ಇಸ್ರೇಲ್‍ನಲ್ಲಿ ನಾಪತ್ತೆಯಾಗಿದ್ದ ಕೇರಳದ ರೈತ ಭಾರತಕ್ಕೆ ವಾಪಸ್

ಕೋಝಿಕ್ಕೋಡ್ (ಕೇರಳ), ಫೆ.27 – ಆಧುನಿಕ ಕೃಷಿ ತಂತ್ರಜ್ಞಾನಗಳ ಅಧ್ಯಯನಕ್ಕಾಗಿ ಇಸ್ರೇಲ್‍ಗೆ ಸರ್ಕಾರಿ ಪ್ರಾಯೋಜಿತ ಪ್ರವಾಸದ ಭಾಗವಾಗಿ ಹೋಗಿ ನಾಪತ್ತೆಯಾಗಿದ್ದ ಕೇರಳದ ರೈತರೊಬ್ಬರು ಇಂದು ಭಾರತಕ್ಕೆ ಮರಳಿದ್ದಾರೆ. ಮುಂಜಾನೆ 5 ಗಂಟೆಗೆ ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರೈತ ಬಿಜು ಕುರಿಯನ್ (48) ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳ ಸರ್ಕಾರ, ರಾಜ್ಯ ಕೃಷಿ ಸಚಿವ ಪಿ ಪ್ರಸಾದ್ ಹಾಗು 27 ಸದಸ್ಯರ ನಿಯೋಗ, ಅಧಿಕಾರಿಗಳಿಗೆ ಕ್ಷಮೆಯಾಚಿಸುತ್ತಿದ್ದೇನೆ ಎಂದು ಬಾವುಕರಾದರು. ಇಸ್ರೇಲ್‍ನಿಂದ ಹೊಸ ಕೃಷಿ ತಂತ್ರಗಳನ್ನು ಕುರಿತು ಅಧ್ಯಯನ […]

ಕೊರೊನಾ ಉಪತಳಿ ಕ್ರಾಕೆನ್‍ ಕುರಿತು ಇಸ್ರೆಲ್‍ ತಜ್ಞ ವೈದ್ಯರ ಎಚ್ಚರಿಕೆ

ಜೆರುಸಲೇಂ,ಜ.5- ಒಮ್ಮೆ ಕೋವಿಡ್ ಸೋಂಕು ತಗುಲಿ ಗುಣಮುಖರಾಗಿದ್ದೇವೆ ಎಂದ ಮಾತ್ರಕ್ಕೆ ಮತ್ತೆ ಸೋಂಕು ಬರುವುದಿಲ್ಲ ಎಂಬ ನಂಬಿಕೆ ಬೇಡ, ರೂಪಾಂತರಿ ಓಮಿಕ್ರಾನ್‍ನ ಉಪತಳಿ ಕ್ರಾಕೆನ್ ಕುರಿತಾಗಿ ಹೆಚ್ಚು ಜಾಗೃತರಾಗಿರುವಂತೆ ಇಸ್ರೆಲ್‍ನ ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಕ್ರಾಕೆನ್ ಉಪನಾಮದಿಂದ ಜನಪ್ರಿಯತೆ ಪಡೆದಿರುವ ಎಕ್ಸ್‍ಬಿಬಿ.1.5 ರೂಪಾಂತರಿ ಸೋಂಕು, ಅತ್ಯಂತ ವೇಗವಾಗಿ ಹರಡುವ ಸಾಮಾಥ್ರ್ಯ ಹೊಂದಿದೆ ಎಂದು ಇಸ್ರೆಲ್‍ನ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ.ನಡ್ವಾ ಸೋರೆಕ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕಾದಲ್ಲಿ ಹಬ್ಬುತ್ತಿರುವ ಈ ಉಪತಳಿ, ಇಸ್ರೆಲ್‍ಗೂ ಬರಲಿದೆ. ಆದರೆ ಈಗಲ್ಲ ಎಂದರೆ […]

ಇಸ್ರೇಲ್ ಹಮಾಸ್ ಉಗ್ರರ ನಡುವೆ ಮುಂದುವರೆದ ದಾಳಿ : 50ಕ್ಕೂ ಮಂದಿ ಸಾವು

ಗಾಜಾ, ಆ. 8- ಪ್ಯಾಲಿಸ್ತೇನ್‍ನ ಹಮಾಸ್ ಉಗ್ರ ಸಂಘಟನೆ ಹಾಗೂ ಇಸ್ರೇಲಿ ಪಡೆಗಳ ನಡುವೆ ಗಾಜಾ ನಗರದಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಲ್ಲಿ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಹಿಂಸಾಚಾರಗಳು ಆತಂಕ ಮೂಡಿಸಿದ್ದು, ಪ್ಯಾಲೆಸ್ತೇನ್ ಕಡೆಯಿಂದ ಉಗ್ರರು ರಾಕೇಟ್‍ಗಳನ್ನು ಉಡಾಯಿಸುತ್ತಿದ್ದಾರೆ. ಇತ್ತ ಇಸ್ರೇಲ್ ವಾಯು ದಾಳಿ ಮೂಲಕ ಉಗ್ರರ ಹಡಗು ತಾಣಗಳನ್ನು ನಾಶಪಡಿಸುತ್ತಿದೆ. ಎರಡು ಕಡೆಗಳಿಂದ ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ಬಾಂಬ್ ದಾಳಿ ನಡೆಯುತ್ತಿದ್ದು, ಹೆಚ್ಚಿನ ಅನಾಹುತ […]