ದರೆ ಮಗುವಿಗೆ ಹಿಂದೂ ಹೆಸರು ಇಡಿ ನೋಡೋಣ ಎಂದಿದ್ದರು. ಆದರೆ ಇದೀಗ ಹೆಸರು ಕೂಡ ರಿವೀಲ್ ಆಗಿದೆ. ಮಗಳಿಗೆ ರಬಿಯಾ ಎಂದು ಹೆಸರು ಇಡಲಾಗಿದೆ.
ಮುಸ್ಲಿಂ ಯುವಕನ ಜೊತೆ ಮದುವೆಯಾಗಿರುವುದಕ್ಕೆ ಈ ಟೀಕೆಗಳು ಎದ್ದಿದ್ದವು. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವರಾ ಫ್ರಿಡ್ಜ್ ನೋಡಬೇಕಿತ್ತು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಸ್ವರಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮದುವೆಯಾದ ಆರು ತಿಂಗಳಿಗೆ ತಾವು ಗರ್ಭಿಣಿ ಎನ್ನುವ ಫೋಟೋ ಶೇರ್ ಮಾಡಿಕೊಂಡಿದ್ದರು.