Home ಇದೀಗ ಬಂದ ಸುದ್ದಿ ಅಪಘಾತದಲ್ಲಿ ಕಿರುತೆರೆ ಸಹ ನಿರ್ದೇಶಕ ಸಾವು

ಅಪಘಾತದಲ್ಲಿ ಕಿರುತೆರೆ ಸಹ ನಿರ್ದೇಶಕ ಸಾವು

0
ಅಪಘಾತದಲ್ಲಿ ಕಿರುತೆರೆ ಸಹ ನಿರ್ದೇಶಕ ಸಾವು

ಬೆಂಗಳೂರು,ಡಿ.2- ಅತೀವೇಗದಿಂದ ಬಂದ ಪೆಟ್ರೋಲ್ ಟ್ಯಾಂಕರ್ ವಾಹನ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಿರುತೆರೆಯ ಸಹ ನಿರ್ದೇಶಕ ಮೃತಪಟ್ಟಿರುವ ಘಟನೆ ಬ್ಯಾಟರಾಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಆರ್.ಆರ್.ನಗರದ ನಿವಾಸಿ ಕಿರಣ್ ಕುಮಾರ್ (25) ಮೃತಪಟ್ಟ ಸಹನಿರ್ದೇಶಕ. ಇವರು ಮೂಲತಃ ದಾವಣಗೆರೆಯವರು.ರಾತ್ರಿ 8 ಗಂಟೆ ಸುಮಾರಿನಲ್ಲಿ ಆರ್.ಆರ್.ನಗರ ಆರ್ಚ್ ಕಡೆಯಿಂದ ನಾಯಂಡಹಳ್ಳಿ ಸಿಗ್ನಲ್ ಕಡೆಗೆ ಕಿರಣ್ಕುಮಾರ್ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಬೆಂಗಳೂರು-ಮೈಸೂರು ರಸ್ತೆಯ ಪಂತರಪಾಳ್ಯ ಮೆಟ್ರೋ ನಿಲ್ದಾಣದ ಸಮೀಪ ಹಿಂದಿನಿಂದ ಇದೇ ಮಾರ್ಗವಾಗಿ ಬರುತ್ತಿದ್ದ ಪೆಟ್ರೋಲ್ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಿರಣ್ಕುಮಾರ್ ತಲೆಗೆ ಗಂಭೀರ ಪೆಟ್ಟಾಗಿದೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಬ್ಯಾಟರಾಯನಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.