Home ಇದೀಗ ಬಂದ ಸುದ್ದಿ ಕಳ್ಳರ ಬಂಧನ : 5 ಲಕ್ಷ ಮೌಲ್ಯದ 70 ಬ್ಯಾಟರಿಗಳ ವಶ

ಕಳ್ಳರ ಬಂಧನ : 5 ಲಕ್ಷ ಮೌಲ್ಯದ 70 ಬ್ಯಾಟರಿಗಳ ವಶ

0
ಕಳ್ಳರ ಬಂಧನ : 5 ಲಕ್ಷ ಮೌಲ್ಯದ 70 ಬ್ಯಾಟರಿಗಳ ವಶ

ಬೆಂಗಳೂರು, ನ.26- ನಗರದ ಸಿಗ್ನಲ್‍ಗಳಲ್ಲಿ ಅಳವಡಿಸಿದ್ದ ಬ್ಯಾಟರಿಗಳನ್ನು ಕಳವು ಮಾಡಿ ಅವುಗಳನ್ನು ಗುಜರಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು- ಮಸ್ತಿ ಮಾಡುತ್ತಿದ್ದ ಇಬ್ಬರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ಮೌಲ್ಯದ 70 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬನಶಂಕರಿ ಮೂಲದ ಸೈಫ್‍ಪಾಷಾ ಮತ್ತು ಸಲ್ಮಾನ್‍ಖಾನ್ ಬಂಧಿತ ಆರೋಪಿಗಳು. ನಗರದ ಹಲವು ಸಿಗ್ನಲ್‍ಗಳಲ್ಲಿ ಅಳವಡಿಸಿದ್ದ ಬ್ಯಾಟರಿಗಳನ್ನು ಕಳೆದ ಆರೇಳು ತಿಂಗಳುಗಳಿಂದ ಈ ಆರೋಪಿಗಳು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಈ ಬಗ್ಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ಸುಮಾರು 120 ಕಡೆ ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಕೊನೆಗೂ ಪತ್ತೆಹಚ್ಚಿದ್ದಾರೆ.

ಬಂಧಿತ ಆರೋಪಿಗಳು ಬ್ಯಾಟರಿಗಳನ್ನು ಕದ್ದು ಅವುಗಳನ್ನು ಗುಜರಿ ಅಂಗಡಿಗಳಿಗೆ ಮಾರಿ ಹಣ ಸಂಪಾದಿಸುತ್ತಿದ್ದರು. ನಂತರ ಆ ಹಣದಲ್ಲಿ ಮೋಜು-ಮಸ್ತಿ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಆರೋಪಿಗಳು ಕದ್ದಿದ್ದ 70 ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.

ಭ್ರೂಣ ಹತ್ಯೆ ಕೋರರ ವಿರುದ್ಧ ಕಠಿಣ ಕ್ರಮ : ಸಿಎಂ ಸಿದ್ದರಾಮಯ್ಯ

ಲೋನ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ
ಬೆಂಗಳೂರು, ನ.26- ಲೋನ್ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರನ್ನು ಬ್ಯಾಂಕ್‍ಗೆ ಕರೆದೊಯ್ದು ದಾಖಲೆಗಳಿಗೆ ಸಹಿ ಹಾಕಿಸಿ ಕೋಟ್ಯಂತರ ರೂ. ಸಾಲ ಪಡೆದು ಖತರ್ನಾಕ್ ಆರೋಪಿಯೊಬ್ಬ ಪರಾರಿಯಾಗಿರುವ ಘಟನೆ ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೃಷ್ಣ ಎಂಬುವವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಕೃಷ್ಣ ಅವರು ವ್ಯಾಪಾರದ ಉದ್ದೇಶಕ್ಕಾಗಿ ಸಾಲ ಪಡೆಯಲು ಬ್ಯಾಂಕ್‍ನ ಹುಡುಕಾಟ ನಡೆಸುತ್ತಿದ್ದಾಗ ಯೂಸುಫ್ ಎಂಬಾತ ಅವರಿಗೆ ಪರಿಚಯವಾಗಿದ್ದಾನೆ. ಈ ವೇಳೆ ನನಗೆ ಪ್ರತಿಷ್ಠಿತ ವ್ಯಕ್ತಿಗಳ ಹಾಗೂ ಬ್ಯಾಂಕ್ ಮ್ಯಾನೇಜರ್‍ಗಳ ಪರಿಚಯವಿದೆ. ನಿಮಗೆ ಲೋನ್ ಕೊಡಿಸುತ್ತೇನೆ ಎಂದು ಬಣ್ಣದ ಮಾತುಗಳನ್ನಾಡಿ ಅವರನ್ನು ಮಲ್ಲೇಶ್ವರದ ಬ್ಯಾಂಕ್‍ವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿ ಮ್ಯಾನೇಜರ್‍ರನ್ನು ಮಾತನಾಡಿಸಿ ಕೆಲವು ದಾಖಲೆಗಳನ್ನು ಪಡೆದು ಅದಕ್ಕೆ ಸಹಿ ಮಾಡಿಸಿದ್ದಾನೆ. ನಂತರ ಕೃಷ್ಣ ಅವರ ಹೆಸರಿನಲ್ಲಿ ಸುಮಾರು 2 ಕೋಟಿ 40 ಲಕ್ಷ ಬಿಡುಗಡೆ ಮಾಡಿಸಿ ನಂತರ ಆ ಹಣವನ್ನು ಆತ ದೋಚಿದ್ದಾನೆ. ದಿನಕಳೆದಂತೆ ಇತ್ತೀಚೆಗೆ ಕೃಷ್ಣ ಅವರಿಗೆ ಬ್ಯಾಂಕ್‍ನಿಂದ ಸಾಲದ ಕಂತು ಕಟ್ಟುವಂತೆ ನೋಟಿಸ್ ಬಂದಾಗ ಅವರು ಆತಂಕಗೊಂಡಿದ್ದಾರೆ.ತಕ್ಷಣ ಅವರು ಬ್ಯಾಂಕ್‍ಗೆ ಹೋಗಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ.

ನಂತರ ಅವರು ಮಲ್ಲೇಶ್ವರಂ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರಂ ಠಾಣೆ ಪೆÇಲೀಸರು ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.