ಇರಾನ್: ಹೊಸ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ

ಕೈರೋ, ಡಿ 4 -ದೇಶದ ನೈಋತ್ಯದಲ್ಲಿ ಹೊಸ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣವನ್ನು ಪ್ರಾರಂಭಿಸಿದೆ ಎಂದು ಇರಾನ್ ಸ್ಟೇಟ್ ಟಿವಿ ತಿಳಿಸಿದೆ. ಅಮೆರಿಕ ಜೊತೆಗಿನ ಭಿನ್ನಾಭಿಪ್ರಾಯ ಮತ್ತು ದೇಶದಲ್ಲಿ ಸದ್ಯ ಮಹಿಳಾ ಹಕ್ಕಿಗಾಗ ನಡೆಯುತ್ತಿರುವ ಹೋರಾಟದಿಂದ ಇರಾನ್ ತತ್ತರಿಸಿ ಹೋಗಿದೆ ಇದರ ನಡುವೆ ಈ ಮಾಹಿತಿ ಹೊರಬಿದ್ದಿರುವುದು ಅಚ್ಚರಿ ಮೂಡಿಸಿದೆ. ಕರೂನ್ ಎಂದು ಕರೆಯಲ್ಪಡುವ ಹೊಸ 300-ಮೆಗಾವ್ಯಾಟ್ ಸ್ಥಾವರವನ್ನು ನಿರ್ಮಿಸಲು ಎಂಟು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸುಮಾರು 2 ಬಿಲಿಯನ್ ಡಾಲರ್ ವೆಚ್ಚವಾಗುತ್ತದೆ ಎಂದು ದೇಶದ ರಾಜ್ಯ […]

ಇರಾನ್‍ನಾದ್ಯಂತ ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳು-ಭದ್ರತಾ ಪಡೆ ನಡುವೆ ಘರ್ಷಣೆ

ಟೆಹ್ರಾನ್,ಅ. 31-ಇರಾನ್‍ನಾದ್ಯಂತ ವಿಶ್ವವಿದ್ಯಾನಿಲಯಗಳು ಹಾಗು ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳು ಹಾಗು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆದಿದೆ. ಮೊದಲಿಗೆ ಟೆಹ್ರಾನ್‍ನ ಆಜಾದ್ ವಿಶ್ವವಿದ್ಯಾನಿಲಯದಲ್ಲಿ ಘರ್ಷಣೆಗಳು ಆರಂಭಗೊಂಡಿದ್ದು ಭದ್ರತಾ ಪಡೆಗಳು ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಮತ್ತು ಗುಂಡು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಕಂಡುಬಂದಿದೆ. ದೇಶದ ಅರೆಸೇನಾಪಡೆಯ ರೆವಲ್ಯೂಷನರಿ ಗಾರ್ಡ್‍ನ ಬೆದರಿಕೆಗಳ ಹೊರತಾಗಿಯೂ ರಾಷ್ಟ್ರವ್ಯಾಪಿ ಸ್ವಾತಂತ್ರ್ಯ, ಸ್ವಾತಂತ್ರ್ಯ, ಸ್ವಾತಂತ್ರ್ಯ ಎಂಬ ಘೋಷಣೆನ್ನು ಪ್ರತಿಭಟನಾಕಾರರು ಕೂಗುತ್ತಿದ್ದು ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ, ದಕ್ಷಿಣ ಇರಾನ್‍ನ ಪ್ರಮುಖ ಶಿಯಾ […]

ಟೆಹರಾನ್‍ನ ಜೈಲಿನಲ್ಲಿ ಕೈದಿಗಳ ಮಾರಾಮಾರಿ, ಜೈಲಿಗೆ ಬೆಂಕಿ, 8 ಜನ ಸಾವು

ಇರಾನ್, ಅ.18- ಕೈದಿಗಳು ಕಿತ್ತಾಡಿ ಜೈಲಿಗೆ ಬೆಂಕಿ ಹಾಕಿದ ಪರಿಣಾಮ 8 ಮಂದಿ ಸಜೀವವಾಗಿ ದಹನಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಟೆಹರಾನ್‍ನ ಏವಿಯನ್ ಜೈಲಿನಲ್ಲಿ ನಡೆದಿದೆ. ಘಟನೆಯಲ್ಲಿ ಇಡೀ ಜೈಲು ಬೆಂಕಿಗೆ ಆಹುತಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.ಇರಾನ್‍ನಲ್ಲಿ ಹಿಜಾಬ್ ಸಂಘರ್ಷ ತಲೆದೋರಿರುವ ಬೆನ್ನಲ್ಲೇ ಜೈಲಿನಲ್ಲಿ ಕೈದಿಗಳ ಕಿತ್ತಾಟ ಘಟನೆ ನಡೆದಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ. ದರೋಡೆ, ಹೀನ ಅಪರಾಧ ಪ್ರಕರಣಗಳಲ್ಲಿ ಬಂತರಾದ ಹಲವಾರು ಕೈದಿಗಳು ಈ ಜೈಲಿನಲ್ಲಿದ್ದು, ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ […]

ಇರಾಕ್‍ನಲ್ಲಿ ರಾಜಕೀಯ ಕೈದಿಗಳ ಸಂಘರ್ಷ, ಜೈಲಿನಲ್ಲಿ ಬೆಂಕಿ

ಬಾಗ್ದಾದ್. ಅ, 16 – ಇರಾನ್ ರಾಜಧಾನಿಯಲ್ಲಿ ರಾಜಕೀಯ ಕೈದಿಗಳು ಮತ್ತು ಸರ್ಕಾರಿ ವಿರೋಧಿ ಕಾರ್ಯಕರ್ತರನ್ನು ಇರಿಸಲಾಗಿರುವ ಜೈಲಿನಲ್ಲಿ ಕಳೆದ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಗುಂಡೇಟಿನ ಸದ್ದು ಕೂಡ ಕೇಳಿಸಿದೆ. ಒಂದು ವಾರ್ಡ್‍ನಲ್ಲಿದ್ದ ಕೈದಿಗಳು ಮತ್ತು ಜೈಲು ಸಿಬ್ಬಂದಿ ನಡುವೆ ಘರ್ಷಣೆಗಳು ನಡೆದಿವೆ ಎಂದು ಹಿರಿಯ ಭದ್ರತಾ ಅಧಿಕಾರಿಯನ್ನು ಉಲ್ಲೇಖಿಸಿ ಇರಾನ್‍ನ ಸರ್ಕಾರಿ ಐಆರ್‍ಎನ್‍ಎ ವರದಿ ಮಾಡಿದೆ. ಜೈಲು ಸಮವಸ್ತ್ರ ತುಂಬಿದ್ದ ಗೋದಾಮಿಗೆ ಕೈದಿಗಳು ಬೆಂಕಿ ಹಚ್ಚಿದ್ದು,ಸಂಘರ್ಷವನ್ನು ಉಲ್ಬಣಗೊಳ್ಳದಂತೆ ಕೈದಿಗಳನ್ನು ಪ್ರತ್ಯೇಕಿಸಲಾಗಿದೆ ಎಂದು ಟೆಹ್ರಾನ್‍ನ ಕಾನೂನು […]

ಇರಾನ್‍ನಲ್ಲಿ ಮುಂದುವರೆದ ಹಿಜಾಬ್ ಪ್ರತಿಭಟನೆ, 50 ದಾಟಿದ ಸಾವಿನ ಸಂಖ್ಯೆ

ನವದೆಹಲಿ, ಸೆ.24- ಇರಾನ್ ನಲ್ಲಿ ಭುಗಿಲೆದ್ದಿರುವ ಹಿಜಾಬ್ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 50ನ್ನು ದಾಟಿದ್ದು, ಪ್ರತಿಭಟನಾಕಾರರ ವಿರುದ್ಧ ಅನಗತ್ಯವಾದ ಬಲ ಪ್ರಯೋಗ ಮಾಡದಂತೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. 22 ವರ್ಷದ ಮಹ್ಸಾ ಅಮಿನಿ ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂದು ಇರಾನ್‍ನ ನೈತಿಕ ಪೊಲೀಸರು ಆಕೆಯನ್ನು ಥಳಿಸಿ ಬಂಧಿಸಿದ್ದರು. ವಿಚಾರಣೆ ವೇಳೆ ಕುಸಿದು ಬಿದ್ದ ಆಕೆ ಚಿಕಿತ್ಸೆ ಪಡೆಯುವ ಹಂತದಲ್ಲಿ ಮೃತಪಟ್ಟಿದ್ದಳು. ಇದು ಇರಾನ್ ನಲ್ಲಿ ಪ್ರತಿಭಟನೆ ಭುಗಿಲೇಳಲು ಕಾರಣವಾಗಿದೆ. ಇರಾನ್ ಮಹಿಳೆಯರು ಬುರ್ಕಾ, ಹಿಜಾಬ್ ಕಿತ್ತೆಸೆದು ಬೀದಿಗಿಳಿದಿದ್ದಾರೆ. […]

ಬರ ಪೀಡಿತ ಇರಾನ್‍ನಲ್ಲೂ ಪ್ರವಾಹ, 17 ಮಂದಿ ಸಾವು

ಟೆಹರಾನ್, ಜು.23- ಇರಾನ್‍ನ ಬರಪೀಡಿತ ದಕ್ಷಿಣ ಫಾರ್ಸ್ ಪ್ರಾಂತ್ಯದಲ್ಲಿ ಪ್ರವಾಹದಿಂದಾಗಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ದೂರದರ್ಶನ ವರದಿ ಮಾಡಿದೆ. ನಗರದ ಗವರ್ನರ್ ಯೂಸೆಫ್ ಕರೇಗಾರ್ ಪ್ರಕಾರ, ಭಾರೀ ಮಳೆಯಿಂದಾಗಿ ಎಸ್ತಾಬಾನ್ ನಗರದ ರೌಡ್ಬಾಲ್ ನದಿಯಲ್ಲಿ ಪ್ರವಾಹ ಉಕ್ಕಿ ಹರಿದಿದೆ. ಹಠಾತ್ ಪ್ರವಾಹದಲ್ಲಿ ಸಿಲುಕಿದ್ದ 55 ಜನರನ್ನು ರಕ್ಷಣಾ ತಂಡಗಳು ರಕ್ಷಿಸಿವೆ, ಆದರೆ ಕನಿಷ್ಠ ಆರು ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇರಾನ್‍ನ ಹವಾಮಾನ ಇಲಾಖೆ ದೇಶಾದ್ಯಂತ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. […]